Site icon Vistara News

Karnataka Elections: ಜೆಡಿಎಸ್‌ 2ನೇ ಪಟ್ಟಿ ಪ್ರಕಟ, ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್‌, ವೈಎಸ್‌ವಿ ದತ್ತಗೂ ಸಿಕ್ತು ಚಾನ್ಸ್

HP swarup- YSV datta

#image_title

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಸೃಷ್ಟಿಸಿದ ಜೆಡಿಎಸ್‌ ಎರಡನೇ ಪಟ್ಟಿ ಪ್ರಕಟಗೊಂಡಿದೆ. ಭಾರಿ ಚರ್ಚೆಗೆ ಕಾರಣವಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಎಚ್‌.ಪಿ ಸ್ವರೂಪ್‌ ಅವರಿಗೆ ಟಿಕೆಟ್‌ ನೀಡಲಾಗಿದ್ದು, ಇದು ಟಿಕೆಟ್‌ಗಾಗಿ ಹೋರಾಟ ನಡೆಸಿದ್ದ ಭವಾನಿ ರೇವಣ್ಣ ಅವರಿಗೆ ಹಿನ್ನಡೆಯಾಗಿದೆ.‌

ಈ ನಡುವೆ, ಕಡೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ನ್ನು ವೈಎಸ್‌ವಿ ದತ್ತ ಅವರಿಗೆ ನೀಡಲಾಗಿದೆ. ವೈಎಸ್‌ವಿ ದತ್ತ ಅವರು ಕಾಂಗ್ರೆಸ್‌ ಸೇರಿದ್ದರೂ ಅವರಿಗೆ ಟಿಕೆಟ್‌ ಸಿಕ್ಕಿರಲಿಲ್ಲ. ಇದರಿಂದ ನೊಂದಿದ್ದ ಅವರನ್ನು ಮರಳಿ ಜೆಡಿಎಸ್‌ಗೆ ಕರೆತಂದು ಟಿಕೆಟ್‌ ನೀಡಲಾಗಿದೆ. ಒಟ್ಟು 49 ಕ್ಷೇತ್ರಗಳ ಟಿಕೆಟ್‌ ಘೋಷಣೆಯಾಗಿದೆ.

ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕುಮಾರಸ್ವಾಮಿ ಅವರು ಘೋಷಿಸಿದರೆ ಹಾಸನ ಕ್ಷೇತ್ರದ ಟಿಕೆಟನ್ನು ಎಚ್‌.ಡಿ.ರೇವಣ್ಣ ಅವರೇ ಘೋಷಿಸುವಂತೆ ಪ್ರೇರೇಪಿಸಿದರು. ಆದರೆ, ರೇವಣ್ಣ ಅವರು ಎಲ್ಲ ವಿಚಾರಗಳನ್ನು ವಿವರಿಸಿ ಟಿಕೆಟನ್ನು ಕುಮಾರಸ್ವಾಮಿ ಅವರ ಬಾಯಿಯಲ್ಲೇ ಹೇಳಿಸಿದರು.

ಮೂಡಿಗೆರೆ ಕ್ಷೇತ್ರದಲ್ಲಿ ಈಗಾಗಲೇ ಟಿಕೆಟ್‌ ನೀಡಲಾಗಿದ್ದ ಬಿ.ಬಿ. ನಿಂಗಯ್ಯ ಅವರ ಬದಲು ಬಿಜೆಪಿಯಿಂದ ಟಿಕೆಟ್‌ ನಿರಾಕರಿಸಲ್ಪಟ್ಟ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ನಿರ್ಧಿಸಲಾಗಿದೆ.

ಅಭ್ಯರ್ಥಿಗಳ ಪಟ್ಟಿ ಹೀಗೆ ಇದೆ
1.ಕುಡುಚಿ – ಆನಂದ ಮಾಳಗಿ
2.ರಾಯಬಾಗ – ಪ್ರದೀಪ್ ಮಾಳಗಿ (ಪರಿಶಿಷ್ಟ ಜಾತಿ ಮೀಸಲು)
3.ಸವದತ್ತಿ ಯಲ್ಲಮ್ಮ – ಸೌರಭ್‌ ಆನಂದ್ ಛೋಪ್ರಾ
4.ಅಥಣಿ -ಶಶಿಕಾಂತ ಪಡಸಲಗಿ ಗುರುಗಳು
5. ಹುಬ್ಬಳ್ಳಿ ಧಾರವಾಡ ಪೂರ್ವ – ವೀರಭದ್ರಪ್ಪ ಹಾಲರವಿ
6. ಕುಮಟಾ – ಸೂರಜ್ ಸೋನಿ ನಾಯಕ್
7. ಹಳಿಯಾಳ – ಎಸ್‌.ಎಲ್‌ ಘೋಟ್ನೇಕರ್‌
8. ಭಟ್ಕಳ – ನಾಗೇಂದ್ರ ನಾಯಕ್
9. ಶಿರಸಿ – ಉಪೇಂದ್ರ ಪೈ
10. ಯಲ್ಲಾಪುರ – ಡಾ.ನಾಗೇಶ್ ನಾಯಕ್
11. ಚಿತ್ತಾಪುರ – (ಮೀಸಲು) – ನಿವೃತ್ತ ನ್ಯಾಯಮೂರ್ತಿ ಸುಭಾಷ್ ಚಂದ್ರ ರಾಥೋಡ್
12. ಕಲ್ಬುರ್ಗಿ ಉತ್ತರ – ನಾಸೀರ್ ಹುಸೇನ್ ಉಸ್ತಾದ್
13. ಬಳ್ಳಾರಿ ನಗರ – ಅಲ್ಲಾಭಕ್ಷ @ ಮುನ್ನ
14. ಹಗರಿಬೊಮ್ಮನಹಳ್ಳಿ – ಪರಮೇಶ್ವರಪ್ಪ
15. ಹರಪನಹಳ್ಳಿ – ನೂರ್ ಅಹಮದ್
16.ಸಿರಗುಪ್ಪ – ಪರಮೇಶ್ವರ್ ನಾಯಕ್
17. ಕಂಪ್ಲಿ – ರಾಜು ನಾಯಕ್
18. ಕೊಳ್ಳೇಗಾಲ – ಪುಟ್ಟ ಸ್ವಾಮಿ
19. ಗುಂಡ್ಲುಪೇಟೆ – ಕಡಬೂರು ಮಂಜುನಾಥ್
20. ಕಾಪು – ಕು. ಸಬೀನಾ ಸಮದ್
21. ಕಾರ್ಕಳ – ಶ್ರೀಕಾಂತ ಕೊಚ್ಚುರ್
22. ಉಡುಪಿ – ದಕ್ಷತ್ ಆರ್ ಶೆಟ್ಟಿ
23. ಬೈಂದೂರು – ಮನ್ಸೂರ್ ಇಬ್ರಾಹಿಂ
24. ಮಂಗಳೂರು ದಕ್ಷಿಣ- ಸುಮತಿ ಹೆಗಡೆ
25. ಕನಕಪುರ – ನಾಗರಾಜ್
26. ಯಲಹಂಕ – ಮುನೇಗೌಡ
27. ಸರ್ವಜ್ಞ ನಗರ – ಮಹಮದ್
28. ಯಶವಂತಪುರ – ಜವರಾಯಿಗೌಡ
29. ತಿಪಟೂರು – ಶಾಂತಕುಮಾರ್
30. ಶಿರಾ – ಉಗ್ರೇಶ್
31. ಹಾನಗಲ್ – ಮನೋಹರ್ ತಹಸೀಲ್ದಾರ್‌
32. ಸಿಂದಗಿ – ವಿಶಾಲಾಕ್ಷಿ
33. ಗಂಗಾವತಿ – ಎಚ್ ಅರ್ಚನಾ ಕೇಶವ
34. ಎಚ್ ಡಿ ಕೋಟೆ – ಜಯಪ್ರಕಾಶ್
35. ಜೇವರ್ಗಿ – ದೊಡ್ಡಪ್ಪ ಗೌಡ
36. ಶಹಾಪೂರ – ಗುರುಲಿಂಗಪ್ಪ
37. ಕಾರವಾರ – ಚೈತ್ರಾ ಕೊಠಾರಕರ್‌
38. ಪುತ್ತೂರು- ದಿವ್ಯ ಪ್ರಭಾ ಚಿಲ್ತಡ್ಕ
39. ಕಡೂರು – ವೈಎಸ್‌ವಿ ದತ್ತ
40. ಹೊಳೆನರಸೀಪುರ – ಎಚ್ ಡಿ ರೇವಣ್ಣ
41. ಬೇಲೂರು -ಕೆ.ಎನ್.‌ ಲಿಂಗೇಶ್‌
42. ಸಕಲೇಶಪುರ – ಕುಮಾರಸ್ವಾಮಿ
43. ಶ್ರವಣಬೆಳಗೊಳ – ಸಿ.ಎನ್ ಬಾಲಕೃಷ್ಣ
44. ಅರಕಲಗೂಡು- ಎ.ಮಂಜು
45. ಹಾಸನ- ಸ್ವರೂಪ್‌ ಪ್ರಕಾಶ್‌
46. ಮಹಾಲಕ್ಷ್ಮಿ ಲೇಔಟ್‌- ರಾಜಣ್ಣ
47. ಹಿರಿಯೂರು- ರವೀಂದ್ರಪ್ಪ
48. ಮಾಯಕೊಂಡ- ಆನಂದಪ್ಪ

Exit mobile version