Site icon Vistara News

Karnataka Elections : ಮೋದಿಯನ್ನು ವಿಷದ ಹಾವು ಎಂದ ಖರ್ಗೆ ರಾಜಕೀಯದಲ್ಲಿ ಇರಬಾರದು; ಕೆ.ಎಸ್‌ ಈಶ್ವರಪ್ಪ

karnataka elections ks eshwarappa asks mallikarjuna kharge to retire from politics

karnataka elections ks eshwarappa asks mallikarjuna kharge to retire from politics

ಹಾಸನ: ʻʻಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರೇ ನಿಮಗೆ ಇಳಿ ವಯಸ್ಸು ಇದು. ನಾವೆಲ್ಲರೂ ಗೌರವ ಕೊಡ್ತಾ ಇದ್ದಂತಹ ಖರ್ಗೆ ನೀವು. ನಿಮ್ಮ‌ ಬಾಯಲ್ಲಿ ಇಂತಹ ಮಾತು ಬಂದ ಮೇಲೆ ನೀವು ರಾಜಕೀಯ ನಿವೃತ್ತಿ ತಗೋಳೋದೇ ಒಳ್ಳೆಯದು. ರಾಜಕೀಯದಲ್ಲಿ ಇರಬೇಡಿ ನೀವುʼʼ- ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷದ ಹಾವಿಗೆ ಹೋಲಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಇದು.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿಗೆ ವಿಧಾನಸಭಾ ಚುನಾವಣೆಯ (Karnataka Elections) ಪ್ರಚಾರಕ್ಕೆ ಬಂದಿದ್ದ ಅವರು ಹೇಳಿಕೆ ನೀಡಿ, ʻʻಎಐಸಿಸಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ನಂತರ ಇನ್ನೇನಾದರೂ ಒಳ್ಳೆಯ ಸ್ಥಾನ ತಗೊಬೇಕು ಅಂದರೆ ಆ ಇಬ್ಬರನ್ನು ತೃಪ್ತಿಯಲ್ಲಿ ಇಟ್ಕಬೇಕು (ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ) ಎಂದು ವಿಶ್ವ ನಾಯಕ ನರೇಂದ್ರಮೋದಿ ಅವರನ್ನು ವಿಷ ಸರ್ಪಕ್ಕೆ ಹೋಲಿಸುತ್ತಿದ್ದೀರಾ ಮಾನ್ಯ ಖರ್ಗೆಯವರೇʼʼ ಎಂದು ಪ್ರಶ್ನಿಸಿದರು.

ʻʻಯುವಕರು, ಹೆಣ್ಣುಮಕ್ಕಳು ಖರ್ಗೆ ಬಾಯಲ್ಲಿ ಏನು ಬರುತ್ತೆ ಅಂತ ನೋಡುತ್ತಾ ಇರ್ತಾರೆ. ಇಂತಹ ಸಂದರ್ಭದಲ್ಲಿ ನೀವು ಮೋದಿ ಅವರನ್ನು ವಿಷದ ಹಾವು ಅಂದರೆ ಹೇಗೆ? ನನಗೆ ಖರ್ಗೆ ಅವರನ್ನು ಟೀಕೆ ಮಾಡುವಂತಹ ಪದಗಳೇ ಬರ್ತಿಲ್ಲ. ಏಕೆಂದರೆ ಅವರು ಹಿರಿಯರು. ನಮ್ಮ ಪಕ್ಷದಲ್ಲಿ ಹಿರಿಯರಿಗೆ ಗೌರವ ಕೊಡಬೇಕು ಅಂತ ಕಲಿಸಿಕೊಡಲಾಗುತ್ತದೆ., ನಮ್ಮ‌ ಸಂಸ್ಕೃತಿಯೇ ಅದು. ಆದರೆ ಹಿರಿತನಕ್ಕೆ ಬೆಲೆ ಕೊಡದಿದ್ದಾಗ ಏನು ಮಾಡಬೇಕು? ನಾನು ಇದನ್ನು ರಾಜ್ಯದ ಜನಕ್ಕೆ ಬಿಡುತ್ತೇನೆ. ಖರ್ಗೆ ಹೇಳಿದ್ದು ಸರಿನೋ ತಪ್ಪೋ ನೀವು ತೀರ್ಮಾನ ಮಾಡಿ. ಮೋದಿ ಅವರ ಬಗ್ಗೆ ಖರ್ಗೆ ಹೇಳಿದ್ದು ಸರಿ ಅಂದರೆ ಕಾಂಗ್ರೆಸ್‌ಗೆ ಓಟು ಕೊಡಿ, ಅಯೋಗ್ಯದ ಮಾತು ಅನಿಸಿದರೆ ಬಿಜೆಪಿಗೆ ವೋಟು ಕೊಡಿʼʼ ಎಂದು ಹೇಳಿದರು.

ʻʻಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನನಗೆ ಬಹಳ ಗೌರವವಿತ್ತು. ತಂದೆ ಸಮಾನ ಅಂತ ಅಂದುಕೊಂಡಿದ್ದೆ ನಾನು. ರಾಜಕಾರಣ ಮಾಡಲಿ ನಾನು ಬೇಡ ಅನ್ನಲ್ಲ. ಆದರೆ ಅವರ ಬಾಯಿಂದ ಬರ್ತಿರುವ ಮಾತು ಕೇಳಿ ನನಗೆ ತುಂಬಾ ನೋವಾಯ್ತು. ಸ್ವಲ್ಪ ದಿನದ ಕೆಳಗೆ ವಿಶ್ವವೆ ಮೆಚ್ಚಿರುವ ಮೋದಿಯನ್ನು ರಾವಣ ಅಂತ ಕರೆದ್ರು. ನಿನ್ನೆ ವಿಷದ ಹಾವು ಎಂದರು. ಇದು ಸರಿಯಾ ನೀವೇ ತೀರ್ಮಾನ ಮಾಡಿʼʼ ಎಂದು ಹೇಳಿದರು.

ಸಿದ್ಧಾಂತವಿಲ್ಲ ವಿರೋಧ ಪಕ್ಷಗಳು

ʻʻಒಂದ್ಕಡೆ ಡಿ.ಕೆ.ಶಿವಕುಮಾರ್ ಕ್ಯಾಂಡಿಡೇಟ್, ಇನ್ನೊಂದು ಕಡೆ ಸಿದ್ದರಾಮಯ್ಯ ಅವರ ಕ್ಯಾಂಡಿಡೇಟ್, ಇನ್ನೊಂದು ಕಡೆ ದೇವೇಗೌಡರ ಕ್ಯಾಂಡಿಡೇಟ್. ಮೂರು ವ್ಯಕ್ತಿಗಳು ಯಾವುದಾದರೂ ಸಿದ್ಧಾಂತದ ತಳಹದಿ ಮೇಲೆ ಓಟು ಕೇಳ್ತಾ ಇದ್ದಾರೆʼʼ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳನ್ನು ಟೀಕಿಸಿದರು ಕೆ.ಎಸ್‌. ಈಶ್ವರಪ್ಪ.

ʻʻಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಬಹಳ ಚೆನ್ನಾಗಿ ಬಡಿದಾಡುತ್ತಿದ್ದಾರೆ. ಅವರ ಅಭ್ಯರ್ಥಿ ವಿರುದ್ಧ ಇವರು, ಇವರ ಅಭ್ಯರ್ಥಿ ವಿರುದ್ಧ ಅವರು. ಮೇಲ್ನೋಟಕ್ಕೆ ಹೇಳ್ತಿದ್ದಾರೆ ಕಾಂಗ್ರೆಸ್ ಪಕ್ಷ ಗೆಲ್ಲುತ್ತೆ ಅಂತ. ಕಾಂಗ್ರೆಸ್ ಪಕ್ಷದವರು ಯಾರು, ಅದರಲ್ಲಿ ರೆಬೆಲ್ ಆಗಿ ನಿಂತೋರ ಪಕ್ಷ ಯಾವುದು?ʼʼ ಎಂದು ಕೇಳಿದ ಅವರು, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಟ್ಟಿಗೆ ನಿಂತು ಅರಕಲಗೂಡಿನಲ್ಲಿ ಇಬ್ಬರೂ ಸೇರಿ ಒಬ್ಬರನ್ನ ಗೆಲ್ಲಿಸುತ್ತೇವೆ ಎಂದು ಸವಾಲು ಹಾಕಿದರು.

ʻʻಒಂದ್ಕಡೆ ಎಲ್ಲಾ ಒಕ್ಕಲಿಗರು ನನ್ನ ಹಿಂದೆ ಬನ್ನಿ ನಾನು ಮುಖ್ಯಮಂತ್ರಿ ಆಗ್ತೀನಿʼʼ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ, ಮತ್ತೊಂದು ಕಡೆ ಸಿದ್ದರಾಮಯ್ಯನವರು ಎಲ್ಲಾ ಹಿಂದುಳಿದ ವರ್ಗದವರು ನನ್ನ ಹಿಂದೆ ಬನ್ನಿ ನಾನು ಮುಖ್ಯಮಂತ್ರಿ ಆಗುತ್ತೇನೆ ಎನ್ನುತ್ತಿದ್ದಾರೆ. ಒಂದ್ಕಡೆ ಒಕ್ಕಲಿಗರು ಬರಬೇಕಂತೆ, ಒಂದ್ಕಡೆ ಹಿಂದುಳಿದವರು ಬರಬೇಕಂತೆ. ಇದರ ನಡುವೆ ಅವರೇ ಭಾರತೀಯ ಜನತಾ ಪಾರ್ಟಿ ಕೋಮುವಾದಿ ಅಂತಾರೆ. ಎಷ್ಟು ಚೆನ್ನಾಗಿದೆ ನೋಡ್ರಿ ಈ ವಾದʼʼ ಎಂದು ಪ್ರಶ್ನಿಸಿದರು.

ʻʻಇಡೀ ದೇಶ ನಮ್ಮದು, ಪ್ರತಿಯೊಬ್ಬ ಕಾರ್ಯಕರ್ತನ ಹೃದಯದಲ್ಲಿ ಭಾರತ ನಮ್ಮದು ಎಂಬ ಭಾವನೆ ಸೃಷ್ಟಿ ಮಾಡುತ್ತಿರುವ ಭಾರತೀಯ ಜನತಾ ಪಾರ್ಟಿಗೆ ಕೋಮುವಾದಿ ಅಂತ ಕರಿತೀದ್ದಾರಲ್ಲಾ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಇವರ ನಾಲಿಗೆಗೆ ಹುಳ ಬೀಳುತ್ತಾ ಇಲ್ವೋ ನೀವೇ ಹೇಳಿʼʼ ಎಂದು ಕೇಳಿದರು ಕೆ.ಎಸ್‌. ಈಶ್ವರಪ್ಪ.

ಇದನ್ನೂ ಓದಿ : Karnataka Election 2023: ಖರ್ಗೆ ತುಂಬಾ ಒಳ್ಳೆಯವರು, ಅವರು ಸಿದ್ದರಾಮಯ್ಯ ರೀತಿ ಮಾತನಾಡೋದು ಬೇಡ ಎಂದ ಸಿಂಹ

Exit mobile version