Site icon Vistara News

Karnataka Elections : ಮನೆಹಾಳ ಶಕುನಿಗಳಿಂದಲೇ ಹಾಸನ ಟಿಕೆಟ್‌ ಕಗ್ಗಂಟು; ಕುಮಾರಸ್ವಾಮಿ ತೀವ್ರ ಆಕ್ರೋಶ, ಹಾಗಿದ್ರೆ ಯಾರು ಶಕುನಿಗಳು?

kumarawamy

#image_title

ಬಳ್ಳಾರಿ: ಹಾಸನದಲ್ಲಿ ಮನೆ ಹಾಳುವ ಮಾಡುವ ಶಕುನಿಗಳಿದ್ದಾರೆ. ಕುರುಕ್ಷೇತ್ರದ ಯುದ್ಧ ಶಕುನಿಯಿಂದಲೇ ಆಗಿದೆ, ಇಲ್ಲಿಯೂ ಶಕುನಿಗಳು ತಲೆ ಕೆಡಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ವಿಧಾನಸಭಾ ಚುನಾವಣೆಗೆ (Karnataka Elections) ಸಂಬಂಧಿಸಿ ಹಾಸನ ಟಿಕೆಟ್‌ ವಿಚಾರ ಜೆಡಿಎಸ್‌ ಪಾಲಿಗೆ ಕಗ್ಗಂಟಾಗಿರುವ ನಡುವೆ ಕುಮಾರಸ್ವಾಮಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

ʻʻಶಕುನಿಗಳು ನನ್ನ ಕುಟುಂಬದಲ್ಲಿ ಇಲ್ಲ. ಆದರೆ, ಹಾಸನದಲ್ಲಿ ಇದ್ದಾರೆ. ಶಕುನಿಗಳು ಬೆಳಗಿನಿಂದ ಸಂಜೆಯವರೆಗೆ ಮೈಂಡ್ ವಾಶ್ ಮಾಡ್ತಾರೆ. ಬೇರೆ ಪಕ್ಷದವರು, ಬುದ್ಧಿಜೀವಿಗಳು ಮತ್ತು ಹಿತಶತ್ರುಗಳು ತಲೆ ಕೆಡಿಸಿದ್ದಾರೆʼʼ ಎಂದು ಬಳ್ಳಾರಿಯಲ್ಲಿ ನಡೆಯುತ್ತಿರುವ ಪಕ್ಷದ ಪ್ರಚಾರದ ಸಂದರ್ಭದಲ್ಲಿ ಕುಮಾರಸ್ವಾಮಿ ಹೇಳಿದರು.

ʻʻಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕೆಂದು ಹೇಳಿದ್ದೇನೆ, ಇದರಲ್ಲಿ ರಾಜೀ ಪ್ರಶ್ನೆಯೇ ಇಲ್ಲʼʼ ಎಂದು ಅವರು ಸ್ಪಷ್ಟಪಡಿಸಿದರು.

ʻʻದೇವೇಗೌಡರಿಗೆ ಸಹ ಎಚ್.ಡಿ. ರೇವಣ್ಣ ಅವರನ್ನು ಮನವೊಲಿಸುವ ಶಕ್ತಿ‌ ಇಲ್ಲʼʼ ಎಂಬ ಗಂಭೀರ ಹೇಳಿಕೆಯೊಂದನ್ನು ಕುಮಾರಸ್ವಾಮಿ ಅವರು ನೀಡಿದ್ದಾರೆ.

ʻʻಕಳೆದ 15 ವರ್ಷದಿಂದ ಹಲವು‌ ವಿಷಯ ನುಂಗಿಕೊಂಡಿದ್ದೇನೆ. ಕೆಲವು ವಿಷಯಗಳನ್ನು ಹೇಳಿ ಕೊಳ್ಳಲು ಆಗುವುದಿಲ್ಲ. ನನಗೆ ಆಗುತ್ತಿರುವ ಅನಾಹುತ ಗೊತ್ತಿದ್ದರೂ, ನಾನೇನೂ ತಪ್ಪುಗಳನ್ನು ಮಾಡದೇ ಇದ್ದರೂ ತಲೆ ಮೇಲೆ ಹೊತ್ತು ಕೊಳ್ಳಬೇಕಾಯಿತು. ಈಗಲೂ ಅದೇರೀತಿ ವಾತಾವರಣ ಸೃಷ್ಟಿಯಾಗಿದೆʼʼ ಎಂದು ವೇದನೆ ತೋಡಿಕೊಂಡರು.

ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು

ʻʻನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ಜೆಡಿಎಸ್‌ಗೆ 59 ಸೀಟ್ ಬಂದಿತ್ತುʼʼ ಎಂಬ ಸುದ್ದರ ಎಂಬ ಸಿದ್ದು ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ ಅವರು, ಆವತ್ತು 59 ಸೀಟ್ ಪಡೆಯಲು ಯಾರ ಕೊಡುಗೆ ಎಷ್ಟು ಎಂಬುದು ಗೊತ್ತು.. ಈ ಬಾರಿ ಚುನಾವಣೆಯಲ್ಲಿ 59 ಸೀಟ್ ಕ್ರಾಸ್ ಮಾಡ್ತೇನೆ ಎಂದರು.

ಒಬ್ಬನೇ ಹೋರಾಟ ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇನೆ ಎಂದು ಸವಾಲು ಹಾಕಿದರು.

ಬಳ್ಳಾರಿ ನಗರದಲ್ಲಿ ಸುತ್ತಾಡಿದ ಯಾತ್ರೆ

ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಸೋಮವಾರ ಬಳ್ಳಾರಿ ನಗರದಲ್ಲಿ ಸುತ್ತಾಡಿತು. ಬೆಳಿಗ್ಗೆ 11 ಗಂಟೆ ಬಳ್ಳಾರಿಯ ಗುಗ್ಗರಹಟ್ಟಿಯಲ್ಲಿ ಮತ್ತು ಬಳಿಕ ಕುರುಗೋಡಿನಲ್ಲಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಕುಮಾರಸ್ವಾಮಿ ಅವರೊಂದಿಗೆ ರಾಜ್ಯ‌ ಅಧ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಇತರರು ಭಾಗಿಯಾಗಿದ್ದರು.

ಈ ಹಿಂದೆ ಕಂಪ್ಲಿ ಮತ್ತು ಸಂಡೂರು ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆದಿತ್ತು.

ಇದನ್ನೂ ಓದಿ : CRPF Recruitment: ಕೇಂದ್ರ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದೆ: ಕನ್ನಡದಲ್ಲೂ ಪರೀಕ್ಷೆ ನಡೆಸಿ ಎಂದ ಸಿದ್ದರಾಮಯ್ಯ, ಕುಮಾರಸ್ವಾಮಿ

Exit mobile version