ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ (karnataka election 2023) ಕಾಂಗ್ರೆಸ್ ಪಕ್ಷ 40 ಜನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೇವಲ ಮೂರು ದಿನದ ಹಿಂದಷ್ಟೇ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸ್ಟಾರ್ ಪ್ರಚಾರಕರ ಸ್ಥಾನ ಪಡೆದಿದ್ದಾರೆ.
ಆಶ್ಚರ್ಯದ ವಿಷಯವೆಂದರೆ ಸಕ್ರಿಯ ರಾಜಕಾರಣದಿಂದ ದೂರ ಇರುವ ಖ್ಯಾತ ನಟಿ, ಮಾಜಿ ಸಂಸದೆ ರಮ್ಯಾ ಅವರ ಹೆಸರೂ ಪಟ್ಟಿಯಲ್ಲಿದೆ. ಅಲ್ಲದೆ, ತೇರದಾಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ, ಪಕ್ಷ ಟಿಕೆಟ್ ನೀಡದೇ ಇದ್ದುದ್ದರಿಂದ ನಿರಾಸೆಗೊಂಡಿದ್ದ ಖ್ಯಾತ ನಟಿ ಉಮಾಶ್ರೀ ಕೂಡ ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದಾರೆ.
ಉಳಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಕೆಪಿಸಿಸಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಬಿ.ಕೆ. ಹರಿಪ್ರಸಾದ್, ಜಿ. ಪರಮೇಶ್ವರ್ ಅವರು ಪಟ್ಟಿಯ ಟಾಪ್ 10ನಲ್ಲಿದ್ದಾರೆ.
ಅಶೋಕ್ ಗೆಹ್ಲೋಟ್ (ರಾಜಸ್ತಾನ ಸಿಎಂ), ಭೂಪೇಶ್ ಭಾಗೇಲ್ (ಛತ್ತೀಸ್‌ಗಢ ಸಿಎಂ), ಸುಖ್ವಿಂದರ್ ಸಿಂಗ್ (ಹಿಮಾಚಲ ಸಿಎಂ) ಇವರು ಪಟ್ಟಿಯಲ್ಲಿರುವ ಕಾಂಗ್ರೆಸ್ ಮುಖ್ಯಮಂತ್ರಿಗಳು.
40 ಪ್ರಚಾರಕರು ಇವರು
ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಬಿ.ಕೆ.ಹರಿಪ್ರಸಾದ್, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಜೈರಾಂ ರಮೇಶ್, ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್, ರಾಮಲಿಂಗಾ ರೆಡ್ಡಿ, ಡಿ.ಕೆ.ಸುರೇಶ್, ನಾಸೀರ್ ಹುಸೇನ್, ಜಮೀರ್ ಅಹ್ಮದ್, ಉಮಾಶ್ರೀ, ಅಶೋಕ್ ಗೆಹ್ಲೋಟ್ (ರಾಜಸ್ತಾನ ಸಿಎಂ), ಭೂಪೇಶ್ ಭಾಗೇಲ್ (ಛತ್ತೀಸ್‌ಗಢ ಸಿಎಂ), ಸುಖ್ವಿಂದರ್ ಸಿಂಗ್ (ಹಿಮಾಚಲ ಸಿಎಂ), ಪೃಥ್ವಿರಾಜ್ ಚೌವ್ಹಾಣ್, ಅಶೋಕ್ ಚವ್ಹಾಣ್, ಪಿ.ಚಿದಂಬರಂ, ಶಶಿತರೂರ್, ಮಹಮದ್ ಅಜರುದ್ದೀನ್, ಮಾಜಿ ಸಂಸದೆ ರಮ್ಯಾ, ಕನ್ಹಯ್ಯ ಕುಮಾರ್, ಸಾಧು ಕೋಕಿಲಾ.