Site icon Vistara News

Karnataka Election: ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘದ ಸಾಲ ಮನ್ನಾ: ಎಚ್.ಡಿ. ಕುಮಾರಸ್ವಾಮಿ

Karnataka Elections news IF JDS comes to power loans of women Self Help Group will be waived off says HD Kumaraswamy

ವಿಜಯಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘದ ಸಾಲ ಮನ್ನಾ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದರು.

ಟಕ್ಕಳಕಿಯಲ್ಲಿ ನಡೆದ ಜೆಡಿಎಸ್‌ ಪಂಚರತ್ನ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದರ ಜತಗೆ ಸುವರ್ಣ ಗ್ರಾಮ ಯೋಜನೆಯನ್ನು ಜಾರಿಗೆ ತರುತ್ತೇನೆ. ಮಹಿಳೆಯರು ಭಯ ಪಡುವುದು ಬೇಡ. ರೈತರ ಸಾಲ ಮನ್ನಾ ಮಾದರಿಯಲ್ಲಿಯೇ ಮಹಿಳೆಯರ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಿ ಕೊಡುತ್ತೇನೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಈ ಸಾಲ ಮನ್ನಾ ಆಗಲಿದೆ. ನೀವೆಲ್ಲ ಸರ್ಕಾರ ರಚನೆಗೆ ಸಹಾಯ ಮಾಡಿ ಎಂದು ಮಹಿಳೆಯರಲ್ಲಿ ಮನವಿ ಮಾಡಿದರು.

ವಿಜಯಪುರ ಗ್ರಾಮೀಣ ಭಾಗಗಳಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ. ಜಲ ಮಿಷನ್ ಯೋಜನೆ ವಿಫಲವಾಗಿದೆ. ಹಳ್ಳಿಗಳಲ್ಲಿ ರಸ್ತೆಗಳು ಸರಿ ಇಲ್ಲ, ಕೆಲವೆಡೆ ರಸ್ತೆಗಳೇ ಇಲ್ಲ ಎಂದು ಅಸಮಾಧಾನ ಹೊರ ಹಾಕಿದ ಎಚ್‌ಡಿಕೆ, ಸ್ವಚ್ಛ ಭಾರತ್ ಅಭಿಯಾನ ಎಂದು ಹೇಳುತ್ತಾರೆ. ಇನ್ನೂ ಹಳ್ಳಿಗಳಲ್ಲಿ ಜನರು ಚೆಂಬು ಹಿಡಿದುಕೊಂಡು ಬಹಿರ್ದೆಸೆಗೆ ಹೋಗುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Google Layoff: 8 ತಿಂಗಳ ಗರ್ಭಿಣಿಯನ್ನು ವಜಾಗೊಳಿಸಿದ ಗೂಗಲ್‌, ಹೃದಯ ಒಡೆದ ಅನುಭವ ಎಂದ ಉದ್ಯೋಗಿ

ರೈತರ ಆತ್ಮಹತ್ಯೆ ಘಟನೆ ಕಂಡು ರೈತರ ಸಾಲ ಮನ್ನಾ ಮಾಡಿದೆ. ಜಾತಿ ಮೇಲೆ ಸಾಲ ಮನ್ನಾ ಮಾಡಿಲ್ಲ. ನಾನೇನು ಜಾತಿ ನೋಡಿ ಸಾಲ ಮನ್ನಾ ಮಾಡಿದ್ದೇನಾ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ನಾಳೆ ಬಾದಾಮಿಗೆ ಭೇಟಿ

ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ ಪಂಚರತ್ನ ರಥ ಯಾತ್ರೆ ಸೋಮವಾರ (ಜ.೨೨) ಬಾಗಲಕೋಟೆ ಜಿಲ್ಲೆಗೆ ಆಗಮಿಸಲಿದೆ. ೬ ದಿನಗಳ ಕಾಲ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಮುಗಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸೋಮವಾರ ಬೆಳಗ್ಗೆ ಬಾದಾಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಳೇದಗುಡ್ಡ ಪಟ್ಟಣದ ಮಾರುತೇಶ್ವರ ದೇವಸ್ಥಾನದಲ್ಲಿ ೯ ಗಂಟೆಗೆ ಪೂಜೆ ನೆರವೇರಿಸಿ ಪ್ರವಾಸವನ್ನು ಆರಂಭಿಸಲಿದ್ದಾರೆ‌. ೧೧:೩೦ ವರೆಗೆ ಗುಳೇದಗುಡ್ಡ ಪಟ್ಟಣದಲ್ಲಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ. ಈ ನಡುವೆ ಬಹಿರಂಗ ಸಭೆ ಸಹ ನಡೆಯಲಿದೆ‌.

ನಂತರ ಬಡ ನೇಕಾರ ಕುಟುಂಬ ಭೇಟಿ ಜತೆಗೆ ನೇಕಾರ ಮಠಕ್ಕೆ ಭೇಟಿ ಕೊಡಲಾಗುವುದು. ಅಲ್ಲಿಂದ ಕೆರೂರು ಪಟ್ಟಣದತ್ತ ಪಂಚರತ್ನ ರಥ ಯಾತ್ರೆ ಸಾಗಲಿದೆ. ಕೆರೂರು ಪಟ್ಟಣದಲ್ಲಿ ಪಂಚರತ್ನ ಯೋಜನೆಗಳ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ೧೨:೩೦ರಿಂದ ಕೆರೂರು ಬಸ್ ನಿಲ್ದಾಣದಿಂದ ಹಿರೇಮಠ ಪ್ರೌಢಶಾಲೆ ಮೈದಾನದವರೆಗೆ ರಥ ಯಾತ್ರೆಯ ಕುಂಭ ಮೇಳದ ಮೆರವಣಿಗೆ ನಡೆಯಲಿದೆ. ೧೦-೧೨ ಸಾವಿರ ಜನತೆ ಕೆರೂರು ಪಟ್ಟಣದಲ್ಲಿ ನಡೆಯುವ ಸಮಾವೇಶಕ್ಕೆ ಆಗಮಿಸುವ ಸಾಧ್ಯತೆ ಇದೆ.

ಸಮಾವೇಶ ನಂತರ ಕೆರೂರು ಭಾಗದಲ್ಲಿ ಬರುವ ಸುಮಾರು ೧೬ ಹಳ್ಳಿಗಳಿಗೆ ಪಂಚರತ್ನ ಯಾತ್ರೆ ಸಾಗಲಿದೆ‌. ಸಂಜೆ ೬:೩೦ಕ್ಕೆ ಬಾದಾಮಿ ಪಟ್ಟಣಕ್ಕೆ ಯಾತ್ರೆ ಆಗಮಿಸಲಿದ್ದು, ಬಾದಾಮಿಯಲ್ಲಿ ಭವ್ಯ ಮೆರವಣಿಗೆ ಕಾರ್ಯ ನಡೆಯಲಿದೆ. ಅದಕ್ಕೂ ಮುಂಚೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ನಾಡ ದೇವತೆ ಬನಶಂಕರಿ ದೇವಿ ದರ್ಶನ ಪಡೆಯಲಿದ್ದಾರೆ. ನಂತರ ಎಪಿಎಂಸಿ ಆವರಣದಲ್ಲಿ ಪಂಚರತ್ನ ಯೋಜನೆಯ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: Road Dispute: ಪುಷ್ಪಗಿರಿ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಪ್ರಕರಣ; ಕೊಡಗಿನ ಬಿಜೆಪಿ ಶಾಸಕರ ಮೇಲೆ ತೂಗುಗತ್ತಿ

ಸಮಾವೇಶದ ನಂತರ ಆಡಗಲ್ಲ ಗ್ರಾಮದಲ್ಲಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಆ ಮೂಲಕ ತಮ್ಮ ಬಾದಾಮಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹನುಮಂತ್ ಮಾವಿನಮರದ ಪರ ಪ್ರಚಾರ ನಡೆಸಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಾಥ್ ನೀಡಲಿದ್ದಾರೆ.

Exit mobile version