Site icon Vistara News

Karnataka Elections : ನಾಮಪತ್ರ ಸಲ್ಲಿಸಿದ ಬೆನ್ನಿಗೇ ನಿಖಿಲ್‌ ಕುಮಾರಸ್ವಾಮಿ ಟೆಂಪಲ್‌ ರನ್‌, ಧರ್ಮಸ್ಥಳಕ್ಕೆ ಭೇಟಿ

Nikhil kumaraswamy in Dharmasthala

#image_title

ಧರ್ಮಸ್ಥಳ (ದಕ್ಷಿಣ ಕನ್ನಡ): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ರಾಮ ನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿಖಿಲ್‌ ಕುಮಾರಸ್ವಾಮಿ ಅವರು, ನಾಮಪತ್ರ ಸಲ್ಲಿಸಿದ ಬೆನ್ನಿಗೇ ಟೆಂಪಲ್‌ ರನ್‌ ಆರಂಭಿಸಿದ್ದಾರೆ.

ರಾಮನಗರದಲ್ಲಿ ‌ ಈಗ ಎಚ್‌.ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಶಾಸಕಿಯಾಗಿದ್ದಾರೆ. ಈ ಬಾರಿ ಅವರು ತಮ್ಮ ಮಗ ನಿಖಿಲ್‌ ಕುಮಾರಸ್ವಾಮಿಗಾಗಿ ಕ್ಷೇತ್ರವನ್ನು ತ್ಯಾಗ ಮಾಡಿದರು. ಸೋಮವಾರ ತಮ್ಮ ಅಜ್ಜ, ಪ್ರಧಾನಿಯಾಗಿದ್ದ ಎಚ್.ಡಿ ಕುಮಾರಸ್ವಾಮಿ ಅವರ ಕೈಯಿಂದ ಬಿ ಫಾರಂ ಸ್ವೀಕರಿಸಿದ ನಿಖಿಲ್‌ ದೊಡ್ಡ ಮಟ್ಟದ ರೋಡ್‌ ಶೋ ಮೂಲಕ ರಾಮನಗರದಲ್ಲಿ ನಾಮಪತ್ರ ಸಲ್ಲಿಸಿದ್ದರು.

ಧರ್ಮಸ್ಥಳದಲ್ಲಿ ನಿಖಿಲ್‌ ಕುಮಾರಸ್ವಾಮಿ

ನಾಮಪತ್ರ ಸಲ್ಲಿಸಿದ ಬಳಿಕ ನಿಖಿಲ್ ಕುಮಾರಸ್ವಾಮಿ ಸಿಟಿ ರೌಂಡ್ಸ್ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಪ್ರಮುುಖ ದೇವಸ್ಥಾನಗಳಿಗೆ ಭೇಟಿ ನೀಡಿದ ನಿಖಿಲ್‌ ಅವರು ಹಜರತ್ ಶೇಕ್ ಪೀರುನ್ ಷಾ ಆಲಿ ದರ್ಗಾಗೆ ಭೇಟಿ ನೀಡಿದರು. ರಾಮನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದಿತ್ತು.

ಇದಾದ ಬಳಿಕ ಮಂಗಳವಾರ ಮುಂಜಾನೆ ನಿಖಿಲ್‌ ಅವರು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಹೊರಟು ನಿಂತಿದ್ದರು. ʻʻಬಹಳ ದಿನಗಳಿಂದ ಮಂಜುನಾಥನ ದರ್ಶನ ಮಾಡಿರಲಿಲ್ಲ. ಹೀಗಾಗಿ ಹೋಗಿ ಬರುತ್ತೇನೆʼ ಎಂದು ಹೊರಡುವ ಮುನ್ನ ಹೇಳಿದ್ದರು.

ವಿಶೇಷ ಹೆಲಿಕಾಪ್ಟರ್‌ನಲ್ಲಿ ಧರ್ಮಸ್ಥಳಕ್ಕೆ ಪ್ರಯಾಣ ಮಾಡಿದ ಅವರು, ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆದರು. ಮಂಜುನಾಥ ಸ್ವಾಮಿ ದರ್ಶನ ಪಡೆದ ಬಳಿಕ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.‌

ಈ ನಡುವೆ ಮಾತನಾಡಿದ ಅವರು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಎಚ್.ಡಿ ಕುಮಾರಸ್ವಾಮಿ ಅವರು ಕಣಕ್ಕಿಳಿಯುವ ವಿಚಾರದ ಬಗ್ಗೆ ಮಾಹಿತಿ ಇಲ್ಲ ಎಂದರು.

ಇದನ್ನೂ ಓದಿ : Karnataka Elections : ನಿಖಿಲ್‌ ಕುಮಾರಸ್ವಾಮಿಯ ಎರಡು ಕಾರಿನ ಮೌಲ್ಯವೇ 5 ಕೋಟಿ ರೂ., ಹಾಗಿದ್ದರೆ ಅವರ ಒಟ್ಟು ಆಸ್ತಿ ಎಷ್ಟಿರಬಹುದು?

Exit mobile version