Site icon Vistara News

Karnataka Elections : ಈಶ್ವರಪ್ಪ, ಶೆಟ್ಟರ್‌ ಮಾತ್ರವಲ್ಲ ಇನ್ನೂ 20 ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್‌ ಇಲ್ಲ; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

Shettar Eshwarappa

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಟಿಕೆಟ್‌ ಫೈನಲ್‌ ಮಾಡುತ್ತಿರುವ ಭಾರತೀಯ ಜನತಾ ಪಕ್ಷ ಹಾಲಿ ಶಾಸಕರಲ್ಲಿ ಇಪ್ಪತ್ತಕ್ಕೂ ಅಧಿಕ ಮಂದಿಗೆ ಕೊಕ್‌ ನೀಡುವುದು ಸ್ಪಷ್ಟವಾಗಿದೆ. ಈಗಾಗಲೇ ಟಿಕೆಟ್‌ ಮಿಸ್‌ ಆಗುವ ಹಿರಿಯ ನಾಯಕರಿಗೆ ಹೈಕಮಾಂಡ್‌ನ ಹಿರಿಯ ನಾಯಕರಿಗೆ ಕರೆಗಳು ಬರುತ್ತಿವೆ. ಇನ್ನಷ್ಟು ಮಂದಿ ಈ ರೀತಿ ಟಿಕೆಟ್‌ ಮಿಸ್‌ ಮಾಡಿಕೊಳ್ಳುವ ನಾಯಕರಿಗೆ ಕರೆ ಬರಲಿದೆ ಎಂದು ಹೇಳಲಾಗುತ್ತಿದೆ.

ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಹೈಕಮಾಂಡ್‌ನಿಂದ ಕರೆ ಬರುತ್ತಿದ್ದಂತೆಯೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೂ ಚುನಾವಣೆಗೆ ನಿವೃತ್ತಿ ಪ್ರಕಟಿಸುವಂತೆ ಹಿರಿಯ ನಾಯಕರು ಕರೆ ಮಾಡಿದ್ದಾರೆ. ಆದರೆ, ಜಗದೀಶ್‌ ಶೆಟ್ಟರ್‌ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೋರಿದ್ದಾರೆ. ಅವರ ಕೋರಿಕೆಯನ್ನು ಪಕ್ಷ ಹೇಗೆ ಸ್ವೀಕರಿಸುತ್ತದೆ ಎಂದು ಕಾದು ನೋಡಬೇಕಾಗಿದೆ.

ನಿಜವೆಂದರೆ, ಈ ಬಾರಿ ಟಿಕೆಟ್‌ ನಿರಾಕರಿಸಲಾಗುವ ಕನಿಷ್ಠ 20 ಶಾಸಕರ ಪಟ್ಟಿಯನ್ನು ಆಗಲೇ ಹೈಕಮಾಂಡ್‌ ಸಿದ್ಧಪಡಿಸಿಟ್ಟಿದ್ದು, ಇದರಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಇದರಲ್ಲಿ ಕೆಲವರು 70 ವರ್ಷ ಮೀರಿದ ನಾಯಕರಾಗಿದ್ದರೆ, ಇನ್ನು ಕೆಲವರು ಆರೋಪಗಳನ್ನು ಎದುರಿಸುತ್ತಿರುವವರು, ಇನ್ನು ಕೆಲವರು ಕ್ಷೇತ್ರದಲ್ಲಿ ಅಷ್ಟೊಂದು ಚಲಾವಣೆಯಲ್ಲಿ ಇಲ್ಲದವರು ಎಂದು ಹೇಳಲಾಗಿದೆ. ಇವರಿಗೆಲ್ಲ ವರಿಷ್ಠರು ಫೋನ್‌ ಮಾಡುತ್ತಿದ್ದು, ರಾಜಕೀಯ ನಿವೃತ್ತಿ ಘೋಷಿಸುವಂತೆ ಆದೇಶ ನೀಡುತ್ತಿದ್ದಾರೆ ಎನ್ನಲಾಗಿದೆ.

ಹಾಗಿದ್ದರೆ ಟಿಕೆಟ್‌ ಮಿಸ್‌ ಆಗಲಿರುವ ಪ್ರಮುಖ ನಾಯಕರು ಯಾರು? (ಸಂಭಾವ್ಯ ಪಟ್ಟಿ)

ವಯಸ್ಸಿನ ಆಧಾರದಲ್ಲಿ

ಕೆ.ಎಸ್‌. ಈಶ್ವರಪ್ಪ- ಶಿವಮೊಗ್ಗ ನಗರ
ವಿ. ಸೋಮಣ್ಣ-ಗೋವಿಂದ ರಾಜ ನಗರ
ಜಗದೀಶ್‌ ಶೆಟ್ಟರ್‌: ಧಾರವಾಡ
ಗೋವಿಂದ ಕಾರಜೋಳ : ಮುಧೋಳ
ಸುರೇಶ್‌ ಕುಮಾರ್‌: ರಾಜಾಜಿನಗರ
ಬೋಪಯ್ಯ: ವಿರಾಜಪೇಟೆ
ಸಿಎಂ ನಿಂಬಣ್ಣನವರ್‌: ಕಲಘಟಗಿ

ಆಡಳಿತ ವಿರೋಧಿ ಅಲೆ

ರಾಣೆಬೆನ್ನೂರು- ಅರುಣ್ ಕುಮಾರ್
ಮಂಗಳೂರು ನಗರ – ಡಾ.ಭರತ್ ಶೆಟ್ಟಿ
ಉಡುಪಿ – ರಘುಪತಿ ಭಟ್
ಕಾಪು – ಲಾಲಾಜಿ ಮೆಂಡನ್
ಕುಮಟ- ದಿನಕರ್ ಶೆಟ್ಟಿ

ಆರೋಪ ಕೇಳಿಬಂದವರು

ಮಾಡಾಳ್‌ ವೀರೂಪಕ್ಷಪ್ಪ: ಚನ್ನಗಿರಿ
ಬಸವರಾಜ ದಡೇಸಗೂರು: ಕನಕಗಿರಿ
ವಿರೂಪಕ್ಷಪ್ಪ ಬಳ್ಳಾರಿ- ಬ್ಯಾಡಗಿ
ಎಂ.ಪಿ. ಕುಮಾರಸ್ವಾಮಿ- ಮೂಡಿಗೆರೆ

ಈಗಾಗಲೇ ನಿವೃತ್ತಿ ಘೋಷಣೆ ಮಾಡಿದವರು

ಶ್ರೀನಿವಾಸ ಶೆಟ್ಟಿ ಹಾಲಾಡಿ- ಕುಂದಾಪುರ
ಎಸ್‌.ಎ. ರವೀಂದ್ರನಾಥ್‌- ದಾವಣಗೆರೆ ದಕ್ಷಿಣ

ಇವರಲ್ಲಿ ಈಗಾಗಲೇ ಹಲವು ನಾಯಕರು ಮಾಜಿ ಮುಖ್ಯಮಂತ್ರಿ ಬಿಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾತುಕತೆ ನಡೆಸಿದ್ದಾರೆ. ತಮಗೆ ಟಿಕೆಟ್‌ ತಪ್ಪದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : BJP Karnataka: ರಾಜಕೀಯದಿಂದ ಕೆ.ಎಸ್‌. ಈಶ್ವರಪ್ಪ ನಿವೃತ್ತಿ: ಜೆ.ಪಿ. ನಡ್ಡಾಗೆ ಪತ್ರ ಬರೆದ ಹಿರಿಯ ನಾಯಕ

Exit mobile version