Site icon Vistara News

Karnataka Elections : ಗದಗ ಜಿಲ್ಲೆಯಲ್ಲಿ ಬಂಗಾರ, ಹಣದ ಬೇಟೆ; ಚುನಾವಣೆಗೆ ಮುನ್ನವೇ ನಡೀತಿದೆ ಭಾರಿ ವ್ಯವಹಾರ

Gadag gold

#image_title

ಗದಗ: ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನ ಮತ್ತು ಬಂಗಾರದ ಬೇಟೆ ನಡೆದಿದ್ದು, ಇದೆಲ್ಲವೂ ಮುಂಬರುವ ಚುನಾವಣೆಗೆ (Karnataka Elections) ಸಂಬಂಧಿಸಿದ ಚಟುವಟಿಕೆಗಳ ಫಲ ಎಂದು ಹೇಳಲಾಗುತ್ತಿದೆ.

ಗದಗ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮುಳಗುಂದ ಚೆಕ್ ಪೊಸ್ಟ್ ನಲ್ಲಿ 24 ಲಕ್ಷ ರೂಪಾಯಿ ವಶವಾಗಿದ್ದರೆ, ಗದಗದ ಬೇರೆ ಬೇರೆ ಚೆಕ್‌ ಪೋಸ್ಟ್‌ಗಳಲ್ಲಿ ಒಟ್ಟು 1.75 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸಿಕ್ಕಿದೆ.

ಕಾರಿನಲ್ಲಿ ಸಾಗಾಟವಾಗುತ್ತಿತ್ತು ಹಣ

ದಾವಣಗೆರೆಯಿಂದ ಗದಗ ಕಡೆಗೆ ಹಣ ತಗೆದುಕೊಂಡು ಹೊರಟಿದ್ದ ಪ್ರಯಾಣಿಕರ ಕಾರಲ್ಲಿ 20 ಲಕ್ಷ 50 ಸಾವಿರ ರೂ. ಪತ್ತೆಯಾಗಿದೆ. ಇದೇ ವೇಳೆ ಬದಾಮಿ ತಾಲೂಕಿನ ಜಾಲಿಹಾಳದಿಂದ ಲಕ್ಷ್ಮೇಶ್ವರ ಕಡೆಗೆ ಹೊರಟಿದ್ದ ಕಾರಲ್ಲಿ 4 ಲಕ್ಷ ನಗದು ಸಿಕ್ಕಿದೆ. ಗದಗ ತಾಲೂಕಿನ ಮುಳಗುಂದ ಚೆಕ್ ಪೊಸ್ಟ್ ನಲ್ಲಿ ಗದಗ ಎಸ್ಪಿ ಬಿ.ಎಸ್ ನೇಮಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಹಣ ವಶವಾಗಿದೆ.

ಗದಗದ ಚೆಕ್‌ ಪೋಸ್ಟ್‌ನಲ್ಲಿ ವಶವಾದ 24.5 ಲಕ್ಷ ಮೊತ್ತದ ಹಣ

ವಾಹನ ಖರೀದಿ, ಆಸ್ತಿ ಖರೀದಿಗೆ ಹಣ ತಗೆದುಕೊಂಡು ಹೊರಟ್ಟಿದ್ದೇವೆ ಎಂದ ಪ್ರಯಾಣಿಕರು ಹೇಳಿದ್ದಾರಾದರೂ ದಾಖಲೆ ಇಲ್ಲದೆ ಇದ್ದ ಹಿನ್ನೆಲೆಯಲ್ಲಿ 24.50 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.

ಹಲವು ಚೆಕ್ ಪೋಸ್ಟ್‌ಗಳಲ್ಲಿ ಚಿನ್ನ ಸಾಗಾಟ ಪತ್ತೆ

ಇದೇವೇಳೆ ಚುನಾವಣೆ ಘೋಷಣೆ ಮುನ್ನವೇ ಗದಗನ ಚೆಕ್‌ಪೋಸ್ಟಗಳಲ್ಲಿ ಹಣ, ಚಿನ್ನದ ಸಾಗಾಟ ಪತ್ತೆಯಾಗಿದೆ.

ಗದಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಸ್ಥಾಪನೆ ಮಾಡಿ ತಪಾಸಣೆ ಮಾಡುವ ವೇಳೆ 4 ಕಿಲೋ ಬಂಗಾರದ ಆಭರಣ ಸಾಗಾಟ ಪತ್ತೆಯಾಗಿದ್ದು, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಗದಗ ನಗರದ ಹೊರವಲಯದ ಚೆಕ್ ಪೋಸ್ಟ್ ನಲ್ಲಿ ಮಾರ್ಚ್‌ 15ರಂದು ತಪಾಸಣೆ ಮಾಡುತ್ತಿದ್ದ ವೇಳೆ ಮುಂಬಯಿಯಿಂದ ಗದಗ ನಗರಕ್ಕೆ ತರುತ್ತಿದ್ದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶವಾದ ನಾಲ್ಕು ಕೆಜಿ ಬಂಗಾರದ ಮೌಲ್ಯ 1 ಕೋಟಿ 75 ಲಕ್ಷ ಮೌಲ್ಯ ಎಂದು ಅಂದಾಜಿಸಲಾಗಿದೆ.

ಮಹಿಪಾಲ್ ಜೈನ್, ಅಭಿಷೇಕ್ ಜೈನ್ ಎಂಬವರಿಗೆ ಸೇರಿದ ಚಿನ್ನ ಇದಾಗಿದೆ. ಡಿಸಿ ವೈಶಾಲಿ, ಎಸ್ಪಿ ಬಿ.ಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.

ಇದನ್ನೂ ಓದಿ : Karnataka Elections : ಚನ್ನಪಟ್ಟಣದಲ್ಲಿ ಚಿತ್ರನಟಿ ರಮ್ಯಾ ಸ್ಪರ್ಧೆ ಮಾಡಿದರೂ ತಲೆ ಕೆಡಿಸಿಕೊಳ್ಳಲ್ಲ ಎಂದ ಎಚ್‌ಡಿ ಕುಮಾರಸ್ವಾಮಿ

Exit mobile version