Site icon Vistara News

Karnataka Elections : ಮಸೀದಿ, ಮದರಸಗಳಲ್ಲಿ ಶಾಸಕ ಖಾದರ್ ಮತಯಾಚನೆ; SDPIನಿಂದ ಚುನಾವಣಾ ಆಯೋಗಕ್ಕೆ ದೂರು

UT Khader

#image_title

ಉಳ್ಳಾಲ: ಮಂಗಳೂರು ಕ್ಷೇತ್ರದ (Karnataka Elections) ಕಾಂಗ್ರೆಸ್‌ ಶಾಸಕ, ಅಭ್ಯರ್ಥಿ ಯು.ಟಿ ಖಾದರ್ ಧಾರ್ಮಿಕ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ಎಸ್ ಡಿಪಿಐ ವತಿಯಿಂದ ದೂರು ನೀಡಲಾಗಿದೆ.

ಮದನಿ ನಗರ, ಉಳ್ಳಾಲ ಕೋಡಿ ತೋಟದ ಮಸೀದಿ ಹಾಗೂ ಮದರಸಗಳಲ್ಲಿ ಶಾಸಕ ಯು.ಟಿ ಖಾದರ್ ಮಾತನಾಡುತ್ತಿರುವ ಚಿತ್ರಗಳು ವೈರಲ್ ಆಗಿತ್ತು. ಇದೊಂದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಧಾರ್ಮಿಕ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸುವುದು ಸಮಂಜಸವಲ್ಲ, ತಕ್ಷಣ ಆಯೋಗ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಅನ್ನುವ ಒತ್ತಾಯ ಮಾಡಿದ್ದಾರೆ. ಆನ್ಲೈನ್ ಮುಖೇನ ದೂರನ್ನು ನೋಂದಣಿ ಮಾಡಿಕೊಂಡಿದ್ದಾರೆ.

ಯು.ಟಿ. ಖಾದರ್‌ ಅವರು ಮಸೀದಿ ಮತ್ತು ಮದರಸಾದಲ್ಲಿ ಮತ ಯಾಚನೆ ಮಾಡುತ್ತಿರುವ ದೃಶ್ಯ

ವಿಡಿಯೊ ದಾಖಲೆಗಳಿದ್ದರೆ ಪ್ರಕರಣ

ದೂರಿನ ಆಧಾರದಂತೆ ಮದರಸ ಮಸೀದಿಗಳಿಗೆ ತೆರಳಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮತಯಾಚನೆ ಕುರಿತು ವೀಡಿಯೋ ದಾಖಲೆಗಳಿದ್ದರೆ ತಕ್ಷಣ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ‌.

ವಿಜಯನಗರದಿಂದ ಜಯ ನಗರಕ್ಕೆ ಆಟೊದಲ್ಲಿ 1 ಕೋಟಿ ರೂ. ಸಾಗಾಟ ಪತ್ತೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಎಲ್ಲೆಡೆ ಹದ್ದುಗಣ್ಣಿಟ್ಟಿದ್ದು, ಅಕ್ರಮ ಹಣ ಮತ್ತು ವಸ್ತುಗಳ ಸಾಗಾಟವನ್ನು ಅಲ್ಲಲ್ಲಿ ಪತ್ತೆ ಹಚ್ಚುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ 100 ಕೋಟಿ ರೂಪಾಯಿಗೂ ಮೀರಿದ ಅಕ್ರಮ ಸಾಗಾಟ ಪತ್ತೆಯಾಗಿದೆ. ಇದರ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಒಂದು ಕೋಟಿ ರೂ. ಸಾಗಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಹಣ ವಿಜಯನಗರದಿಂದ ಜಯ ನಗರಕ್ಕೆ ಸಾಗಿಸಲಾಗುತ್ತಿದ್ದು, ಬಿಜೆಪಿ ನಾಯಕರೊಬ್ಬರಿಗೆ ಸೇರಿದ್ದು ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ.

ಎಸ್‌ಜೆ ಪಾರ್ಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಬಿಬಿಎಂಪಿ ಕಚೇರಿ ಬಳಿ ಆಟೊ ರಿಕ್ಷಾವೊಂದು ಕೆಟ್ಟು ನಿಂತಿತ್ತು. ಅದರಲ್ಲಿದ್ದ ವ್ಯಕ್ತಿಗಳು ಸಂಶಯಾಸ್ಪದ ರೀತಿಯಲ್ಲಿ ವರ್ತನೆ ಮಾಡಿದ್ದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ಅದರಲ್ಲಿ ಒಂದು ಕೋಟಿ ರೂ. ಹಣ ಇರುವುದು ಪತ್ತೆಯಾಗಿತ್ತು. ಸುರೇಶ್‌ ಮತ್ತು ಪ್ರವೀಣ್‌ ಎಂಬಿಬ್ಬರು ವ್ಯಕ್ತಿಗಳು ಈ ಹಣವನ್ನು ಸಾಗಿಸುತ್ತಿದ್ದರು. ಇದೀಗ ಆಟೊ ರಿಕ್ಷಾ, ಹಣ ಮತ್ತು ಇಬ್ಬರು ವ್ಯಕ್ತಿಗಳು ಪೊಲೀಸರು ವಶಕ್ಕೆ ಪಡೆದಿದ್ದು, ಹಣದ ಮೂಲದ ತನಿಖೆ ನಡೆಸುತ್ತಿದ್ದಾರೆ.

ಆರೋಪಿಗಳು ಆಟೊ ಬುಕ್‌ ಮಾಡಿಕೊಂಡು ಹಣವನ್ನು ಸಾಗಾಟ ಮಾಡುತ್ತಿದ್ದರು. ರಿಕ್ಷಾದಲ್ಲಿ ಎರಡು ಬ್ಯಾಗ್‌ಗಳಲ್ಲಿ ಒಟ್ಟು ಒಂದು ಕೋಟಿ ರೂ. ಪತ್ತೆಯಾಗಿದೆ. ಪೊಲೀಸ್‌ ಅಧಿಕಾರಿಗಳು ತಮ್ಮ ವಶದಲ್ಲಿರುವ ವ್ಯಕ್ತಿಗಳ ಬಳಿ ಹಣದ ಬಗ್ಗೆ ದಾಖಲೆಯನ್ನು ಕೇಳುತ್ತಿದ್ದಾರೆ. ಜತೆಗೆ ಹಣದ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

ಇದು ಜಯನಗರದ ಬಿಜೆಪಿ ನಾಯಕರೊಬ್ಬರಿಗೆ ತಲುಪಬೇಕಾಗಿದ್ದ ಹಣ ಎಂದು ಹೇಳಲಾಗುತ್ತಿದೆ. ರಾಜೇಶ್‌ ಎಂಟರ್‌ಪ್ರೈಸಸ್‌ ಎಂಬ ಕಚೇರಿಯಿಂದ ಹಣವನ್ನು ತರಲಾಗಿದೆ.

ಇದನ್ನೂ ಓದಿ : Karnataka Elections : ಮೊದಲ ಏಟಿಗೆ ಒಡೆಯದ ಈಡುಗಾಯಿ, ಚಾಮುಂಡಿ ಸನ್ನಿಧಿಯಲ್ಲಿ ವಿಚಲಿತರಾದ ವಿ. ಸೋಮಣ್ಣ

Exit mobile version