Site icon Vistara News

Karnataka Elections : ತುಮಕೂರಿನಲ್ಲಿ ಬಿಜೆಪಿ ಟಿಕೆಟ್‌ ಫೈಟ್‌; 1 ನೋಟು, 1 ವೋಟು ಅಭಿಯಾನ ಶುರು ಮಾಡಿದ ಸೊಗಡು ಶಿವಣ್ಣ

Sogadu Shivanna jolige Abhiyana

#image_title

ತುಮಕೂರು: ತುಮಕೂರು ನಗರ ಕ್ಷೇತ್ರದಲ್ಲಿ ಈಗ ಇರುವುದು ಬಿಜೆಪಿ ಶಾಸಕ ಜ್ಯೋತಿ ಗಣೇಶ್‌. ಯುವಕರಾಗಿ ಎಲ್ಲೆಡೆ ಓಡಾಡುತ್ತಾ ಗಮನ ಸೆಳೆಯುತ್ತಿರುವ ಜ್ಯೋತಿ ಗಣೇಶ್‌ ಅವರಿಗೆ ಈ ಬಾರಿ ಟಿಕೆಟ್‌ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಆದರೆ, ಅಲ್ಲಿ ಆಕಾಂಕ್ಷಿಗಳಿಗೇನೂ ಕೊರತೆ ಇಲ್ಲ. ಅವರಲ್ಲಿ ಪ್ರಮುಖರಾದವರು ಮಾಜಿ ಸಚಿವ ಸೊಗಡು ಶಿವಣ್ಣ ಅವರು. ಈ ಬಾರಿ ಕೆಲವು ಶಾಸಕರನ್ನು ಬದಲಿಸಿ ಬೇರೆಯವರಿಗೆ ಟಿಕೆಟ್‌ ಕೊಡುತ್ತಾರೆ ಎಂಬ ಸುದ್ದಿ ಹರಡಿರುವುದರಿಂದ ಅವರು ತಮಗೂ ಅವಕಾಶ ಒಲಿಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲವು ಸಮಯ ಹಿಂದಿನಿಂದಲೇ ಟಿಕೆಟ್‌ಗಾಗಿ ಫೈಟ್‌ (Karnataka Elections) ಮಾಡುತ್ತಿರುವ ಅವರು ಈಗ ಒಂದು ನೋಟು ಒಂದು ವೋಟು ಎಂಬ ಅಭಿಯಾನ ಶುರು ಮಾಡಿ ಜೋಳಿಗೆ ಹಿಡಿದಿದ್ದಾರೆ.

1994ರಲ್ಲಿ ಮೊದಲ ಬಾರಿಗೆ ತುಮಕೂರು ನಗರ ಶಾಸಕರಾಗಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಅವರು 2013ರವರೆಗೂ ಗೆಲುವು ಸಾಧಿಸಿದ್ದರು. ಕುಮಾರಸ್ವಾಮಿ ನೇತೃತ್ವದ 20-20 ಸರಕಾರದಲ್ಲಿ ರೇಷ್ಮೆ ಸಚಿವರಾಗಿ, ಮುಂದೆ 2012-13ರ ಅವಧಿಯಲ್ಲಿ ಜಗದೀಶ್‌ ಶೆಟ್ಟರ್‌ ಸಂಪುಟದಲ್ಲಿ ಪರಿಸರ ಸಚಿವರಾಗಿ ಕೆಲಸ ಮಾಡಿದ ಅನುಭವ ಸೊಗಡು ಶಿವಣ್ಣ ಅವರಿಗಿದೆ. 2013ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಡಾ. ರಫೀಕ್‌ ಖಾನ್‌ ಅವರೆದುರು ಸೋಲುತ್ತಾರೆ. 2018ರಲ್ಲಿ ಬಿಜೆಪಿ ಸೊಗಡು ಶಿವಣ್ಣ ಅವರ ಬದಲಾಗಿ ಯುವಕ ಜ್ಯೋತಿ ಗಣೇಶ್‌ ಅವರಿಗೆ ಟಿಕೆಟ್‌ ನೀಡಿ ಅವರು ಗೆಲುವು ಸಾಧಿಸಿದರು.

2018ರಲ್ಲಿ ನಾನು ಹಿರಿಯರ ಮಾತಿಗೆ ಮನ್ನಣೆ ಕೊಟ್ಟು ಜ್ಯೋತಿ ಗಣೇಶ್‌ಗೆ ಸೀಟು ಬಿಟ್ಟುಕೊಟ್ಟಿದ್ದೆ. ಈಗ ಜ್ಯೋತಿಗಣೇಶ್‌ ನನಗೆ ಬಿಟ್ಟು ಕೊಡಲಿ ಎಂಬ ವಾದದೊಂದಿಗೆ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಮಾತ್ರವಲ್ಲ, ನಾನೇ ಅಭ್ಯರ್ಥಿ ಎಂದು ಹೇಳುತ್ತಾ ಮತ ಯಾಚನೆಗೂ ಶುರು ಮಾಡಿದ್ದಾರೆ. ಅದರ ಭಾಗವೇ ಜೋಳಿಗೆ ಅಭಿಯಾನ.

ಭಾನುವಾರ ನಗರದ ಕಾಳಮ್ಮ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅವರು ಜೋಳಿಗೆ ಹಿಡಿದು ಪ್ರಚಾರ ಶುರು ಮಾಡಿದರು. ಚುನಾವಣಾ ಠೇವಣಿಗಾಗಿ ಜನರಿಂದಲೇ ಹಣ ಸಂಗ್ರಹಿಸುವ ಉದ್ದೇಶವನ್ನು ಅವರು ಹೊಂದಿದ್ದಾರಂತೆ.

ʻಪ್ರತಿ ದಿನ ತುಮಕೂರು ನಗರದ ಒಂದೊಂದು ವಾರ್ಡ್‌ನಲ್ಲಿ ಓಡಾಟ ಮಡುತ್ತಾ ಪ್ರಚಾರ ನಡೆಸುತ್ತೇನೆ. ನಾನು ಮಾಡಿರುವ ಕಾಯಕವನ್ನು ಹೇಳಿಕೊಂಡು ಪ್ರಚಾರ ನಡೆಸುತ್ತೇನೆʼʼ ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು. ಆದರೆ, ಇದು ಟಿಕೆಟ್‌ಗಾಗಿ ನಡೆಸುತ್ತಿರುವ ಒತ್ತಡ ತಂತ್ರವೂ ಎಂಬ ಅಭಿಪ್ರಾಯವೂ ಇದೆ.

ಶುಕ್ರವಾರ ಎರಡು ಜೋಳಿಗೆ ಹಿಡಿದು ಮತದಾರರ ಮುಂದೆ ಹೋದ ಅವರು ತಮಟೆ ಬಾರಿಸುತ್ತಾ ಮತ ಕೇಳಿದರು. ಎರಡು ಜೋಳಿಗೆ ಹಿಡಿದುಕೊಂಡಿದ್ದ ಶಿವಣ್ಣ, ಒಂದು ಜೋಳಿಗೆಗೆ ನೋಟು ಹಾಕಿ, ಇನ್ನೊಂದು ಜೋಳಿಗೆಗೆ ವೋಟು ಹಾಕಿ ಎಂದು ಮನವಿ ಮಾಡಿದರು. ಸ್ವಲ್ಪ ಹೊತ್ತಿನಲ್ಲೆ ಅವರ ಬೆಂಬಲಿಗರು, ಅಭಿಮಾನಿಗಳು ಸಾಕಷ್ಟು ಮೊತ್ತವನ್ನು ಜೋಳಿಗೆಗೆ ಹಾಕಿದರು. 1977ರಲ್ಲಿ ವಾಕ್ ಸ್ವಾತಂತ್ರ ಕಿತ್ತುಕೊಂಡಿದ್ದಾರೆಂದು ಜೋಳಿಗೆ ಹಿಡಿದು ಜೈಲಿಗೆ ಹೋಗಿದ್ದೆ ಎಂದು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು.

ಒಂದೇ ಕಡೆಯಿಂದ ಪೂಜೆ ಆರಂಭಿಸಿದ ಇಬ್ಬರು

ಜ್ಯೋತಿ ಗಣೇಶ್‌ ಮತ್ತು ಸೊಗಡು ಶಿವಣ್ಣ ಪ್ರಚಾರವನ್ನು ಪೈಪೋಟಿಯಿಂದಲೇ ಆರಂಭಿಸಿದ್ದರು. ನಾ ಮುಂದು ತಾ ಮುಂದು ಎಂದು ಬಿಜೆಪಿಯ ಇಬ್ಬರು ನಾಯಕರು ಹಠಕ್ಕೆ ಬಿದ್ದಿದ್ದಾರೆ.

ಶಾಸಕ ಜ್ಯೋತಿ ಗಣೇಶ್‌ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಪೂಜೆ ನಡೆಸಿ ಪ್ರಚಾರ ಆರಂಭಿಸಿದ ಬೆನ್ನಿಗೇ ಜ್ಯೋತಿ ಗಣೇಶ್‌ಗೆ ಸೆಡ್ಡು ಹೊಡೆದು ಶ್ರೀ ಮಠದಿಂದಲೇ ಪ್ರಚಾರ ಆರಂಭಿಸಿದ್ದರು ಸೊಗಡು ಶಿವಣ್ಣ!

ಇದನ್ನೂ ಓದಿ : Cooker, saree politics : ತುಮಕೂರಿನಲ್ಲಿ ಸೀರೆ, ಕುಕ್ಕರ್‌ ಹಂಚಿದ ಅಟ್ಟಿಕಾ ಬಾಬು, ಕೊನೆಗೆ ಬಂದವರಿಗೆ ಸೀರುಂಡೆ!

Exit mobile version