Site icon Vistara News

Karnataka Elections : ಮೊದಲ ಏಟಿಗೆ ಒಡೆಯದ ಈಡುಗಾಯಿ, ಚಾಮುಂಡಿ ಸನ್ನಿಧಿಯಲ್ಲಿ ವಿಚಲಿತರಾದ ವಿ. ಸೋಮಣ್ಣ

V Somanna Cocounut

#image_title

ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ (Karnataka Elections) ವರುಣ ಮತ್ತು ಚಾಮರಾಜ ಕ್ಷೇತ್ರದ ಅವಳಿ ಬಿಜೆಪಿ ಟಿಕೆಟ್‌ ಪಡೆದಿರುವ ಸಚಿವ ವಿ. ಸೋಮಣ್ಣ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಈಡುಗಾಯಿ ಒಡೆಯಲು ಎರಡನೇ ಬಾರಿ ಪ್ರಯತ್ನಿಸಬೇಕಾಯಿತು.

ವರುಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎದುರಿಸಬೇಕಾದ ಕಠಿಣ ಟಾಸ್ಕ್‌ ಎದುರಿಸುತ್ತಿರುವ ಸೋಮಣ್ಣ ಅವರು ಚಾಮರಾಜದಲ್ಲೂ ಸ್ಥಳೀಯರ ವಿರೋಧವನ್ನು, ಎಂ. ರುದ್ರೇಶ್‌ ಅವರ ಸಣ್ಣ ಭಿನ್ನಮತವನ್ನು ಎದುರಿಸುತ್ತಿರುವ ಸೋಮಣ್ಣ ಎಲ್ಲವನ್ನೂ ಎದುರಿಸುವ ಹುಮ್ಮಸ್ಸಿನೊಂದಿಗೆ ಹೊರಟಿದ್ದಾರೆ.

ಟಿಕೆಟ್‌ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ ಅವರು ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಪಡೆದರು, ಸುತ್ತೂರು ಮಠಕ್ಕೆ ತೆರಳಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಜತೆಗೆ ಸಂಸದ ಶ್ರೀನಿವಾಸ ಪ್ರಸಾದ್‌ ಅವರನ್ನೂ ಭೇಟಿಯಾದರು.

ಮುಂಜಾನೆ ಅವರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೇವರ ಮುಂದೆ ಇಳಿ ತೆಗೆದು ಸೋಮಣ್ಣ ಈಡುಗಾಯಿ ಒಡೆದರು. ಆದರೆ, ಅದು ಮೊದಲ ಹೊಡೆತಕ್ಕೆ ಒಡೆಯಲಿಲ್ಲ. ಇದರಿಂದ ಸೋಮಣ್ಣ ಅವರು ಒಂದು ಕ್ಷಣ ಅವಕ್ಕಾದರು. ಆಗ ಸಂಸದ ಪ್ರತಾಪ್‌ ಸಿಂಹ ಅವರು ʻಏನೂ ಆಗಲ್ಲ ಸರ್, ಇನ್ನೊಂದು ಸಲ ಒಡೆಯಿರಿ ಸರ್ʼʼ ಎಂದರು.
ಮತ್ತೆ ಅದೇ ತೆಂಗಿನಕಾಯಿ ತೆಗೆದುಕೊಂಡು ಈಡುಗಾಯಿ ಒಡೆದರು ಸೋಮಣ್ಣ. ಈ ಘಟನೆಯಿಂದ ಕೆಲ ಕ್ಷಣ ವಿಚಲಿತರಾದರು.

ವೃದ್ದರೊಬ್ಬರಿಗೆ 500 ರೂ. ನೋಟು ಕೊಟ್ಟ ಸೋಮಣ್ಣ‌

ಮೈಸೂರಿನಲ್ಲಿ ತಮ್ಮನ್ನು ಭೇಟಿಯಾದ ವೃದ್ಧರೊಬ್ಬರಿಗೆ ವಿ. ಸೋಮಣ್ಣ ಅವರು 500 ರೂ. ನೋಟು ಕೊಟ್ಟಿದ್ದು ಗಮನ ಸೆಳೆಯಿತು. ಮೈಸೂರಿನ ಜಯಲಕ್ಷ್ಮಿ ಪುರಂ ಬಳಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ಹೊರ ಬಂದ‌ ಸೋಮಣ್ಣ ಅವರು ಕಾರು ಹತ್ತುವ ವೇಳೆ ವೃದ್ಧರೊಬ್ಬರು ಸಹಾಯ ಕೇಳಿ ಕಾರಿನ ಬಳಿ ಬಂದರು. ಆಗ ವೃದ್ಧರು ಕೈ ಒಡ್ಡಿದ್ದನ್ನು ನೋಡಿ ಜೇಬಿನಿಂದ 500 ರೂಪಾಯಿಯ ಗರಿಗರಿ ನೋಟು ತೆಗೆದು ನೀಡಿದರು.

ಬಂಡಾಯ ಶಮನಕ್ಕೆ ಮುಂದಾದ ಸೋಮಣ್ಣ

ಇದೇ ವೇಳೆ ಸೋಮಣ್ಣ ಅವರು ಚಾಮರಾಜ ನಗರ ಕ್ಷೇತ್ರದಲ್ಲಿ ತನ್ನ ವಿರುದ್ಧ ಬಂಡೆದ್ದಿರುವ ಮಾಜಿ ಶಾಸಕ ದಿ. ಗುರುಸ್ವಾಮಿ ಪುತ್ರಿ ನಾಗಶ್ರೀ ಪ್ರತಾಪ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಕೋಟೆ ಶಿವಣ್ಣ, ಮೈ.ವಿ.ರವಿಶಂಕರ್ ಮತ್ತಿತರ ನಾಯಕರೊಂದಿಗೆ ಬಂದಿದ್ದ ಸೋಮಣ್ಣ ಅವರು ತಮಗೆ ಬೆಂಬಲ ನೀಡುವಂತೆ, ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಟಿಕೆಟ್‌ ಆಕಾಂಕ್ಷಿಯಾಗಿದ್ದು ಸಾಕಷ್ಟು ಸಿದ್ಧತೆ, ಪ್ರಚಾರ ಮಾಡಿಕೊಂಡಿದ್ದ ನಾಗಶ್ರೀ ಪ್ರತಾಪ್‌ ಅವರು, ಎರಡು ದಿನ ಸಮಯ ಕೊಡಿ ಆ ಬಳಿಕ ನಿರ್ಧಾರ ಹೇಳ್ತೀನಿ ಎಂದಿದ್ದಾರೆ. ಸಂಧಾನ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಸೋಮಣ್ಣ ಅವರ ಟೆನ್ಷನ್ ಹೆಚ್ಚಾಗಿದೆ.

ಇದನ್ನೂ ಓದಿ : Karnataka Elections : ಯಾರಿಗೆ ಬೇಕು ಎರಡು ಕ್ಷೇತ್ರ; ಹೈಕಮಾಂಡ್‌ ಒತ್ತಡದ ಬಗ್ಗೆ ಅಳಲು ತೋಡಿಕೊಂಡರಾ ವಿ ಸೋಮಣ್ಣ?

Exit mobile version