Site icon Vistara News

Karnataka Elections : ನೀತಿ ಸಂಹಿತೆ (Code of conduct) ಉಲ್ಲಂಘನೆ, ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜ ವಿರುದ್ಧ ಎರಡು ದೂರು

Belthangady MLA Harisha poonja

#image_title

ಬೆಳ್ತಂಗಡಿ: ಮುಂದಿನ ವಿಧಾನಸಭಾ ಚುನಾವಣೆಗಾಗಿ (Karnataka Elections) ಈಗಾಗಲೇ ನೀತಿ ಸಂಹಿತೆ (Code of conduct) ಜಾರಿಯಲ್ಲಿದೆ. ಈ ನೀತಿ ಸಂಹಿತೆ ಉಲ್ಲಂಘನೆಯನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ‌ ಮಾ. 31ರಂದು ಎರಡು ಪ್ರತ್ಯೇಕ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಅವರು ಈ ಎರಡೂ ದೂರುಗಳನ್ನು ಶೇಖರ ಲಾಯಿಲ ಬೆಳ್ತಂಗಡಿ ಚುನಾವಣಾಧಿಕಾರಿಗಳಿಗೆ ನೀಡಿದ್ದಾರೆ.

ಪ್ರಕರಣ 1: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪತ್ರಿಕೆಗೆ ಹಣ ಪಾವತಿ ಮಾಡಿ ಮಾ. 30ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೆಸರಿನಲ್ಲಿ ಅಕ್ರಮ ಸಕ್ರಮ ಯೋಜನೆಯನ್ನು ಶಾಸಕರ ಸಾಧನೆ ಎಂದು ಬಿಂಬಿಸಿ ಜಾಹೀರಾತು ನೀಡಿದ್ದಾರೆ. ಇದು ಮತದಾರರ ಮೇಲೆ ಪ್ರಭಾವ ಬೀರುವಂತಿದೆ ಎಂದು ಅವರು ದೂರಿದ್ದಾರೆ.

ಪ್ರಕರಣ 2 : ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಗ್ರಾಮ ವಿಕಾಸ ಹಬ್ಬದ ಹೆಸರಿನಲ್ಲಿ ಮಾ. 30ರಂದು ಸಂಜೆ 7 ಗಂಟೆಗೆ ಬಲಿಂಜೆ ಎಂಬಲ್ಲಿ ರಾತ್ರಿ ಸುಮಾರು 12:25ರ ವರೆಗೆ ಸಭಾ ಕಾರ್ಯಕ್ರಮ ನಡೆದಿದ್ದು. ಈ ಕಾರ್ಯಕ್ರಮದಲ್ಲಿ ಊಟೋಪಾಚಾರವನ್ನು ಮತದಾರರಿಗೆ ಹಂಚಲಾಗಿದೆ.

ಇದರಲ್ಲಿ ಶಾಸಕ ಹರೀಶ್ ಪೂಂಜ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದು. ಕಾರ್ಯಕ್ರಮಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಊಟೋಪಚಾರವನ್ನು ಹಂಚಲಾಗಿದೆ. ರಾತ್ರಿ 10 ಗಂಟೆಗೆ ಧ್ವನಿವರ್ಧಕ ಪರವಾನಿಗೆ ಪಡೆದು ಮಧ್ಯರಾತ್ರಿ 12:25ರ ತನಕ ಕಾನೂನು ಬಾಹಿರ ಸಭಾ ಕಾರ್ಯಕ್ರಮ ಮಾಡಲಾಗಿದೆ. ಇದು ಚುನಾವಣಾ ಮಾದರಿ ನೀತಿ ಸಂಹಿತೆ ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ. ಈ ಕಾರ್ಯಕ್ರಮದ ಆಯೋಜಕರು ,ಭಾಗವಹಿಸಿದ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾ. 31ರಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಎರಡು ಪ್ರತ್ಯೇಕ ದೂರಿನ ಬಗ್ಗೆ ಚುನಾವಣಾಧಿಕಾರಿಗಳು ಪರಿಶೀಲನೆ ಮಾಡಿದ ಬಳಿಕ ಎಫ್.ಐ.ಆರ್ ದಾಖಲಿಸಿಕೊಳ್ಳುವುದಾಗಿ ದೂರುದಾರ ಶೇಖರ್ ಲಾಯಿಲ ಅವರಿಗೆ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಹಲವು ಕಡೆ ಸೀರೆ, ಅಕ್ಕಿ, ನಗದು ವಶಕ್ಕೆ

ಶಿವಮೊಗ್ಗ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಾಹನ ತಪಾಸಣೆ ದಾಳಿ ವೇಳೆ ಶಿವಮೊಗ್ಗ ಜಿಲ್ಲೆಯ ನಾಲ್ಕು ಕಡೆ ಸೀರೆ, ಅಕ್ಕಿ ನಗದು ವಶಕ್ಕೆ ಪಡೆಯಲಾಗಿದೆ.

ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಅಗಾಧ ಪ್ರಮಾಣದ ಸೀರೆ ವಶವಾಗಿದ್ದು, ಸೀರೆಯ ಮೌಲ್ಯ 4.5 ಕೋಟಿ ರೂ ಮೌಲ್ಯ ಎಂದು ಅಂದಾಜಿಸಲಾಗಿದೆ. ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ 1.40 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಬುಲೆರೋ ವಾಹನದಲ್ಲಿ ಈ ಹಣವನ್ನು ಸಾಗಿಸಲಾಗುತ್ತಿದೆ.

ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 20 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ. ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 26 ಕ್ವಿಂಟಲ್ ಅಕ್ಕಿ ಸಿಕ್ಕಿದೆ. 100 ಬ್ಯಾಗ್ ಗಳಲ್ಲಿದ್ದ 1.56 ಲಕ್ಷ ರೂ ಮೌಲ್ಯದ ಅಕ್ಕಿ ವಶವಾಗಿದೆ.

ಇದನ್ನೂ ಓದಿ : Karnataka Election: ಮದುವೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯ: ಇದು ನೀತಿ ಸಂಹಿತೆ ಎಫೆಕ್ಟ್‌

Exit mobile version