Karnataka Elections : ನೀತಿ ಸಂಹಿತೆ (Code of conduct) ಉಲ್ಲಂಘನೆ, ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜ ವಿರುದ್ಧ ಎರಡು ದೂರು - Vistara News

ಕರ್ನಾಟಕ

Karnataka Elections : ನೀತಿ ಸಂಹಿತೆ (Code of conduct) ಉಲ್ಲಂಘನೆ, ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜ ವಿರುದ್ಧ ಎರಡು ದೂರು

ರಾಜ್ಯಾದ್ಯಂತ ನೀತಿ ಸಂಹಿತೆ (Code of conduct) ಉಲ್ಲಂಘನೆಯ ಘಟನೆಗಳು ವರದಿಯಾಗುತ್ತಿದ್ದು, ಬೆಳ್ತಂಗಡಿಯ ಬಿಜೆಪಿ ಶಾಸಕರ ಮೇಲೆ ಎರಡು ಕೇಸು ದಾಖಲಾಗಿದೆ. ಇತ್ತ ಶಿವಮೊಗ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ ಸೀರೆ ಸಿಕ್ಕಿದೆ.

VISTARANEWS.COM


on

Belthangady MLA Harisha poonja
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳ್ತಂಗಡಿ: ಮುಂದಿನ ವಿಧಾನಸಭಾ ಚುನಾವಣೆಗಾಗಿ (Karnataka Elections) ಈಗಾಗಲೇ ನೀತಿ ಸಂಹಿತೆ (Code of conduct) ಜಾರಿಯಲ್ಲಿದೆ. ಈ ನೀತಿ ಸಂಹಿತೆ ಉಲ್ಲಂಘನೆಯನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ‌ ಮಾ. 31ರಂದು ಎರಡು ಪ್ರತ್ಯೇಕ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಅವರು ಈ ಎರಡೂ ದೂರುಗಳನ್ನು ಶೇಖರ ಲಾಯಿಲ ಬೆಳ್ತಂಗಡಿ ಚುನಾವಣಾಧಿಕಾರಿಗಳಿಗೆ ನೀಡಿದ್ದಾರೆ.

ಪ್ರಕರಣ 1: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪತ್ರಿಕೆಗೆ ಹಣ ಪಾವತಿ ಮಾಡಿ ಮಾ. 30ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೆಸರಿನಲ್ಲಿ ಅಕ್ರಮ ಸಕ್ರಮ ಯೋಜನೆಯನ್ನು ಶಾಸಕರ ಸಾಧನೆ ಎಂದು ಬಿಂಬಿಸಿ ಜಾಹೀರಾತು ನೀಡಿದ್ದಾರೆ. ಇದು ಮತದಾರರ ಮೇಲೆ ಪ್ರಭಾವ ಬೀರುವಂತಿದೆ ಎಂದು ಅವರು ದೂರಿದ್ದಾರೆ.

ಪ್ರಕರಣ 2 : ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಗ್ರಾಮ ವಿಕಾಸ ಹಬ್ಬದ ಹೆಸರಿನಲ್ಲಿ ಮಾ. 30ರಂದು ಸಂಜೆ 7 ಗಂಟೆಗೆ ಬಲಿಂಜೆ ಎಂಬಲ್ಲಿ ರಾತ್ರಿ ಸುಮಾರು 12:25ರ ವರೆಗೆ ಸಭಾ ಕಾರ್ಯಕ್ರಮ ನಡೆದಿದ್ದು. ಈ ಕಾರ್ಯಕ್ರಮದಲ್ಲಿ ಊಟೋಪಾಚಾರವನ್ನು ಮತದಾರರಿಗೆ ಹಂಚಲಾಗಿದೆ.

ಇದರಲ್ಲಿ ಶಾಸಕ ಹರೀಶ್ ಪೂಂಜ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದು. ಕಾರ್ಯಕ್ರಮಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಊಟೋಪಚಾರವನ್ನು ಹಂಚಲಾಗಿದೆ. ರಾತ್ರಿ 10 ಗಂಟೆಗೆ ಧ್ವನಿವರ್ಧಕ ಪರವಾನಿಗೆ ಪಡೆದು ಮಧ್ಯರಾತ್ರಿ 12:25ರ ತನಕ ಕಾನೂನು ಬಾಹಿರ ಸಭಾ ಕಾರ್ಯಕ್ರಮ ಮಾಡಲಾಗಿದೆ. ಇದು ಚುನಾವಣಾ ಮಾದರಿ ನೀತಿ ಸಂಹಿತೆ ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ. ಈ ಕಾರ್ಯಕ್ರಮದ ಆಯೋಜಕರು ,ಭಾಗವಹಿಸಿದ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾ. 31ರಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಎರಡು ಪ್ರತ್ಯೇಕ ದೂರಿನ ಬಗ್ಗೆ ಚುನಾವಣಾಧಿಕಾರಿಗಳು ಪರಿಶೀಲನೆ ಮಾಡಿದ ಬಳಿಕ ಎಫ್.ಐ.ಆರ್ ದಾಖಲಿಸಿಕೊಳ್ಳುವುದಾಗಿ ದೂರುದಾರ ಶೇಖರ್ ಲಾಯಿಲ ಅವರಿಗೆ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಹಲವು ಕಡೆ ಸೀರೆ, ಅಕ್ಕಿ, ನಗದು ವಶಕ್ಕೆ

ಶಿವಮೊಗ್ಗ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಾಹನ ತಪಾಸಣೆ ದಾಳಿ ವೇಳೆ ಶಿವಮೊಗ್ಗ ಜಿಲ್ಲೆಯ ನಾಲ್ಕು ಕಡೆ ಸೀರೆ, ಅಕ್ಕಿ ನಗದು ವಶಕ್ಕೆ ಪಡೆಯಲಾಗಿದೆ.

ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಅಗಾಧ ಪ್ರಮಾಣದ ಸೀರೆ ವಶವಾಗಿದ್ದು, ಸೀರೆಯ ಮೌಲ್ಯ 4.5 ಕೋಟಿ ರೂ ಮೌಲ್ಯ ಎಂದು ಅಂದಾಜಿಸಲಾಗಿದೆ. ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ 1.40 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಬುಲೆರೋ ವಾಹನದಲ್ಲಿ ಈ ಹಣವನ್ನು ಸಾಗಿಸಲಾಗುತ್ತಿದೆ.

ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 20 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ. ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 26 ಕ್ವಿಂಟಲ್ ಅಕ್ಕಿ ಸಿಕ್ಕಿದೆ. 100 ಬ್ಯಾಗ್ ಗಳಲ್ಲಿದ್ದ 1.56 ಲಕ್ಷ ರೂ ಮೌಲ್ಯದ ಅಕ್ಕಿ ವಶವಾಗಿದೆ.

ಇದನ್ನೂ ಓದಿ : Karnataka Election: ಮದುವೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯ: ಇದು ನೀತಿ ಸಂಹಿತೆ ಎಫೆಕ್ಟ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Prajwal Revanna Case: ಗನ್ನಿಕಡ ತೋಟದ ಮನೆ ರಹಸ್ಯ; 2ನೇ ಚಾರ್ಜ್‌ಶೀಟ್‌ನಲ್ಲಿ ಪ್ರಜ್ವಲ್‌ ರೇವಣ್ಣ ಪಾಪ ಕೃತ್ಯ ಬಯಲು

Prajwal Revanna Case : ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ವಿರುದ್ಧ 1652 ಪುಟಗಳ 2ನೇ ಚಾರ್ಜ್​​ಶೀಟ್‌ ಅನ್ನು ಸಲ್ಲಿಸಿದ್ದಾರೆ. 2ನೇ ಚಾರ್ಜ್‌ಶೀಟ್‌ನಲ್ಲಿ ಪ್ರಜ್ವಲ್‌ ಕಾಮುಕತ್ವ ಹೇಗಿತ್ತು? ಸಂತ್ರಸ್ತೆಗೆ ಹೇಗೆಲ್ಲ ಲೈಂಗಿಕ ದೌರ್ಜನ್ಯವೆಸಗಿದ್ದ ಎಂಬುದನ್ನು ಉಲ್ಲೇಖಿಸಲಾಗಿದೆ.

VISTARANEWS.COM


on

By

Another chargesheet filed against Prajwal Revanna in 42nd ACMM court
Koo

ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಕಿಡ್ನ್ಯಾಪ್‌ ಆಗಿದ್ದ ಸಂತ್ರಸ್ತೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳಿಂದ 113 ಸಾಕ್ಷಿಗಳನ್ನೊಳಗೊಂಡ 1632 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ತನಿಖಾಧಿಕಾರಿ ಇನ್‌ಸ್ಪೆಕ್ಟರ್‌ ಶೋಭಾರಿಂದ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇನ್ನೂ ಪ್ರಜ್ವಲ್ ಪಾಪ ಕೃತ್ಯವನ್ನು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖವಾಗಿದೆ.

ಹೊಳೆನರಸೀಪುರದ ಗನ್ನಿಕಡ ತೋಟದ ಮನೆಯಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ಉಲ್ಲೇಖಿಸಲಾಗಿದೆ. ಸಂತ್ರಸ್ತೆ ತೋಟದ ಮನೆಯ 1ನೇ ಮಹಡಿಯಲ್ಲಿನ ರೂಮ್‌ ಅನ್ನು ಕ್ಲೀನ್‌ ಮಾಡುತ್ತಿದ್ದರು. ಈ ವೇಳೆ ರೂಮಿಗೆ ಬಂದ ಆರೋಪಿ ಪ್ರಜ್ವಲ್‌, ಸಂತ್ರಸ್ತೆ ಬಳಿ ಕುಡಿಯಲು ನೀರು ಕೇಳಿದ್ದ. ನೀರು ತೆಗೆದುಕೊಂಡು ಬಂದ ಕೂಡಲೇ ಸಂತ್ರಸ್ತೆಯನ್ನು ಎಳೆದುಕೊಂಡು, ಹೊರಗೆ ತಪ್ಪಿಸಿಕೊಂಡು ಹೋಗದಂತೆ ಏಕಾಏಕಿ ರೂಮಿನ ಡೋರ್‌ ಲಾಕ್‌ ಮಾಡಿದ್ದ. ಬಳಿಕ ಬಲವಂತವಾಗಿ ಎಳೆದಾಡಿ ಸಂತ್ರಸ್ತೆಯನ್ನು ವಿವಸ್ತ್ರಗೊಳಿಸಿದ್ದ. ಈ ವೇಳೆ ದಮ್ಮಯ್ಯ ಬೇಡ, ಬಾಗಿಲು ತೆಗಿಯಣ್ಣ ಭಯವಾಗುತ್ತೆ ಅಂದರು ಬಿಡದೆ, ಏನು ಆಗಲ್ಲ ಸುಮ್ನೆ ಇರು ಎಂದು ಬೆದರಿಸಿ ಲೈಂಗಿಕ ಕೃತ್ಯವನ್ನು ಎಸಗಿದ್ದ. ಇದೆಲ್ಲವನ್ನು ಮೊಬೈಲ್‌ ಫೋನ್‌ನಲ್ಲಿ ಸೆರೆಯಿಡಿದಿದ್ದ.

ಇದಾದ ಬಳಿಕ ಮತ್ತೊಮ್ಮೆ ಬಸವನಗುಡಿಯಲ್ಲಿರುವ ರೇವಣ್ಣ ನಿವಾಸದಲ್ಲೇ ಮತ್ತೊಮ್ಮೆ ಸಂತ್ರಸ್ತೆಯ ಮೇಲೆ ಎರಗಿ ಅತ್ಯಾಚಾರ ಎಸಗಿದ್ದ ಎಂದು ಉಲ್ಲೇಖಿಸಲಾಗಿದೆ. ಎರಡು ಬಾರಿ ಅತ್ಯಾಚಾರ ಎಸಗಿದಾಗಲು ಅದೆಲ್ಲವನ್ನೂ ಪ್ರಜ್ವಲ್‌ ರೆಕಾರ್ಡ್ ಮಾಡಿಕೊಂಡಿದ್ದ. ಅತ್ಯಾಚಾರದ ಸಂಗತಿ ಬಾಯಿಬಿಟ್ಟರೆ, ಈ ಎಲ್ಲ ವಿಡಿಯೊಗಳನ್ನು ನಿನ್ನ ಮಗನಿಗೆ ಕಳಿಸುವುದಾಗಿ ಬೆದರಿಸಿದ್ದ. ಹೀಗಾಗಿ ಮಾನ, ಮರ್ಯಾದೆಗೆ ಅಂಜಿ ದೂರು ನೀಡಲುಸಂತ್ರಸ್ತೆ ಹಿಂದೆಟ್ಟು ಹಾಕಿದ್ದರು. ಹೀಗೆ ಬೆದರಿಸಿ ಮಾಜಿ‌ ಸಂಸದ ಪ್ರಜ್ಬಲ್ ರೇವಣ್ಣ ಸಂತ್ರಸ್ತೆ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Assault Case : ಹುಡುಗರನ್ನು ಬಿಟ್ಟು ಜಿಮ್‌ ಟ್ರೈನರ್‌ಗೆ ಹೊಡೆಸಿದ್ದಕ್ಕೆ ನಟ ಧ್ರುವ ಸರ್ಜಾ ಮ್ಯಾನೇಜರ್‌ ಬಂಧನ

ಪ್ರಜ್ವಲ್‌ ರೇವಣ್ಣ ವಿರುದ್ಧ 2144 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಹಾಗೂ ಎಚ್‌.ಡಿ.ರೇವಣ್ಣ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 137 ಸಾಕ್ಷಿಗಳ ಹೇಳಿಕೆ ಸೇರಿ 2144 ಪುಟಗಳ ದೋಷಾರೋಪ ಪಟ್ಟಿಯನ್ನು 42ನೇ ವಿಶೇಷ ಜನಪ್ರತಿನಿಗಳ ಕೋರ್ಟ್‌ಗೆ ಎಸ್‌ಐಟಿ ಸಲ್ಲಿಸಿತ್ತು.

ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪೂರ್ಣಗೊಳಿಸಿರುವ ತನಿಖಾಧಿಕಾರಿ ಸುಮಾರಾಣಿ ಅವರು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. 137 ಸಾಕ್ಷಿಗಳ ಹೇಳಿಕೆ ಸೇರಿದಂತೆ 2144 ಪುಟಗಳ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪ ಕುರಿತ ಎಫ್‌ಐಆರ್‌ ರದ್ದುಪಡಿಸಲು ಕೋರಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಹಾಗೂ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ಆಗಸ್ಟ್ 29ಕ್ಕೆ ಇತ್ತೀಚೆಗೆ ಮುಂದೂಡಿತ್ತು.

ಇನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಜುಲೈ 24ರಂದು ವಜಾಗೊಂಡಿತ್ತು. ನಾಲ್ಕನೇ ಕೇಸ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಇದಕ್ಕೂ ಮೊದಲು ಮೂರು ಅರ್ಜಿಗಳನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿತ್ತು. ಇದರಲ್ಲಿ ಒಂದು ಜಾಮೀನು ಅರ್ಜಿ, ಎರಡು ನಿರೀಕ್ಷಣಾ ಜಾಮೀನು ಅರ್ಜಿ ಸೇರಿತ್ತು. ಜುಲೈ 24ರಂದು ಮೂರನೇ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತಿರಸ್ಕೃತಗೊಂಡಿತ್ತು. ಇದರಿಂದ ನಾಲ್ಕನೇ ಕೇಸ್‌ನಲ್ಲಿಯೂ ಪ್ರಜ್ವಲ್‌ಗೆ ಹಿನ್ನಡೆಯಾಗಿತ್ತು. ಬಳಿಕ ಐದನೇ ಬಾರಿಯೂ ಪ್ರಜ್ವಲ್‌ಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಆಗಿತ್ತು.

ಏನಿದು ಪ್ರಕರಣ?

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿಯಿಂದ 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸಾದಾಗ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ಚಿತ್ರೀಕರಿಸಿದ ಆರೋಪ ಪ್ರಜ್ವಲ್‌ ವಿರುದ್ಧ ಕೇಳಿ ಬಂದಿದೆ. ಆರೋಪಿ ಪ್ರಜ್ವಲ್‌ ರೇವಣ್ಣ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Assault Case : ಹುಡುಗರನ್ನು ಬಿಟ್ಟು ಜಿಮ್‌ ಟ್ರೈನರ್‌ಗೆ ಹೊಡೆಸಿದ್ದಕ್ಕೆ ನಟ ಧ್ರುವ ಸರ್ಜಾ ಮ್ಯಾನೇಜರ್‌ ಬಂಧನ

Assault Case : ನಟ ಧ್ರುವ ಸರ್ಜಾ (Dhruva Sarja) ಅವರ ಜಿಮ್‌ ಟ್ರೈನರ್‌ ಪ್ರಶಾಂತ್‌ ಪೂಜಾರಿ (Gym Trainer) ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಮಾಸ್ಟರ್‌ ಮೈಂಡ್‌ ಸರ್ಜಾ ಅವರ ಮ್ಯಾನೇಜರ್ ಅಶ್ವಿನ್ (Manager) ಎಂಬಾತನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

By

Assault case Actor Dhruva Sarjas manager arrested for hitting gym trainer
Koo

ಬೆಂಗಳೂರು: ನಟ ಧ್ರುವ ಸರ್ಜಾ (Dhruva Sarja) ಮ್ಯಾನೇಜರ್ (Manager) ಅಶ್ವಿನ್‌ ಎಂಬಾತನನ್ನು ಬನಶಂಕರಿ ಪೊಲೀಸರು (Banashankari Police) ಬಂಧನ ಮಾಡಿದ್ದಾರೆ. ಪ್ರಶಾಂತ್ ಪೂಜಾರಿ ಎಂಬಾತನ ಮೇಲೆ ಹಲ್ಲೆ (Assault case) ನಡೆಸಲು ಈತ ಕೂಡ ಕಾರಣ ಎಂಬ ವಿಚಾರ ತನಿಖೆಯಿಂದ ಗೊತ್ತಾದ ಹಿನ್ನೆಲೆಯಲ್ಲಿ ಅಶ್ವಿನ್‌ನನ್ನು ಬಂಧನ ಮಾಡಲಾಗಿದೆ.

ಮೂರು ತಿಂಗಳ ಹಿಂದೆ ಅಂದರೆ ಮೇ 26ರಂದು ಕನಕಪುರ ಮೂಲದ ಹರ್ಷ ಹಾಗೂ ಸುಭಾಷ್ ಎಂಬುವವರು ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿದ್ದರು. ದೂರು ದಾಖಲಿಸಿದ ಬಳಿಕ ಅವರಿಬ್ಬರನ್ನು ಬಂಧನ ಮಾಡಲಾಗಿತ್ತು. ಇದೀಗ ತನಿಖೆ ವೇಳೆ ಹಲ್ಲೆ ಹಿಂದಿನ ಮಾಸ್ಟರ್ ಮೈಂಡ್ ನಟ ಧ್ರುವ ಸರ್ಜಾ ಮ್ಯಾನೇಜರ್ ಆಗಿರುವ ಅಶ್ವಿನ್ ಎಂದು ತಿಳಿದುಬಂದಿದೆ. ಬಂಧಿತ ಅಶ್ವಿನ್‌ ಸೇರಿ ಇಲ್ಲಿವರೆಗೆ ನಾಲ್ವರನ್ನು ಬಂಧನ ಮಾಡಲಾಗಿದೆ.

ಜಿಮ್‌ ಟ್ರೈನರ್‌ ಪ್ರಶಾಂತ್‌ ಪೂಜಾರಿಗೆ ಸರ್ಪೈಸ್‌ ಗಿಫ್ಟ್‌ ಕೊಟ್ಟಿದ್ದ ಸರ್ಜಾ

ಈ ಅಶ್ವಿನ್ ಹಲವು ವರ್ಷಗಳಿಂದ ನಟ ಧೃವ ಸರ್ಜಾ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ. ಹಲ್ಲೆಗೊಳಗಾದ ಪ್ರಶಾಂತ್ ಪೂಜಾರಿ ಜಿಮ್ ಟ್ರೈನರ್ ಆಗಿದ್ದು, ನಟ ಧೃವ ಸರ್ಜಾ ಅವರಿಗೆ ಇತ್ತೀಚಿಗೆ ಹತ್ತಿರವಾಗಿದ್ದ. ಜಿಮ್ ವಿಚಾರದಲ್ಲಿ ಧೃವ ಸರ್ಜಾರನ್ನು ಕೇರ್ ಮಾಡುತ್ತಿದ್ದ . ಹೀಗಾಗಿ ಸಹಜವಾಗಿಯೇ ನಟ ಧೃವ ಸರ್ಜಾಗೆ ಪ್ರಶಾಂತ್‌ ಪೂಜಾರಿ ಆತ್ಮೀಯನಾಗಿದ್ದ.‌ ಮಾತ್ರವಲ್ಲ ನಟ ಧೃವ ಸರ್ಜಾಗೆ ಪ್ರಶಾಂತ್ ಒಳ್ಳೆತನ ಕಂಡು ದುಬಾರಿ ಬೆಲೆಯ ಕಾರನ್ನು ಸರ್ಪೈಸ್‌ ಆಗಿ ಕೊಟ್ಟಿದ್ದರು‌.

Actor Dhruva Sarjas manager arrested for hitting gym trainer
Actor Dhruva Sarjas manager arrested for hitting gym trainer

ಇದು ಮ್ಯಾನೇಜರ್‌ ಅಶ್ವಿನ್‌ ಹಾಗೂ ಆತನ ಆಪ್ತ ವಲಯಕ್ಕೆ ಸಹಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಧೃವ ಸರ್ಜಾ ಜತೆಗಿನ ಆತ್ಮೀಯತೆಯನ್ನು ಹೇಗಾದರೂ ಕಟ್ ಮಾಡಬೇಕು ಎಂದು ಕೊಂಡಿದ್ದರು. ಈ ಕಾರಣಕ್ಕೆ ನಟ ಧೃವ ಸರ್ಜಾ ಕಾರು ಚಾಲಕ ನಾಗೇಂದ್ರನ ಜತೆ ಸೇರಿ ಪ್ಲಾನ್ ಮಾಡಿ ಕನಕಪುರದ ಇಬ್ಬರು ಹುಡುಗರನ್ನು ಬಿಟ್ಟು ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆಸಿದ್ದರು. ಈ ಮೊದಲು ಡ್ರೈವರ್‌ ನಾಗೇಂದ್ರನೇ ಮಾಸ್ಟರ್ ಮೈಂಡ್ ಎಂದು ಹೇಳಲಾಗಿತ್ತು. ಆದರೆ ಆತನ ಜತೆ ಅಶ್ವಿನ್‌ ಕೂಡ ಇರುವುದು ತನಿಖೆಯಿಂದ ಸಾಬೀತಾಗಿದೆ. ಪ್ರಶಾಂತ್ ಪೂಜಾರಿ ಹಲ್ಲೆ ಪ್ರಕರಣದಲ್ಲಿ ನಾಲ್ವರು ಬಂಧನ ಮಾಡಲಾಗಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Drugs Seized :ಅದ್ಧೂರಿಯಾಗಿ ತಂಗಿ ಮದುವೆ ಮಾಡಲು ಗಾಂಜಾ ಮಾರಲು ಹೋಗಿ ಜೈಲುಪಾಲಾದ ಅಣ್ಣ!

Drugs Seized :ಅದ್ಧೂರಿಯಾಗಿ ತಂಗಿ ಮದುವೆ ಮಾಡಲು ಗಾಂಜಾ ಮಾರಲು ಹೋದ ಅಣ್ಣ ಜೈಲುಪಾಲಾಗಿದ್ದಾನೆ.

VISTARANEWS.COM


on

By

Brother jailed for selling ganja to get his sister married
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಅದ್ಧೂರಿಯಾಗಿ ತನ್ನ ತಂಗಿ ಮದುವೆ ಮಾಡಬೇಕೆಂದು ಗಾಂಜಾ ಮಾರಲು (Drugs Seized) ಮುಂದಾಗಿದ್ದವನು ಮೊದಲ ಯತ್ನದಲ್ಲಿಯೇ ಬಾಣಸವಾಡಿ ಪೊಲೀಸರಿಗೆ ಲಾಕ್ ಆಗಿದ್ದಾನೆ. ಬಾಣಸವಾಡಿ ಪೊಲೀಸರಿಂದ ಪುತ್ತೂರು ಮೂಲದ ಬದ್ರುದ್ದಿನ್ (25) ಎಂಬಾತನ ಬಂಧನವಾಗಿದೆ.

ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಬದ್ರುದ್ದಿನ್‌ಗೆ ಬರುವ ಕಡಿಮೆ ಸಂಬಳದಲ್ಲಿ ಮನೆ ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. ಆಗಾಗ ಯಾರೋ ಸ್ನೇಹಿತರ ಮೂಲಕ ಗಾಂಜಾ ಮಾರಿ ಹಣ ಮಾಡಬಹುದು ಅಂತ ತಿಳಿದಿದ್ದ. ಅದ್ಹೇಗೋ ಪೆಡ್ಲರ್ ಒಬ್ಬರ ಸಂಪರ್ಕ ಮಾಡಿ ಒರಿಸ್ಸಾಗೆ ಹೋಗಿದ್ದ. ಅಲ್ಲಿ ಲಾರಿ ಚಾಲಕನ ಮೂಲಕ ಗಾಂಜಾ ಖರೀದಿ ಮಾಡಿ ಬೆಂಗಳೂರಿಗೆ ಬರುತ್ತಿದ್ದ. ಅಲ್ಲಿಂದ ದುರಂತ್ ಎಕ್ಸ್‌ಪ್ರೆಸ್ ಟ್ರೈನ್ ಮೂಲಕ ಬರುವಾಗ ಎಸ್.ಎಂ.ಟಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಲಾಕ್ ಆಗಿದ್ದಾನೆ.

ಹೆಣ್ಣೂರು ಪೊಲೀಸರು ಒರಿಸ್ಸಾದ ದಿಲೀಪ್, ಶಿವರಾಜ್, ರಾಮ್ ಹಂತಲ್ ಎಂಬುವವರು ಬಂಧಿಸಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದಾಗಲೇ ಲಾಕ್ ಮಾಡಿದ ಪೊಲೀಸರು, 21 ಲಕ್ಷ ಮೌಲ್ಯದ 21 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Actor Darshan : ಚಿಕ್ಕಣ್ಣ ಇದ್ದಾಗಲೇ ರೇಣುಕಾಸ್ವಾಮಿ ಕೊಲೆ ಬಗ್ಗೆ ಚರ್ಚೆ ಆಯ್ತಾ! ಆ ದಿನ ದರ್ಶನ್‌ ಏನ್‌ ಅಂದ್ರು

ಬಟ್ಟೆ ವ್ಯಾಪಾರಿ ಲಾಕ್‌

ಇಸ್ಟ್ರಾಗ್ರಾಮ್‌ ಮೂಲಕ ಥೈಲ್ಯಾಂಡ್‌ನಿಂದ ಹೈಡ್ರೋ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಬಟ್ಟೆ ವ್ಯಾಪಾರಿ ಅರೆಸ್ಟ್‌ ಆಗಿದ್ದಾನೆ. ಬ್ಯಾಡರಹಳ್ಳಿ ಪೊಲೀಸರಿಂದ ಆರೋಪಿ ತೌನೇಶ್ ಎಂಬಾತ ಬಂಧನವಾಗಿದೆ. ಒಂದು ಕೋಟಿ 22 ಲಕ್ಷ ಮೌಲ್ಯದ ಎರಡು ಕೆಜಿ 779 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ. ಅಂಧ್ರಹಳ್ಳಿಯ ಕಾಲೇಜ್ ಒಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಲಾಕ್‌ ಆಗಿದ್ದಾನೆ.

ಕೇರಳ ಮೂಲದ ಸೈಜು ಮುಖಾಂತರ ಥೈಲ್ಯಾಂಡ್‌ನಿಂದ ಹೈಡ್ರೋ ಗಾಂಜಾ ತರಿಸುತ್ತಿದ್ದ. ಒಂದು ವರ್ಷದ ಹಿಂದೆ ತೌನೇಶ್‌ಗೆ ಇಸ್ಟ್ರಾಗ್ರಾಮ್‌ನಲ್ಲಿ ಸೈಜು ಪರಿಚಯವಾಗಿದ್ದ. ಏರ್‌ಪೋರ್ಟ್‌ನಲ್ಲಿ ಯಾಮಾರಿಸಿ ಹೈಡ್ರೋ ಗಾಂಜಾ ತರಿಸುತ್ತಿದ್ದ. ಸಿಂಥೆಟಿಕ್ ಪೇಪರ್‌ನಲ್ಲಿ ಸುತ್ತಿ ಬಿಸ್ಕೆಟ್, ಚಾಕಲೇಟ್ ಬಾಕ್ಸ್‌ನಲ್ಲಿ ಗಾಂಜಾ ಬರುತ್ತಿತ್ತು. ಸಿಂಥೆಟಿಕ್ ಪೇಪರ್‌ನಲ್ಲಿ ಸುತ್ತಿರುವುದರಿಂದ ಯಾವ ವಾಸನೆಯೂ ಬರುತ್ತಿರಲಿಲ್ಲ. ಜತೆಗೆ ಸ್ಕ್ಯಾನ್ ಮಾಡಿದಾಗಲೂ ಗಾಂಜಾ ಇದೆ ಎಂದು ತಿಳಿದಿರಲಿಲ್ಲ. ಬಟ್ಟೆ ವ್ಯಾಪರಿಯಾಗಿರುವ ತೌನೇಶ್ 2020ರಿಂದ ಗಾಂಜಾ ಮಾರಾಟ ಮಾಡುತ್ತಿದ್ದ. ಬೆಂಗಳೂರಿನ ನಾಲ್ಕು ಠಾಣೆಯಲ್ಲಿ ಆರೋಪಿ ವಿರುದ್ಧ ಕೇಸ್ ಇದೆ. ಇನ್ಪಾರ್ಮರ್ ಒಬ್ಬರ ಮಾಹಿತಿ ಮೇರೆ ಆರೋಪಿ ಬಂಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Actor Darshan : ಚಿಕ್ಕಣ್ಣ ಇದ್ದಾಗಲೇ ರೇಣುಕಾಸ್ವಾಮಿ ಕೊಲೆ ಬಗ್ಗೆ ಚರ್ಚೆ ಆಯ್ತಾ! ಆ ದಿನ ದರ್ಶನ್‌ ಏನ್‌ ಅಂದ್ರು

Actor darshan : ಜೂನ್ 10 ರಂದು ನನ್ನ ಸ್ನೇಹಿತ ನಾಗೇಂದ್ರ ನನಗೆ ಕರೆ ಮಾಡಿ ದರ್ಶನ್ ಅರೆಸ್ಟ್ ಆಗಿದ್ದಾರೆ ಎಂದಿದ್ದರು. ನಾನು ಕೊಲೆಯ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೆ. ದರ್ಶನ್ ಕಿವಿಯಲ್ಲಿ ಬಂದು ಏನೋ ಹೇಳಿದ್ದ ಪವನ್‌ನನ್ನು ಸಹ ಬಂಧಿಸಿರುವುದು ತಿಳಿದು ಬಂದಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ನಟ ಚಿಕ್ಕಣ್ಣ (Actor Chikkanna) ಹೇಳಿಕೆ ನೀಡಿದ್ದಾರೆ.

VISTARANEWS.COM


on

By

Actor Chikkanna
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ (Renukaswamy case) ಚಾರ್ಜ್​ಶೀಟ್​ನಲ್ಲಿ ನಟ ಚಿಕ್ಕಣ್ಣನ (Actor Chikkanna) ಹೇಳಿಕೆಯೂ ಉಲ್ಲೇಖವಾಗಿದೆ. ಅಂದು ಸ್ಟೋನಿಬ್ರೂಕ್​​ನಲ್ಲಿ ದರ್ಶನ್​ (Actor Darshan) ಭೇಟಿ ಮಾಡಿದ್ದ ಚಿಕ್ಕಣ್ಣ ಪೊಲೀಸರಿಗೆ ಒಂದಷ್ಟು ವಿಷಯಗಳನ್ನು ಹೇಳಿದ್ದಾರೆ. ಜೂನ್ 8ರಂದು ಎ.ಪಿ ಅರ್ಜುನ್ ಕಛೇರಿಯಲ್ಲಿ ನನ್ನ ಮುಂದಿನ ಚಿತ್ರದ ಬಗ್ಗೆ ಚರ್ಚೆ‌ ಮಾಡುತ್ತಿದ್ದೆ. ಆಗ ನಟ ಯಶಸ್ ಕರೆ ಮಾಡಿ ದರ್ಶನ್ ಮಧ್ಯಾಹ್ನ ಸ್ಟೋನಿ ಬ್ರೂಕ್ ನಲ್ಲಿ ಊಟ ಅರೆಂಜ್ ಮಾಡಿದ್ದಾರೆ. ನಿನಗೆ ಕರೆ ಮಾಡಿ ತಿಳಿಸುವಂತೆ ಸೂಚಿಸಿದ್ದಾರೆ, ಡೈರೆಕ್ಟಾಗಿ ಸ್ಟೋನಿ ಬ್ರೂಕ್ ಬರುವಂತೆ ಹೇಳಿದ್ದರು. ನಾನು ಬರಲು ಟ್ರೈ ಮಾಡುತ್ತೇನೆಂದು ಯಶಸ್‌ಗೆ ತಿಳಿಸಿದೆ.

ಆದರೆ 10 ನಿಮಿಷಗಳ ನಂತರ ದರ್ಶನ್ ನನಗೆ ಕರೆ ಮಾಡಿ ಬರುವಂತೆ ತಿಳಿಸಿದರುನಾನು ಮನೆಗೆ ಬಂದು ಬಟ್ಟೆ ಬದಲಾಯಿಸಿಕೊಂಡು 02-45ಕ್ಕೆ‌‌ ನನ್ನ ಖಾಸಗಿ ವಾಹನದಲ್ಲಿ ಡ್ರೈವರ್ ಸಿದ್ದು ಜತೆಯಲ್ಲಿ ಸ್ಟೋನಿ ಬ್ರೂಕ್‌ಗೆ ಹೋಗಿದ್ದೆ. ನಾನು ಸಿದ್ದುನನ್ನು ಕಾರಲ್ಲಿ ಬಿಟ್ಟು ಡಿ ಬಾಸ್ ಸಫಾರಿ ಎಂಬ ಲಾಂಜ್‌ಗೆ ತೆರಳಿದೆ. ಅಲ್ಲಿ ದರ್ಶನ್, ವಿನಯ್, ಪ್ರದೂಷ್, ಯಶಸ್, ನಾಗರಾಜು ಊಟ ಮಾಡುತ್ತಿದ್ದರು. ​​ನಾನು ಕುಳಿತುಕೊಂಡು ನನ್ನ ಮುಂದಿನ ಚಿತ್ರದ ಬಗ್ಗೆ ಮಾತನಾಡುತ್ತಾ, ಊಟ ಮಾಡಿದೆ.

ಇದನ್ನೂ ಓದಿ: Renukaswamy case : ರೇಣುಕಾಸ್ವಾಮಿ ಪವಿತ್ರಾಗೌಡಗೆ ಮಾತ್ರವಲ್ಲ ಸ್ಯಾಂಡಲ್‌ವುಡ್‌ನ ಆ ಸ್ಟಾರ್‌ ನಟಿಯರಿಗೂ ಕಳಿಸಿದ್ದನಂತೆ ಬ್ಯಾಡ್‌ ಮಸೇಜ್‌

ಆಗ ಪವನ್, ದರ್ಶನ್ ಬಳಿಗೆ ಬಂದು ಕಿವಿಯಲ್ಲಿ ಯಾವುದೋ ವಿಚಾರ ತಿಳಿಸಿದರು. ವಿಷಯ ತಿಳಿಸಿದ ನಂತರ ದರ್ಶನ್ ಮುಖಭಾವ ಬದಲಾವಣೆಯಾಗಿತ್ತು. ನಂತರ ದರ್ಶನ್ ಯಾರಿಗೋ ಕರೆ ಮಾಡಿ ಗಂಭೀರವಾಗಿ ಯಾವುದೋ ವಿಚಾರದ ಬಗ್ಗೆ ಚರ್ಚೆ ಮಾಡಿದರು. ನಂತರ ಚಿಕ್ಕಣ್ಣ ನೀನು ಹೊರಡು ನಮಗೆ ಬೇರೆ ಕೆಲಸ ಇದೆ ಎಂದು ದರ್ಶನ್ ತಿಳಿಸಿದರು. ಹೀಗಾಗಿ ಎಲ್ಲರೂ ಒಟ್ಟಿಗೆ ಕೆಳಗೆ ಬಂದಿದ್ದು‌. ನಾನು ಅಲ್ಲಿಂದ ಹೊರಟು ಹೋದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ದರ್ಶನ್, ಪ್ರದೂಷ್ ಹಾಗೂ ವಿನಯ್ ಹಾಗೂ ನಾಗರಾಜು ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನವಲ್ಲಿ ಅಲ್ಲಿಂದ ಹೋದರು.

ಜೂನ್ 10 ರಂದು ನನ್ನ ಸ್ನೇಹಿತ ನಾಗೇಂದ್ರ ನನಗೆ ಕರೆ ಮಾಡಿ ದರ್ಶನ್ ಅರೆಸ್ಟ್ ಆಗಿದ್ದಾರೆ ಎಂದ್ದರು. ನಾನು ಕೊಲೆಯ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೆ. ದರ್ಶನ್ ಕಿವಿಯಲ್ಲಿ ಬಂದು ಏನೋ ಹೇಳಿದ್ದ ಪವನ್‌ನನ್ನು ಸಹ ಬಂಧಿಸಿರುವುದು ತಿಳಿದು ಬಂದಿತ್ತು. ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕ ನಟ ಹಾಗೂ ಹಾಸ್ಯ ನಟನಾಗಿದ್ದೇನೆ. ನನಗೆ ದರ್ಶನ್ ಬುಲ್ ಬುಲ್ ಚಿತ್ರದ ಸಮಯದಿಂದ ಪರಿಚಯವಾಗಿರುತ್ತದೆ. ನಾನು ಅವರೊಂದಿಗೆ ಸುಮಾರು 03 ಚಿತ್ರಗಳಲ್ಲಿ ಹಾಸ್ಯನಟನಾಗಿ ಕೆಲಸ ಮಾಡಿದ್ದೇನೆ. ರಾಬರ್ಟ್ ಸಿನಿಮಾದ ವೇಳೆ ಹೆಚ್ಚಾಗಿ ಅವರೊಂದಿಗೆ ಒಡನಾಟ ಹೊಂದಿದ್ದೆ. ದರ್ಶನ್- ಪವಿತ್ರಗೌಡ ಜತೆಗೆ ಲಿವಿಂಗ್ ರಿಲೇಷನ್‌ನಲ್ಲಿ ಇದ್ದ ಬಗ್ಗೆ ನನಗೆ ತಿಳಿದಿದೆ ಎಂದು ಹೇಳಿಕೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Another chargesheet filed against Prajwal Revanna in 42nd ACMM court
ಬೆಂಗಳೂರು38 mins ago

Prajwal Revanna Case: ಗನ್ನಿಕಡ ತೋಟದ ಮನೆ ರಹಸ್ಯ; 2ನೇ ಚಾರ್ಜ್‌ಶೀಟ್‌ನಲ್ಲಿ ಪ್ರಜ್ವಲ್‌ ರೇವಣ್ಣ ಪಾಪ ಕೃತ್ಯ ಬಯಲು

Assault case Actor Dhruva Sarjas manager arrested for hitting gym trainer
ಸಿನಿಮಾ2 hours ago

Assault Case : ಹುಡುಗರನ್ನು ಬಿಟ್ಟು ಜಿಮ್‌ ಟ್ರೈನರ್‌ಗೆ ಹೊಡೆಸಿದ್ದಕ್ಕೆ ನಟ ಧ್ರುವ ಸರ್ಜಾ ಮ್ಯಾನೇಜರ್‌ ಬಂಧನ

Brother jailed for selling ganja to get his sister married
ಬೆಂಗಳೂರು5 hours ago

Drugs Seized :ಅದ್ಧೂರಿಯಾಗಿ ತಂಗಿ ಮದುವೆ ಮಾಡಲು ಗಾಂಜಾ ಮಾರಲು ಹೋಗಿ ಜೈಲುಪಾಲಾದ ಅಣ್ಣ!

Actor Chikkanna
ಸಿನಿಮಾ6 hours ago

Actor Darshan : ಚಿಕ್ಕಣ್ಣ ಇದ್ದಾಗಲೇ ರೇಣುಕಾಸ್ವಾಮಿ ಕೊಲೆ ಬಗ್ಗೆ ಚರ್ಚೆ ಆಯ್ತಾ! ಆ ದಿನ ದರ್ಶನ್‌ ಏನ್‌ ಅಂದ್ರು

Renukaswamy had sent the message not only to Pavithra Gowda but also to those star actresses of Sandalwood
ಸಿನಿಮಾ6 hours ago

Renukaswamy case : ರೇಣುಕಾಸ್ವಾಮಿ ಪವಿತ್ರಾಗೌಡಗೆ ಮಾತ್ರವಲ್ಲ ಸ್ಯಾಂಡಲ್‌ವುಡ್‌ನ ಆ ಸ್ಟಾರ್‌ ನಟಿಯರಿಗೂ ಕಳಿಸಿದ್ದನಂತೆ ಬ್ಯಾಡ್‌ ಮಸೇಜ್‌

karnataka weather Forecast
ಮಳೆ13 hours ago

Karnataka Weather : ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯ ಸಿಂಚನ; ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

Dina bhavishya
ಭವಿಷ್ಯ13 hours ago

Dina Bhavishya : ಹೂಡಿಕೆ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಇಂದು ಡಬಲ್‌ ಧಮಾಕ

kodi swamiji bhavishya
ಹಾಸನ23 hours ago

Kodi Mutt Swamiji: ಮತ್ತೆ ಪ್ರಕೃತಿ ವಿಕೋಪಗಳು ಸಂಭವಿಸುತ್ತೆ;ಸರ್ಕಾರಕ್ಕೆ ಕಂಟಕನಾ! ಸ್ಫೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ

Ibbani thabbida ileyali Film Review by Shivaraj DNS
ಸ್ಯಾಂಡಲ್ ವುಡ್1 day ago

Ibbani thabbida ileyali :ಇಬ್ಬನಿ ತಬ್ಬಿದ ಇಳೆಯಲಿ; ಪ್ರೇಮಕಾವ್ಯವನ್ನು ತಬ್ಬಿದ ನಿರ್ದೇಶಕ-ತಬ್ಬಿಬ್ಬಾದ ಪ್ರೇಕ್ಷಕ

CM Siddaramaiah
ಪ್ರಮುಖ ಸುದ್ದಿ1 day ago

CM Siddaramaiah: ಸಿಎಂ ವಿರುದ್ಧದ ಪ್ರಾಸಿಕ್ಯೂಷನ್;​ ವಾದ-ವಿವಾದ ಆಲಿಸಿ ಸೆ.12ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್1 week ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 weeks ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌