ಬೆಂಗಳೂರು: ರಾಜ್ಯ ಸರ್ಕಾರವು (Karnataka Govt) ಎಲ್ಲ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶಿಸಿದೆ. ರಾಜ್ಯದ ಎಲ್ಲ ಸರ್ಕಾರಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆಗೆ ಜೂನ್ 11ರಂದು ರಾಜ್ಯಾದ್ಯಂತ ಚಾಲನೆ ನೀಡಲಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಇದೀಗ ನೇಮಕವಾಗಿರುವ ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆ ಹೊರಲಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ನಿಯಮ ಹಾಕಿಕೊಳ್ಳಲಾಗಿತ್ತು. ಅದೇ ಜಿಲ್ಲೆಯ ಶಾಸಕರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬಾರದು ಎಂಬ ನೀತಿ ಇತ್ತು. ಆದರೆ ಈ ನೀತಿಯ ಕುರಿತು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಜಿಲ್ಲಾ ಅಭಿವೃದ್ಧಿ ಸರಿಯಾಗಿ ನಡೆಯುವುದಿಲ್ಲ ಎಂದಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುಂಡ ನಂತರ ಅವಲೋಕನ ಸಭೆಯಲ್ಲೂ ಅಭ್ಯರ್ಥಿಗಳು ಇದೇ ಮಾತನ್ನು ಹೇಳಿದ್ದರು. ನಾಯಕರ ಮಾತನ್ನು ಕೇಳಿ ಅನೇಕರು ಸೋತರು ಎಂದು ತಿಳಿಸಿದ್ದರು.
ಇದೀಗ ಕಾಂಗ್ರೆಸ್ ಸರ್ಕಾರ, ಅದೇ ಜಿಲ್ಲೆಗೆ ನೇಮಕ ಮಾಡಬಾರದು ಎಂಬ ನೀತಿಯನ್ನು ಒಟ್ಟಾರೆ ಕೈಬಿಟ್ಟಿದೆ. ಬಹಳಷ್ಟು ಸಚಿವರಿಗೆ ಅದೇ ಜಿಲ್ಲೆಯನ್ನು ನೀಡಲಾಗಿದೆ. ಆದರೆ ಒಂದೇ ಜಿಲ್ಲೆಯಲ್ಲಿ ಇಬ್ಬರು ಸಚಿವರಿರುವಾಗ ಅನೇಕ ಜಿಲ್ಲೆಗಳಿಗೆ ಹೊರಗಿನವರನ್ನೂ ನೇಮಿಸಲಾಗಿದೆ.
ಸಚಿವರು ಹಾಗೂ ಉಸ್ತುವಾರಿ ಜಿಲ್ಲೆಗಳು
ಸಿಎಂ ಸಿದ್ದರಾಮಯ್ಯ (ಹಣಕಾಸು, ಗುಪ್ತಚರ)
ಡಿಸಿಎಂ ಡಿ.ಕೆ ಶಿವಕುಮಾರ್(ಸಣ್ಣ ಮತ್ತು ಬೃಹತ್ ನೀರಾವರಿ, ಬೆಂಗಳೂರು ಅಭಿವೃದ್ಧಿ)- ಬೆಂಗಳೂರು ನಗರ
ಜಿ.ಪರಮೇಶ್ವರ್ (ಗೃಹ)- ತುಮಕೂರು
ಹೆಚ್.ಕೆ ಪಾಟೀಲ್ (ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ)- ಗದಗ
ಕೆ.ಹೆಚ್ ಮುನಿಯಪ್ಪ (ಆಹಾರ ಮತ್ತು ನಾಗರಿಕ ಸರಬರಾಜು)-ಬೆಂಗಳೂರು ಗ್ರಾಮಾಂತರ
ರಾಮಲಿಂಗಾ ರೆಡ್ಡಿ (ಸಾರಿಗೆ ಹಾಗೂ ಮುಜರಾಯಿ)-ರಾಮನಗರ
ಎಂ.ಬಿ ಪಾಟೀಲ್ (ಬೃಹತ್ ಕೈಗಾರಿಕೆ)-ವಿಜಯಪುರ
ಕೆ.ಜೆ ಜಾರ್ಜ್ (ಇಂಧನ)-ಚಿಕ್ಕಮಗಳೂರು
ದಿನೇಶ್ ಗುಂಡೂರಾವ್ (ಆರೋಗ್ಯ)-ದಕ್ಷಿಣ ಕನ್ನಡ
ಹೆಚ್.ಸಿ ಮಹದೇವಪ್ಪ (ಸಮಾಜಕಲ್ಯಾಣ)-ಮೈಸೂರು
ಸತೀಶ್ ಜಾರಕಿಹೊಳಿ (ಲೋಕೋಪಯೋಗಿ)-ಬೆಳಗಾವಿ
ಕೃಷ್ಣ ಬೈರೇಗೌಡ (ಕಂದಾಯ)- ಇಲ್ಲ
ಪ್ರಿಯಾಂಕ್ ಖರ್ಗೆ (ಗ್ರಾಮೀಣಾಭಿವೃದ್ಧಿ, ಐಟಿ-ಬಿಟಿ)-ಕಲಬುರಗಿ
ಶಿವಾನಂದ ಪಾಟೀಲ್ (ಜವಳಿ, ಸಕ್ಕರೆ)-ಹಾವೇರಿ
ಜಮೀರ್ (ವಸತಿ)-ವಿಜಯನಗರ
ಶರಣಬಸಪ್ಪ ದರ್ಶನಾಪುರ್ (ಸಣ್ಣ ಕೈಗಾರಿಕೆ)-ಯಾದಗಿರಿ
ಈಶ್ವರ್ ಖಂಡ್ರೆ (ಅರಣ್ಯ)-ಬೀದರ್
ಚಲುವರಾಯಸ್ವಾಮಿ (ಕೃಷಿ)-ಮಂಡ್ಯ
ಎಸ್.ಎಸ್ ಮಲ್ಲಿಕಾರ್ಜುನ (ಗಣಿ ಮತ್ತು ಭೂಗರ್ಭ ಶಾಸ್ತ್ರ, ತೋಟಗಾರಿಕೆ)-ದಾವಣಗೆರೆ
ರಹೀಂ ಖಾನ್ (ಪೌರಾಡಳಿತ, ಹಜ್)- ಇಲ್ಲ
ಸಂತೋಷ ಲಾಡ್ (ಕಾರ್ಮಿಕ)-ಧಾರವಾಡ
ಡಾ.ಶರಣುಪ್ರಕಾಶ್ ಪಾಟೀಲ್ (ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ)-ರಾಯಚೂರು
ಆರ್.ಬಿ ತಿಮ್ಮಾಪುರ (ಅಬಕಾರಿ)-ಬಾಗಲಕೋಟೆ
ಕೆ. ವೆಂಕಟೇಶ್ (ಪಶುಸಂಗೋಪನೆ)-ಚಾಮರಾಜನಗರ
ಶಿವರಾಜ್ ತಂಗಡಗಿ (ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ)-ಕೊಪ್ಪಳ
ಡಿ.ಸುಧಾಕರ್ (ಯೋಜನೆ ಮತ್ತು ಸಾಂಖ್ಯಿಕ)-ಚಿತ್ರದುರ್ಗ
ಬಿ.ನಾಗೇಂದ್ರ (ಕ್ರೀಡೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ)-ಬಳ್ಳಾರಿ
ಕೆ.ಎನ್.ರಾಜಣ್ಣ (ಸಹಕಾರ)-ಹಾಸನ
ಬಿ.ಎಸ್ ಸುರೇಶ್ (ನಗರಾಭಿವೃದ್ಧಿ)-ಕೋಲಾರ
ಲಕ್ಷ್ಮಿ ಹೆಬ್ಬಾಳ್ಕರ್ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ)-ಉಡುಪಿ
ಮಂಕಾಳ್ ವೈದ್ಯ (ಮೀನುಗಾರಿಕೆ ಮತ್ತು ಬಂದರು)-ಉತ್ತರ ಕನ್ನಡ
ಮಧು ಬಂಗಾರಪ್ಪ (ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ)-ಶಿವಮೊಗ್ಗ
ಡಾ.ಎಂ.ಸಿ .ಸುಧಾಕರ್ (ಉನ್ನತ ಶಿಕ್ಷಣ)-ಚಿಕ್ಕಬಳ್ಳಾಪುರ
ಎನ್.ಎಸ್.ಬೋಸರಾಜ್ (ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ)-ಕೊಡಗು
ಇದನ್ನೂ ಓದಿ: Cow slaughter: ಗೋಹತ್ಯೆ ಹೇಳಿಕೆ ನೀಡಿದ್ದು ಖಾತೆ ಬದಲಾವಣೆಗಾಗಿ: ಸಚಿವ ಕೆ. ವೆಂಕಟೇಶ್ ಕುರಿತು ಮಾಜಿ ಸಿಎಂ ಹೇಳಿದ್ದೇನು?