Site icon Vistara News

Karnataka CM: ಕರ್ನಾಟಕ ಜನರ ತೀರ್ಪು ದೇಶಕ್ಕೇ ಹೊಸ ಆಶಾಕಿರಣ; ಬೆಂಗಳೂರಿನಲ್ಲಿ ಮೆಹಬೂಬಾ ಮುಫ್ತಿ ಹೇಳಿಕೆ

Lok Sabha Election

End Of INDIA Bloc In Kashmir As Mehbooba Mufti's PDP Plans To Go Solo For Lok Sabha Election 2024

ಬೆಂಗಳೂರು: ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಅವರು ಪದಗ್ರಹಣ ಮಾಡಿದ್ದಾರೆ. ಇನ್ನು ಪದಗ್ರಹಣ ಸಮಾರಂಭಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಸೇರಿ ಹಲವರು ಆಗಮಿಸಿ ಸಿಎಂ ಹಾಗೂ ಡಿಸಿಎಂಗೆ ಶುಭಕೋರಿದ್ದಾರೆ. ಇನ್ನು ಇದರ ಬೆನಲ್ಲೇ, ಬೆಂಗಳೂರಿನಲ್ಲಿ ಮಾತನಾಡಿದ ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ, “ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿರುವುದು, ಜನ ತೀರ್ಪು ನೀಡಿರುವುದು ದೇಶಕ್ಕೆ ಹೊಸ ಆಶಾಕಿರಣ ಸಿಕ್ಕಂತಾಗಿದೆ” ಎಂದು ಹೇಳಿದ್ದಾರೆ.

“ಫ್ಯಾಸಿಸ್ಟ್‌, ಕೋಮುವಾದ ಹಾಗೂ ವಿಭಜಿತ ಶಕ್ತಿಗಳನ್ನು ರಾಜ್ಯದ ಜನ ಸೋಲಿಸಿದ್ದಾರೆ. ಕಳೆದ ಐದು ವರ್ಷದಿಂದ ರಾಜ್ಯದಲ್ಲಿ ದ್ವೇಷ ಹಾಗೂ ಕೋಮು ರಾಜಕೀಯದಿಂದ ಜನ ಪರಿತಪಿಸುವಂತಾಗಿತ್ತು. ಕರ್ನಾಟಕಕ್ಕೆ ಉಂಟಾದ ಗಾಯವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ವಾಸಿ ಮಾಡಲಿದ್ದಾರೆ ಎಂಬ ನಂಬಿಕೆಯಿದೆ” ಎಂದು ಹೇಳಿದ್ದಾರೆ.

“ದೆಹಲಿಯಲ್ಲಿ ಅಭಿವೃದ್ಧಿ ವಿರೋಧಿ ಸರ್ಕಾರವು (ಕೇಂದ್ರ ಸರ್ಕಾರ) ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದೆ. ಜನರಿಂದ ಆಯ್ಕೆಯಾದ ಸರ್ಕಾರದ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತಿದೆ. ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅವರು ಕೂಡ ಸುಗಮವಾಗಿ ಆಡಳಿತ ನಡೆಸಲು ಬಿಡುತ್ತಿಲ್ಲ. ಎ ದರ್ಜೆ ನೌಕರರ ವರ್ಗಾವಣೆ, ನೇಮಕದ ವಿಷಯದಲ್ಲೂ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ತಂದಿದೆ. ಕರ್ನಾಟಕದಲ್ಲಿ ಇಂತಹ ಶಕ್ತಿಗಳ ಬಗ್ಗೆ ಎಚ್ಚರದಿಂದ ಇರಬೇಕು” ಎಂದು ಕೂಡ ಎಚ್ಚರಿಸಿದರು.

ಇದನ್ನೂ ಓದಿ: DK Shivakumar: ನನ್ನ, ಸಿದ್ದರಾಮಯ್ಯ ಮನೆ ಸುತ್ತೋದು, ಚಾಡಿ ಹೇಳೋದು ಬಿಡಿ; ಡಿಕೆಶಿ ಖಡಕ್‌ ವಾರ್ನಿಂಗ್‌

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿ ಹಲವು ಸಚಿವರು ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊದಲ ಸಂಪುಟ ಸಭೆಯಲ್ಲಿಯೇ ಕಾಂಗ್ರೆಸ್‌ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಜನರಿಗೆ ಉಚಿತವಾಗಿ ಅಕ್ಕಿ, ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಸೇರಿ ಐದು ಗ್ಯಾರಂಟಿಗಳ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದೆ.

Exit mobile version