ಬೆಂಗಳೂರು: ರಾಜ್ಯದಲ್ಲಿ ಪಶುಗಳ ಆರೋಗ್ಯ ಕಾಳಜಿಗಾಗಿ ವೈದ್ಯರ ಕೊರತೆ ಅಪಾರವಾಗಿದೆ ಎಂದು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಕೇಳಿದ ಪ್ರಶ್ನೆಗೆ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ವಿಧಾನಸಭೆಯಲ್ಲಿ (Assembly Session) ಸೋಮವಾರ ಉತ್ತರ ನೀಡಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಬಗ್ಗೆ ಗುರುರಾಜ ಗಂಟಿಹೊಳೆ ಅವರು ಪ್ರಶ್ನೆ ಕೇಳಿದ್ದರು. ಬೈಂದೂರು ವಿಧಾನಸಭಾ ಕ್ಷೇತ್ರಗಳ ಪಶುಗಳ ಸಂಖ್ಯೆ ಎಷ್ಟು.? ಪಶು ಆಸ್ಪತ್ರೆ ಹಾಗೂ ಪಶು ಕೇಂದ್ರ ಹಾಗೂ ಪಶು ವೈದ್ಯರ ಸಂಖ್ಯೆ ಎಷ್ಟು ಎಂದು ಪ್ರಶ್ನೆ ಕೇಳಿದ್ದರು. ಆದರೆ ಸರ್ಕಾರದ ಉತ್ತರದಿಂದ ಅಸಮಾಧಾನಗೊಂಡ ಗಂಟಿಹೊಳೆ, ಉಪಪ್ರಶನೆ ಕೇಳಿದರು.
ನನ್ನ ಕ್ಷೇತ್ರದಲ್ಲಿ 83,000 ಹಸುಗಳಿಗೆ ಆದರೆ ಕೇವಲ ಇಬ್ಬರು ಮಾತ್ರ ಪಶು ವೈದ್ಯರು ಇದ್ದಾರೆ ಎಂದು ಸರ್ಕಾರ ಹೇಳಿದೆ. ಕಾನೂನಿನ ಪ್ರಕಾರ 4000 ಪಶುಗಳಿಗೆ ಒಬ್ಬರು ಪಶು ವೈದ್ಯರು ಇರಬೇಕು. ಆದರೆ 40 ಸಾವಿರಕ್ಕೆ ಒಬ್ಬರು ಪಶುವೈದ್ಯರು ಇದ್ದಾರೆ. ಸರ್ಕಾರದ ಉತ್ತರ ನೋಡಿ ನನಗೆ ತಲೆ ಬಿಸಿ ಆಗಿದೆ ಎಂದರು.
ಇದನ್ನೂ ಓದಿ: Gururaj Gantihole : ಸಡನ್ನಾಗಿ ಉರುಳಿದ ಮರ; ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಬಚಾವ್
ಇದಕ್ಕೆ ಉತ್ತರಿಸಿದ ಕೆ. ವೆಂಕಟೇಶ್, ಶಾಸಕರು ಹೇಳಿದ್ದು ಸರಿ ಇದೆ. 5,000 ಕ್ಕೆ ಒಬ್ಬರು ಪಶು ವೈದ್ಯರು ಇರಬೇಕು. 200 ವೆಟರ್ನರಿ ಇನ್ಸ್‌ಪೆಕ್ಟರ್ ಗಳನ್ನ ನೇಮಕಾತಿ ಮಾಡುತ್ತೇವೆ. ಪಶು ವೈದ್ಯರ ನೇಮಕಾತಿ ಕೂಡ ಮಾಡುತ್ತೇವೆ ಎಂದರು.
ಔಷಧಕ್ಕಾಗಿ ನೀಡುವ ಅನುದಾನದಲ್ಲೂ ತಾರತಮ್ಯ ಆಗಿದೆ ಎಂದ ಗುರುರಾಜ್ ಗಂಟಿಹೊಳೆ, ಬೆಳಗಾವಿಯಲ್ಲಿ ರಾಸುಗಳ ಸಂಖ್ಯೆ ಕಡಿಮೆ ಇದೆ 12 ಕೋಟಿ ಅನುದಾನ ಕೊಟ್ಟಿದ್ದಾರೆ. ಆದರೆ ಉಡುಪಿಗೆ ಕೇವಲ 70 ಲಕ್ಷ ರೂ. ಅನುದಾನ ನೀಡಿದ್ದಾರೆ. ನಈ ತಾರತಮ್ಯ ಸರಿ ಮಾಡುವಂತೆ ಸರ್ಕಾರಕ್ಕೆ ಗುರುರಾಜ ಗಂಟಿಹೊಳೆ ಮನವಿ ಮಾಡಿದರು.