ರಾಜ್ಯದಲ್ಲಿ ನಡೆಯುವ ರಾಜಕೀಯ, ಅಪರಾಧ ಮತ್ತಿತರ ಎಲ್ಲ ಘಟನಾವಳಿಗಳ ಕ್ಷಣಕ್ಷಣದ ಸುದ್ದಿಗಳಿಗಾಗಿ ಈ ಲಿಂಕ್ ಫಾಲೋ ಮಾಡಿ.
20 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ
ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain Alert) ಸಾಧ್ಯತೆಯಿದೆ.
Weather Report : ಅಂತೂ ಧರೆಗೆ ಅಪ್ಪಳಿಸಿದ ಮಳೆ; ನಾಳೆ 20 ಜಿಲ್ಲೆಗಳಲ್ಲಿ ವರ್ಷಧಾರೆ
ಸಂವಿಧಾನ ಪ್ರಸ್ತಾವನೆಯನ್ನೇ ತಪ್ಪಾಗಿ ನೀಡಿದ ಸಚಿವಾಲಯ; ಸ್ಪೀಕರ್ ನಡೆಗೆ ಬಸನಗೌಡ ಯತ್ನಾಳ್ ಆಕ್ಷೇಪ
ಕರ್ನಾಟಕದ ಶಾಲೆ ಹಾಗೂ ಕಾಲೇಜುಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು (ಪೀಠಿಕೆ) ಓದುವುದನ್ನು ಕಡ್ಡಾಯ ಮಾಡುವಂತೆ ಈಗಾಗಲೆ ಆದೇಶಿಸಲು ಮುಂದಾಗಿರುವ ಸರ್ಕಾರ ಈ ಕಾರ್ಯವನ್ನು ಸದನದಿಂದಲೇ (Assembly Session) ಆರಂಭಿಸಿದೆ, ಆದರೆ ಮೊದಲ ದಿನವೇ ಎಡವಟ್ಟು ಮಾಡಿಕೊಂಡಿದೆ. ಸದನದಲ್ಲಿ ಸ್ಪೀಕರ್ ಓದಿದ ಪ್ರಸ್ತಾವನೆಯೇ ಬೇರೆ, ಸದಸ್ಯರಿಗೆ ನೀಡಿದ ಪ್ರತಿಯೇ ಬೇರೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
https://vistaranews.com/karnataka/bjp-mla-basanagouda-patil-yatnal-objects-to-interpreted-copy-of-peamble-in-assembly-session/375055.html
ಪಿಎಸ್‌ಐ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ; AGDP ಅಮೃತ್ ಪಾಲ್‌ಗೆ ಡಬಲ್ ಸಂಕಷ್ಟ
ಬೆಂಗಳೂರು: ಭಾರಿ ಸದ್ದು ಮಾಡಿದ ಬಿಟ್‌ಕಾಯಿನ್ ಹಗರಣದ ಮರುತನಿಖೆಗೆ ಆದೇಶ ನೀಡಿದ ಬೆನ್ನಿಗೇ ಇನ್ನೊಂದು ಆದೇಶ ಹೊರಬಿದ್ದಿದೆ. ಇದರ ಪ್ರಕಾರ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕ ಹಗರಣಕ್ಕೆ ಸಂಬಂಧಿಸಿ ಆರೋಪಿಯಾಗಿರುವ ಎಡಿಜಿಪಿ ಅಮೃತ್ ಪಾಲ್ ಅವರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಜತೆಗೆ ಅವರ ವಿರುದ್ಧ ಭ್ರಷ್ಟಾಚಾರ ಕಾಯಿದೆಯಡಿಯೂ ತನಿಖೆಗೆ ಅನುಮತಿ ನೀಡಲಾಗಿದೆ.
PSI Scam : ಪಿಎಸ್‌ಐ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ; AGDP ಅಮೃತ್ ಪಾಲ್‌ಗೆ ಡಬಲ್ ಸಂಕಷ್ಟ
ಮಫ್ತಿಯಲ್ಲಿ ಮಹಾರಾಷ್ಟ್ರಕ್ಕೆ ಹಾರಿದ ಕರ್ನಾಟಕ ಪೊಲೀಸರು
ಬೆಂಗಳೂರು ನಗರದಲ್ಲಿ ಸೈಯದ್ ಸಾಧಿಕ್ ಎಂಬಾತ ಡ್ರಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಕನ್ಸ್ಯೂಮರ್ ಟು ಪೆಡ್ಲರ್ ಕಾನ್ಸೆಪ್ಟ್‌ನ ಅನ್ವಯ ಕಾರ್ಯ ನಿರ್ವಹಿಸಿದ ಗಿರಿನಗರ ಪೊಲೀಸರು ಈತನನ್ನು ಬಂಧಿಸಿದ್ದರು. ಗಾಂಜಾ ಎಲ್ಲಿಂದ ತರುವುದು, ಎಲ್ಲೆಲ್ಲಿ ಮಾರಾಟ ಮಾಡುತ್ತೀರಿ ಎಂಬ ಮಾಹಿತಿಯನ್ನು ಕಲೆ ಹಾಕಿದಾಗ ಸುಳಿವು ನೀಡಿದ್ದ. ಇದರ ಬೆನ್ನಟ್ಟಿ ಮಹಾರಾಷ್ಟ್ರಕ್ಕೆ ಹೋದ ಗಿರಿನಗರ ಪೊಲೀಸರು ಅಮೂಲ್, ಆಕಾಶ್, ರಾಹುಲ್ ಈ ಮೂವರು ಸಹೋದರರನ್ನು ಬಂಧಿಸಿದ್ದಾರೆ. ಬಂಧಿತರಿಂದ 50 ಲಕ್ಷ ಮೌಲ್ಯದ 79 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
Drugs case : ಕರ್ನಾಟಕ ಪೊಲೀಸರೇ ಕಿಡ್ಯ್ನಾಪರ್ಸ್! ಇದು ಗಾಂಜಾ ಫ್ಯಾಮಿಲಿ ʼಮಹಾʼ ಪ್ಲ್ಯಾನ್
ತಂದೆ ಕಣ್ಣೆದುರೇ ಹಾರಿ ಹೋಯ್ತು ಮಗಳ ಪ್ರಾಣ
ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ನಲ್ಲಿ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿಯಾಗಿ ಪಿಯು ವಿದ್ಯಾರ್ಥಿನಿ (Road Accident) ಮೃತಪಟ್ಟಿದ್ದಾಳೆ. ದಿಶಾ (18) ಮೃತ ದುರ್ದೈವಿ. ದಿಶಾ ತನ್ನ ತಂದೆ ಸತೀಶ್ ಜತೆಗೆ ಬೈಕ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದಳು. ಈ ವೇಳೆ ಹಿಂದಿನಿಂದ ಬಂದ ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ದಿಶಾ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾಳೆ. ಕೂದಳೆ ಅಂತರದಲ್ಲಿ ತಂದೆ ಸತೀಶ್ ಬಚಾವ್ ಆಗಿದ್ದಾರೆ.
Road Accident : ಬೈಕ್‌ಗೆ ಡಿಕ್ಕಿ ಹೊಡೆದ ಖಾಸಗಿ ಬಸ್ ; ತಂದೆ ಕಣ್ಣೆದುರೇ ಹಾರಿ ಹೋಯ್ತು ಮಗಳ ಪ್ರಾಣ