ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯ ಸಬ್ ಡಿವಿಷನ್‌ನಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಹೊಸದಾಗಿ ಸಂಚಾರ ಮತ್ತು ಕಾನೂನು ಸುವ್ಯವಸ್ಥೆಯ ಠಾಣೆಯ ಸಬ್ ಡಿವಿಷನ್‌ಗಳಲ್ಲಿ ಹೆಚ್ಚಳ ಮಾಡಲಾಗಿದೆ.
ಈ ಕುರಿತು ಇದೇ ವರ್ಷ ಸರ್ಕಾರಕ್ಕೆ ಡಿಜಿ ಐಜಿಪಿ ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ಸಬ್ ಡಿವಿಷನ್‌ನಲ್ಲಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಬೆಂಗಳೂರು ಪಶ್ಚಿಮ ಸಂಚಾರ ಸಬ್ ಡಿವಿಷನ್ ಅನ್ನು ಎರಡು ಸಬ್ ಡಿವಿಷನ್ ಮಾಡಲಾಗಿದ್ದು, ಜತೆಗೆ ವಿಜಯನಗರ ಟ್ರಾಫಿಕ್ ಸಬ್ ಡಿವಿಷನ್ ಸೇರ್ಪಡೆ ಮಾಡಲಾಗಿದೆ. ಬೆಂಗಳೂರು ಪೂರ್ವ ವಿಭಾಗದ ಅಗ್ನೇಯ ಸಬ್ ಡಿವಿಷನಲ್ಲೂ ಎರಡು ಭಾಗಗಳಾಗಿ ವಿಂಗಡಣೆ ಮಾಡಲಾಗಿದ್ದು, ಹೊಸದಾಗಿ ಹೆಚ್‌ಎಸ್‌ಆರ್ ಲೇಔಟ್ ಸಬ್ ಡಿವಿಷನ್ ಸೇರ್ಪಡೆಯಾಗಿದೆ. ಉತ್ತರ ವಿಭಾಗದ ಯಶವಂತಪುರ ಸಬ್ ಡಿವಿಷನ್ ವಿಂಗಡಣೆಯಾಗಿದ್ದು, ಯಶವಂತಪುರ ಹಾಗೂ ಪೀಣ್ಯ ಸಬ್ ಡಿವಿಷನ್‌ಗಳಾಗಿವೆ. ಪಶ್ಚಿಮ ವಿಭಾಗದ ಕೆಂಗೇರಿ ಗೇಟ್ ಮತ್ತು ವಿಜಯನಗರ ಸಬ್ ಡಿವಿಷನ್‌ಗಳಲ್ಲಿ ಮಾರ್ಪಾಡಾಗಿದ್ದು, ಹೊಸದಾಗಿ ಕೆಂಗೇರಿ ಸಬ್ ಡಿವಿಷನ್ ಸೇರ್ಪಡೆ ಮಾಡಲಾಗಿದೆ.
ಮೈಸೂರು ನಗರ ನರಸಿಂಹರಾಜ ಹಾಗೂ ಕೃಷ್ಣರಾಜ ಸಬ್ ಡಿವಿಷನ್ ಮಾರ್ಪಾಡು ಮಾಡಲಾಗಿದೆ ಹಾಗೂ ಹೊಸದಾಗಿ ವಿಜಯನಗರ ಸಬ್ ಡಿವಿಷನ್ ಸೇರ್ಪಡೆ ಮಾಡಿ ಆದೇಶ ಹೊರಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಸಬ್ ಡಿವಿಷನ್‌ನಲ್ಲಿ ಬದಲಾವಣೆ ಮಾಡಲಾಗಿದ್ದು, A ಹಾಗೂ B ಸಬ್ ಡಿವಿಷನ್ ಆಗಿ ಮಾರ್ಪಡಿಸಲಾಗಿದೆ. ಹಾಸನ ಜಿಲ್ಲೆಯ ಹೊಳೆನರಸಿಪುರ ಸಬ್ ಡಿವಿಷನ್ ಬದಲಾವಣೆ ಮಾಡಿದ್ದು, ಹೊಸದಾಗಿ ಚೆನ್ನರಾಯಪಟ್ಟಣ ಸಬ್ ಡಿವಿಷನ್ ಸೇರ್ಪಡೆಯಾಗಿದೆ. ವಿಜಯಪುರ ಜಿಲ್ಲೆ ಮೂರು ಡಿವಿಷನ್‌ಗಳಿಂದ ನಾಲ್ಕು ಸಬ್ ಡಿವಿಷನ್‌ಗೆ ಏರಿಸಲಾಗಿದ್ದು, ಹೊಸದಾಗಿ ವಿಜಯಪುರ ಗ್ರಾಮಾಂತರ ಸಬ್ ಡಿವಿಷನ್ ಸೇರ್ಪಡೆಯಾಗಿದೆ. ದ.ಕ ಜಿಲ್ಲೆಯ ಬಂಟ್ವಾಳ ಸಬ್ ಡಿವಿಷನಲ್ಲಿ ಮಾರ್ಪಾಡಾಗಿದ್ದು, ಹೊಸದಾಗಿ ಬೆಳ್ತಂಗಡಿ ಸಬ್ ಡಿವಿಷನ್ ಸೇರ್ಪಡೆ ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಮಹತ್ತರ ಬದಲಾವಣೆ ಮಾಡಲಾಗಿದ್ದು, ಹೊಸದಾಗಿ ನಾಲ್ಕು ಸಂಚಾರಿ ಪೊಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರ ಅಸ್ತು ಎಂದಿದೆ. ಬೆಂಗಳೂರಿನ ನಾಲ್ಕು ಡಿವಿಷನ್‌ಗಳಲ್ಲಿ
ಹೊಸದಾಗಿ ತಲಘಟ್ಟಪುರ, ಬೆಳ್ಳಂದೂರು, ಹೆಣ್ಣೂರು ಹಾಗೂ ಮಹದೇವಪುರದಲ್ಲಿ ಸಂಚಾರಿ ಪೊಲೀಸ್ ಠಾಣೆಗಳ ಸ್ಥಾಪನೆಯಾಗಲಿದೆ.
ಇದನ್ನೂ ಓದಿ | Banglore traffic | ಟ್ರಾಫಿಕ್ ರೂಲ್ಸ್ ಮುರಿಯುವವರೇ ಹುಷಾರ್, ಬಂದಿದೆ ಹದ್ದಿನ ಕಣ್ಣು !