ಬೆಂಗಳೂರು: ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕರಾಗಿ (Opposition Leader) ಆರ್. ಅಶೋಕ್ ಆಯ್ಕೆಯಾಗಿರುವುದರಿಂದ ಅಸಮಾಧಾನಗೊಂಡು ಹೊರನಡೆದಿದ್ದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರ ಕುರಿತು ಕಾಂಗ್ರೆಸ್ (Congress Karnataka) ಕುಹಕವಾಡಿದ್ದು, ಇದಕ್ಕೆ ಯತ್ನಾಳ್ ತಿರುಗೇಟು ನೀಡಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಈಗ ಸೋಷಿಯಲ್ ಮೀಡಿಯಾ ವಾರ್ (Social Media War) ಪ್ರಾರಂಭವಾದಂತೆ ಆಗಿದೆ.
ಈ ಮೊದಲು ಕಾಂಗ್ರೆಸ್ ತನ್ನ ಸೋಷಿಯಲ್ ಮೀಡಿಯಾ ಫೇಸ್ಬುಕ್ ಖಾತೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಗ್ಗೆ ಕಮೆಂಟ್ ಮಾಡಿತ್ತು. ಅವರ ಫೋಟೊಗಳನ್ನು ಎಡಿಟ್ ಮಾಡಿ, ಕೈಯಲ್ಲಿ ಟಿ ಕಪ್ ಹಿಡಿದಿರುವಂತೆ ಮಾಡಿ ಕೆಲವು ಪ್ರಶ್ನೆಗಳನ್ನು ಕೇಳಿತ್ತು.
ಕಾಂಗ್ರೆಸ್ ಪೋಸ್ಟರ್ನಲ್ಲೇನಿದೆ?
“ಬಿಜೆಪಿ ಕಚೇರಿ ಶ್ರೀಮಂತರ ಚಹಾ ಹೋಟೆಲ್. ಇಲ್ಲಿ ಬಡವರ ಚಹಾ ಸಿಗಲ್ಲ ಅಂತ ಹೊರಗೆ ಟೀ ಕುಡಿಯಲು ಹೋದವರು ಜಗನ್ನಾಥ ಭವನದ ಎದುರು ಟೀ ಮಾರಿಕೊಂಡು ಕೂತಿದ್ದಾರಂತೆ, ಮೋದಿ ಮಾದರಿ!!
ಹೇ ಜಗನ್ನಾಥ ಪ್ರಭು, ನೀನೆಷ್ಟು ಕ್ರೂರಿ..?!
ಹೇ ಜಗನ್ನಾಥ ಪ್ರಭು, ನೀನೆಷ್ಟು ಕ್ರೂರಿ..?! “ಜಾರಿದವರ ಯತ್ನ ಬೆಲ್ಲ” ಆಗ್ಲಿಲ್ಲವಲ್ಲಪ್ಪ..!” ಎಂದು ಕಾಂಗ್ರೆಸ್ ಪೋಸ್ಟರ್ ಅನ್ನು ಮಾಡಿತ್ತು. ಇದರ ಮೂಲಕ ಬಿಜೆಪಿ ಕಚೇರಿ ಎಂಬುದು ಸಿರಿವಂತರ ಚಹಾ ಹೋಟೆಲ್ ಆಗಿದೆ. ಶುಕ್ರವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದಲ್ಲಿ ಅಸಮಾಧಾನಗೊಂಡು ಹೊರನಡೆದಿದ್ದ ಯತ್ನಾಳ್ ಬಿಜೆಪಿಯ ಜಗನ್ನಾಥ ಭವನದ ಎದುರು ಟೀ ಮಾರಿಕೊಂಡು ಕುಳಿತಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಮಾದರಿ ಎಂದು ಕಾಂಗ್ರೆಸ್ ಕುಟುಕಿತ್ತು. ಕಾರಣ, ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಸಮಾಧಾನಗೊಂಡು ಹೊರ ಬಂದಿದ್ದ ಯತ್ನಾಳ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, “ತಮಗೆ ಯಾವುದೇ ಅಸಮಾಧಾನ ಇಲ್ಲ. ತಾವು ಚಹ ಕುಡಿಯಲು ಹೊರಗಡೆ ಹೋಗುತ್ತಿರುವುದಾಗಿ ಹೇಳಿದ್ದರು. ಈ ಹೇಳಿಕೆಯನ್ನು ಇಟ್ಟುಕೊಂಡು ಕಾಂಗ್ರೆಸ್ ಕಾಲೆಳೆದಿತ್ತು.
ಇದಕ್ಕಿಂತ ಮುಂಚಿತವಾಗಿ ಇನ್ನೊಂದು ಪೋಸ್ಟರ್ ಹಾಕಿರುವ ಕಾಂಗ್ರೆಸ್, “ಚಹಾ ಕುಡಿಯಲು ಹೋದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ವಾಪಸ್ ಬಂದರಾ” ಎಂದು ಬಿಜೆಪಿಗೆ ಪ್ರಶ್ನೆ ಮಾಡಿತ್ತು. ಅಲ್ಲದೆ, “ಬಿಜೆಪಿಯಲ್ಲಿ ಚಹಾ ಕುಡಿಯುವವರು ಯಾರು, ಹಾಲು ಕುಡಿಯುವವರು ಯಾರು, ಹಾಲಾಹಲ ಕುಡಿಯುವವರು ಯಾರು ಎಂಬುದು ಸ್ವತಃ ಬಿಜೆಪಿಗೇ ತಿಳಿದಂತಿಲ್ಲ.!” ಎಂದು ವ್ಯಂಗ್ಯವಾಡಿತ್ತು.
ಇದನ್ನೂ ಓದಿ: Yathindra Siddaramaiah : ʼಹಲೋ ಅಪ್ಪಾʼ ಆ್ಯಪ್ ಡೌನ್ಲೋಡ್ ಮಾಡಿ ಪೇಮೆಂಟ್ ಮಾಡಿ!
ಯತ್ನಾಳ್ ಎನ್ಕೌಂಟರ್
ಕಾಂಗ್ರೆಸ್ನ ಈ ವ್ಯಂಗ್ಯಗಳಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಿರುಗೇಟು ನೀಡಿದ್ದಾರೆ. ನಾನು ಚಹಾ ಮಾರಿಕೊಂಡು ಬದುಕಬಹುದು, ಬದುಕು ಮಾರಿಕೊಂಡು ಅಲ್ಲ ಎಂದು ಹೇಳಿದ್ದಾರೆ.
ಹೇ ಪ್ರಭು!
— Basanagouda R Patil (Yatnal) (@BasanagoudaBJP) November 18, 2023
ಚಹಾ ಮಾರಿಕೊಂಡು ಆದರೂ ಬದುಕಬಹದು, ನಿಮ್ಮಂತೆ ಬದುಕು ಮಾರಿಕೊಂಡು ಅಲ್ಲ! https://t.co/7eGbezM27m
“ಹೇ ಪ್ರಭು.!
ಚಹ ಮಾರಿಕೊಂಡಾದರೂ ಬದುಕಬಹುದು.
ನಿಮ್ಮಂತೆ ಬದುಕು ಮಾರಿಕೊಂಡು ಅಲ್ಲ” ಎಂದು ವ್ಯಂಗ್ಯವಾಡಿದ್ದಾರೆ. ಜತೆಗೆ ಕಾಂಗ್ರೆಸ್ ಟ್ವೀಟ್ ಅನ್ನು ಈ ಸಾಲುಗಳ ಕೆಳಗೆ ಶೇರ್ ಮಾಡಿದ್ದಾರೆ.
ಈ ಸುದ್ದಿಯ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ. ಇನ್ನಷ್ಟು ರಾಜಕೀಯ ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ.