Site icon Vistara News

Karnataka Politics: ಯತೀಂದ್ರ ಸಿದ್ದರಾಮಯ್ಯ ಮಾತ್ರ ಅಲ್ಲ, ಪ್ರಿಯಾಂಕ್‌ ಖರ್ಗೆ ಕೂಡಾ SHADOW CM!

Shadow CM Priyank Kharge

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಅವರು ವರ್ಗಾವಣೆಯ ಸಮಸ್ತ ಮೇಲುಸ್ತುವಾರಿ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಹಸ್ತಕ್ಷೇಪ ಮಾಡುತ್ತಾ ಛಾಯಾ ಸಿಎಂ (Shadow CM) ಆಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ಈಗ ಇನ್ನೊಂದು ಬಾಣ ಬಿಟ್ಟಿದೆ. ಅದರ ಪ್ರಕಾರ ಯತೀಂದ್ರ ಸಿದ್ದರಾಮಯ್ಯ ಮಾತ್ರವಲ್ಲ ಪ್ರಿಯಾಂಕ್‌ ಖರ್ಗೆ ಕೂಡಾ ಶ್ಯಾಡೋ ಸಿಎಂ ಎಂದು (Karnataka Politics) ಪಂಚ್‌ ಕೊಟ್ಟಿದೆ.

ಕಾಂಗ್ರೆಸ್‌ ಸರ್ಕಾರವನ್ನು ಎಟಿಎಂ ಸರ್ಕಾರ (ATMSarkara) ಎಂದು ಗೇಲಿ ಮಾಡುತ್ತಿರುವ ಬಿಜೆಪಿ ಶ್ಯಾಡೋ ಸಿಎಂ ಯತೀಂದ್ರ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಸಿಕ್ಕ ಸಿಕ್ಕಲ್ಲಿ ಪ್ರಿಯಾಂಕ ಖರ್ಗೆ (Priyank Kharge) ಕೈಯಾಡಿಸುತ್ತಿದ್ದಾರೆ ಎಂದು ಹೇಳಿದೆ. ಪ್ರಿಯಾಂಕ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್‌ ಸಚಿವರಾಗಿದ್ದಾರೆ.

ಪ್ರಿಯಾಂಕ ಖರ್ಗೆ ಹೇಗೆ ಶ್ಯಾಡೋ ಸೀಎಂ ಎಂಬುದಕ್ಕೆ ಬಿಜೆಪಿ ಹಲವು ಉದಾಹರಣೆಗಳನ್ನು ಪಟ್ಟಿ ಮಾಡಿದೆ ಬಿಜೆಪಿ. ಮಾತ್ರವಲ್ಲ, ಕರ್ನಾಟಕ ಕಾಂಗ್ರೆಸ್‌ ಪ್ರಿಯಾಂಕ್ ಖರ್ಗೆಯವರನ್ನು ಪ್ರಿಯಾಂಕಾ ಗಾಂಧಿಯೆಂದು ಭಾವಿಸಿ ಸಹಿಸಿಕೊಂಡಂತೆ ಕಾಣುತ್ತಿದೆ.

🏧 ಹಣಕಾಸು: ಬಜೆಟ್ ಮಂಡಿಸಿದ್ದು @siddaramaiah, ವಿನಾಕಾರಣ ಉತ್ತರ ನೀಡುವುದು ಪ್ರಿಯಾಂಕ್ ಖರ್ಗೆ..!
🌆 ಬೆಂಗಳೂರು ನಗರಾಭಿವೃದ್ಧಿ: ಸಚಿವ @DKShivakumar, ಚೆಸ್ ಆಡುತ್ತಿರುವುದು ಪ್ರಿಯಾಂಕ್ ಖರ್ಗೆ..!
🚨 ಗೃಹ ಇಲಾಖೆ: ಸಚಿವ ಖಾತೆ @DrParameshwara, ಅಧಿಕಾರ‌ ಚಲಾಯಿಸುತ್ತಿರುವುದು ಪ್ರಿಯಾಂಕ್ ಖರ್ಗೆ..!
⚖️ ಕಾನೂನು ಮತ್ತು ಸಂಸದೀಯ ವ್ಯವಹಾರ: ಸಚಿವ ಎಚ್ಕೆ ಪಾಟೀಲ್, ಅನಧಿಕೃತ ‌ನಿರ್ವಹಣೆ ಪ್ರಿಯಾಂಕ್ ಖರ್ಗೆ..!
🏥 ಆರೋಗ್ಯ ಮತ್ತು ಕುಟುಂಬ ಕಲ್ಯಾಣ: ನಾಮಕಾವಸ್ಥೆ @dineshgrao, ಮದ್ದು ಚುಚ್ಚುವುದು ಪ್ರಿಯಾಂಕ್ ಖರ್ಗೆ..!
👨‍👩‍👧‍👧 ಸಮಾಜ ಕಲ್ಯಾಣ: ತೋರಿಕೆಗಾಗಿ @CMahadevappa, ಕೈಯಾಡಿಸುತ್ತಿರುವುದು ಪ್ರಿಯಾಂಕ್ ಖರ್ಗೆ..!
🤑 ಕಂದಾಯ: ಹೇಳಿಕೊಳ್ಳಲು ಕೃಷ್ಣಭೈರೇಗೌಡ, ನಡೆಸುತ್ತಿರುವುದು ಪ್ರಿಯಾಂಕ್ ಖರ್ಗೆ..!

ಈ ಹಿಂದೆ ಬಿಜೆಪಿ ಯತೀಂದ್ರ ಅವರನ್ನು ಶ್ಯಾಡೋ ಸಿಎಂ ಎಂದು ಆಪಾದಿಸಿತ್ತು

ಕಾಂಗ್ರೆಸ್‌ನಿಂದಲೂ ತಿರುಗೇಟು: ಬಿಜೆಪಿ ಕಾಲದಲ್ಲಿ ಆಳಿದ್ದು ಕೇಶವ ಕೃಪಾ!

ಈ ನಡುವೆ, ಕಾಂಗ್ರೆಸ್‌ ಕೂಡಾ ಛಾಯಾ ಆಡಳಿತ ಹೇಳಿಕೆ ಮೂಲಕವೇ ಬಿಜೆಪಿ ಮೇಲೆ ಮುಗಿಬಿದ್ದಿದೆ. ಈ ಹಿಂದೆ ಬಿಜೆಪಿ ಕಾಲದಲ್ಲಿ ಆಡಳಿತ ನಡೆಸುತ್ತಿದ್ದುದು ಕೇಶವ ಕೃಪಾ ಎಂದು ಆಪಾದಿಸಿದೆ

ʻʻಈ ಹಿಂದೆ ಬಿಜೆಪಿ ಅವಧಿಯಲ್ಲಿ ರಾಜ್ಯವನ್ನು ಆಳುತ್ತಿದ್ದಿದ್ದು ಬೊಮ್ಮಾಯಿಯೂ ಅಲ್ಲ, ಬಿಜೆಪಿಯೂ ಅಲ್ಲ. ಕರ್ನಾಟಕವನ್ನು ಆಳುತ್ತಿದ್ದಿದ್ದು ಕೇಶವಕೃಪ ಎನ್ನುವುದು ಹಲವು ಬಾರಿ ಸಾಬೀತಾಗಿದೆ. RSS ಸಿದ್ಧಾಂತವನ್ನು ಪಠ್ಯಪುಸ್ತಕಗಳಲ್ಲಿ, ಸರ್ಕಾರದಲ್ಲಿ, ಸಮಾಜದಲ್ಲಿ ಮಾತ್ರವಲ್ಲ, ನ್ಯಾಯಾಂಗದಲ್ಲೂ ವ್ಯವಸ್ಥಿತವಾಗಿ ತೂರಿಸುವ ಪ್ರಯತ್ನ ಮಾಡಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಅಭಿಯೋಜನೆ ಇಲಾಖೆಯ ವಕೀಲರ ನೇಮಕಾತಿಯಲ್ಲಿ, ಕಾನೂನು ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ಸಂಘಪರಿವಾರದವರಿಗೆ ಮಣೆ ಹಾಕಿರುವುದರ ವಿರುದ್ಧ ಅಭಿಯೋಜನಾ ಇಲಾಖೆಯ ನೌಕರರೇ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ನಮ್ಮ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಿದೆ. ವ್ಯವಸ್ಥೆಯ ‘ಸಂಘಿ’ಕರಣಕ್ಕೆ ನಾವು ಎಂದಿಗೂ ಬಿಡುವುದಿಲ್ಲʼʼ ಎಂದು ಹೇಳಿದೆ ಕಾಂಗ್ರೆಸ್‌

ಇದನ್ನೂ ಓದಿ : Karnataka Politics : ಟೊಮ್ಯಾಟೊಗೆ 130 ರೂ, ಎಂಜಿನಿಯರ್‌ಗೆ 5 ಕೋಟಿ ರೂ; Shadow CM ಪ್ರಕಟಣೆ ಎಂದ ಬಿಜೆಪಿ!

Exit mobile version