ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸೋಷಿಯಲ್ ಮೀಡಿಯಾ ಪಾಲಿಟಿಕ್ಸ್ (Social Media Politics) ಜೋರಾಗಿ ನಡೆಯುತ್ತಿದೆ. ವಿಧಾನಮಂಡಲದ ಅಧಿವೇಶನ (Joint session) ಆರಂಭವಾಗಿ ಮೂರು ದಿನವಾದರೂ ವಿರೋಧ ಪಕ್ಷದ (Opposition leader) ನಾಯಕನ ಆಯ್ಕೆಗೆ ವಿಫಲವಾಗಿರುವ ಭಾರತೀಯ ಜನತಾ ಪಕ್ಷ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರನ್ನು ಎದುರಿಸಲು ಮುಜುಗರಪಡುತ್ತಿದ್ದಾರೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಚೆನ್ನಾಗಿ ಕಾಂಗ್ರೆಸ್‌ನ ಕಾಲೆಳೆಯುತ್ತಿದ್ದಾರೆ (Karnataka Politics).
ಈಗ ಜೋರಾಗಿ ಸುದ್ದಿಯಲ್ಲಿರುವುದು ಟೊಮ್ಯಾಟೋ ಸೇರಿದಂತೆ ತರಕಾರಿ ಬೆಲೆ (Tomato price hike) ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರುವ ವರ್ಗಾವಣೆ ಭರಾಟೆ (Trasfer scam). ಇವೆರಡನ್ನೂ ಜೋಡಿಸಿ ಬಿಜೆಪಿ ಸರ್ಕಾರದ ಕಾಲೆಳೆದಿದೆ.
ರಾಜ್ಯದಲ್ಲಿ ಅಗತ್ಯ ವಸ್ತುಗಳು ಹಾಗೂ ಅಗತ್ಯ ಹುದ್ದೆಗಳ ಇಂದಿನ ದರ ಎಂದು ನಮೂದಿಸಿ ಅದರಲ್ಲಿ ಟೊಮ್ಯಾಟೊ, ಬೀನ್ಸ್, ಕ್ಯಾರೆಟ್, ಹಸಿಮೆಣಸಿನಕಾಯಿ ಬೆಲೆಯನ್ನು ನಮೂದಿಸಿದೆ. ಅದರ ಜತೆಗೆ ರಾಜ್ಯದಲ್ಲಿ ನಡೆಯುತ್ತಿದೆ ಎನ್ನಲಾದ ವರ್ಗಾವಣೆಯ ದರಪಟ್ಟಿಯನ್ನೂ ಪ್ರಕಟಿಸಿದೆ.
ತರಕಾರಿ ಬೆಲೆಗಳು
🍅 ಟೊಮೆಟೊ – ₹120-130
🫛 ಬೀನ್ಸ್ – ₹120
🥕 ಕ್ಯಾರೆಟ್ – ₹110
🌶️ ಹಸಿಮೆಣಸಿನಕಾಯಿ – ₹170
ವರ್ಗಾವಣೆ ತರಹೇವಾರಿ
👷♂️ ಮುಖ್ಯ ಎಂಜಿನಿಯರ್: ₹5 ಕೋಟಿ
👨⚕️ ಜಿಲ್ಲಾ ಆರೋಗ್ಯಾಧಿಕಾರಿ: ₹2 ಕೋಟಿ
🕵🏻 ಲೆಕ್ಕಾಧಿಕಾರಿ: ₹ 2.25 ಕೋಟಿ
👨💼 ತಹಶೀಲ್ದಾರ್: ₹1.25 ಕೋಟಿ
👮 ಪೊಲೀಸ್ ಸಬ್ ಇನ್ಸ್ಪೆಕ್ಟರ್:
📍 ಬೆಂಗಳೂರು ನಗರ – ₹1.5 ಕೋಟಿ
📍 ಜಿಲ್ಲಾ ಕೇಂದ್ರ – ₹80 ಲಕ್ಷ
📍 ತಾಲ್ಲೂಕು ಕೇಂದ್ರ: ₹40 ಲಕ್ಷ
ಈ ದರಪಟ್ಟಿಯಲ್ಲಿ ಕಂಡಿಷನ್ ಅಪ್ಲೈ ಅಂತ ಹಾಕೋ ಸ್ಟಾರ್ ಚಿಹ್ನೆಯನ್ನೂ ಹಾಕಿದೆ. ಅಂದರೆ, ಇದು ಕಂಡೀಷನ್ ಅಪ್ಲೈ ಅಂತ ತೋರಿಸುತ್ತದೆ.
ಅದರಲ್ಲಿರುವ ಒಂದು ಕಂಡೀಷನ್ ಏನೆಂದರೆ: *ಕೇಂದ್ರದ ಸುರ್ಜೇವಾಲಾ ಕಮಿಷನ್ ಪ್ರತ್ಯೇಕ.
ಈ ದರಪಟ್ಟಿಯನ್ನು #ATMsarkara ದ ಪರವಾಗಿ #ShadowCM ಯತೀಂದ್ರ ಪ್ರಕಟಿಸಿದ್ದಾರೆ ಎಂದು ಕಾಲೆಳೆದಿದೆ.
ಯತೀಂದ್ರ ಅವರನ್ನು ಶ್ಯಾಡೋ ಸಿಎಂ ಎಂದು ಬಿಂಬಿಸುತ್ತಿರುವ ಬಿಜೆಪಿ
ಈ ನಡುವೆ, ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಛಾಯಾ ಮುಖ್ಯಮಂತ್ರಿ ಎಂಬಂತೆ ಬಿಜೆಪಿ ಬಿಂಬಿಸುತ್ತಿದೆ. ವರ್ಗಾವಣೆಯೂ ಸೇರಿದಂತೆ ಎಲ್ಲ ದಂಧೆಗಳು ಅವರ ಸೂಚನೆಯಂತೆ ನಡೆಯುತ್ತಿದೆ ಎನ್ನುವುದು ಬಿಜೆಪಿ ಆರೋಪ. Commission master in Shadow of Chief Minister ಎಂದು ಬರೆಯಲಾಗಿದೆ.