Site icon Vistara News

Karnataka Politics : ಕೆ.ಎನ್.‌ ರಾಜಣ್ಣರಿಗೆ ಗುಪ್‌ಚುಪ್‌ ಎಂದ ಸಿಎಂ ಸಿದ್ದರಾಮಯ್ಯ; ಎಸ್‌ ಎಸ್‌ ಅಂದ್ರು ಡಿಕೆಶಿ

breakfast meeting at CM House

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಈಗ ಕಾಂಗ್ರೆಸ್‌ ಸರ್ಕಾರದ್ದೇ ಸದ್ದು ಕೇಳಿ ಬರುತ್ತಿದೆ. ಪಕ್ಷದೊಳಗಿನ ಭಿನ್ನಮತ ಸ್ಫೋಟಗೊಳ್ಳುತ್ತಲೇ ಬರುತ್ತಿದ್ದು, ಪೂರ್ಣಾವಧಿ ಸಿಎಂ (Full time CM) ಚರ್ಚೆ ಹೆಚ್ಚಾಗಿದೆ. ಹೀಗಾಗಿ ಈ ಎಲ್ಲದಕ್ಕೂ ಬ್ರೇಕ್‌ ಹಾಕಲು ಕಾಂಗ್ರೆಸ್‌ ಹೈಕಮಾಂಡ್‌ (Congress High Command) ಸಂದೇಶ ರವಾನೆ ಮಾಡಿದೆ. ಇದರ ಭಾಗವಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕೆಲವು ಆಯ್ದ ಸಚಿವರನ್ನು ಶನಿವಾರ ತಮ್ಮ ನಿವಾಸಕ್ಕೆ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ (Breakfast Meeting) ಕರೆದು ಬುದ್ಧಿವಾದವನ್ನೂ ಹೇಳಿದ್ದಾರೆ. ಈ ನಡುವೆ ಸಿಎಂ ಗಾದಿ ಬಗ್ಗೆ ಆಗಾಗ ಹೇಳಿಕೆ ನೀಡುತ್ತಿದ್ದ ಸಹಕಾರಿ ಸಚಿವ ಕೆ.ಎನ್.‌ ರಾಜಣ್ಣ (KN Rajanna) ಅವರನ್ನು ಕರೆದ ಸಿಎಂ ಸಿದ್ದರಾಮಯ್ಯ, ಮೊದಲು ನೀವು ಸುಮ್ಮನಿರಬೇಕು ಎಂದು ಹೇಳಿದ್ದಾರೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಸಹಮತ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೀವು ಮಾತನಾಡುತ್ತಾ ಹೋದರೆ ಎಲ್ಲ ಸಚಿವರೂ ಮಾತನಾಡುತ್ತಾರೆ. ಹೀಗಾಗಿ ನೀವು ಮಾತನಾಡೋದನ್ನು ಮೊದಲು ನಿಲ್ಲಿಸಿ. ಆಗ ಎಲ್ಲವೂ ಸರಿ ಆಗುತ್ತದೆ ಎಂದು ಸಚಿವ ರಾಜಣ್ಣ ನೋಡುತ್ತಾ ಹೇಳಿದರು. ಅಲ್ಲದೆ, ಯಾರು ಬಹಿರಂಗ ಹೇಳಿಕೆ ನೀಡಬೇಡಿ. ಇವತ್ತೇ ನಿಲ್ಲಿಸಿ ಎಂದು ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದರು. ಆಗ ಸಿಎಂ‌ ಸಿದ್ದರಾಮಯ್ಯ ಮಾತಿಗೆ ಸಹಮತ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್‌, ಯಸ್, ಯಸ್ ಎಂದು ಸುಮ್ಮನಾದರು.

ರಾಜಣ್ಣರನ್ನು ಕಿಚಾಯಿಸಿದ ಡಿಕೆಶಿ

ಕಾವೇರಿ ನಿವಾಸದ ಆವರಣದೊಳಗೆ ನೂತನವಾಗಿ ನಿರ್ಮಿಸಿರುವ ಕಾನ್ಫರೆನ್ಸ್ ಹಾಲ್ ಅನ್ನು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದರು. ಇಲ್ಲಿ ಟೇಪ್ ಕತ್ತರಿಸುವುದಕ್ಕೂ ಮುನ್ನ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸಚಿವ ಕೆ.ಎನ್. ರಾಜಣ್ಣ ಅವರನ್ನು ಕಿಚಾಯಿಸಿದರು.

ಇದನ್ನೂ ಓದಿ: Vistara Kannada Sambhrama : ವಿಭಿನ್ನತೆಯಿಂದ ಪ್ರಜ್ಞಾವಂತರ ಮುಟ್ಟುವಲ್ಲಿ ವಿಸ್ತಾರ ನ್ಯೂಸ್‌ ಯಶಸ್ವಿ; ಹರಿಪ್ರಕಾಶ್‌ ಕೋಣೆಮನೆ

ಕಾನ್ಫರೆನ್ಸ್ ಹಾಲ್ ಟೇಪ್ ಕತ್ತರಿಸಲು ಸಿದ್ಧತೆಗಳು ನಡೆದಿದ್ದವು, ಟೇಪ್ ಕತ್ತರಿಸಲು ಕತ್ತರಿಯನ್ನು ಸಿಎಂ ಸಿದ್ದರಾಮಯ್ಯ ಅವರು ಖುದ್ದು ಡಿಸಿಎಂ ಕೈಗೆ ನೀಡಿದರು. ಕೆಪಿಸಿಸಿ ಅಧ್ಯಕ್ಷರು ನೀವೇ. ಹೀಗಾಗಿ ನೀವೇ ಕತ್ತರಿಸಿ ಎಂದು ಹೇಳಿ ಕತ್ತರಿ ಕೊಟ್ಟರು. ಆಗ ಹಿಂದೆಯೇ ನಿಂತಿದ್ದ ಸಚಿವ ಕೆ.ಎನ್. ರಾಜಣ್ಣ ಅವರನ್ನು ಕಿಚಾಯಿಸಿದ ಡಿ.ಕೆ. ಶಿವಕುಮಾರ್‌, ರಾಜಣ್ಣ ಎಲ್ಲಪ್ಪ ಎಂದು ಹಾಸ್ಯಭರಿತವಾಗಿ ಕೇಳಿದರು. ಅದಕ್ಕೆ ರಾಜಣ್ಣ, “ನೋಡ್ರಿ ನನ್ನನ್ನು ಹೇಗೆ ಕೆಣಕುತ್ತಾರೆ” ಎಂದು ನಯವಾಗಿಯೇ ಹೇಳಿದರು. ಬಳಿಕ ಡಿಕೆಶಿ, ಎಲ್ಲರೂ ಚಪ್ಪಾಳೆ ತಟ್ಟಿ ಎಂದು ಹೇಳಿ ಟೇಪ್ ಕತ್ತರಿಸಿದರು.

Exit mobile version