Site icon Vistara News

Karnataka Politics: ಕರ್ನಾಟಕದ 25 ಬಿಜೆಪಿ ಸಂಸದರು ದಂಡಪಿಂಡಗಳು ಎಂದ ಬಿ.ವಿ. ಶ್ರೀನಿವಾಸ್‌

BV Sreenivas

#image_title

ನವ ದೆಹಲಿ: ರಾಜ್ಯದ 25 ಬಿಜೆಪಿ ಸಂಸದರು (Member of parliament) ದಂಡ ಪಿಂಡಗಳಂತೆ (Waste bodies) ಇದ್ದಾರೆ. ಯಾವುದನ್ನೂ ಯಾವುದನ್ನು ಸಹ ಕೇಳುವ ಧೈರ್ಯ ಇಲ್ಲ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ (BV Sreenivas) ಮೂದಲಿಸಿದ್ದಾರೆ.

ನವ ದೆಹಲಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದ ಜನರು ಬಿಜೆಪಿಗೆ ಮತ ಹಾಕದಿದ್ದರೆ ಕೇಂದ್ರದ ನೆರವು ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರೇ ಎಚ್ಚರಿಕೆ ನೀಡಿದ್ದು, ಅದು ಈಗ ನಿಜವಾಗುತ್ತಿದೆ. ಕೇಂದ್ರ ಸರ್ಕಾರ ಅಸಹಕಾರ ಧೋರಣೆಯನ್ನು ತಾಳಿದೆ. ಆದರೆ, ಇದನ್ನು ಪ್ರಶ್ನಿಸುವ ಧೈರ್ಯ ನಮ್ಮ ಯಾವ ಸಂಸದರಿಗೂ ಇಲ್ಲ ಎಂದು ಶ್ರೀನಿವಾಸ್‌ ಹೇಳಿದರು.

ʻʻನಮ್ಮ ಶಕ್ತಿ ಯೋಜನೆ ನೋಡಿ ಬಿಜೆಪಿ ನಾಯಕರಿಗೆ ಭಯ ಶುರುವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲ್ತಿವಿ, ಕಾಂಗ್ರೆಸ್ 25 ಸೀಟ್ ಗೆಲ್ಲಲಿದೆ ಅಂತ ಅವರಿಗೆ ಆತಂಕವಾಗಿದೆ. ಹೀಗಾಗಿ ಈ ರೀತಿಯಲ್ಲಿ ಬಿಜೆಪಿ ಕೇಂದ್ರ ನಾಯಕರು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆʼʼ ಎಂದು ಹೇಳಿದ ಶ್ರೀನಿವಾಸ್‌ ಅವರು, ʻʻಬಿಜೆಪಿ ಸಂಸದರು ತಿನ್ನೋ ಅಕ್ಕಿಯಲ್ಲಿ ರಾಜಕೀಯ ಮಾಡೋದು ಬಿಡಬೇಕು. ಅವ್ರು ಈ ರೀತಿ ಮಾಡದಿದ್ದರೆ, ವಿಧಾನಸಭೆ ಎಲೆಕ್ಷನ್ ನಲ್ಲಿ ಹೇಗೆ ಶಿಕ್ಷೆ ಕೊಟ್ಟರೋ, ಅದೇ ರೀತಿ ಲೋಕಸಭಾ ಚುನಾವಣೆಯಲ್ಲೂ ಆಗುತ್ತದೆʼʼ ಎಂದು ಎಚ್ಚರಿಸಿದರು.

ʻʻಬಿಜೆಪಿ ರಾಜ್ಯದ ವಿಚಾರದಲ್ಲಿ ಅನುಸರಿಸುತ್ತಿರುವ ತಾರತಮ್ಯ ಧೋರಣೆ ಬಿಡಬೇಕು. ಕರ್ನಾಟಕಕ್ಕೆ ಅಕ್ಕಿ ಸ್ಟಾಪ್ ಮಾಡಿದ್ರೆ, ನಮ್ಮ ರಾಜ್ಯದ ಜನರೇ ಅವರಿಗೆ ಬುದ್ಧಿ ಕಲಿಸುತ್ತಾರೆʼʼ ಎಂದು ಹೇಳಿದರು ಬಿ.ವಿ. ಶ್ರೀನಿವಾಸ್‌.

ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ

ಭಾರತೀಯ ಯುವ ಕಾಂಗ್ರೆಸ್ ವತಿಯಿಂದ ಜುಲೈ 10, 11, 12ರಂದು ಬೆಹತರ್ ಭಾರತ್ ಕಿ ಬುನಿಯಾದ್ (ಭರವಸೆಯ ಭಾರತಕ್ಕೆ ಬುನಾದಿ ) ಎಂಬ ಕಾರ್ಯಕ್ರಮವನ್ನು ಬೆಂಗಳೂರಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀನಿವಾಸ್‌ ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಈ ಚಿಂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಕಾಂಗ್ರೆಸ್ ಹೇಗೆ ಲೋಕಸಭಾ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬಂತೆ ಚರ್ಚೆ ನಡೆಸಿ ರೋಡ್ ಮ್ಯಾಪ್ ಸಿದ್ದಪಡಿಸಲಾಗುತ್ತದೆ. ಬೂತ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಸಲುವಾಗಿ, ಪಕ್ಷ ಸಂಘಟನೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಈ ಸಂಕಲ್ಪ ಮಾಡಿದ್ದೇವೆ ಎಂದು ಶ್ರೀನಿವಾಸ್‌ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ 3-4 ಸಾವಿರ ಪದಾಧಿಕಾರಿಗಳು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದೊಡ್ಡ ದೊಡ್ಡ ನಾಯಕರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಅನ್ನ ಭಾಗ್ಯ ಅಕ್ಕಿಗೆ ಸಂಬಂಧಿಸಿ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ನಡುವೆ ದೊಡ್ಡ ಮಟ್ಟದ ವಾಕ್ಸಮರ ನಡೆಯುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಕೇಂದ್ರ ಸರ್ಕಾರ ಕೊನೆಯ ಕ್ಷಣದಲ್ಲಿ ತನ್ನ ನಿಲುವು ಬದಲಾವಣೆ ಮಾಡಿದ್ದನ್ನು ರಾಜಕೀಯ ದ್ವೇಷ ಸಾಧನೆ ಎಂದು ಆರೋಪಿಸುತ್ತಿದ್ದಾರೆ. ಬಿಜೆಪಿ ನಾಯಕರು ಮಾತ್ರ ಯಾವತ್ತೂ ಕೇಂದ್ರ ಸರ್ಕಾರ ಅಕ್ಕಿ ಕೊಡುವ ವಾಗ್ದಾನ ಮಾಡಿಲ್ಲ ಎಂದು ವಾದಿಸುತ್ತಿದ್ದಾರೆ. ಹಾಗಿದ್ದರೆ ನೀವು ಕೇಂದ್ರ ಸರ್ಕಾರವನ್ನು ನಂಬಿಕೊಂಡು ಅಕ್ಕಿ ಕೊಡುವ ಭರವಸೆ ನೀಡಿದ್ದಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : Karnataka Politics : ಅಕ್ಕಿ ಕೊಡದ ಕೇಂದ್ರದ ವಿರುದ್ಧ ಜೂ. 20ರಂದು ಕಾಂಗ್ರೆಸ್‌ ಉಗ್ರ ಹೋರಾಟ

Exit mobile version