ಬೆಂಗಳೂರು: ರಾಜ್ಯ ಸಚಿವ ಸಂಪುಟ ಪ್ರಕ್ರಿಯೆಯಲ್ಲಿ ತಮ್ಮವರನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (DK shivakumar) ತಿಕ್ಕಾಟ ದೆಹಲಿಯಲ್ಲಿ ಮುಂದುವರಿದಿದೆ. ದೆಹಲಿಯಿಂದ ಶುಕ್ರವಾರ ಖಾಸಗಿ ಕಾರ್ಯಕ್ರಮಕ್ಕಾಗಿ ವಾಪಸ್ಸಾಗಿರುವ ಡಿ.ಕೆ ಶಿವಕುಮಾರ್, ಇಂದು ಮತ್ತೆ ರಾಷ್ಟ್ರ ರಾಜಧಾನಿಗೆ ಮರಳಲಿದ್ದಾರೆ.
ದೆಹಲಿಯಿಂದ ಬಂದಿದ್ದೀನೆ, ವಾಪಸ್ಸು ಹೋಗಬೇಕು. ನಮ್ಮ ಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮ ಇದೆ. ಅದನ್ನು ಮುಗಿಸಿಕೊಂಡು ನಾಳೆ ಹೋಗ್ತೇನೆ. ಕ್ಯಾಬಿನೆಟ್ ರಚನೆ ಚರ್ಚೆಗಾಗಿಯೇ ದೆಹಲಿಗೆ ಹೋಗಿದ್ದೆ. ನಾಳೆ ಒಂದು ದಿನ ಅಷ್ಟೇ, ಎಲ್ಲವನ್ನೂ ತಿಳಿಸುತ್ತೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಸರ್ಕಾರದ ಗ್ಯಾರಂಟಿಗಳ ವಿರುದ್ಧ ಮೈಸೂರು ಸಂಸದ ಪ್ರತಾಪ್ ಸಿಂಹ ಕಿಡಿ ಕಾರಿರುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪ್ರತಿಭಟನೆ ಮಾಡಲಿ ಎಂದಿದ್ದಾರೆ. ಗ್ಯಾರಂಟಿಗಳನ್ನು ಈಡೇರಿಸದಿದ್ದರೆ ಜೂನ್ ನಂತರ ಪ್ರತಿಭಟನೆ ಮಾಡುವುದಾಗಿ ಪ್ರತಾಪ್ ಸಿಂಹ ಹೇಳಿದ್ದರು. ಇಲ್ಲೇ ನಮ್ಮ ಮನೆ ಹತ್ತಿರ ಬಂದು ಮಲಗಿಕೊಳ್ಳುವುಕ್ಕೆ ಹೇಳಿ. ಜೂನ್ ಯಾಕೆ, ನಾಳೆಯಿಂದಲೇ ಬಂದು ಮಲಗಿಕೊಳ್ಳಲು ಹೇಳಿ ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.
ಕುಟುಂಬದ ಖಾಸಗಿ ಕೆಲಸದ ಮೇಲೆ ಗುರುವಾರ ರಾತ್ರಿ ದೆಹಲಿಯಿಂದ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದ ಡಿಸಿಎಂ, ಬೆಳಗ್ಗೆ ಆರು ಗಂಟೆಗೆ ಮನೆಯಿಂದ ತೆರಳಿದ್ದಾರೆ. ಇಂದು ಮತ್ತೆ ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ.
ಇದನ್ನೂ ಓದಿ: Karnataka Politics: ದಿಲ್ಲಿಯಲ್ಲಿ ಸಂಪುಟ ಸರ್ಕಸ್; ಯಾರಿಗೆ ಅವಕಾಶ? ಯಾರಿಗೆ ಗೇಟ್ ಬಂದ್?