Site icon Vistara News

Karnataka Politics : ನನ್ನ ಅಧಿಕಾರದ ಬಗ್ಗೆ ಚಿಂತಿಸಬೇಡಿ; ಪಕ್ಷಕ್ಕಾಗಿ ಕೆಲಸ ಮಾಡೋಣ: ಡಿ.ಕೆ. ಶಿವಕುಮಾರ್

dk shivakumar infront of vidhana soudha

ಬೆಂಗಳೂರು: ನನಗೆ ಅಧಿಕಾರ ಸಿಗುತ್ತದೆಯೋ ಇಲ್ಲವೋ? ಅದರ ಬಗ್ಗೆ ನೀವು (ಕಾರ್ಯಕರ್ತರು) ತಲೆಕೆಡಿಸಿಕೊಳ್ಳುವುದು ಬೇಡ. ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದು ಕಾಂಗ್ರೆಸ್‌ ಕಾರ್ಯಕರ್ತರಿಗೆ (Congress workers) ಡಿ.ಕೆ. ಶಿಮಕುಮಾರ್‌ ಕರೆ ನೀಡಿದರು. ಈ ಮೂಲಕ ತಮಗೆ ಹುದ್ದೆ ಮುಖ್ಯವಲ್ಲ, ಪಕ್ಷ ಮುಖ್ಯ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ. ರಾಜ್ಯ ರಾಜಕೀಯದಲ್ಲಿ (Karnataka Politics) ಸಿಎಂ ಹುದ್ದೆ ಚರ್ಚೆ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರ ಈ ಹೇಳಿಕೆ ಅಚ್ಚರಿ ಮೂಡಿಸಿದೆ. ಅಲ್ಲದೆ, ತಮಗೆ ಪಕ್ಷ ಮೊದಲು ಎಂಬ ಸಂದೇಶವನ್ನು ಅವರು ಈ ರೀತಿಯಾಗಿ ನೀಡಿದ್ದಾರೆ.

ಇಂದಿರಾ ಗಾಂಧಿ ಪುಣ್ಯ ಸ್ಮರಣೆ (Indira Gandhi death anniversary) ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ. ಶಿವಕುಮಾರ್‌, ನೆಹರು ಅವರ ಬಳಿ ಎಷ್ಟೆಲ್ಲ ಆಸ್ತಿ ಇತ್ತು. ಈಗ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬಳಿ ಏನೂ ಇಲ್ಲ. ಎಲ್ಲವನ್ನೂ ಅವರು ತ್ಯಾಗ ಮಾಡಿದ್ದಾರೆ. ಬಿಜೆಪಿ ಅವರು ಒಂದು ಸೈಟನ್ನು ಸಹ ತ್ಯಾಗ ಮಾಡಿಲ್ಲ ನಾನು ನನ್ನ ಕಾರ್ಯಕರ್ತರಿಗೆ ಹೇಳುವುದೇನೆಂದರೆ ಎಲ್ಲರೂ ಸೇರಿ ಪಕ್ಷಕ್ಕೆ ದುಡಿಯೋಣ. ನನಗೆ ಅಧಿಕಾರ ಸಿಗುತ್ತದೆಯೋ? ಇಲ್ಲವೋ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಹೇಳಿದರು.

ಇಂಡಿಯಾ ಅಂದ್ರೆ ಅದು ಇಂದಿರಾ (ಇಂದಿರಾ ಗಾಂಧಿ). ಈಗ ಇಂಡಿಯಾ ಹೆಸರು ಬದಲಿಸಲು ಬಿಜೆಪಿ ಹೊರಟಿದೆ. ಆದರೆ, ನಾವು ಬದುಕಿನ ಜತೆ ಇರುತ್ತೇವೆ. ಬಿಜೆಪಿಯವರು ಭಾವನೆ ಜತೆ ಆಟವಾಡುತ್ತದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಈ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆ ಮೇಲೆ ಕುಳಿತವರು ಮಾತ್ರ ಗಣ್ಯರಲ್ಲ. ವೇದಿಕೆ ಮುಂದೆ ಕುಳಿತಿರುವವರೂ ಗಣ್ಯರೇ ಆಗಿದ್ದಾರೆ. ನಮ್ಮ ಎಲ್ಲ ಕಾರ್ಯಕರ್ತರು ಗಣ್ಯರೇ. ದೇಶ ಕಂಡ ಎರಡು ಮಹಾನ್ ಗಣ್ಯರ ದಿನ ಇಂದು ಎಂಬುದು ಖುಷಿಯ ವಿಚಾರ ಎಂದು ಹೇಳಿದರು.

ಇದನ್ನೂ ಓದಿ: Karnataka Rajyotsava : ಇಸ್ರೋ ಮುಖ್ಯಸ್ಥ ಸೋಮನಾಥ್‌ ಸೇರಿ 68 ಮಂದಿ, 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ

ಅಂದು ನಾನು ದೆಹಲಿಗೆ ಯೂತ್ ಕಾಂಗ್ರೆಸ್ ಕಾರ್ಯಕ್ರಮಕ್ಕಾಗಿ ರೈಲಿನಲ್ಲಿ ಹೋಗುತ್ತಾ ಇದ್ದೆ. ರೈಲು ಅರ್ಧಕ್ಕೆ ನಿಂತು ಕೊಂಡಿತು. ಯಾಕೆ ಅಂದಿದ್ದಕ್ಕೆ ಇಂದಿರಾ ಗಾಂಧಿ ಅವರ ಕಗ್ಗೊಲೆ ಆಗಿದೆ ಅನ್ನೋ ಸುದ್ದಿ ಬಂತು. ಹೊರಗೆ ದೇಶ ಹೊತ್ತಿ ಉರಿಯುತ್ತಿತ್ತು ನನ್ನನ್ನು ಬಂಧಿಸಿ ಮಲ್ಲೇಶ್ವರಂ ಠಾಣೆಯಲ್ಲಿ ಇಟ್ಟಿದ್ದರು. ನಾನು ಕಾರು, ಬೈಕು, ತಗೋಬೇಕಿತ್ತು. ಬ್ಯಾಂಕ್‌ನವರು ಸಾಲ ಕೊಡುತ್ತಾ ಇರಲಿಲ್ಲ. ಸೇಟು ಹತ್ತಿರ ಬಡ್ಡಿಗೆ ದುಡ್ಡು ತಗೊಂಡು ವಾಹನ ಖರೀದಿ ಮಾಡಬೇಕಿತ್ತು. ಜನಾರ್ದನ್ ಪೂಜಾರಿ ಅವರು ಅಂದು ಸಾಲ ಮೇಳ ಶುರು ಮಾಡಿದರು. ಅಂದಿಗೆ ಆ ಯೋಜನೆ ಸಾಕಷ್ಟು ಜನಪ್ರಿಯ ಆಗಿತ್ತು. ನಾನು ಸಾಲ ಮೇಳದ ಹೆಸರು ಹೇಳಿಕೊಂಡೆ ಚುನಾವಣೆ ಗೆದ್ದು ಬಂದೆ. ಬ್ಯಾಂಕ್‌ಗಳ ರಾಷ್ಟ್ರೀಕರಣ ಆಗಿದ್ದೇ ಇಂದಿರಾ ಗಾಂಧಿ ಅವರಿಂದ ಎಂಬುದಾಗಿದೆ. ಇಂದು ಎಲ್ಲರ ಕೈಯಲ್ಲಿ ಮೊಬೈಲ್ ಇದೆ. ಸಾಲ ಬೇಕಾ ಅಂತ ಕರೆ ಮಾಡ್ತಾರೆ. ಇದಕ್ಕೆಲ್ಲ ಕಾರಣ ಇಂದಿರಾ ಗಾಂಧಿ ಅವರೇ ಆಗಿದ್ದಾರೆ ಎಂದು ಹೇಳಿದರು.

Exit mobile version