ರಾಮನಗರ: ರಾಜ್ಯ ರಾಜಕೀಯದಲ್ಲಿ (Karnataka Politics) ಸದಾ ಒಂದಿಲ್ಲೊಂದು ವಿಷಯದಲ್ಲಿ ಕಿತ್ತಾಟ ನಡೆಸುತ್ತಿದ್ದ ರಾಜಕೀಯ ಬದ್ಧ ವೈರಿಗಳಾದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹಾಗೂ ಸಂಸದ ಡಿ.ಕೆ. ಸುರೇಶ್ ರಾಮನಗರದಲ್ಲಿ ಮುಖಾಮುಖಿಯಾಗಿದ್ದು, ಪರಸ್ಪರ ಕಿಚಾಯಿಸಿಕೊಂಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿ ವೀಕ್ಷಣೆಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆಗಮನ ಹಿನ್ನೆಲೆಯಲ್ಲಿ ಸಚಿವರಾದ ಅಶ್ವಥ್ ನಾರಾಯಣ್, ಗೋಪಾಲಯ್ಯ, ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಯೋಗೇಶ್ವರ್ ಆಗಮಿಸಿದ್ದರು. ಈ ವೇಳೆ ಸಿ.ಪಿ. ಯೋಗೇಶ್ವರ್ ಮತ್ತು ಸಂಸದ ಡಿ.ಕೆ. ಸುರೇಶ್ ಪರಸ್ಪರ ಹಸ್ತಲಾಘವ ಮಾಡಿಕೊಂಡಿದ್ದಾರೆ.
ಆಗ ಸಿ.ಪಿ. ಯೋಗೇಶ್ವರ್ ಅವರನ್ನು ಮಾತನಾಡಿದ ಡಿ.ಕೆ. ಸುರೇಶ್, “ಮೀಡಿಯಾ ಮುಂದೆ ಫುಲ್ ಮಿಂಚಿಂಗ್” ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, ನಿಮ್ಮಷ್ಟು ಇಲ್ಲ ಬಿಡಣ್ಣ ಎಂದು ಹೇಳಿದ್ದಾರೆ. ಅಲ್ಲದೆ, ಕನಕಪುರ ರಸ್ತೆ ಅರ್ಧಕ್ಕೇ ನಿಂತು ಹೋಯ್ತಲ್ಲಪ್ಪಾ, ನಮ್ ಮೈಸೂರು-ಬೆಂಗಳೂರು ರಸ್ತೆ ಆಯ್ತು. ಆದರೆ, ನಿಮ್ಮ ಕನಕಪುರ ರಸ್ತೆ ಮಾಡಿಸ್ರಪ್ಪಾ, ಸೌಂಡ್ ಮಾಡಪ್ಪ ಎಂದು ಹೇಳಿದರು.
ಇದನ್ನೂ ಓದಿ | Viral Post | ತಿಂಗಳಿಂದಲೂ ಮೂಗಲ್ಲಿ ರಕ್ತಸ್ರಾವ, ನೋವು ಎಂದು ವೈದ್ಯರ ಬಳಿ ಹೋದವನ ಮೂಗಿನೊಳಗೆ ನೋಡಿದ ವೈದ್ಯರೇ ಕಂಗಾಲು!
ಇದಕ್ಕೆ ನಗುತ್ತಲೇ ಉತ್ತರಿಸಿದ ಡಿ.ಕೆ. ಸುರೇಶ್, ಎಲ್ಲ ನಿಮ್ಮ ಬಿಜೆಪಿ ಅವರೇ ಕಂಟ್ರಾಕ್ಟರ್ ಅಲ್ವೇನಯ್ಯಾ, ಅವರೇ ಮಾಡಿಸಬೇಕು ಎಂದು ಹೇಳಿದ್ದಾರೆ. ಅದಕ್ಕೆ ಸಿಪಿವೈ, “ನೀವೇನು ಸುಮ್ನೆ ಬಿಡೋರು ಅಲ್ವಲ್ಲಾ…” ಎಂದು ಹೇಳಿದರು.
ಮಾತನಾಡದ ಅಶ್ವತ್ಥನಾರಾಯಣ-ಡಿ.ಕೆ. ಸುರೇಶ್
ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮನ ಹಿನ್ನೆಲೆಯಲ್ಲಿ ಹೆಲಿಪ್ಯಾಡ್‌ಗೆ ಸಚಿವ ಅಶ್ವಥ್ ನಾರಾಯಣ್ ಹಾಗೂ ಸಂಸದ ಡಿ.ಕೆ. ಸುರೇಶ್ ಬಂದಿದ್ದರು. ಆದರೆ, ಇಬ್ಬರೂ ಪರಸ್ಪರ ಮಾತನಾಡಲಿಲ್ಲ. ಸಂಸದ ಡಿ.ಕೆ. ಸುರೇಶ್‌ಗೆ ಅಶ್ವತ್ಥನಾರಾಯಣ್ ಗಂಡಸ್ತನದ ಸವಾಲೆಸಗಿದ್ದರು. ಆದರೆ, ಈ ವೇಳೆ ಇಬ್ಬರೂ ನಾಯಕರು ತಮ್ಮ ಬೆಂಬಲಿಗರ ಜತೆ ಪರಸ್ಪರ ಮಾತನಾಡುವುದರಲ್ಲಿ ನಿರತರಾಗಿದ್ದುದು ಕಂಡು ಬಂತು.
ಇದನ್ನೂ ಓದಿ | Karnataka politics | ಹೌದು, ಸಿಎಂ ಬೊಮ್ಮಾಯಿ ಆರು ಕೋಟಿ ಜನರ ನಿಯತ್ತಿನ ನಾಯಿ ಎಂದ ಸಚಿವ ಸುಧಾಕರ್!