Site icon Vistara News

Karnataka Politics : ಕಲೆಕ್ಷನ್‌ ಕೊಡಿ ನಿಗಮ ಮಂಡಳಿ ಅಧಿಕಾರ ಪಡಿ; ಹರಾಜು ಕೂಗಿದ ಸಿದ್ದರಾಮಯ್ಯ!

BJP Tweet against CM Siddaramaiah government

ಬೆಂಗಳೂರು: “ಕಲೆಕ್ಷನ್‌ ಕೊಡಿ ನಿಗಮ – ಮಂಡಳಿ ಅಧಿಕಾರ ಪಡಿ!” ಹೀಗೊಂದು ಟ್ವೀಟ್‌ ಅನ್ನು ಬಿಜೆಪಿ ಕರ್ನಾಟಕ ಮಾಡಿದೆ. ರಾಜ್ಯ ರಾಜಕೀಯದಲ್ಲಿ (Karnataka Politics) ಕಮಿಷನ್‌ ಗಲಾಟೆ (Commission ruckus) ಕಳೆದೆರಡು ಸರ್ಕಾರದ ಅವಧಿಯಿಂದ ಕೇಳಿ ಬರುತ್ತಲೇ ಇದೆ. 10 ಪರ್ಸೆಂಟ್‌ ಸರ್ಕಾರದಿಂದ ಹಿಡಿದು 40 ಪರ್ಸೆಂಟ್‌ ಸರ್ಕಾರದ ವರೆಗೆ ಆರೋಪಗಳು ಕೇಳಿಬಂದವು. ಈಗ 60-80 ಪರ್ಸೆಂಟ್‌ ಸರ್ಕಾರ ಎಂಬ ಆರೋಪಗಳನ್ನೂ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಮಾಡುತ್ತಾ ಬರುತ್ತಿವೆ. ಇದೆಲ್ಲದರ ಜತೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಪೋಸ್ಟರ್‌ ವಾರ್‌ ಪ್ರಾರಂಭವಾಗಿದೆ. ವಿವಿಧ ನಿಗಮ – ಮಂಡಳಿಗಳ ಪಟ್ಟಿಯ ಪೋಸ್ಟರ್‌ ಮಾಡಿರುವ ಬಿಜೆಪಿ (BJP Karnataka), ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಪ್ರತಿಯೊಂದಕ್ಕೂ ರೇಟ್‌ ಫಿಕ್ಸ್‌ ಮಾಡಿ ಹರಾಜು ಕೂಗುವಂತೆ ಸಿದ್ಧಪಡಿಸಲಾಗಿದೆ. ಬಿಡಿಎಗೆ 50 ಕೋಟಿ ರೂಪಾಯಿ, ಬಿಡಬ್ಲ್ಯುಎಸ್‌ಎಸ್‌ಬಿಗೆ 45 ಕೋಟಿ ರೂಪಾಯಿ ಹೀಗೆ ಪಟ್ಟಿಯನ್ನು ಮಾಡಿ ಮಂಡಳಿಯನ್ನು ಹರಾಜಿಗೆ ಹಾಕುತ್ತಿದೆ ಎಂದು ದೂರಿದೆ. ಇದಕ್ಕೆ ಈಗ ಕಾಂಗ್ರೆಸ್‌ ಕರ್ನಾಟಕ (Congress Karnataka) ತಿರುಗೇಟು ನೀಡಿದ್ದು, ಹರಾಜು, ಖರೀದಿ, ಮಾರಾಟ, ಇವೆಲ್ಲವೂ ಬಿಜೆಪಿಯ ಪೇಟೆಂಟ್! ಬೇಕಿದ್ದರೆ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಅವರನ್ನೇ ಕೇಳಿ ನೋಡಿ ಎಂದು ಪ್ರತ್ಯುತ್ತರ ನೀಡಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ಈ ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಿದೆ. ಫೋನ್‌ ಕರೆ ಮೂಲಕವೇ ನಿಭಾಯಿಸುತ್ತಿದೆ. ನಿಗಮ – ಮಂಡಳಿ ಹುದ್ದೆಗಳಿಗೆ (Corporation Board Post) ಹರಾಜು ಕೂಗಲು ಶುರು ಮಾಡಿದ್ದಾರೆ ಎಂದು ಆರೋಪಿಸಿದೆ.

ಬಿಜೆಪಿ ಟ್ವೀಟ್‌ನಲ್ಲೇನಿದೆ?

“ಈಗಾಗಲೇ ವರ್ಗಾವಣೆಯನ್ನು ಫೋನ್‌ ಕರೆಯಲ್ಲೇ ನಿಭಾಯಿಸುವ ವ್ಯವಸ್ಥಿತ ದಂಧೆಯನ್ನಾಗಿ ಮಾಡಿಕೊಂಡಿರುವ
ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ನಿಗಮ – ಮಂಡಳಿ ಹರಾಜಿಗೆ ಇಷ್ಟು ದಿನ ಕಾಯುತ್ತಿತ್ತು. ಈ ಹಿಂದೆ ವ್ಯವಹಾರ ಸರಿಯಾಗಿ ಕುದುರದ ಕಾರಣ ಮುಂದೂಡಲಾಗಿದ್ದ ನಿಗಮ ಮಂಡಳಿ ಹುದ್ದೆಗಳ ಹರಾಜು ಪ್ರಕ್ರಿಯೆ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ದೆಹಲಿಯಿಂದ ಬಂದು ಸಮಾಲೋಚನೆಗಳನ್ನು ನಡೆಸಿದ್ದಾರೆ. ಪರಿಣಾಮವಾಗಿ ನಿಗಮ ಮಂಡಳಿ ಹುದ್ದೆಗೆ ಕೊಡಬೇಕಾದ ಕಲೆಕ್ಷನ್‌ ಪ್ರಮಾಣ ಮತ್ತೆ ಚರ್ಚೆಗೆ ಬಂದಿದೆ” ಎಂದು ಬಿಜೆಪಿ ಟ್ವೀಟ್‌ ಮೂಲಕ ಕುಟುಕಿದೆ.

ಯಾವ ನಿಗಮ – ಮಂಡಳಿಗೆ ಎಷ್ಟು ರೇಟ್‌? ಇಲ್ಲಿದೆ ಬಿಜೆಪಿ ರೂಪಿಸಿದ ಪೋಸ್ಟರ್‌!

ಸರ್ಕಾರದ ವಿರುದ್ಧ ಬಿಜೆಪಿಯಿಂದ ರೇಟ್ ಕಾರ್ಡ್ ರಿಲೀಸ್..!|Release Of Rate Card By BJP Against The Govt..!

ಕಾಂಗ್ರೆಸ್‌ ತಿರುಗೇಟು!

ನಿಗಮ- ಮಂಡಳಿಗೆ ರೇಟ್‌ ಫಿಕ್ಸ್‌ ಹಾಗೂ ಹರಾಜು ಹಾಕಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್‌ ಕರ್ನಾಟಕ ತಿರುಗೇಟು ನೀಡಿದ್ದು, “ಹರಾಜು, ಖರೀದಿ, ಮಾರಾಟ, ಇವೆಲ್ಲವೂ ಬಿಜೆಪಿಯ ಪೇಟೆಂಟ್! ಬೇಕಿದ್ದರೆ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನೇ ಕೇಳಿ ನೋಡಿ ಎಂದು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಇದನ್ನೂ ಓದಿ: Caste Census : ಜಾತಿ ವರದಿ ಬಿಡುಗಡೆಗೆ ಸಿಎಂ – ಡಿಸಿಎಂ ಡಿಶುಂ; ಯಾವ ಶಾಸಕ – ಸಚಿವರು ಯಾರ ಕಡೆಗೆ?

ಬಿಜೆಪಿಯಲ್ಲಿ ಸಿಎಂ ಹುದ್ದೆ ಮಾರಾಟ ಮಾಡಲಾಗಿತ್ತು ಎಂದವರು ಅವರೇ, ನನ್ನನ್ನು ಖರೀದಿಸಲು ಬಂದಿದ್ದರು ಎಂದಿದ್ದೂ ಅವರೇ, ಅಲ್ಲಿಗೆ ಜಗನ್ನಾಥ ಭವನದಲ್ಲಿ ಖರೀದಿ ಮತ್ತು ಮಾರಾಟ ಎರಡೂ ನಡೆಯುತ್ತವೆ ಎನ್ನುವುದು ಸ್ಪಷ್ಟವಾಗಿದೆ. ಅಂದಹಾಗೆ ಎಲೆಕ್ಷನ್ನಲ್ಲಿ ಕಲೆಕ್ಷನ್ ಜೋರಾಗಿತ್ತು ಎನ್ನುವುದು ಚೈತ್ರಾ ಪ್ರಕರಣದಿಂದ ತಿಳಿಯುತ್ತದೆ ಅಲ್ಲವೇ ಬಿಜೆಪಿಯವರೇ?? ಎಂದು ಕಾಲೆಳೆದಿದೆ.

Exit mobile version