ಸಿರುಗುಪ್ಪ/ಕುರುಗೋಡು (ಬಳ್ಳಾರಿ): ಗುಡುಗು ಸಿಡಿಲಿನ ಆಘಾತಕ್ಕೆ 6 ಮೇಕೆಗಳು ಸಾವನ್ನಪ್ಪಿದ್ದಲ್ಲದೆ, 6 ಕುರಿಗಳ ಕಾಲುಗಳು ಮುರಿದು ಹೋಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ರುದ್ರಪಾದ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಇದೇ ವೇಳೆ ವಿಜಯನಗರದ ಹೊಸಪೇಟೆಯಲ್ಲಿ ಸಿಡಿಲಿಗೆ ಶಾರ್ಟ್ ಸರ್ಕ್ಯೂಟ್ ಆಗಿ 35ಕ್ಕೂ ಹೆಚ್ಚು ಟಿವಿಗಳು, 20ಕ್ಕೂ ಅಧಿಕ ಫ್ರಿಜ್‌ಗಳು ನಾಶವಾಗಿವೆ.
ರುದ್ರಪಾದದ ಗ್ರಾಮದ ಬೀರಪ್ಪ ಎಂಬ ಕುರಿಗಾಹಿಗೆ ಸಂಬಂಧಿಸಿದ ಕುರಿಗಳು ಮೃತ ಪಟ್ಟಿವೆ. ಅಂದಾಜು 90 ಸಾವಿರ ನಷ್ಟ ಸಂಭವಿಸಲಾಗಿದೆ. ಬೀರಪ್ಪ ಬೆಳಗ್ಗೆ ಮೇಕೆಗಳನ್ನು ಮೇಯಿಸಲು ಹೋದಾಗ ಸಂಜೆ ಗುಡುಗು ಸಿಡಿಲು ಆರ್ಭಟಕ್ಕೆ 6 ಮೇಕೆಗಳು ಸಾವನಪ್ಪಿವೆ. ನಂತರ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊಸಪೇಟೆಯಲ್ಲಿ ಶಾರ್ಟ್ ಸರ್ಕ್ಯೂಟ್
ಹೊಸಪೇಟೆಯ ಚಪ್ಪರದಳ್ಳಿ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆಗೆ ಶಾರ್ಟ್ ಸರ್ಕ್ಯೂಟ್ ಆಗಿ 35 ಕ್ಕೂ ಹೆಚ್ಚು ಟಿವಿ, 20 ಕ್ಕೂ ಫ್ರೀಜ್, ಫ್ಯಾನ್‌ಗಳು ನಾಶವಾಗಿವೆ.
ಕಷ್ಟಪಟ್ಟು ಹಣ ಹೊಂದಿಸಿ ಖರೀದಿಸಿದ್ದ ಟಿವಿ, ಫ್ರೀಜ್, ಫ್ಯಾನ್ ಗಳು ಸುಟ್ಟು ನಾಶವಾಗಿರುವುದನ್ನು ಕಂಡು ಜನರು ತಲೆಯ ಮೇಲೆ ಕೈ ಹೊತ್ತು ಕುಳಿತ ದೃಶ್ಯ ಕಂಡುಬಂತು. ಹೈವೋಲ್ಟೇಜ್ ಕರೆಂಟ್ ಪಾಸ್ ಆಗಿರುವ ಕಾರಣಕ್ಕೆ ಈ ವಸ್ತುಗಳು ಸುಟ್ಟು ಹೋಗಿವೆ ಎನ್ನಲಾಗಿದೆ. ಈ ಪ್ರದೇಶದ ಜನರು ತಮ್ಮ ಮನೆಯಲ್ಲಿ ಸುಟ್ಟು ಹೋದ ವಸ್ತುಗಳನ್ನು ತಂದು ಬೀದಿಯಲ್ಲಿಟ್ಟು ನೋವು ತೋಡಿಕೊಂಡರು.
ಇನ್ನೂ ಮೂರು ದಿನ ಮಳೆ ಬೀಳಲಿದೆ
ಬೆಂಗಳೂರು: ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು, ಬೀದರ್, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಭಾರಿ (Weather Report) ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Weather update) ಮುನ್ಸೂಚನೆಯನ್ನು ನೀಡಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ನೆಚ್ಚರಿಕೆ ನೀಡಿದೆ. ಉಳಿದಂತೆ ಕೊಪ್ಪಳ, ವಿಜಯಪುರ, ಯಾದಗಿರಿ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆಯಾಗಲಿದೆ.
ಜತೆಗೆ ಚಿಕ್ಕಮಗಳೂರು, ಹಾಸನ, ಕೋಲಾರ, ಮೈಸೂರು ಹಾಗೂ ರಾಮನಗರ, ಶಿವಮೊಗ್ಗ, ತುಮಕೂರು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕರಾವಳಿಯಲ್ಲೂ ಮಳೆ ಮುಂದುವರಿಯಲಿದೆ.
ಇದನ್ನು ಓದಿ : Modi In Karnataka: ನರೇಂದ್ರ ಮೋದಿ ಭಾನುವಾರ ಎಲ್ಲೆಲ್ಲಿ ಪ್ರಚಾರ? ಇಲ್ಲಿದೆ ಪಿನ್ ಟು ಪಿನ್ ಮಾಹಿತಿ
karnataka-rain: Lightning kill 6 six goats in siruguppa, Electric items damaged in hospet