ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 106 ಕೊರೊನಾ ಪ್ರಕರಣಗಳು (Covid 19 Cases) ಪತ್ತೆಯಾಗಿವೆ. ಇದರಿಂದ ಕೋವಿಡ್ 19 ಸಕ್ರಿಯ ಪ್ರಕರಣಗಳ ಸಂಖ್ಯೆ 344ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿನಿಂದ ಗುಣಮುಖರಾಗಿ 33 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಾದ್ಯಂತ ಭಾನುವಾರ ಒಟ್ಟು 1,441 ಮಂದಿಗೆ ಕೋವಿಡ್ 19 ತಪಾಸಣೆ (RTPCR – 1,135 , RAT – 306) ನಡೆಸಲಾಗಿದ್ದು, ಈ ಪೈಕಿ 106 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ 95, ಚಾಮರಾಜನಗರ 1, ದಕ್ಷಿಣ ಕನ್ನಡ 2, ಮಂಡ್ಯ 1, ಮೈಸೂರು 6, ಶಿವಮೊಗ್ಗದಲ್ಲಿ 1 ಪ್ರಕರಣ ಪತ್ತೆಯಾಗಿದೆ.
ಒಟ್ಟು ಸಕ್ರಿಯ ಪ್ರಕರಣಗಳು 344 ಇದ್ದರೆ, ಈ ಪೈಕಿ ಬೆಂಗಳೂರಿನಲ್ಲೇ 297 ಪ್ರಕರಣಗಳು ಇವೆ. ಈ ಪೈಕಿ 323 ಮಂದಿ ಹೋಮ್ ಐಸೋಲೇಶನ್‌ನಲ್ಲಿದ್ದು, ಆಸ್ಪತ್ರೆಯಲ್ಲಿ 21 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿಂದು ಕೊರೊನಾ ಪಾಸಿಟಿವಿಟಿ ದರ ಶೇ. 7.35 ಇದೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಹೃದಯ ಜೋಪಾನ, ಅಪಾಯ ಹೆಚ್ಚಿಸಿದೆ ಕೊರೊನಾ
ರಾಜ್ಯದಲ್ಲಿ ಶನಿವಾರ 104 ಕೊರೊನಾ ಪಾಸಿಟಿವ್ ಪ್ರಕರಣಗಳು (Covid 19 Cases) ಪತ್ತೆಯಾಗಿದ್ದವು. ಸೋಂಕಿನಿಂದ ಗುಣಮುಖರಾಗಿ 8 ಮಂದಿ ಆಸ್ಪತ್ರೆಯಿಂದ ಶನಿವಾರ ಡಿಸ್ಚಾರ್ಜ್ ಆಗಿದ್ದರು. ಒಟ್ಟು 1,752 ಮಂದಿಗೆ ಕೋವಿಡ್ 19 ತಪಾಸಣೆ ನಡೆಸಲಾಗಿತ್ತು.
ಹೊಸ ವರ್ಷಾಚರಣೆಗೆ ಬಿಡುಗಡೆಯಾಗುತ್ತಾ ನೂತನ ಮಾರ್ಗಸೂಚಿ?
ಬೆಂಗಳೂರು: ಹೊಸ ವರ್ಷದ ಆಗಮನದ ಹೊತ್ತಲ್ಲೇ ಕೊರೊನಾ ಮಾರಿ ವೇಷ ಮರೆಸಿಕೊಂಡು ಮತ್ತೆ ಎಂಟ್ರಿಯಾಗಿದೆ. ಇತ್ತ ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಪಾಸಿಟಿವಿಟಿ ರೇಟ್ ಕೂಡ ಹೆಚ್ಚುತ್ತಲೇ ಇದೆ. ಇದೆಲ್ಲದರ ಮಧ್ಯೆ ನ್ಯೂ ಇಯರ್‌ಗೆ ಕೌಂಟ್ ಡೌನ್ ಶುರುವಾಗಿದ್ದು, ಈ ಹಿಂದೆ ಯಾವುದೇ ಮಾರ್ಗಸೂಚಿ ಇಲ್ಲ ಎಂದಿದ್ದ ಪಾಲಿಕೆ, ಇದೀಗ ಹೊಸ ವರ್ಷಕ್ಕೆ ಮಾರ್ಗಸೂಚಿ ಹೊರಡಿಸುವ ಸುಳಿವು ಕೊಟ್ಟಿದೆ.
ಡಿ. 27ರಂದು ತಾಂತ್ರಿಕ ಸಲಹಾ ಸಮಿತಿ ಸಭೆ
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೋವಿಡ್ ಹೊಸ ರೂಪಾಂತರಿಯ ಛಾಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 400 ಗಡಿ ದಾಟುವುದರಲ್ಲಿದೆ. ಡಿ.25ರಂದು ನಾಳೆ ಕ್ರಿಸ್‌ಮಸ್ ಕೂಡ ಇರೋದರಿಂದ ಹಲವೆಡೆ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರೋದರಿಂದ ಸೋಂಕು ಮತ್ತಷ್ಟು ಹರಡುವ ಭೀತಿ ಹೆಚ್ಚಾಗಿದೆ.
ಸದ್ಯ ಕೋವಿಡ್ ಏರಿಕೆಯಾಗ್ತಿರೋ ಹೊತ್ತಲ್ಲೇ ನ್ಯೂ ಇಯರ್ ಕೂಡ ಸಮೀಪಿಸುತ್ತಿದೆ. ಈ ಹಿಂದೆ ಹೊಸ ವರ್ಷಕ್ಕೆ ಪ್ರತ್ಯೇಕ ಗೈಡ್ ಲೈನ್ಸ್ ಬಿಡಲ್ಲ ಎಂದಿದ್ದ ಪಾಲಿಕೆ, ಇದೀಗ ವರಸೆ ಬದಲಿಸಿದೆ. ಸದ್ಯ ಕೇಸ್‌ಗಳ ಸಂಖ್ಯೆ ಹೆಚ್ಚುತ್ತಿರೋದರಿಂದ ಇದೇ ತಿಂಗಳ 27ನೇ ರಂದು ತಾಂತ್ರಿಕ ಸಲಹಾ ಸಮಿತಿ, ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಸಭೆ ನಡೆಸೋಕೆ ಸಜ್ಜಾಗಿದೆ. ಸಭೆ ಬಳಿಕ ನ್ಯೂ ಇಯರ್ ಗೈಡ್ ಲೈನ್ಸ್, ರೂಲ್ಸ್ ಭವಿಷ್ಯ ಹೊರಬೀಳಲಿದೆ.
ಇದನ್ನೂ ಓದಿ | Super Food For Winter: ಪ್ರತಿರೋಧಕ ಶಕ್ತಿ ಹೆಚ್ಚಳಕ್ಕೆ ಕಿತ್ತಳೆ ಹಣ್ಣನ್ನು ತಪ್ಪದೇ ತಿನ್ನಿ
ಇತ್ತ ನ್ಯೂ ಇಯರ್‌ಗೆ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿ ಹಲವೆಡೆ ಹೆಚ್ಚಿನ ಜನರು ಸೇರುತ್ತಾರೆ, ಈ ವೇಳೆ ಸದ್ದಿಲ್ಲದೇ ಸೋಂಕು ಪಸರಿಸೋ ಭೀತಿ ಎದುರಾಗಿದ್ದು, 27ರಂದು ನಡೆಯೋ ಸಭೆಯಲ್ಲಿ ಮಾಸ್ಕ್ ಧರಿಸುವಿಕೆ ಸೇರಿ ಕೆಲ ರೂಲ್ಸ್ ಜಾರಿ ಮಾಡೋ ಸಾಧ್ಯತೆಯಿದೆ. ಅತಿ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಹೆಚ್ಚು ನಿಗಾ ಇಡೋ ಸೂಚನೆ ಸಿಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ