Site icon Vistara News

Coronavirus News: ಬುಧವಾರ 201 ಕೋವಿಡ್ ಕೇಸ್‌; ರಾಜ್ಯದಲ್ಲಿ ಸೋಂಕು ತುಸು ಇಳಿಕೆ

covid 19

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 201 ಕೋವಿಡ್ ಪ್ರಕರಣಗಳು (Coronavirus News) ಪತ್ತೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಒಬ್ಬರು ಮೃತಪಟ್ಟಿದ್ದಾರೆ. ಇನ್ನು ಸೋಂಕಿನಿಂದ ಗುಣಮುಖರಾಗಿ 257 ಮಂದಿ ಡಿಸ್ಚಾರ್ಜ್ ಆಗಿದ್ದು, ಇದರಿಂದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 974ಕ್ಕೆ ಇಳಿಕೆಯಾಗಿದೆ.

ರಾಜ್ಯಾದ್ಯಂತ ಬುಧವಾರ ಒಟ್ಟು 7315 ಮಂದಿಗೆ ಕೋವಿಡ್‌ 19 ತಪಾಸಣೆ (RTPCR – 6557, RAT – 758) ನಡೆಸಲಾಗಿತ್ತು. ಈ ಪೈಕಿ 201 ಮಂದಿಗೆ ಸೋಂಕು ತಗುಲಿದ್ದು, ಮೈಸೂರಿನಲ್ಲಿ ಒಂದು ಸಾವು ದಾಖಲಾಗಿದೆ. ಒಟ್ಟು 974 ಕೋವಿಡ್‌ ಸಕ್ರಿಯ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 507 ಪ್ರಕರಣಗಳು ಇವೆ. 915 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದು, ಆಸ್ಪತ್ರೆಯಲ್ಲಿ 59 ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಮಂಗಳವಾರ 252 ಕೊರೊನಾ ಪ್ರಕರಣಗಳು (coronavirus News) ಪತ್ತೆಯಾಗಿದ್ದವು. ಸೋಂಕಿನಿಂದ ಇಬ್ಬರು ಮೃತಪಟ್ಟು, 441 ಮಂದಿ ಡಿಸ್ಚಾರ್ಜ್ ಆಗಿದ್ದರು.

ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ

ರಾಜ್ಯದಲ್ಲಿ ಮಂಗಳವಾರದವರೆಗೆ ಒಟ್ಟು ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ 1031 ಇತ್ತು. ಆದರೆ, ಬುಧವಾರ 257 ಮಂದಿ ಡಿಸ್ಚಾರ್ಜ್‌ ಆಗಿರುವುದರಿಂದ ಪ್ರಕರಣಗಳಲ್ಲಿ ತುಸು ಇಳಿಕೆ ಕಂಡುಬಂದಿದೆ. ಸದ್ಯ 974 ಕೊರೊನಾ ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.

ಇದನ್ನೂ ಓದಿ | Home Remedies For Winter Sickness: ಚಳಿಗಾಲದ ಸೋಂಕಿಗೆ ಉಪಯುಕ್ತ ಮನೆಮದ್ದು ಇಲ್ಲಿದೆ

ಬಳ್ಳಾರಿಯಲ್ಲಿ ಮಹಿಳೆ ಸಾವು

ಬಳ್ಳಾರಿ: ಬಳ್ಳಾರಿಯಲ್ಲಿ ಕರೊನಾ ಸೋಂಕಿನಿಂದ ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿದ್ದರು. ಬಳ್ಳಾರಿಯ 50 ವರ್ಷದ ಮಹಿಳೆ ಅಜುಂ ಮೃತರು. ಇವರು ಕೊಮಾರ್ಬಿಡಿಟೀಸ್‌ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಕೋವಿಡ್‌ ಸೋಂಕಿಗೆ ತುತ್ತಾಗಿ ಒಂದು ವಾರದಲ್ಲೇ ಅವರು ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಜಿಲ್ಲೆಯಲ್ಲಿ ಒಟ್ಟು 6 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಮಂಗಳವಾರ ಬಳ್ಳಾರಿಯಲ್ಲಿ 5, ಸಂಡೂರಿನಲ್ಲಿ 1 ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಕ್ರಿಯ ಕೇಸ್‌ಗಳ ಸಂಖ್ಯೆ 34ಕ್ಕೆ ಏರಿಕೆ ಕಂಡಂತೆ ಆಗಿದೆ. ಬಳ್ಳಾರಿ 21, ಕಂಪ್ಲಿ 1, ಸಂಡೂರು 9, ಸಿರುಗುಪ್ಪದಲ್ಲಿ 3 ಕೇಸ್ ಸಕ್ರಿಯವಾಗಿದೆ. ಹೀಗಾಗಿ ಕೋವಿಡ್ ಟೆಸ್ಟ್ ಹೆಚ್ಚಳ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ನೂರಾರು ಕೈಗಾರಿಕೆಗಳನ್ನು ಹೊಂದಿರುವ ಬಳ್ಳಾರಿಯಲ್ಲಿ ಹೊರ ರಾಜ್ಯದವರು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಬುಧವಾರ 6 ಮಂದಿಗೆ ಸೋಂಕು ದೃಢಪಟ್ಟಿದೆ.

Exit mobile version