Site icon Vistara News

Coronavirus News: ಸೋಮವಾರ 296 ಕೊರೊನಾ ಕೇಸ್‌ ಪತ್ತೆ; ರಾಜ್ಯಕ್ಕೆ 30 ಸಾವಿರ ಕೋರ್ಬಿವ್ಯಾಕ್ಸ್ ಲಸಿಕೆ

covid-19

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 296 ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. 50 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1245ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಆತಂಕ ಉಂಟು ಮಾಡಿರುವ ಹೊಸ ಕೋವಿಡ್ ಉಪತಳಿ ಜೆಎನ್‌ 1 ಪ್ರಕರಣಗಳಲ್ಲೂ ಹೆಚ್ಚಳ ಕಂಡುಬಂದಿದ್ದು, 199 ಮಂದಿಯಲ್ಲಿ ಜೆ.ಎನ್ 1 ವೈರಸ್ ದೃಢಪಟ್ಟಿದೆ.

ಜಿನೋಮ್‌ ಸೀಕ್ವೆನ್ಸ್‌ ಟೆಸ್ಟ್‌ಗೆ 601 ಸ್ಯಾಂಪಲ್ಸ್‌ಗಳ‌ನ್ನು ರವಾನೆ ಮಾಡಲಾಗಿತ್ತು. ಈ ಪೈಕಿ ಪೈಕಿ 262 ಮಂದಿಯ ವರದಿ ಪ್ರಕಟವಾಗಿದ್ದು, ಇವರಲ್ಲಿ 199 ಜನರಿಗೆ ಜೆ.ಎನ್ 1 ವೈರಸ್ ಸೋಂಕು ತಗುಲಿದೆ. ಅದೇ ರೀತಿ 28 ಜನರಿಗೆ ಎಕ್ಸ್‌ಬಿಬಿ ಉಪ ತಳಿ ಸೋಂಕು ಇದ್ದು, 35 ಮಂದಿಗೆ ಇತರ ರೂಪಾಂತರಿ ಸೋಂಕು ಪತ್ತೆಯಾಗಿದೆ.

ಅದೇ ರೀತಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 5021 ಜನರಿಗೆ ಕೋವಿಡ್‌ ಟೆಸ್ಟ್‌ ಮಾಡಲಾಗಿದ್ದು, ಈ ಪೈಕಿ 296 ಮಂದಿಗೆ ಸೋಂಕು ದೃಢಪಟ್ಟಿದೆ. ಕೋವಿಡ್‌ ಪಾಸಿಟಿವಿಟಿ ದರ ಶೇ. 5.89 ದಾಖಲಾಗಿದ್ದು, ಮರಣ ಪ್ರಮಾಣ ದರ ಶೇ. 0.33 ವರದಿಯಾಗಿದೆ.

ಇದನ್ನೂ ಓದಿ | Coronavirus News: ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್‌ ವಾರ್ಡ್‌ ಮೀಸಲಿಡಲು ಸರ್ಕಾರ ಸೂಚನೆ

30 ಸಾವಿರ ಕೋರ್ಬಿವ್ಯಾಕ್ಸ್ ಲಸಿಕೆ

ರಾಜ್ಯದಲ್ಲಿ COVID 19 ಹಾಗೂ JN.1 ರೂಪಾಂತರಿ ಆತಂಕದ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ 30 ಸಾವಿರ ಕೋರ್ಬಿವ್ಯಾಕ್ಸ್ ಲಸಿಕೆ ಸರಬರಾಜು ಮಾಡಲಾಗಿದೆ. ಕೋರ್ಬಿವ್ಯಾಕ್ಸ್ ಲಸಿಕೆಗಳನ್ನು ಜಿಲ್ಲೆಗಳಿಗೆ ಅವಶ್ಯಕತೆಗನುಸಾರವಾಗಿ ಹಂಚಿಕೆ ಮಾಡಲಾಗಿದೆ.

60 ವರ್ಷ ಮೇಲ್ಪಟ್ಟವರಿಗೆ, ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಗಳು ಮೀಸಲಾಗಿದ್ದು, ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲಾ ವತಿಯಿಂದ ನಿರ್ಣಯಿಸಲಾದ ತಾಲೂಕು ಆಸ್ಪತ್ರೆಗಳಿಗೆ ಮಾತ್ರ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸಿಂಹಪಾಲು ಲಭಿಸಿದೆ.

Exit mobile version