Site icon Vistara News

Drinking Age | ಮದ್ಯಸೇವನೆ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲು ಮುಂದಾದ ರಾಜ್ಯ ಸರ್ಕಾರ

sales

ಬೆಂಗಳೂರು: ಮದ್ಯ ಸೇವನೆಯಿಂದ ವಿವಿಧ ಆರೋಗ್ಯ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು ಉಂಟಾಗುತ್ತವೆ ಎನ್ನುವ ಮಾತಿನ ನಡುವೆಯೇ, ಮದ್ಯ ಸೇವನೆಗೆ ಸದ್ಯ ಇರುವ 21 ವರ್ಷವನ್ನು 18 ವರ್ಷಕ್ಕೆ ಇಳಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಕುರಿತು ಅಬಕಾರಿ ಇಲಾಖೆಯು ಕರ್ನಾಟಕ ರಾಜ್ಯಪತ್ರದಲ್ಲಿ ಕರಡು ಅಧಿಸೂಚನೆಯನ್ನು ಜನವರಿ 9ರಂದು ಹೊರಡಿಸಿದೆ.

ಕರ್ನಾಟಕ ಅಬಕಾರಿ (ಸಾಮಾನ್ಯ ಪರವಾನಗಿ ನಿಬಂಧನೆಗಳು) ನಿಯಮಗಳು-2023ರ ಕರಡು ಪ್ರಕಟಿಸಿದೆ. ನಿಯಮ 10ರ ಉಪ ನಿಯಮ 1 (e) ಯಲ್ಲಿ, ಮದ್ಯ ಸೇವನೆಗೆ 21 ವರ್ಷವನ್ನು ನಿಗದಿಪಡಿಸಲಾಗಿತ್ತು. ಇದೀಗ 21ರ ಬದಲಿಗೆ 18 ವರ್ಷ ಎಂದು ಬದಲಾವಣೆ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ.

ಇದೂ ಸೇರಿ ಇನ್ನಿತರ ತಿದ್ದುಪಡಿಗಳ ಕುರಿತು ಸಾರ್ವಜನಿಕರ ಆಕ್ಷೇಪಣೆಗಳನ್ನು ಇಲಾಖೆ ಕೋರಿದೆ. ಕರಡು ಪ್ರಕಟವಾದ 30 ದಿನಗಳವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆನಂತರದಲ್ಲಿ ಸರ್ಕಾರ ಪರಾಮರ್ಶೆ ನಡೆಸಿ ಅಂತಿಮ ಅಧಿಸೂಚನೆ ಹೊರಡಿಸಲಿದೆ.

ದೇಶದ ವಿವಿಧ ರಾಜ್ಯಗಳಲ್ಲಿ ಮದ್ಯ ಸೇವನೆ ವಯಸ್ಸು ವಿಭಿನ್ನವಾಗಿದೆ. ಮಹಾರಾಷ್ಟ್ರದಲ್ಲಿ 25 ವರ್ಷ ಇದೆ, ದೆಹಲಿಯಲ್ಲಿ ಕಳೆದ ವರ್ಷವೇ 21ರಿಂದ 25ಕ್ಕೆ ಹೆಚ್ಚಿಸಿದೆ, ಉತ್ತರ ಪ್ರದೇಶದಲ್ಲಿ 21, ಕೇರಳದಲ್ಲಿ 2017ರಲ್ಲಿ 21ಕ್ಕೆ ಹೆಚ್ಚಿಸಲಾಗಿದೆ. ಕರ್ನಾಟಕದಲ್ಲಿ 18 ಇದ್ದದ್ದನ್ನು 21ಕ್ಕೆ 2015ರಲ್ಲಿ ಹೆಚ್ಚಿಸಲಾಗಿತ್ತು.

ಇದನ್ನೂ ಓದಿ | Hooch tragedy | ಬಿಹಾರ ವಿಷ ಮದ್ಯ ದುರಂತದಲ್ಲಿ 70 ತಲುಪಿದ ಸಾವಿನ ಸಂಖ್ಯೆ

Exit mobile version