ಬೆಂಗಳೂರು: ನೂತನ ವಿಧಾನಸಭೆ ನಾಲ್ಕನೇ ದಿನದ ಅಧಿವೇಶನಕ್ಕೆ ಸಜ್ಜಾಗಿದೆ. ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೆ, ಉತ್ತರ ಕರ್ನಾಟಕ ಮಳೆಗಾಗಿ ಪ್ರಾರ್ಥಿಸುತ್ತಿದೆ. ಇದೂ ಸೇರಿದಂತೆ ಇನ್ನೂ ಹಲವಾರು ರಾಜಕೀಯ ಮತ್ತಿತರ ಬೆಳವಣಿಗೆಗಳ ಕ್ಷಣಕ್ಷಣದ ಸುದ್ದಿ ಅಪ್‌ಡೇಟ್‌ಗಳಿಗೆ (Karnataka Live News) ಇಲ್ಲಿ ಗಮನಿಸಿ.
ಕರಾವಳಿಯಲ್ಲಿ ನಾಳೆ ರಣಮಳೆಯ ಎಚ್ಚರಿಕೆ
ಕರಾವಳಿಯಲ್ಲಿ ನೈರುತ್ಯ ಮುಂಗಾರು (Southwest monsoon) ತೀವ್ರಗೊಂಡಿದ್ದು, ಬುಧವಾರ ಒಂದೇ ದಿನ ದಕ್ಷಿಣ ಕನ್ನಡದ ಮೂಲ್ಕಿಯಲ್ಲಿ 33 ಸೆಂ.ಮೀ ಮಳೆಯಾಗಿರುವ (Rain News) ವರದಿಯಾಗಿದೆ. ಉಡುಪಿಯ ಕೋಟದಲ್ಲಿ 29, ಕಾರ್ಕಳದಲ್ಲಿ 25 ಸೆಂ.ಮೀ ಮಳೆ ಸುರಿದಿದೆ. ಉಡುಪಿ ಹಾಗೂ ಮಂಕಿ, ಪಟಂಬೂರಲ್ಲಿ ತಲಾ 23 ಸೆಂ.ಮೀ, ಮಂಗಳೂರಲ್ಲಿ 21 ಸೆಂ.ಮೀ ನಷ್ಟು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕಾಗಿದ್ದರೆ, ಉತ್ತರ ಒಳನಾಡಿನಲ್ಲಿ (Weather report) ಸಾಮಾನ್ಯವಾಗಿತ್ತು. ಮುಂದಿನ 24 ಗಂಟೆಯಲ್ಲಿ (ಜು.7ರಂದು) ರಾಜ್ಯದಲ್ಲಿ ವರುಣಾರ್ಭಟ (Rain News) ಜೋರಾಗಿ ಇರಲಿದೆ. ಬಿರುಗಾಳಿ ಸಹಿತ ಗುಡುಗು, ಮಿಂಚಿನ ಭಾರಿ ಮಳೆಯಾಗುವ ಎಚ್ಚರಿಕೆಯನ್ನು (Rain alert) ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಒಂದೆರಡು ಕಡೆಗಳಲ್ಲಿ ಇದು ದುಪ್ಪಟ್ಟಾಗಲಿದೆ.
Weather Report : ಕರಾವಳಿಯಲ್ಲಿ ನಾಳೆ ರಣಮಳೆಯ ಎಚ್ಚರಿಕೆ; ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
karnatakabudget2023: 14ನೇ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಸಿದ್ಧ: ಗ್ಯಾರಂಟಿಯಿಂದ ಜನರಿಗೆ ಎಷ್ಟು ಹೊರೆ?
ರಾಜ್ಯದ ಇತಿಹಾಸದಲ್ಲೆ ಅತಿ ಹೆಚ್ಚು ಬಾರಿ ಬಜೆಟ್ (Karnataka Budget 2023) ಮಂಡಿಸಿದ ಖ್ಯಾತಿಗೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಪಾತ್ರವಾಗಲಿದ್ದಾರೆ. ಈಗಾಗಲೆ 13 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. ಇದೀಗ 14ನೇ ಬಜೆಟ್ ಮಂಡಿಸಲಿದ್ದಾರೆ.
Karnataka Budget 2023: 14ನೇ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಸಿದ್ಧ: ಗ್ಯಾರಂಟಿಯಿಂದ ಜನರಿಗೆ ಎಷ್ಟು ಹೊರೆ?
H.D. Kumaraswamy: ಏನು ಶಿಕ್ಷೆ ಅಂತ ಹೇಳಲಿ, ಆಮೇಲೆ ಸಾಕ್ಷಿ ಬಿಡುಗಡೆ: ಪೆನ್‌ಡ್ರೈವ್ ಹಿಡಿದು ಸರ್ಕಾರಕ್ಕೆ HDK ಸವಾಲು
ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ತಿಳಿಸಲಿ, ನನ್ನ ಬಳಿಯಿರುವ ಪೆನ್‌ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ತಿಳಿಸಿದ್ದಾರೆ.
H.D. Kumaraswamy: ಏನು ಶಿಕ್ಷೆ ಅಂತ ಹೇಳಲಿ, ಆಮೇಲೆ ಸಾಕ್ಷಿ ಬಿಡುಗಡೆ: ಪೆನ್‌ಡ್ರೈವ್ ಹಿಡಿದು ಸರ್ಕಾರಕ್ಕೆ HDK ಸವಾಲು
Assembly Session : ಡ್ರೈವರ್ ಪ್ರಕರಣದಲ್ಲಿ ಎಚ್‌ಡಿಕೆ-ಚೆಲುವರಾಯಸ್ವಾಮಿ ಏಕವಚನದಲ್ಲಿ ಜಗಳ: ತನಿಖೆಗೆ ಸರ್ಕಾರ ಒಪ್ಪಿಗೆ
ನಾಗಮಂಗಲ ಡಿಪೊ ಕೆಎಸ್‌ಆರ್‌ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಚೆಲುವರಾಯಸ್ವಾಮಿ ಏಕವಚನದಲ್ಲೇ ಪರಸ್ಪರ ಬೈದುಕೊಂಡರು. ಸಾಕಷ್ಟು ಹೊತ್ತು ಮಾತಿನ ಚಕಮಕಿ ನಂತರ ಸ್ಪೀಕರ್ ಕಚೇರಿಯಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಯಿತು. ಸಾರಿಗೆ ಇಲಾಖೆಯ ಪ್ರಕರಣವನ್ನು ಹಿರಿಯ ಪೊಲೀಸ್ ಅಧಿಕಾರಿಯಿಂದ ಕೂಲಂಕಶ ತನಿಖೆ ನಡೆಸುವುದಾಗಿ ಗೃಹಸಚಿವ ಡಾ. ಜಿ. ಪರಮೇಶ್ವರ್ ಘೊಷಿಸಿದರು. ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಕುಮಾರಸ್ವಾಮಿ ಹೇಳಿದರು.
Assembly Session: ಡ್ರೈವರ್ ಪ್ರಕರಣದಲ್ಲಿ ಎಚ್‌ಡಿಕೆ-ಚೆಲುವರಾಯಸ್ವಾಮಿ ಏಕವಚನದಲ್ಲಿ ಜಗಳ: ತನಿಖೆಗೆ ಸರ್ಕಾರ ಒಪ್ಪಿಗೆ