ಬೆಂಗಳೂರು: ನೂತನ ವಿಧಾನಸಭೆ ನಾಲ್ಕನೇ ದಿನದ ಅಧಿವೇಶನಕ್ಕೆ ಸಜ್ಜಾಗಿದೆ. ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೆ, ಉತ್ತರ ಕರ್ನಾಟಕ ಮಳೆಗಾಗಿ ಪ್ರಾರ್ಥಿಸುತ್ತಿದೆ. ಇದೂ ಸೇರಿದಂತೆ ಇನ್ನೂ ಹಲವಾರು ರಾಜಕೀಯ ಮತ್ತಿತರ ಬೆಳವಣಿಗೆಗಳ ಕ್ಷಣಕ್ಷಣದ ಸುದ್ದಿ ಅಪ್‌ಡೇಟ್‌ಗಳಿಗೆ (Karnataka Live News) ಇಲ್ಲಿ ಗಮನಿಸಿ.
ಕುಸಿದು ಬಿದ್ದ ಸೇತುವೆಯಲ್ಲೇ ರೋಗಿಯ ಹೊತ್ತು ಸಾಗಿದ ಗ್ರಾಮಸ್ಥರು
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ (Rain news) ಮಳೆಯಾಗುತ್ತಿದ್ದು, ಬಹುತೇಕ ಕಡೆಗಳಲ್ಲಿ ಸೇತುವೆಗಳು ಮುಳುಗಡೆ ಆಗಿದ್ದರೆ, ಹಲವೆಡೆ ಕುಸಿದು ಹೋಗಿವೆ. ಜೋಯಿಡಾದ ಕಾತೇಲಿ ಗ್ರಾಮದಲ್ಲಿ ಸೇತುವೆ ಕುಸಿದಿದ್ದು, ವೇಗವಾಗಿ ಹರಿಯುತ್ತಿದ್ದ ನದಿಯಲ್ಲಿ ರೋಗಿಯೊಬ್ಬರನ್ನು ಸ್ಥಳಾಂತರ ಮಾಡಲು
ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಮೊದಮೊದಲು ವಾಹನದಲ್ಲಿ ಸ್ಥಳಾಂತರಿಸಲು ಮುಂದಾದರೂ ಆದರೆ ಸೇತುವೆ ಕುಸಿದ ಕಾರಣಕ್ಕೆ ರೋಗಿಯನ್ನು ಗ್ರಾಮಸ್ಥರೇ ಹೊತ್ತು ಆಸ್ಪತ್ರೆಗೆ ಸಾಗಿಸಿದ್ದಾರೆ.
Rain News : ಮಳೆ ಅವಾಂತರ; ಕುಸಿದು ಬಿದ್ದ ಸೇತುವೆಯಲ್ಲೇ ರೋಗಿಯ ಹೊತ್ತು ಸಾಗಿದ ಗ್ರಾಮಸ್ಥರು
Bus Driver : ಚಲುವರಾಯಸ್ವಾಮಿಗೆ ಕಂಟಕವಾದ ಬಸ್ ಡ್ರೈವರ್ ಟ್ರಾನ್ಸ್‌ಫರ್; ಏನಿದು ಪಾಲಿಟಿಕ್ಸ್?
ಮಂಡ್ಯ: ಕೆಎಸ್ಸಾರ್ಟಿಸಿಯ (KSRTC) ಮಂಡ್ಯ ವಿಭಾಗದ ನಾಗಮಂಗಲ ಘಟಕದಲ್ಲಿ ಚಾಲಕ ಕಮ್ ನಿರ್ವಾಹಕರಾಗಿರುವ (Bus conductor) ಜಗದೀಶ್ ಎಂಬವರನ್ನು ಮದ್ದೂರು ವಿಭಾಗಕ್ಕೆ ವರ್ಗಾವಣೆ ಮಾಡಿರುವ ವಿದ್ಯಮಾನ ಭಾರಿ ರಾಜಕೀಯ ಸಂಚಲನ ಸೃಷ್ಟಿ ಮಾಡಿದೆ. ಜಗದೀಶ್ ಅವರನ್ನು ನಾಗಮಂಗಲದ ಶಾಸಕರು ಮತ್ತು ಕೃಷಿ ಸಚಿವರಾಗಿರುವ ಚಲುವರಾಯ ಸ್ವಾಮಿ (Chaluvaraya swamy) ಅವರ ಸೂಚನೆಯಂತೆ ವರ್ಗಾವಣೆ ಮಾಡಲಾಗಿದೆ ಎಂದು ಸ್ವತಃ ಜಗದೀಶ್ ಅವರೇ ಹೇಳಿದ್ದಾರೆ.
ಕೈದಿಗಳ ತೊಡೆ ಸಂದಿಯಲ್ಲಿತ್ತು ಬ್ರೌನ್ ಶುಗರ್
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಗೆ (Parappana Agrahara Jail) ಮೊಬೈಲ್ ಹಾಗೂ ಮಾದಕ ವಸ್ತು ಸಾಗಾಟಕ್ಕೆ (Drug trafficking) ಪೊಲೀಸರೇ ಸಾಥ್ ನೀಡಿದ್ದು, ಇದೀಗ ಪೊಲೀಸ್ ಸಿಬ್ಬಂದಿ ಸೇರಿ ಆರೋಪಿಗಳ ಬಂಧನವಾಗಿದೆ. ಆರೋಪಿಗಳಿಂದ 8 ಮೊಬೈಲ್ ಹಾಗೂ 57 ಗ್ರಾಂ ಬ್ರೌನ್ ಶುಗರ್ ಜಪ್ತಿ ಮಾಡಲಾಗಿದೆ.
ಕೈದಿಗಳ ತೊಡೆ ಸಂದಿಯಲ್ಲಿತ್ತು ಬ್ರೌನ್ ಶುಗರ್ !; ಕಳ್ಳಾಟ ಆಡಿದ ಪೊಲೀಸರು ಜೈಲಲ್ಲಿ ಲಾಕ್
AssemblySession: ಬಿಜೆಪಿ ಅವಧಿಯಲ್ಲಿ 224 ಎಕರೆ ಗೋಮಾಳ ಪರಭಾರೆ: ಇಸ್ಕಾನ್, ಆದಿಚುಂಚನಗಿರಿ, ಸಿದ್ಧಗಂಗಾ, ರಾಷ್ಟ್ರೋತ್ಥಾನ, ಇತ್ಯಾದಿ
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ನಾಲ್ಕು ವರ್ಷ ಅವಧಿಯಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ ಒಟ್ಟು 224 ಎಕರೆ ಗೋಮಾಳವನ್ನು ಪರಭಾರೆ ಮಾಡಿಕೊಡಲಾಗಿದೆ. ಈ ಮಾಹಿತಿಯನ್ನು ವಿಧಾನಪರಿಷತ್ತಿನಲ್ಲಿ (Assembly Session) ಕಂದಾಯ ಇಲಾಖೆ ಲಿಖಿತವಾಗಿ ನೀಡಿದೆ.
Assembly Session: ಬಿಜೆಪಿ ಅವಧಿಯಲ್ಲಿ 224 ಎಕರೆ ಗೋಮಾಳ ಪರಭಾರೆ: ಇಸ್ಕಾನ್, ಆದಿಚುಂಚನಗಿರಿ, ಸಿದ್ಧಗಂಗಾ, ರಾಷ್ಟ್ರೋತ್ಥಾನ, ಇತ್ಯಾದಿ
AssemblySession: ಡ್ರೈವರ್ ಆತ್ಮಹತ್ಯೆ ಯತ್ನ ವಿಷಯದಲ್ಲಿ ರಾಜಕೀಯ ಹಗ್ಗಜಗ್ಗಾಟ: ಸರ್ಕಾರದ ವಿರುದ್ಧ ಮುಗಿಬಿದ್ದ BJP-JDS
ನಾಮಂಗಲ ಡಿಪೊದಲ್ಲಿ ಚಾಲಕನಾಗಿರುವ ಜಗದೀಶ್ ಆತ್ಮಹತ್ಯೆ ಯತ್ನ ವಿಚಾರದಲ್ಲಿ ಪ್ರತಿಪಕ್ಷ ಹಾಗೂ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ (Assembly Session) ವಾಕ್ಸಮರ ನಡೆಯಿತು. ಮುಖ್ಯವಾಗಿ ಸಚಿವ ಚೆಲುವರಾಯಸ್ವಾಮಿ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯ ಮಾಡಿದರೆ, ನಿಮ್ಮ ಕಾಲದಲ್ಲಿ ಏನಾಗಿತ್ತು ಎಂದು ಹೇಳುವುದರಲ್ಲಿ ಸರ್ಕಾರ ನಿರತವಾಯಿತು.
Assembly Session: ಡ್ರೈವರ್ ಆತ್ಮಹತ್ಯೆ ಯತ್ನ ವಿಷಯದಲ್ಲಿ ರಾಜಕೀಯ ಹಗ್ಗಜಗ್ಗಾಟ: ಸರ್ಕಾರದ ವಿರುದ್ಧ ಮುಗಿಬಿದ್ದ BJP-JDS