ಬೆಂಗಳೂರು: ನೂತನ ವಿಧಾನಸಭೆ ನಾಲ್ಕನೇ ದಿನದ ಅಧಿವೇಶನಕ್ಕೆ ಸಜ್ಜಾಗಿದೆ. ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೆ, ಉತ್ತರ ಕರ್ನಾಟಕ ಮಳೆಗಾಗಿ ಪ್ರಾರ್ಥಿಸುತ್ತಿದೆ. ಇದೂ ಸೇರಿದಂತೆ ಇನ್ನೂ ಹಲವಾರು ರಾಜಕೀಯ ಮತ್ತಿತರ ಬೆಳವಣಿಗೆಗಳ ಕ್ಷಣಕ್ಷಣದ ಸುದ್ದಿ ಅಪ್‌ಡೇಟ್‌ಗಳಿಗೆ (Karnataka Live News) ಇಲ್ಲಿ ಗಮನಿಸಿ.
ಶುರುವಾಯ್ತು ಮಳೆ ಅವಘಡ
ರಾಜ್ಯದಲ್ಲಿ ಮಳೆ ಅವಘಡ (Rain Damage) ಶುರುವಾಗಿದ್ದು, ವರುಣಾರ್ಭಟಕ್ಕೆ (Rain News) ಎಲ್ಲರೂ ಗಡಗಡ ನಡುಗುವಂತಾಗಿದೆ. ಕರಾವಳಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಮಂಗಳೂರು ಹೊರವಲಯದ ತಲಪಾಡಿಯ ಶಾರದಾ ಕಾಲೇಜಿನಲ್ಲಿ ಗಾಳಿ ಮಳೆಗೆ ಬೃಹತ್ ಚಾವಣಿಯೇ ಹಾರಿ ಬಿದ್ದಿದೆ.
Rain News : ಶುರುವಾಯ್ತು ಮಳೆ ಅವಘಡ; 6 ಅಂತಸ್ತಿನಿಂದ ಕುಸಿದ ಚಾವಣಿ, ಮುಳುಗಿದ ಸೇತುವೆಗಳು
ಅತಿವೇಗದ ಚಾಲನೆಗೆ ಹಾರಿಹೋಯ್ತು ಚಾಲಕ ಪ್ರಾಣ
ಕುಡಿದು ಕಂಟ್ರೋಲ್ ತಪ್ಪಿದ ಆಟೋ ಚಾಲಕ ಒನ್‌ವೇನಲ್ಲಿ ಹೈ ಸ್ಟೀಡಾಗಿ ಬಂದಿದ್ದಾನೆ. ಇದರ ಪರಿಣಾಮ ಈಗ ಅವನ ಪ್ರಾಣವೇ ಹಾರಿ ಹೋಗಿದೆ. ಅತಿವೇಗವಾಗಿ ಬಂದ ಆಟೋವೊಂದು ರಸ್ತೆಯ ಡಿವೈಡರ್‌ಗೆ ಡಿಕ್ಕಿ (Auto Accident) ಹೊಡಿದಿದೆ. ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಟೋ ಡ್ರೈವರ್ ನಂಜುಂಡಸ್ವಾಮಿ (29) ಮೃತ ದುರ್ದೈವಿ.
Auto Accident : ಅತಿವೇಗದ ಚಾಲನೆಗೆ ಹಾರಿಹೋಯ್ತು ಚಾಲಕ ಪ್ರಾಣ; ಕುಡಿತ ತಂದ ಆಪತ್ತು
ಎರಡೆರಡು ಬಾರಿ ಎಕ್ಸಾಂನಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರಿನ ಬೈಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದಲ್ಲಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚಾರ್ಲ್ಸ್ (18) ಮೃತ ದುರ್ದೈವಿ. ಚಾರ್ಲ್ಸ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರು ತಿಂಗಳ ಹಿಂದೆ ಪ್ರಥಮ ಪಿಯುಸಿಯಲ್ಲಿ ಫೇಲಾಗಿದ್ದರಿಂದ ಮನನೊಂದಿದ್ದ. ಬಳಿಕ ಮರು ಪರೀಕ್ಷೆಯಲ್ಲಿಯೂ ಫೇಲಾಗಿದ್ದ ಎಂದು ತಿಳಿದು ಬಂದಿದೆ.
Suicide Case : ಎರಡೆರಡು ಬಾರಿ ಎಕ್ಸಾಂನಲ್ಲಿ ಫೇಲ್; ಮನನೊಂದು ಫ್ಯಾನಿಗೆ ನೇಣು ಬಿಗಿದುಕೊಂಡ ವಿದ್ಯಾರ್ಥಿ!
ಬೆಂಗಳೂರಲ್ಲಿ ತುಂತುರು ಹನಿಗಳ ಲೀಲೆ, ಕರಾವಳಿ- ಮಲೆನಾಡಲ್ಲಿ ವರುಣಾರ್ಭಟ
ಕರ್ನಾಟಕ ಕರಾವಳಿಯಲ್ಲಿ ಮಳೆಯ (Heavy Rain alert) ಆರ್ಭಟ ಜೋರಾಗಿದ್ದು, ಬೆಂಗಳೂರಲ್ಲಿ ವಾತಾವರಣ ತಂಪಾಗಿದೆ. ಕರಾವಳಿ, ಮಲೆನಾಡಿನಲ್ಲಿ ಜು.6, 7 ರಂದು ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ (Weather report) ಆರೆಂಜ್ ಅಲರ್ಟ್ ನೀಡಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಹಾಗೂ ಕೊಡಗು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡದಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗಲಿದ್ದು, ಗಾಳಿ ವೇಗವು ಗಂಟೆಗೆ ಸುಮಾರು 40-50 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಕೆಲವು ಕಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
Weather Report : ಬೆಂಗಳೂರಲ್ಲಿ ತುಂತುರು ಹನಿಗಳ ಲೀಲೆ; ಕರಾವಳಿ, ಮಲೆನಾಡಲ್ಲಿ ವರುಣಾರ್ಭಟ
Bomb threat : ಶಿವಾಜಿ ನಗರದ ಮಸೀದಿಯಲ್ಲಿ ಬಾಂಬ್; ಅಜ್ಞಾತ ಕರೆಗೆ ಬೆಚ್ಚಿಬಿದ್ದ ಬೆಂಗಳೂರು!
ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಶಿವಾಜಿನಗರದ ಆಜಾಂ ಮಸೀದಿಯಲ್ಲಿ (Shivaji nagar Mosque) ಬಾಂಬ್ (Bomb threat) ಇಡಲಾಗಿದೆ ಎಂಬ ಸುದ್ದಿಯೊಂದು ಬುಧವಾರ ರಾತ್ರಿ ಬೆಂಗಳೂರು ಪೊಲೀಸರನ್ನು (Bangalore Police) ಅಕ್ಷರಶಃ ತಲ್ಲಣಗೊಳಿಸಿತು. ಕಳೆದ ಕೆಲವು ವರ್ಷಗಳಿಂದ ದೊಡ್ಡ ಮಟ್ಟದ ಸಾಮೂಹಿಕ ಭಯೋತ್ಪಾದಕ ಕೃತ್ಯಗಳಿಲ್ಲದೆ (Terrorist activity) ಒಂದಿಷ್ಟು ನೆಮ್ಮದಿಯಲ್ಲಿದ್ದ ಪೊಲೀಸರಿಗೆ ಒಮ್ಮಿಂದೊಮ್ಮೆಗೇ ಮಸೀದಿಯಲ್ಲಿ ಬಾಂಬ್ ಇಡಲಾಗಿದೆ ಎಂಬ ಸುದ್ದಿ ಭಾರಿ ಆತಂಕಕ್ಕೆ ಕಾರಣವಾಯಿತು. ಅವರು ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡು ಹೋಗಿ ಎಲ್ಲ ರೀತಿಯಲ್ಲೂ ತಪಾಸಣೆ ಮಾಡಿದಾಗ ಯಾವುದೇ ಅಪಾಯಕಾರಿ ವಸ್ತುಗಳು (Dangerous materials) ಸಿಗದೆ ನಿಟ್ಟುಸಿರು ಬಿಟ್ಟರು.