Site icon Vistara News

Karnataka live news: ರಾಜ್ಯದ ಇಂದಿನ ಪ್ರಮುಖ ಸುದ್ದಿಗಳು; ಸಿಎಂ ವಿರುದ್ಧ ಪ್ರಣವಾನಂದ ಸ್ವಾಮಿ ಪರೋಕ್ಷ ವಾಗ್ದಾಳಿ

Karnataka Live News

ಬೆಂಗಳೂರು: ರಾಜಧಾನಿಯ ಅರಮನೆ ಮೈದಾನದಲ್ಲಿ ಈಡಿಗ/ಬಿಲ್ಲವ/ನಾಮಧಾರಿ/ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಪೂರ್ವಭಾವಿ ಸಭೆ ನಡೆದಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಸ್ವಾಮೀಜಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ಇಲ್ಲಿ ಓದಿ.

Deepa S

ಹಠಾತ್ತಾಗಿ ಅಡ್ಡ ಬಂದ ನಾಯಿ; ಸ್ಕೂಟರ್‌ ಸಹಿತ ಉರುಳಿದ ಮಹಿಳೆ ಮೇಲೆ ಹರಿದ ಲಾರಿ

ವಾಹನಗಳಿಗೆ ನಾಯಿಗಳು ಅಡ್ಡ ಬಂದು ಅಪಘಾತ ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿವೆ. ಹಠಾತ್ತಾಗಿ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದಾಗ ಮಹಿಳೆಯೊಬ್ಬರು ಸ್ಕೂಟರ್‌ನಿಂದ ಕೆಳಗೆ ಬಿದ್ದಿದ್ದು. ಈ ವೇಳೆ ಅದೆ ಮಾರ್ಗವಾಗಿ ಬರುತ್ತಿದ್ದ ಲಾರಿಯು ಮಹಿಳೆಯ ಮೇಲೆ ಹರಿದಿದೆ. ಗಂಭೀರ ಗಾಯಗೊಂಡಿದ್ದ ಮಹಿಳೆ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

Road Accident : ಹಠಾತ್ತಾಗಿ ಅಡ್ಡ ಬಂದ ನಾಯಿ; ಸ್ಕೂಟರ್‌ ಸಹಿತ ಉರುಳಿದ ಮಹಿಳೆ ಮೇಲೆ ಹರಿದ ಲಾರಿ!
Deepa S

ಪ್ರಯಾಣಿಕರ ಸೋಗಿನಲ್ಲಿ ರ‍್ಯಾಪಿಡೊ‌ ಚಾಲಕನ ಕಿಡ್ನ್ಯಾಪ್‌!

ರ‍್ಯಾಪಿಡೊ‌ ಚಾಲಕರನ್ನೇ (rapido bike) ಟಾರ್ಗೆಟ್ ಮಾಡುವ ಆ ಸುಲಿಗೆಕೋರ ಪ್ರಯಾಣಿಕರ ಸೋಗಿನಲ್ಲಿ ರೈಡಿಂಗ್‌ ಬುಕ್ ಮಾಡಿಕೊಳ್ಳುತ್ತಿದ್ದ. ನಿರ್ಜನ ಪ್ರದೇಶ ಅಥವಾ ಮನೆಗೆ ಕರೆದೊಯ್ದು ಚಾಲಕನಿಗೆ ಚಾಕು ತೋರಿಸಿ ಹೆದರಿಸಿ ಸುಲಿಗೆ ಮಾಡುತ್ತಿದ್ದವನು ಈಗ ಖಾಕಿ ಖೆಡ್ದಕ್ಕೆ ಬಿದ್ದಿದ್ದಾನೆ.

Theft Case : ಪ್ರಯಾಣಿಕರ ಸೋಗಿನಲ್ಲಿ ರ‍್ಯಾಪಿಡೊ‌ ಚಾಲಕನ ಕಿಡ್ನ್ಯಾಪ್‌!
Deepa S

ಪಬ್‌, ಬಾರ್‌ ಮೇಲೆ ಸಿಸಿಬಿ ದಾಳಿ; ಮಾಜಿ, ಹಾಲಿ ಸಚಿವರ ಹೆಸ್ರು ಹೇಳಿದ ಅಪ್ರಾಪ್ತರು ಲಾಕ್‌

ಬೆಂಗಳೂರು ನಗರ ಪೊಲೀಸ್ ಆಯುಕ್ತರ ನಿರ್ದೇಶನ ಮೇರೆಗೆ ಏಕಕಾಲಕ್ಕೆ 500ಕ್ಕೂ ಹೆಚ್ಚು ಬಾರ್‌, ಪಬ್‌, ಹುಕ್ಕಾ ಬಾರ್‌ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ (CCB Police Raid) ಮಾಡಿದ್ದಾರೆ. ಕೋರಮಂಗಲ, ಇಂದಿರಾನಗರ, ಎಚ್‌ಎಸ್ಆರ್ ಲೇಔಟ್ , ಬಾಣಸವಾಡಿ, ಹೆಣ್ಣೂರು ಸೇರಿದಂತೆ ಹಲವೆಡೆ ಸಿಸಿಬಿ ದಾಳಿ ಮಾಡಿದೆ. ದಾಳಿ ವೇಳೆ ಹೆಚ್ಚಾಗಿ ಅಪ್ರಾಪ್ತರೇ ಇರುವುದು ಕಂಡು ಬಂದಿದೆ.

CCB Police Raid : ಪಬ್‌, ಬಾರ್‌ ಮೇಲೆ ಸಿಸಿಬಿ ದಾಳಿ; ಮಾಜಿ, ಹಾಲಿ ಸಚಿವರ ಹೆಸ್ರು ಹೇಳಿದ ಅಪ್ರಾಪ್ತರು ಲಾಕ್‌!
Deepa S

ಇನ್ನೊಂದು ವಾರ ಭರಪೂರ ಮಳೆ; ಬೆಂಗಳೂರಲ್ಲಿ ಸಿಕ್ಕಾಪಟ್ಟೆ ಚಳಿ

ಬೆಂಗಳೂರು: ಕರಾವಳಿಯಲ್ಲಿ ದುರ್ಬಲಗೊಂಡಿದ್ದ ಮುಂಗಾರು (Southwest monsoon) ಚುರುಕುಗೊಂಡಿದೆ. ಇನ್ನೊಂದು ವಾರ ಭಾರಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಭಾರಿ (Weather update) ಮಳೆಯಾಗಲಿದೆ.

Weather Report : ಇನ್ನೊಂದು ವಾರ ಭರಪೂರ ಮಳೆ; ಬೆಂಗಳೂರಲ್ಲಿ ಸಿಕ್ಕಾಪಟ್ಟೆ ಚಳಿ
Exit mobile version