Site icon Vistara News

Karnataka live news: ಹಲೋ ಸಚಿವರೇ: ರೈತರಿಗೆ ಗುಡ್‌ ನ್ಯೂಸ್!‌ ಬೆಳಗ್ಗೆಯೂ ಸಿಗಲಿದೆ ತ್ರಿ‌ ಫೇಸ್ ವಿದ್ಯುತ್‌: ಚಲುವರಾಯಸ್ವಾಮಿ

chaluvarayaswamy in vistara news Hello minister

ಬೆಂಗಳೂರು: ರೈತರಿಗೆ ಹಗಲು ಹೊತ್ತಿನಲ್ಲಿಯೇ ತ್ರಿ ಫೇಸ್‌ ವಿದ್ಯುತ್‌ ಕೊಡುವ ಚಿಂತನೆ ಇದೆ ಎಂದು ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಇದೂ ಸೇರಿದಂತೆ ಇನ್ನಿತರ ಮಹತ್ವದ ರಾಜ್ಯದ ಸುದ್ದಿ ಬೆಳವಣಿಗೆಗಳನ್ನು (Karnataka live news) ಇಲ್ಲಿ ಗಮನಿಸಿ.

Ramesha Doddapura

Murder Case: ವೇಣುಗೋಪಾಲ್‌ ಕೊಲೆ ಆಕಸ್ಮಿಕ ಎಂದ ಸಿಎಂ ಸಿದ್ದರಾಮಯ್ಯ: ಸರ್ಕಾರದ ಸಮರ್ಥನೆಗೆ ಬಿಜೆಪಿ ಆಕ್ರೋಶ

ತಿ. ನರಸೀಪುರದ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್‌ ಹತ್ಯೆ ಪ್ರಕರಣವು (Murder Case) ಆಕಸ್ಮಿಕವಾಗಿದ್ದು, ಈ ಪ್ರಕರಣವನ್ನು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಈ ಪ್ರಕರಣದ ಕುರಿತು ಸರ್ಕಾರದ ಉತ್ತರ ನೀಡುವ ಸಮಯದಲ್ಲಿ ಮಾತನಾಡಿದರು.

Murder Case: ವೇಣುಗೋಪಾಲ್‌ ಕೊಲೆ ಆಕಸ್ಮಿಕ ಎಂದ ಸಿಎಂ ಸಿದ್ದರಾಮಯ್ಯ: ಸರ್ಕಾರದ ಸಮರ್ಥನೆಗೆ ಬಿಜೆಪಿ ಆಕ್ರೋಶ
Ramesha Doddapura

Jain Muni Murder: ಸ್ವಾಮೀಜಿ ಎಂದ ತಕ್ಷಣ ಪ್ರಕರಣ ಬದಲಾಗಲ್ಲ; ಕೊಲೆ ಕೊಲೆ ಅಷ್ಟೆ: ಸಿಬಿಐಗೆ ಕೊಡಲ್ಲ ಎಂದ ಸರ್ಕಾರ

ಜೈನ ಮುನಿಗಳನ್ನು ಹತ್ಯೆ (Jain Muni Murder) ಮಾಡಿರುವುದನ್ನು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತ ಮಾಡದೆ ಅದನ್ನು ಸಾಮಾಜಿಕ ಹಿನ್ನೆಲೆಯಲ್ಲಿ ನೋಡುವಂತಾಗಲು ಆಳಕ್ಕಿಳಿತು ತನಿಖೆ ನಡೆಯಬೇಕು, ಅದಕ್ಕಾಗಿ ಸಿಬಿಐಗೆ ಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಒತ್ತಾಯಿಸಿದೆ. ಆದರೆ ನಮ್ಮ ಪೊಲೀಸರ ಮೇಲಿನ ಗೌರವವನ್ನು ಇದು ಕಡಿಮೆ ಮಾಡುವುದರಿಂದ ಸಿಬಿಐಗೆ ನೀಡುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.

Jain Muni Murder: ಸ್ವಾಮೀಜಿ ಎಂದ ತಕ್ಷಣ ಪ್ರಕರಣ ಬದಲಾಗಲ್ಲ; ಕೊಲೆ ಕೊಲೆ ಅಷ್ಟೆ: ಸಿಬಿಐಗೆ ಕೊಡಲ್ಲ ಎಂದ ಸರ್ಕಾರ
Deepa S

ತಂದೆಯನ್ನೇ ಕೊಂದು ಹಾಕಿದ ಮಗ

ಕ್ಷುಲ್ಲಕ ಕಾರಣಕ್ಕೆ ಮಗನೊಬ್ಬ ತಂದೆಯನ್ನೇ ಕೊಂದು (murder case) ಹಾಕಿರುವ ಘಟನೆ ವಿಜಯಪುರದ ವೆಂಕಟೇಶ ನಗರದಲ್ಲಿ ನಡೆದಿದೆ. ರಮೇಶ ಕೂಡಿಗನೂರ ಹತ್ಯೆಯಾದವರು.

Murder Case : ತಂದೆಯನ್ನೇ ಕೊಂದ ಮಗ; ರೌಡಿಶೀಟರ್‌ನ ಕೊಚ್ಚಿ ಕೊಲೆ
Ramesha Doddapura

Murder Case: ಹಿಂದು ಕಾರ್ಯಕರ್ತ ವೇಣುಗೋಪಾಲ್‌ ಕುಟುಂಬಕ್ಕೆ ₹25 ಲಕ್ಷ ಕೊಡಿ: ಸರ್ಕಾರಕ್ಕೆ ಬಿಜೆಪಿ ಒತ್ತಾಯ

ಹನುಮ ಜಯಂತಿ ವೇಳೆ ನಡೆದ ಘಟನೆಗೆ ಸಂಬಂಧಿಸಿ ಹತ್ಯೆಯಾಗಿರುವ (Murder Case) ತಿ. ನರಸೀಪುರದ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್‌ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

Murder Case: ಹಿಂದು ಕಾರ್ಯಕರ್ತ ವೇಣುಗೋಪಾಲ್‌ ಕುಟುಂಬಕ್ಕೆ ₹25 ಲಕ್ಷ ಕೊಡಿ: ಸರ್ಕಾರಕ್ಕೆ ಬಿಜೆಪಿ ಒತ್ತಾಯ
Adarsha Anche

Alcohol price : ಇನ್ನು ಹತ್ತೇ ದಿನಕ್ಕೆ ಎಣ್ಣೆ ಏಟು; ಹೆಚ್ಚುತ್ತೆ ರೇಟು!

ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮದ್ಯದ ಮೇಲಿನ ಸುಂಕವನ್ನು ವಿಧಿಸಿರುವುದಾಗಿ ಘೋಷಿಸಿದ್ದರು. ಅದೀಗ ಜುಲೈ 20ರಂದು ಅನುಷ್ಠಾನಕ್ಕೆ ಬರುತ್ತಿದ್ದು, ಮದ್ಯ ಪ್ರಿಯರಿಗೆ ಕಿಕ್‌ ಇಳಿಸಲಿದೆ.

Alcohol price : ಇನ್ನು ಹತ್ತೇ ದಿನಕ್ಕೆ ಎಣ್ಣೆ ಏಟು; ಹೆಚ್ಚುತ್ತೆ ರೇಟು!

Exit mobile version