Site icon Vistara News

Karnataka live news: ಹಲೋ ಸಚಿವರೇ: ರೈತರಿಗೆ ಗುಡ್‌ ನ್ಯೂಸ್!‌ ಬೆಳಗ್ಗೆಯೂ ಸಿಗಲಿದೆ ತ್ರಿ‌ ಫೇಸ್ ವಿದ್ಯುತ್‌: ಚಲುವರಾಯಸ್ವಾಮಿ

chaluvarayaswamy in vistara news Hello minister

ಬೆಂಗಳೂರು: ರೈತರಿಗೆ ಹಗಲು ಹೊತ್ತಿನಲ್ಲಿಯೇ ತ್ರಿ ಫೇಸ್‌ ವಿದ್ಯುತ್‌ ಕೊಡುವ ಚಿಂತನೆ ಇದೆ ಎಂದು ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಇದೂ ಸೇರಿದಂತೆ ಇನ್ನಿತರ ಮಹತ್ವದ ರಾಜ್ಯದ ಸುದ್ದಿ ಬೆಳವಣಿಗೆಗಳನ್ನು (Karnataka live news) ಇಲ್ಲಿ ಗಮನಿಸಿ.

Adarsha Anche

Free Electricity : ಸರ್ಕಾರಿ ಶಾಲೆಗೂ 200 ಯುನಿಟ್‌ ಉಚಿತ ವಿದ್ಯುತ್!

ಈಗಾಗಲೇ ರಾಜ್ಯಾದ್ಯಂತ ಮನೆಮಾತಾಗಿರುವ ಕಾಂಗ್ರೆಸ್‌ ಗ್ಯಾರಂಟಿಯ ಉಚಿತ ವಿದ್ಯುತ್‌ ಯೋಜನೆಯನ್ನು ಸರ್ಕಾರಿ ಶಾಲೆಗಳಿಗೂ ವಿಸ್ತರಿಸುವ ಬಗ್ಗೆ ಚಿಂತನೆ ಇದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

Ramesha Doddapura

assemblysession2023: ವಿಧಾನಸಭೆಯಲ್ಲಿ ಯತ್ನಾಳ್‌-ಡಿಕೆಶಿ ಗುದ್ದಾಟ: ಸಂಧಾನ ಸಭೆಯನ್ನೂ ಬಹಿಷ್ಕರಿಸಿದ ಬಿಜೆಪಿ

ವಿಧಾನಸಭೆ (Assembly Session) ಕಲಾಪ ಮಂಗಳವಾರ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಇದರಿಂದ ಕೋಪಗೊಂಡ ಡಿಸಿಎಂ ಡಿ.ಕೆ. ಶಿವಕುಮಾರ್‌, ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಉದ್ದೇಶಿಸಿ, ಏಯ್‌ ಕೂತ್ಕೊಳ್ಳಯ್ಯ ಸಾಕು ಎಂದು ಏಕವಚನದಲ್ಲೇ ಹೇಳಿದರು. ಗಲಾಟೆ ತಾರಕಕ್ಕೇರಿ ಸದನವೇ ಮುಂದೂಡಲ್ಪಟ್ಟಿತು.

Assembly Session: ವಿಧಾನಸಭೆಯಲ್ಲಿ ಯತ್ನಾಳ್‌-ಡಿಕೆಶಿ ಗುದ್ದಾಟ: ಸಂಧಾನ ಸಭೆಯನ್ನೂ ಬಹಿಷ್ಕರಿಸಿದ ಬಿಜೆಪಿ
Deepa S

ಕೊಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ಕೈ ಕಟ್‌ ಮಾಡಿದ ಗೆಳೆಯರು

ಕೊಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ಗೆಳೆಯನ ಕೈ ಕಟ್‌ ಮಾಡಿದ್ದಾರೆ. ಕೇಶವಮೂರ್ತಿ (26) ಹಲ್ಲೆಗೊಳಗಾದವರು. ಕಳೆದ ಜುಲೈ 8 ರಂದು ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೇಶವಮೂರ್ತಿ ತನ್ನ ಸ್ನೇಹಿತ ಸಾಯಿರಾಮ್ ಎಂಬಾತನಿಗೆ ಮೂರು ತಿಂಗಳ ಹಿಂದೆ 2 ಸಾವಿರ ರೂಪಾಯಿಯನ್ನು ನೀಡಿದ್ದ. ಕೊಟ್ಟ ಹಣವನ್ನು ವಾಪಸ್‌ ಕೊಡು ಎಂದಿದ್ದಕ್ಕೆ ಸಿಟ್ಟಿಗೆದ್ದ ಸಾಯಿರಾಮ್‌ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.

Assault case : ಕೊಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ಕೈ ಕಟ್‌ ಮಾಡಿದ ಗೆಳೆಯರು
Krishna Bhat

ಯುವ ಬ್ರಿಗೇಡ್‌ ಸದಸ್ಯನ ಕೊಲೆ ; 6 ಆರೋಪಿಗಳು ಅರೆಸ್ಟ್‌, ಒಬ್ಬ ಬಿಜೆಪಿ ಪಾಲಿಕೆ ಸದಸ್ಯೆ ತಮ್ಮ!

ಮೈಸೂರು: ತಿ.ನರಸೀಪುರದಲ್ಲಿ ನಡೆದ ಯುವ ಬ್ರಿಗೇಡ್‌ ಕಾರ್ಯಕರ್ತ (Yuva Brigade activist murder) ವೇಣುಗೋಪಾಲ ನಾಯಕ (Venugopal Nayak) ಕೊಲೆ ಪ್ರಕರಣ (Murder case) ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿರುವ ನಡುವೆಯೇ ಪೊಲೀಸರು ಪ್ರಕರಣದ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ (Six accused arrested). ಬಂಧಿತರ ಪೈಕಿ ಒಬ್ಬಾತ ಮೈಸೂರು ಮಹಾನಗರ ಪಾಲಿಕೆ ಸದಸ್ಯೆಯ ತಮ್ಮನೇ ಆಗಿರುವುದು ಬೆಳಕಿಗೆ ಬಂದಿದೆ.

Ramesha Doddapura

Bus Driver: ಚಾಲಕನನ್ನು ಹೊತ್ತೊಯ್ಯುತ್ತಿದ್ದ ಆಂಬುಲೆನ್ಸ್‌ ತಡೆದಿದ್ದರ ಮಾಜಿ ಶಾಸಕ ಸುರೇಶ್‌ ಗೌಡ?

ಆತ್ಮಹತ್ಯೆಗೆ ಯತ್ನಿಸಿದ ಕೆಎಸ್‌ಆರ್‌ಟಿಸಿ ಚಾಲಕ (Bus Driver) ಜಗದೀಶ್‌ ಅವರಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬುಲೆನ್ಸ್ ಅನ್ನು ಮಾಜಿ ಶಾಸಕ ಸುರೇಶ್ ಗೌಡ ತಡೆದಿದ್ದರೇ ಎಂಬ ಚರ್ಚೆ ಇದೀಗ ಮಂಡ್ಯದಲ್ಲಿ ಜೋರಾಗಿ ನಡೆಯುತ್ತಿದೆ.

Bus Driver: ಚಾಲಕನನ್ನು ಹೊತ್ತೊಯ್ಯುತ್ತಿದ್ದ ಆಂಬುಲೆನ್ಸ್‌ ತಡೆದಿದ್ದರೇ ಮಾಜಿ ಶಾಸಕ ಸುರೇಶ್‌ ಗೌಡ?
Exit mobile version