Site icon Vistara News

Karnataka live news: ಹಲೋ ಸಚಿವರೇ: ರೈತರಿಗೆ ಗುಡ್‌ ನ್ಯೂಸ್!‌ ಬೆಳಗ್ಗೆಯೂ ಸಿಗಲಿದೆ ತ್ರಿ‌ ಫೇಸ್ ವಿದ್ಯುತ್‌: ಚಲುವರಾಯಸ್ವಾಮಿ

chaluvarayaswamy in vistara news Hello minister

ಬೆಂಗಳೂರು: ರೈತರಿಗೆ ಹಗಲು ಹೊತ್ತಿನಲ್ಲಿಯೇ ತ್ರಿ ಫೇಸ್‌ ವಿದ್ಯುತ್‌ ಕೊಡುವ ಚಿಂತನೆ ಇದೆ ಎಂದು ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಇದೂ ಸೇರಿದಂತೆ ಇನ್ನಿತರ ಮಹತ್ವದ ರಾಜ್ಯದ ಸುದ್ದಿ ಬೆಳವಣಿಗೆಗಳನ್ನು (Karnataka live news) ಇಲ್ಲಿ ಗಮನಿಸಿ.

Deepa S

ಬೆಂಗಳೂರಲ್ಲಿ ಯುವಕನ ಕಿಡ್ನ್ಯಾಪ್‌

ಬೆಂಗಳೂರಿನ ಕೆಂಗೇರಿ ರಾಮಸಂದ್ರದಲ್ಲಿ ಯುವಕನ ಕಿಡ್ನ್ಯಾಪ್‌ (Kidnaping Case) ಮಾಡಿ ಹತ್ಯೆ (Murder case) ಮಾಡಲಾಗಿದೆ. ಮೊಹಮ್ಮದ್ ತಾಹೀರ್ ಹತ್ಯೆಯಾದವನು. ಸೋಮವಾರ ತಡರಾತ್ರಿ (ಜು.10) ಮೊಹಮ್ಮದ್ ತಾಹೀರ್‌ನನ್ನು ಆತನ ಸೇಹಿತರೇ ಆಟೋದಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಕೆಂಗೇರಿ ಬಳಿ ಕರೆದುಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ನ್ಯಾಮತ್ ಹಾಗೂ ಆತನ ಸ್ನೇಹಿತರು ಹತ್ಯೆ ನಡೆಸಿದ್ದಾರೆ ಎನ್ನಲಾಗಿದೆ.

Murder Case : ಬೆಂಗಳೂರಲ್ಲಿ ಯುವಕನ ಕಿಡ್ನ್ಯಾಪ್‌; ಕೊಚ್ಚಿ ಕೊಲೆ ಮಾಡಿದ ಸ್ನೇಹಿತರು
Adarsha Anche

Education News : ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಪಠ್ಯ ತೆಗೆದಿಲ್ಲ, ಕಿತ್ತು ಬಿಸಾಕಿದ್ದೇವೆ: ಮಧು ಬಂಗಾರಪ್ಪ

ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದಿನ ಸರ್ಕಾರ ಅಳವಡಿಸಿದ್ದ ಚಕ್ರವರ್ತಿ ಸೂಲಿಬೆಲೆ ಹಾಗೂ ವೀರ ಸಾವರ್ಕರ್‌ ಪಠ್ಯವನ್ನು ತೆಗೆದಿಲ್ಲ. ಕಿತ್ತು ಬಿಸಾಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

Education News : ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಪಠ್ಯ ತೆಗೆದಿಲ್ಲ, ಕಿತ್ತು ಬಿಸಾಕಿದ್ದೇವೆ: ಮಧು ಬಂಗಾರಪ್ಪ

Deepa S

ಲೇ ವಂಡ್ರೆ ಎಂದು ಚುಡಾಯಿಸಿದಕ್ಕೆ ಕೊಲೆಯಾದ ಯುವಕ

ಯುವಕನೊಬ್ಬ ಕ್ಲೀನರ್‌ಗೆ ವಂಡ್ರೆ ಎಂದು ಚುಡಾಯಿಸಿದಕ್ಕೆ (Ragging) ಕೊಲೆಯಾಗಿ (Murder Case) ಹೋಗಿದ್ದಾನೆ. ಇಲ್ಲಿನ ಆನಂದ್ ರಾವ್ ಸರ್ಕಲ್ ಬಳಿ ಇರುವ ವರ್ಷಾ ಟ್ರಾವೆಲ್ಸ್‌ನಲ್ಲಿ (Varsha Travels) ಘಟನೆ ನಡೆದಿದೆ. ಬಸ್ ಬುಕ್ಕಿಂಗ್ ಕೆಲಸ ಮಾಡುತ್ತಿದ್ದ ಮುರುಳಿ ಮೃತ ಯುವಕ.

Murder Case : ಲೇ ವಂಡ್ರೆ ಎಂದು ಚುಡಾಯಿಸಿದಕ್ಕೆ ಕೊಲೆಯಾದ ಯುವಕ
Krishna Bhat

Internal Marks : ಪಿಯುಸಿಯಲ್ಲಿ ಇನ್ನು ಸೈನ್ಸ್‌ ಮಾತ್ರ ಅಲ್ಲ ಎಲ್ಲ ವಿಷಯಗಳಿಗೂ Internal Marks

ಬೆಂಗಳೂರು: ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ (PU Examination System) ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದ್ದು, ಇನ್ನು ಮುಂದೆ ಪಿಯುಸಿಯಲ್ಲಿ ವಿಜ್ಞಾನ ಮಾತ್ರವಲ್ಲ ಎಲ್ಲ ವಿಭಾಗದ ಎಲ್ಲ ವಿಷಯಗಳಿಗೂ ಆಂತರಿಕ ಅಂಕ ಇರುತ್ತದೆ. ಇಲ್ಲಿವರೆಗೆ ಪ್ರಾಯೋಗಿಕ ಪರೀಕ್ಷೆ (Practical Exam) ಇರುವ ವಿಜ್ಞಾನದ ವಿಷಯಗಳಿಗೆ ಮಾತ್ರ ಆಂತರಿಕ ಅಂಕ (Internal Marks) ಇತ್ತು. ಇನ್ನು ಮುಂದೆ ಇದು ಎಲ್ಲ ವಿಷಯಗಳಿಗೂ ವಿಸ್ತರಣೆಯಾಗಲಿದೆ. ಶಿಕ್ಷಣ ಇಲಾಖೆ (Education Department) ಸಂಬಂಧ ಸುತ್ತೋಲೆಯನ್ನು ಹೊರಡಿಸಿದ್ದರೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಇದರ ಬಗ್ಗೆ ಹೆಚ್ಚಿನ ವಿವರ ನೀಡಿದರು.

Deepa S

ಕೆರೆಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ವೈದ್ಯನಾಗಬೇಕೆಂಬ ಕನಸು ಕಂಡಿದ್ದ ವಿದ್ಯಾರ್ಥಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಶಿಡ್ಲಘಟ್ಟ ‌ನಗರದ ನಿವಾಸಿ ನಯಾಜ್ ಪಾಷ ಮೃತ ದುರ್ದೈವಿ.

Self Harming : ಸಿಇಟಿಯಲ್ಲಿ ಕಡಿಮೆ ಅಂಕ; ಕೆರೆಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ
Exit mobile version