ಬೆಂಗಳೂರು: ರಾಜಧಾನಿಯ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಬಂದು ನಿಂತಿದ್ದ ಉದ್ಯಾನ್ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಬೆಂಕಿಗೆ ಕಾರಣವೇನು ಎಂಬ ಕುರಿತು ತನಿಖೆ ನಡೆಯುತ್ತಿದೆ. ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿಗಳಿಗಾಗಿ (Karnataka live news) ಇಲ್ಲಿ ಗಮನಿಸಿ.
ಬೆಂಗಳೂರಲ್ಲಿ ವೈದ್ಯರ ಎಡವಟ್ಟು; ಯುವಕನ ಜೀವ ತೆಗೆದ ಇಂಜೆಕ್ಷನ್!
ರಾಜಧಾನಿ ಬೆಂಗಳೂರಲ್ಲಿ ಕೆಲ ವೈದ್ಯರ ನಿರ್ಲಕ್ಷ್ಯದಿಂದ (Medical Negligence) ಅಮಾಯಕರು ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಸದ್ಯ ಉಡುಪಿ ಮೂಲದ ಯುವಕನೊಬ್ಬ ಬೆಂಗಳೂರಿನಲ್ಲಿ ವೈದ್ಯನ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾನೆ. ಅಮರ್ ಶೆಟ್ಟಿ (31) ಮೃತ ದುರ್ದೈವಿ.
Medical Negligence : ಬೆಂಗಳೂರಲ್ಲಿ ವೈದ್ಯರ ಎಡವಟ್ಟು; ಯುವಕನ ಜೀವ ತೆಗೆದ ಇಂಜೆಕ್ಷನ್!
ಬೇಕರಿಗೆ ನುಗ್ಗಿ ದಾಂಧಲೆ; ಬೆಂಗಳೂರಲ್ಲಿ ಹೆಚ್ಚಿದ ಮಾಸ್ಕ್‌ಧಾರಿ ಪುಂಡರು!
ರಾಜಧಾನಿಯಲ್ಲಿ ಪುಂಡರ ದಾಂಧಲೆ ನಿಲ್ಲುವಂತೆ ಕಾಣುತ್ತಿಲ್ಲ. ಇಲ್ಲಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಪುಡಿ ರೌಡಿಗಳ ಕಿರಿಕ್ ಹೆಚ್ಚಾಗಿದೆ. ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುವುದು, ಅಂಗಡಿ ಮುಂಗಟ್ಟು ದ್ವಂಸ ಮಾಡುವುದು, ಮಾರಾಕಾಸ್ತ್ರ ಹಿಡಿದು ರೌಂಡ್ಸ್ ಹಾಕುವುದು ಮಾಡುತ್ತಿದ್ದಾರೆ. ಸದ್ಯ ಬೇಕರಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ಮಾಸ್ಕ್ ಧರಿಸಿ ಎರಡ್ಮೂರು ಬೈಕ್‌ಗಳಲ್ಲಿ ಬಂದು ಪುಂಡರು ತುಂಗಾನಗರದ ಮಂಜುನಾಥ ಬೇಕರಿಗೆ ನುಗ್ಗಿದ್ದಾರೆ.
Bengaluru News : ಬೇಕರಿಗೆ ನುಗ್ಗಿ ದಾಂಧಲೆ; ಬೆಂಗಳೂರಲ್ಲಿ ಹೆಚ್ಚಿದ ಮಾಸ್ಕ್‌ಧಾರಿ ಪುಂಡರು!
ಕರಾವಳಿ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆಯಿದೆ. ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಚದುರಿದಂತೆ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಸಾಧಾರಣ ಮಳೆಯಾಗುವ (Weather report) ಸಾಧ್ಯತೆಯಿದೆ.
Weather Report : ಅಲ್ಪ ವಿರಾಮ ಕೊಟ್ಟ ವರುಣ; ಬೆಂಗಳೂರಲ್ಲಿ ಕವಿದ ಮೋಡ
ಶಿವಾಜಿ ಮೂರ್ತಿ (Shivaji statue) ಮರು ಪ್ರತಿಷ್ಠಾಪನೆಗೆ ಆಗ್ರಹಿಸಿ ಶನಿವಾರ (ಆ.19) ಬಾಗಲಕೋಟೆ ನಗರ ಬಂದ್‌ಗೆ ಕರೆ ನೀಡಲಾಗಿದೆ. ಜಿಲ್ಲಾ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಗಳು ಶಿವಾಜಿ ಮೂರ್ತಿ ತೆರವು ಖಂಡಿಸಿ ಬಂದ್‌ಗೆ ಕರೆ ನೀಡಿವೆ.
Shivaji statue : ಶಿವಾಜಿ ಪ್ರತಿಮೆ ತೆರವಿಗೆ ಖಂಡನೆ; ಬಾಗಲಕೋಟೆಯಲ್ಲಿ ಸ್ವಯಂ ಘೋಷಿತ ಬಂದ್