Site icon Vistara News

Karnataka Live News: ಬಿಜೆಪಿ ಅವಧಿಯ ಬಿಬಿಎಂಪಿ ಕಾಮಗಾರಿ ತನಿಖೆಗೆ ರಚಿಸಿದ್ದ ಎಸ್​ಐಟಿ ರದ್ದು ಮಾಡಿದ ಸರ್ಕಾರ

cm pm live1

ಬೆಂಗಳೂರು: ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್‌ 1 (COVID Subvariant JN1) ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ (State Health Department) ಮತ್ತೊಂದು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ರಾಜ್ಯದಲ್ಲಿ ಆಕ್ಸಿಜನ್ ಸಿಲಿಂಡರ್, ಪಿಎಸ್‌ಎ (PSA) ಆಕ್ಸಿಜನ್ ಪ್ಲಾಂಟ್, ಲಿಕ್ವಿಡ್ ಆಕ್ಸಿಜನ್ ಘಟಕಗಳ ವಾಸ್ತವ ವರದಿ ನೀಡಲು ಸೂಚನೆ ನೀಡಲಾಗಿದೆ. ರಾಜ್ಯದ ಇಂದಿನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸುದ್ದಿ ಬೆಳವಣಿಗೆಗಳನ್ನು (Karnataka Live News) ತಿಳಿಯಲು ಇಲ್ಲಿ ಭೇಟಿ ಕೊಡಿ.

Prabhakar R

ಮುಂಬೈಗೆ ಸಚಿವ ಎಂ.ಬಿ. ಪಾಟೀಲ್‌ ಭೇಟಿ; ಪ್ರಮುಖ ಉದ್ಯಮಿಗಳ ಜತೆ ಮಾತುಕತೆ

ಕರ್ನಾಟಕಕ್ಕೆ ಬಂಡವಾಳ ಆಕರ್ಷಿಸುವ ಉದ್ದೇಶದೊಂದಿಗೆ ಮುಂಬೈಗೆ ಎರಡು ದಿನಗಳ ಅಧಿಕೃತ ಭೇಟಿ ನೀಡಿರುವ ರಾಜ್ಯದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ (MB Patil) ಅವರು, ಮಂಗಳವಾರ ಹಲವು ದೈತ್ಯ ಕಂಪನಿಗಳ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು.

https://vistaranews.com/karnataka/minister-mb-patils-visit-and-talks-with-leading-businessmen/536365.html

Adarsha Anche

BBMP Scam: ಬಿಜೆಪಿ ಅವಧಿಯ ಬಿಬಿಎಂಪಿ ಕಾಮಗಾರಿ ತನಿಖೆಗೆ ರಚಿಸಿದ್ದ ಎಸ್​ಐಟಿ ರದ್ದು ಮಾಡಿದ ಕೈ ಸರ್ಕಾರ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿ ಅವಧಿಯಲ್ಲಾದ ಬಿಬಿಎಂಪಿ ಕಾಮಗಾರಿಗಳ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅನುಮಾನ ವ್ಯಕ್ತಪಡಿಸಿ ಎಸ್‌ಐಟಿ ತಂಡಗಳನ್ನು ರಚಿಸಿ ಆದೇಶಿಸಿದ್ದರು. ಆಗಸ್ಟ್ ತಿಂಗಳಿನಲ್ಲಿ ಎಸ್​ಐಟಿಯನ್ನು ರಚನೆ ಮಾಡಿ 2019ರಿಂದ 2023ರವರೆಗಿನ ಬಿಬಿಎಂಪಿ ವ್ಯಾಪ್ತಿಯ ಯೋಜನೆ, ಕಾಮಗಾರಿಗಳ ಅಕ್ರಮದ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಿತ್ತು.

https://vistaranews.com/karnataka/bengaluru/govt-cancels-sit-set-up-to-probe-bjp-era-bbmp-scam/536355.html

Prabhakar R

ಆಕ್ಸಿಜನ್ ಸಿಲಿಂಡರ್, ಪ್ಲಾಂಟ್ ಎಷ್ಟಿದೆ? ವಾರದಲ್ಲಿ ವರದಿ ಕೊಡಲು ಸೂಚನೆ

ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್‌ 1 (COVID Subvariant JN1) ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ (State Health Department) ಮತ್ತೊಂದು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ರಾಜ್ಯದಲ್ಲಿ ಆಕ್ಸಿಜನ್ ಸಿಲಿಂಡರ್, ಪಿಎಸ್‌ಎ (PSA) ಆಕ್ಸಿಜನ್ ಪ್ಲಾಂಟ್, ಲಿಕ್ವಿಡ್ ಆಕ್ಸಿಜನ್ ಘಟಕಗಳ ವಾಸ್ತವ ವರದಿ ನೀಡಲು ಸೂಚನೆ ನೀಡಲಾಗಿದೆ.

COVID Subvariant JN1: ಆಕ್ಸಿಜನ್ ಸಿಲಿಂಡರ್, ಪ್ಲಾಂಟ್ ಎಷ್ಟಿದೆ? ವಾರದಲ್ಲಿ ವರದಿ ಕೊಡಲು ಸೂಚನೆ

Prabhakar R

ಕ್ರಿಸ್‌ಮಸ್‌ ಹಬ್ಬಕ್ಕೆ 1000 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಸಿಹಿಸುದ್ದಿ ನೀಡಿದೆ. ಕ್ರಿಸ್‌ಮಸ್ ಹಬ್ಬಕ್ಕೆ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಕೆಎಸ್‌ಆರ್‌ಟಿಸಿಯಿಂದ ಬರೋಬ್ಬರಿ 1000 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಡಿ.22 ರಿಂದ 25ರವೆರೆಗೆ ವಿಶೇಷ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.

Christmas 2023: ಕ್ರಿಸ್‌ಮಸ್‌ ಹಬ್ಬಕ್ಕೆ 1000 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ

Deepa S

ಹೆಂಡತಿ ಕಣ್ಣಿನ ಗುಡ್ಡೆಯನ್ನೇ ಕಚ್ಚಿ ಕಿತ್ತೊಗೆದ ಕ್ರೂರಿ!

ಅಪ್ಪನ ಕ್ರೂರತೆಗೆ ಮಗಳು ನಿಜಕ್ಕೂ ಬೆಚ್ಚಿಬಿದ್ದಿದ್ದಳು. ಕಂಠ ಪೂರ್ತಿ ಕುಡಿದು ಬಂದಿದ್ದ ಅವನು ಅಟ್ಟಹಾಸವನ್ನೇ ಮೆರೆದಿದ್ದ. ಹೆಂಡತಿ-ಮಗಳಿಗೆ ಮಾರಣಾಂತಿಕವಾಗಿ ಹಲ್ಲೆ (Assault Case) ನಡೆಸಿದ್ದ. ಆತನ ರಾಕ್ಷಸತ್ವ ಹೇಗಿತ್ತು ಎಂದರೆ, ಹೆಂಡತಿಗೆ ಹೊಡೆದು ಬಡಿದರೂ ಸಮಾಧಾನವಾಗಲಿಲ್ಲ. ಹೀಗಾಗಿ ಆಕೆಯ ಕಣ್ಣಿನ ಗುಡ್ಡೆ ಹಾಗೂ ಕೆನ್ನೆಯನ್ನೇ ಕಚ್ಚಿ ಮಾಂಸವನ್ನೇ ಹೊರತೆಗೆದಿದ್ದಾನೆ.

Assault Case : ಹೆಂಡತಿ ಕಣ್ಣಿನ ಗುಡ್ಡೆಯನ್ನೇ ಕಚ್ಚಿ ಕಿತ್ತೊಗೆದ ಕ್ರೂರಿ!
Exit mobile version