Site icon Vistara News

Karnataka Live News: ಜ. 12ಕ್ಕೆ ಖಾತೆಗೆ ಯುವ ನಿಧಿ ಹಣ ಜಮೆ; ಸುಳ್ಳು ಹೇಳಿ ಪಡೆದರೆ ಕಾಸು ರಿಕವರಿ, ಕೇಸ್‌!

JN.1 as covid 19 variant of interest, Classifies World Health Organisation

ಬೆಂಗಳೂರು: ಕೋವಿಡ್ ಪ್ರಕರಣಗಳು (covid 19) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಒಂದು ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಈ ಕುರಿತು ಚರ್ಚಿಸಲು ಮಹತ್ವದ ಸಭೆ ಕರೆಯಲಾಗಿದೆ. ಇದರೊಂದಿಗೆ ರಾಜ್ಯದ ಇಂದಿನ ಮಹತ್ವದ ಬೆಳವಣಿಗೆಗಳ (Karnataka Live News) ಕುರಿತು ಇಲ್ಲಿ ನೀವು ಓದಬಹುದು.

Deepa S

ಕಳ್ಳರ ಕಾಟ; ದೊಣ್ಣೆ ಹಿಡಿದು ರಾತ್ರಿ ಗಸ್ತಿಗೆ ನಿಂತ ಬೆಳಗಾವಿ ಮಂದಿ!

ಬೆಳಗಾವಿಯಲ್ಲಿ ರಾತ್ರಿ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮನೆ ವಸ್ತುಗಳೆಲ್ಲವೂ ಕಳ್ಳರ ಪಾಲಾಗುತ್ತಿವೆ. ಇದು ಜನರ ನಿದ್ದೆಗೆಡಿಸಿದೆ. ಸಾಲಸೋಲ ಮಾಡಿ ಚಿನ್ನಾಭರಣ ಖರೀದಿಸಿದರೆ, ಕಳ್ಳರು ಕದ್ದು ಹೋಗುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಆ ಏರಿಯಾದ ಯುವಕರೇ ಸೇರಿ ಕಳ್ಳರನ್ನು ಬಗ್ಗು ಬಡಿಯಲು ಮುಂದಾಗಿದ್ದಾರೆ.

Theft Case : ಕಳ್ಳರ ಕಾಟ; ದೊಣ್ಣೆ ಹಿಡಿದು ರಾತ್ರಿ ಗಸ್ತಿಗೆ ನಿಂತ ಬೆಳಗಾವಿ ಮಂದಿ!
Harish Kera

ಇಂದು ಸಂಜೆ ಕ್ಯಾಬಿನೆಟ್ ಸಭೆ

ಬೆಂಗಳೂರು: ಇಂದು ಸಂಜೆ ನಾಲ್ಕು ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಕ್ಯಾಬಿನೆಟ್ ಸಭೆ ಕರೆದಿದ್ದು, ಹಲವು ಯೋಜನೆಗಳ ಬಗ್ಗೆ ಮಹತ್ವದ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಕೊರೊನಾ ಬಗ್ಗೆ ಮುನ್ನೆಚ್ಚರಿಕೆ, ಅತಿಥಿ ಉಪನ್ಯಾಸಕರ ಧರಣಿ, ಯುವನಿಧಿ ಯೋಜನೆ ಜಾರಿ, ಬರ ಪರಿಹಾರ ಬಿಡುಗಡೆ ಸಂಬಂಧ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

Harish Kera

ಭೀಕರ ರಸ್ತೆ ಅಪಘಾತ, ಐವರು ಸಾವು

ಕಲಬುರಗಿ: ಅಫಜಲಪುರ- ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ 5 ಮಂದಿ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹೊರವಲಯದ ನೀರಾವರಿ ಕಚೇರಿ ಬಳಿ ದುರ್ಘಟನೆ ನಡೆದಿದೆ. ಲಾರಿ ಹಾಗೂ ಜೀಪ್ ನಡುವೆ ಡಿಕ್ಕಿ ಸಂಭವಿಸಿದ್ದು, ಜೀಪಿನಲ್ಲಿದ್ದ ಐವರು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿದ್ದಾರೆ.

Harish Kera

ಮಾಸ್ಕ್‌ ಕಡ್ಡಾಯ ಚಿಂತನೆ

ಬೆಂಗಳೂರು: ತಾಂತ್ರಿಕ ಸಲಹಾ ಸಮಿತಿ ಹಾಗೂ ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಲಿದ್ದು, ಕೊರೋನಾ ರೂಪಾಂತರಿ JN 1 ತಳಿ ತಡೆಗಟ್ಟುವ ಸಂಬಂಧ ಮಹತ್ವದ ಚರ್ಚೆ ನಡೆಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್‌ ಧರಿಸುವುದನ್ನು ಈಗಿನಿಂದಲೇ ಕಡ್ಡಾಯ ಮಾಡುವಿಕೆಯ ಬಗ್ಗೆ ತಜ್ಞರು ಒಲವು ತೋರಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

Exit mobile version