ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರು ವರ್ಗಾವಣೆಗೆ ಶಾಸಕರಿಂದಲೇ ಹಣ ಕೇಳುತ್ತಿದ್ದಾರೆ ಎಂಬ ಆರೋಪವುಳ್ಳ ಪತ್ರವು ನಕಲಿ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ನಾನು ಬರೆದಿರುವ ಪತ್ರವೇ ಬೇರೆ ಎಂದು ಅವರು ಹೇಳಿದ್ದಾರೆ. ಇನ್ನು ರಾಜ್ಯದೆಲ್ಲೆಡೆ ಧಾರಾಕಾರ ಮಳೆಯಾಗುತ್ತಿದೆ. ಹಲವೆಡೆ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ, ಕೆಲವೆಡೆ ಗುಡ್ಡ ಕುಸಿದ ಪ್ರಕರಣಗಳು ವರದಿಯಾಗುತ್ತಿವೆ. ಇದರೊಂದಿಗೆ ಇನ್ನಷ್ಟು ರಾಜ್ಯದ ಪ್ರಮುಖ ಸುದ್ದಿ ಬೆಳವಣಿಗೆಗಳ (Karnataka live news) ಕ್ಷಣಕ್ಷಣದ ಮಾಹಿತಿಗಾಗಿ ಇಲ್ಲಿ ನೋಡಿ.
ಮುಂದಿನ 24 ಗಂಟೆಯಲ್ಲಿ ಭಯಂಕರ ಮಳೆ!
ರಾಜ್ಯದಲ್ಲಿ ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಬಿರುಗಾಳಿ (Rain News) ಮಳೆಯಾಗಲಿದೆ. ಈ ಕುರಿತು ಹವಾಮಾನ ಇಲಾಖೆ (Weather report) ಮುನ್ಸೂಚನೆಯನ್ನು ನೀಡಿದೆ. ರಾಜ್ಯಾದ್ಯಂತ ಭಾರಿ ಮಳೆಯ ಎಚ್ಚರಿಕೆ ನಡುವೆಯೂ ಪ್ರತ್ಯೇಕವಾಗಿ ಎರಡು ಜಿಲ್ಲೆಗಳಲ್ಲಿ ಭಯಂಕರ ಮಳೆಯಾಗುವ (Heavy Rain alert) ಸಾಧ್ಯತೆ ಇದೆ.
Weather Report : ಮುಂದಿನ 24 ಗಂಟೆಯಲ್ಲಿ ಭಯಂಕರ ಮಳೆ!
Karnataka Politics : ಸರ್ಕಾರದ ವರ್ಗಾವಣೆ ದಂಧೆ! ಕೈ ಶಾಸಕರೇ ಗರಂ; ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟ್ಟೇ?
ಕಾಂಗ್ರೆಸ್ ಸರ್ಕಾರವು ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಸ್ವತಃ ಆ ಪಕ್ಷದ ಶಾಸಕರೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಉಲ್ಲೇಖಿಸಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಕೋರಿದ್ದಾರೆ. ಇದೀಗ ಸಾಕಷ್ಟು ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
ಸೇತುವೆ ಮುಳುಗಡೆ, ವೃದ್ಧೆಗೆ ಅನಾರೋಗ್ಯ; ಟ್ರ್ಯಾಕ್ಟರ್‌ನಲ್ಲೇ ಆಸ್ಪತ್ರೆಗೆ ರವಾನೆ
ಧಾರವಾಡದಲ್ಲಿ ವರುಣ ಅಬ್ಬರಿಸುತ್ತಿದ್ದು, ಕಂಬರಗಣವಿ ಸೇತುವೆ ಮುಳುಗಡೆ ಆಗಿದೆ. ಇದರಿಂದಾಗಿ ಅನಾರೋಗ್ಯಕ್ಕಿಡಾದ ವೃದ್ಧೆಯನ್ನು ಗ್ರಾಮಸ್ಥರು ಟ್ರ್ಯಾಕ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಳೆ ಬಂದಾಗೆಲ್ಲ ಮೇಲ್ಸೇತುವೆ ಜಲಾವೃತಗೊಂಡಿದ್ದು, ಸದ್ಯ ಗ್ರಾಮಕ್ಕೆ ಹೋಗದೆ ಜನರು ಒಂದೇ ದಡದ ಮೇಲೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.
Rain News : ಸೇತುವೆ ಮುಳುಗಡೆ, ವೃದ್ಧೆಗೆ ಅನಾರೋಗ್ಯ; ಟ್ರ್ಯಾಕ್ಟರ್‌ನಲ್ಲೇ ಆಸ್ಪತ್ರೆಗೆ ರವಾನೆ
ಮುಂದುವರಿದ ಮಳೆ ಅವಾಂತರ
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಬ್ಬರದ ಮಳೆಯಾಗುತ್ತಿದ್ದು, ಜನಜೀವನ ತತ್ತರಿಸಿ (Rain alert) ಹೋಗಿದೆ. ಹಾಸನದಲ್ಲಿ ಒಂದು ಕಡೆ ಮಳೆಯೂ (Rain News) ನಿಲ್ಲುತ್ತಿಲ್ಲ, ಅದರಿಂದ ಆಗುವ ಅವಾಂತರವು ಕಡಿಮೆ ಆಗುತ್ತಿಲ್ಲ. ಹಾಸನದ ಸಕಲೇಶಪುರ ತಾಲೂಕಿನ ಮರಗಿಡಿ ಗ್ರಾಮದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಮಣ್ಣಿನ ರಾಶಿಯು ಎರಡು ಮನೆಗಳ ಮೇಲೆ ಬಿದ್ದಿದೆ. ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದೆ.
Rain News : ಮುಂದುವರಿದ ಮಳೆ ಅವಾಂತರ; ಭೀತಿಯಲ್ಲಿ ಮಲೆನಾಡು ಮಂದಿ