ಉಡುಪಿ
Harrassment Case : ಟಾಯ್ಲೆಟ್ ಚಿತ್ರೀಕರಣದಲ್ಲಿ ಜಿಹಾದಿ ಕೈವಾಡ; ಮುಸ್ಲಿಂ ವಿದ್ಯಾರ್ಥಿನಿಯರ ಅರೆಸ್ಟ್ ಆಗ್ರಹಿಸಿ 27ರಂದು ಬಿಜೆಪಿ ಹೋರಾಟ
Harrassment Case : ಉಡುಪಿಯ ಕಾಲೇಜಿನ ಶೌಚಾಲಯ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಮೂವರು ವಿದ್ಯಾರ್ಥಿನಿಯರನ್ನು ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಕಾಲೇಜಿನ (Nethrajyothi College Udupi) ಮಹಿಳಾ ಟಾಯ್ಲೆಟ್‌ನಲ್ಲಿ (Womens toilet) ಮೊಬೈಲ್ ಇಟ್ಟು (Harrassment Case) ಅಲ್ಲಿಗೆ ಬರುವ ವಿದ್ಯಾರ್ಥಿನಿಯರ ಟಾಯ್ಲೆಟ್ (Ladies toilet) ಬಳಕೆಯ ದೃಶ್ಯಗಳನ್ನು ಸೆರೆ ಹಿಡಿದ ಆರೋಪ ಎದುರಿಸುತ್ತಿರುವ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜುಲೈ 27ರಂದು ರಾಜ್ಯಾದ್ಯಂತ ಹೋರಾಟ (Statewide protest on July 27) ಮಾಡುವುದಾಗಿ ಬಿಜೆಪಿ (BJP Protest) ಪ್ರಕಟಿಸಿದೆ.
ಮಂಗಳವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ (BJP Leaders Press meet) ನಡೆಸಿದ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ (Tejaswini Gowda), ಮೇಲ್ಮನೆ ಸದಸ್ಯರಾದ ಎನ್. ರವಿಕುಮಾರ್ (N Ravikumar), ಬಿಜೆಪಿ ರಾಜ್ಯ ಕಾರ್ಯದರ್ಶಿ ಭಾರತಿ ಮುಗ್ದುಂ (Bharati mugdum) ಅವರು ಇದನ್ನು ಪ್ರಕಟಿಸಿದರು.
ಮುಸ್ಲಿಂ ಯುವತಿಯರ ಕೃತ್ಯ ಆತಂಕಕಾರಿ ಎಂದ ತೇಜಸ್ವಿನಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿನಿ ಗೌಡ, ʻʻನಾಡು ಬೆಚ್ಚಿ ಬೀಳುವ ಸನ್ನಿವೇಶದಲ್ಲಿ ನಾವಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇಂತಹ ವಾತಾವರಣವಿದೆ. ಈ ಹಿಂದೆ ಭಯೋತ್ಪಾದಕರು ಕಾಲೇಜ್ ಕ್ಯಾಂಪಸ್‌ಗಳನ್ನು ಕೇಂದ್ರ ಮಾಡಿಕೊಂಡಿದ್ದರು. ಈಗಲೂ ಅದೇ ಪರಿಸ್ಥಿತಿ ಮರುಸೃಷ್ಟಿಯಾದಂತಿದೆ. ಜುಲೈ 20ರಂದು ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಮೂವರು ಮುಸ್ಲಿಂ ಯುವತಿಯರು ಮಹಿಳಾ ಟಾಯ್ಲೆಟ್‌ನಲ್ಲಿ ಗೌಪ್ಯ ಕ್ಯಾಮೆರಾ ಮೂಲಕ ರೆಕಾರ್ಡ್ ಮಾಡಿದ್ದಾರೆ. ಅವರು ಹಿಂದು ಯುವತಿಯ ಟಾಯ್ಲೆಟ್ ಬಳಕೆಯ ವಿಡಿಯೋ ರೆಕಾರ್ಡ್ ಮಾಡಿದ್ದರುʼʼ ಎಂದು ಹೇಳಿದರು.
ʻʻಈ ರೀತಿ ವಿಡಿಯೊ ಮಾಡಿದ ಮೂವರು ಯುವತಿಯರನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿದೆ. ಅದರೆ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಯುವತಿಯರು ವಿಡಿಯೊವನ್ನು ಗ್ರೂಪ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಈಗ ಅನೇಕ ವಿದ್ಯಾರ್ಥಿನಿಯರು ತಮಗೂ ಹೀಗೇ ಅಗಿದೆ ಎನ್ನುತ್ತಿದ್ದಾರೆ. ಸಹಪಾಠಿಗಳೇ ಹೀಗೆ ಮಾಡುವ ಭಯಾನಕ ವಾತಾವರಣವಿದೆʼʼ ಎಂದು ತೇಜಸ್ವಿನಿ ಹೇಳಿದರು.
ತನಿಖೆ ಮಾಡಿ ಎಂದರೆ ಫೇಕ್ ನ್ಯೂಸ್ ಎಂದು ರಶ್ಮಿಗೆ ಬೆದರಿಕೆ
ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಾಗ ಹಿಂದು ಮಾನವ ಹಕ್ಕುಗಳ ಹೋರಾಟಗಾರ್ತಿ ರಶ್ಮಿ ಸಾಮಂತ್ ಅವರು ಈ ಬಗ್ಗೆ ಟ್ವೀಟ್ ಮಾಡಿದರೆ, ಪೊಲೀಸರು ಅವರ ಮನೆಗೆ ಹೋಗಿ ಅವರ ಪೋಷಕರನ್ನು ಹೆದರಿಸುತ್ತಿದ್ದಾರೆ. ಅವರೇ ಫೇಕ್ ನ್ಯೂಸ್ ಮಾಡಿದ್ದಾರೆ ಎಂದು ರಶ್ಮಿಯನ್ನು ಹೆದರಿಸುತ್ತಿದ್ದಾರೆ ಎಂದು ತೇಜಸ್ವಿನಿ ಹೇಳಿದರು.
ಇದೊಂದು ಆಕಸ್ಮಿಕ ಘಟನೆಯಲ್ಲ. ಸಂಘಟಿತ ಕೃತ್ಯ. ಮಂಡ್ಯದಲ್ಲಿ ಮಸ್ಕಾನ್ ಎಂಬ ಯುವತಿ ಕಾಲೇಜು ಆವರಣದಲ್ಲಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಕೂಡಲೇ ಅವಳಿಗೆ ಅಲ್ ಕೈದಾದಿಂದ ಬೆಂಬಲ ಬಂತು. ಹಾಗಿದ್ದರೆ ಅವರ ನೆಟ್ವರ್ಕ್ ಎಷ್ಟು ಬಲವಾಗಿದೆ ನೋಡಿ. ಕೇರಳ ಫೈಲ್ಸ್ ಸಿನಿಮಾದಲ್ಲೂ ನಾವು ಭಯಾನಕ ಕಥೆಗಳನ್ನು ಕೇಳಿದ್ದೇವೆ. ಈಗ ಇದನ್ನು ತನಿಖೆ ಮಾಡಿ ಎಂದು ಕೇಳಿದರೆ, ಪ್ರಕರಣವನ್ನು ಬೆಳಕಿಗೆ ತಂದ ರಶ್ಮಿ ಸಾಮಂತ್ ಅವರಿಗೇ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆಪಾದಿಸಿದ ಅವರು, ಹೀಗಾದರೆ ಧರ್ಮಕ್ಕೊಂದು ಕಾಲೇಜ್ ಮಾಡಲಾಗುತ್ತದೆಯೇ? ಎಂದು ಪ್ರಶ್ನಿಸಿದರು.
ʻʻಕಾಂಗ್ರೆಸ್ ಸರ್ಕಾರ ಫೇಕ್ ನ್ಯೂಸ್ ಚೆಕ್ ಮಾಡಲು ಏಜೆನ್ಸಿ ನೇಮಿಸಿಕೊಂಡಿದೆ. ಪ್ರತೀಪ್ ಸಿನ್ಹಾ, ಮೊಹಮ್ಮದ್ ಜುಬೇರ್ ನಡೆಸುವ ಆಲ್ಟ್ ನ್ಯೂಸ್ ಅವರು ಇದರಲ್ಲಿದ್ದಾರೆ. ಅವರೇ ಈಗ ಫೇಕ್ ನ್ಯೂಸ್ ಹಬ್ಬಿಸುತ್ತಿದ್ದಾರೆʼʼ ಎಂದು ಹೇಳಿದ ಅವರು, ʻʻʻಇದ್ಯಾವುದೂ ಕಣ್ತಪ್ಪಿನಿಂದ ಮಾಡಲಾಗಿಲ್ಲ. ಇದರ ಹಿಂದ ದೊಡ್ಡ ಜಾಲವಿದೆʼʼ ಎಂದರು.
ʻʻತಪ್ಪು ಮಾಡಿದ ವಿದ್ಯಾರ್ಥಿನಿಯರನ್ನು ಈಗ ರಕ್ಷಣೆ ಮಾಡಲಾಗುತ್ತಿದೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕುʼʼ ಎಂದು ತೇಜಸ್ವಿನಿ ಆಗ್ರಹಿಸಿದರು.
ತಪ್ಪು ಮಾಡಿದ ಹೆಣ್ಮಕ್ಕಳನ್ನು ಗಲ್ಲಿಗೇರಿಸಿ ಎಂದ ತೇಜಸ್ವಿನಿ
ʻʻಈಗಾಗಕೇ ಮಣಿಪುರದ ಘಟನೆ ದೇಶದಲ್ಲಿ ಚರ್ಚೆ ಆಗುತ್ತಿದೆ. ಆದರೆ, ಮುಖವನ್ನೇ ತೋರಿಸದ ಮುಸ್ಲಿಂ ಹೆಣ್ಣು ಮಕ್ಕಳು, ಹಿಂದು ಹೆಣ್ಣುಮಕ್ಕಳ ವಿಡಿಯೋ ಮಾಡಬಹುದಾ? ಈ ಕೆಲಸವನ್ನು ಹೆಣ್ಣುಮಕ್ಕಳೇ ಮಾಡಿದ್ದಾರೆ ಎನ್ನುವುದು ಮತ್ತಷ್ಟು ಆಘಾತಕಾರಿ. ಈ ಮೂವರು ಹೆಣ್ಣು ಮಕ್ಕಳು ತಪ್ಪು ಮಾಡಿದ್ದರೂ ಗಲ್ಲು ಶಿಕ್ಷೆ ವಿಧಿಸಬೇಕು. ಕಾನೂನಿನಲ್ಲಿ ಈ ಬಗ್ಗೆ ಅವಕಾಶ ಇಲ್ಲದಿದ್ದರೆ ಕಾನೂನು ಬದಲಾವಣೆ ಮಾಡಬೇಕುʼʼ ಎಂದು ತೇಜಸ್ವಿನಿ ಆಕ್ರೋಶದಿಂದ ಹೇಳಿದರು.
ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದ ಭಾರತಿ ಮುಗ್ದುಂ
ರಾಜ್ಯ ಸರ್ಕಾರ ಗೃಹಲಕ್ಷ್ಮಿ ಸೇರಿ ಅನೇಕ ಯೋಜನೆಗಳನ್ನು ಸರ್ಕಾರ ಜಾರಿ ಮಾಡುತ್ತಿದೆ ಆದರೆ, ಮಹಿಳೆಯರ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದ ರಾಜ್ಯ ಬಿಜೆಪಿ ಕಾರ್ಯದರ್ಶಿ ಭಾರತಿ ಮುಗ್ದುಂ ಹೇಳಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದರು.
ಚಿತ್ರೀಕರಣಕ್ಕೆ ಒಳಗಾದ ಯುವತಿ ಭಯದಲ್ಲಿದ್ದಾಳೆ: ಎನ್ ರವಿಕುಮಾರ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಅವರು, ʻʻಈಗ ಮೂವರು ಮುಸ್ಲಿಂ ಯುವತಿಯರು ಹಿಂದು ಯುವತಿಯ ವಿಡಿಯೋ ಮಾಡಿದ್ದಾರೆ. ಆದರೆ ಇದೇ ಉಲ್ಟಾ ಆಗಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು?ʼʼ ಎಂದು ಪ್ರಶ್ನಿಸಿದರು.
ʻʻಪ್ರಕರಣ ನಡೆದು ಐದು ದಿನಗಳಾಗಿವೆ. ವಿದ್ಯಾರ್ಥಿನಿಯರನ್ನು ಕಾಲೇಜಿಂದ ಸಸ್ಪೆಂಡ್ ಮಾಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಆದರೆ ತನಿಖೆಗೆ ಆಗ್ರಹಿಸಿದ ರಶ್ಮಿ ಸಾಮಂತ್ ಅವರನ್ನು ಬೆದರಿಸುತ್ತಿದೆ. ಈ ಸರ್ಕಾರಕ್ಕೆ ಮತಿಭ್ರಮಣೆಯಾಗಿದೆʼʼ ಎಂದು ರವಿಕುಮಾರ್ ಹೇಳಿದರು. ʻʻಈಗ ವಿಡಿಯೋ ಚಿತ್ರೀಕರಣಗೊಂಡ ವಿದ್ಯಾರ್ಥಿನಿ ಭಯಗ್ರಸ್ಥಳಾಗಿದ್ದಾಳೆ. ಆಕೆ ಕಾಲೇಜಿಗೂ ಹೋಗುತ್ತಿಲ್ಲʼʼ ಎಂದು ವಿವರಿಸಿದರು.
ʻʻಮುಸ್ಲಿಂ ಯುವತಿಯರು ಸರ್ಕಾರದ ಯೂನಿಫಾರಂ ಹಾಕುವುದಿಲ್ಲ ಎಂದು ಹಿಜಾಬ್ ಹೋರಾಟ ಮಾಡಿದರು. ತಮ್ಮ ಮುಖವನ್ನು ಯಾರೂ ನೋಡಬಾರದು ಎಂದು ಹೋರಾಟ ಮಾಡಿದರು. ಮುಸ್ಲಿಂ ವಿದ್ಯಾರ್ಥಿನಿಯರು ಯಾರಿಗೂ ಮುಖವನ್ನೂ ತೋರಿಸಬಾರದು ಎನ್ನುವ ಸರ್ಕಾರ, ಹಿಂದು ಯುವತಿಯ ವಿಡಿಯೋ ಚಿತ್ರೀಕರಣದ ಬಗ್ಗೆ ಏನು ಹೇಳುತ್ತದೆ? ಹಿಂದುಗಳಿಗೆ ಒಂದು ನ್ಯಾಯ, ಮುಸ್ಲಿಮರಿಗೆ ಇನ್ನೊಂದು ನ್ಯಾಯನಾʼʼ ಎಂದು ರವಿಕುಮಾರ್ ಪ್ರಶ್ನಿಸಿದರು.
ʻʻಮೂವರು ವಿದ್ಯಾರ್ಥಿನಿಯರ ವಿರುದ್ಧ ಕಾನೂನು ಕ್ರಮ ಆಗಬೇಕು. ಅವರು ಈ ವಿಡಿಯೊವನ್ನು ಯಾರ್ಯಾರಿಗೆ ಶೇರ್ ಮಾಡಿದ್ದಾರೆ ಎನ್ನುವುದು ತಿಳಿಯಬೇಕುʼʼ ಎಂದು ಆಗ್ರಹಿಸಿದ ರವಿಕುಮಾರ್ ಅವರು, ಜುಲೈ 27ರಂದು ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಮಹಿಳಾ ಮೋರ್ಚಾದಿಂದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ನಡೆಯಲಿದೆ ಎಂದರು. ʻಮೂವರನ್ನು ಕೂಡಲೇ ಅರೆಸ್ಟ್ ಮಾಡಬೇಕು. ರಶ್ಮಿ ಸಾಮಂತ್ ಅವರಿಗೆ ರಕ್ಷಣೆ ನೀಡಬೇಕುʼʼ ಎಂದು ಆಗ್ರಹಿಸಿದರು.
ತನಿಖೆಯನ್ನೇ ಮಾಡದೆ ವಿಡಿಯೋ ಶೇರ್ ಆಗಿಲ್ಲ ಎಂದು ಹೇಗೆ ಹೇಳುತ್ತೀರಿ?
ಮುಸ್ಲಿಂ ಯುವತಿಯರು ಕ್ಯಾಮೆರಾ ಇಟ್ಟಿರುವ ಬಗ್ಗೆ ಸಾಕ್ಷಿ ಇಲ್ಲ ಎಂಬ ಉಡುಪಿ ಎಸ್‌ಪಿ ಹೇಳಿಕೆಯನ್ನು ಖಂಡಿಸಿದ ಎನ್. ರವಿ ಕುಮಾರ್ ಅವರು, ಪೊಲೀಸರು ಹೀಗೆ ಪ್ರಕರಣ ಮುಚ್ಚಿ ಹಾಕಲು ಹೋಗಬಾರದು. ಪೊಲೀಸರು ಐಪಿಎಸ್ ಮಾಡಿರುವುದು ನ್ಯಾಯ ಬೆಳಕಿಗೆ ತರಲು. ಪ್ರಕರಣ ಮುಚ್ವಿ ಹಾಕುವ ಕೆಲಸ ಮಾಡಬೇಡಿ. ಸರ್ಕಾರ ಏನು ಹೇಳುತ್ತದೆಯೋ ಅದನ್ನು ಪೊಲೀಸರು ಹೇಳುತ್ತಾರೆ. ತನಿಖೆಯನ್ನೇ ಮಾಡದೆ, ವಿಡಿಯೋ ಶೇರ್ ಆಗಿಲ್ಲ ಎನ್ನುವುದು ತಪ್ಪು. ತನಿಖೆ ಆಗುವ ಮುನ್ನವೇ ಪೊಲೀಸರು ಹೇಗೆ ಹೇಳಿಕೆ ನೀಡುತ್ತಾರೆʼʼ ಎಂದು ಪ್ರಶ್ನಿಸಿದರು.
ʻʻಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಲಿ. ಪ್ರಕರಣದ ಹಿಂದೆ ಯಾವ ಮತೀಯ ಶಕ್ತಿಗಳಿವೆ ಅಂತ ಪತ್ತೆ ಮಾಡಲಿʼʼ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹ ಮಾಡಿದರು.
ಇದನ್ನೂ ಓದಿ: Harrassment Case : ಉಡುಪಿ ಹೆಣ್ಮಕ್ಕಳ ಟಾಯ್ಲೆಟಲ್ಲಿ ಚಿತ್ರೀಕರಣ; ಪ್ರಶ್ನಿಸಿದ ಹಿಂದು ಯುವತಿಗೆ ಪೊಲೀಸರ ಕಿರುಕುಳ
ಉಡುಪಿ
Weather report : ಉತ್ತರ, ಕರಾವಳಿಯಲ್ಲಿ ಮಳೆಗೆ ಬಲ; ದಕ್ಷಿಣದಲ್ಲಿ ದುರ್ಬಲ
Rain News : ರಾಜ್ಯದಲ್ಲಿ ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಕೆಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.
ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬಾಗಲಕೋಟೆ, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಕಲಬುರಗಿ, ಕೊಪ್ಪಳ, ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ (Rain News) ಸಾಧ್ಯತೆಯಿದೆ. ಐಎಂಡಿ ಯೆಲ್ಲೋ ಅಲರ್ಟ್ (Weather report) ನೀಡಿದೆ.
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ. ಜತೆಗೆ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದ್ದು ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ.
ದಕ್ಷಿಣ ಒಳನಾಡಲ್ಲಿ ತಗ್ಗಿದ ಮಳೆ
ಸೆ. 27ರಂದು ದಕ್ಷಿಣ ಒಳನಾಡಿನ ಕೋಲಾರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಮಾತ್ರ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಸಣ್ಣ ಮಳೆ ಬೀಳಬಹುದು. ಉತ್ತರ ಒಳನಾಡಿನ ಬೀದರ್, ವಿಜಯನಗರ ಜಿಲ್ಲೆಗಳಲ್ಲಿ ಹಗುರವಾದ ಮಳೆ ಇರಿಲಿದೆ.
ಮಲೆನಾಡಲ್ಲೂ ಸಣ್ಣ ಮಳೆ
ಮಲೆನಾಡಿನ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದರೆ, ಮಧ್ಯಾಹ್ನ ಬಿಸಿಲಿನಿಂದ ಕೂಡಿರುತ್ತದೆ. ಸಂಜೆ ಅಥವಾ ರಾತ್ರಿಯಂದು ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Cauvery water dispute : ನಮಗೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡೋದು ಹೇಗೆ? – ನಟಿ ರಾಗಿಣಿ ದ್ವಿವೇದಿ
ರಾಜ್ಯದಲ್ಲಿ ಸೆ. 25ರಂದು ನೈರುತ್ಯ ಮುಂಗಾರು ಸಾಮಾನ್ಯವಾಗಿತ್ತು. ಕರಾವಳಿ ಬಹುತೇಕ ಸ್ಥಳಗಳಲ್ಲಿ ಮಳೆಯಾಗಿದ್ದು, ಉತ್ತರ ಹಲವು ಕಡೆಗಳಲ್ಲಿ ಮತ್ತು ದಕ್ಷಿಣ ಕೆಲವು ಸ್ಥಳಗಳಲ್ಲಿ ಮಳೆಯಾಗಿದೆ. ತೊಂಡೇಭಾವಿ 5 ಸೆಂ.ಮೀ, ಗೋಕರ್ಣ, ಸಿಂದಗಿ, ಬೀದರ್, ಕಂಪ್ಲಿಯಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ.
ಹೊನಾವರ, ಆಳಂದ, ಕುಕನೂರು, ಮಾನ್ವಿ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಹೆಬ್ಬೂರಲ್ಲಿ ತಲಾ 3, ಕುಮಟಾ, ತಾಳಿಕೋಟೆ , ಫರಹತಾಬಾದ್, ಚಿಂಚೋಳಿ , ಕೆಂಭಾವಿ, ಬೆಂಗಳೂರು ಸಿಟಿ ಗೌರಿಬಿದನೂರು , ಕುರುಗೋಡು ಸೇರಿದಂತೆ ದೊಡ್ಡಬಳ್ಳಾಪುರದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಪುತ್ತೂರು, ಮಂಗಳೂರು , ಮಂಗಳೂರು ವಿಮಾನ ನಿಲ್ದಾಣ, ಅಂಕೋಲಾ, ಇಳಕಲ್, ನಿರ್ಣಾ , ಕಲಬುರ್ಗಿ, ಮಹಾಗೋನ್, ಗುಂಡಗುರ್ತಿ , ಶಹಪುರ, ಶೋರಾಪುರ ಕಕ್ಕೇರಿ, ಗಂಗಾವತಿ, ದೇವರಹಿಪ್ಪರಗಿ, ಇಂಡಿ , ಕುಡತಿನಿ, ಹೊಸಪೇಟೆ, ಬೆಂಗಳೂರು ಕೆಐಎಎಲ್ ತಲಾ 1 ಸೆಂ.ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ
Weather Report : ಉತ್ತರ ಕರ್ನಾಟಕದಲ್ಲಿ ಮಳೆ ಚುರುಕು; ಬೆಂಗಳೂರಲ್ಲಿ ಹೇಗೆ?
Rain News : ಉತ್ತರ ಒಳನಾಡಲ್ಲಿ ಮುಂಗಾರು ಚುರುಕುಗೊಂಡಿದ್ದು, ಸೆ. 26ರಂದು ಹಲವೆಡೆ ಭಾರಿ ಮಳೆಯಾಗುವ ಮುನ್ನೆಚ್ಚರಿಕೆಯನ್ನು (Weather report) ಐಎಂಡಿ ನೀಡಿದೆ. 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರು: ಉತ್ತರ ಒಳನಾಡಿನ ಹಲವು ಕಡೆ ಭಾರಿ ಮಳೆಯಾಗುವ (Rain News) ಮುನ್ಸೂಚನೆ ಇದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಲಘುವಾಗಿ, ಬೆಂಗಳೂರಲ್ಲಿ ಸಂಜೆ ವೇಳೆಗೆ ಸಾಧಾರಣ ಮಳೆ (Weather report) ಸುರಿಯಲಿದೆ. ಕೆಲವು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ನಾಲ್ಕು ಜಿಲ್ಲೆಗಳಿಗೆ ಅಲರ್ಟ್
ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದ್ದು, ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ.
ಒಳನಾಡಲ್ಲಿ ಹಗುರ ಮಳೆ
ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯದಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಚಾಮರಾಜನಗರದಲ್ಲಿ ಅತಿ ಕಡಿಮೆ ಮಳೆಯಾಗಲಿದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉತ್ತರ ಒಳನಾಡಿನ ರಾಯಚೂರು, ಬೀದರ್, ಬೆಳಗಾವಿ, ಧಾರವಾಡದ ಹಲವೆಡೆ ಅಲ್ಲಲ್ಲಿ ಹಗುರ ಮಳೆಯಾಗಲಿದೆ. ಮಲೆನಾಡಿನ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರಲ್ಲಿ ಚದುರಿದಂತೆ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಟಿ ಜಿಟಿ ಮಳೆ ಸುರಿಯಲಿದೆ
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 29 ಡಿ.ಸೆ – 21 ಡಿ.ಸೆ
ಮಂಗಳೂರು: 30 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 30 ಡಿ.ಸೆ – 20 ಡಿ.ಸೆ
ಗದಗ: 31 ಡಿ.ಸೆ – 20 ಡಿ.ಸೆ
ಹೊನ್ನಾವರ: 30 ಡಿ.ಸೆ- 23 ಡಿ.ಸೆ
ಕಲಬುರಗಿ: 29 ಡಿ.ಸೆ – 23 ಡಿ.ಸೆ
ಬೆಳಗಾವಿ: 29 ಡಿ.ಸೆ – 21 ಡಿ.ಸೆ
ಕಾರವಾರ: 31 ಡಿ.ಸೆ – 24 ಡಿ.ಸೆ
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ
Weather Report : ಮಾಸಾಂತ್ಯದವರೆಗೂ ಮಳೆ; 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
Rain News : ಉತ್ತರ ಕರ್ನಾಟಕದ ಹಲವು ಕಡೆ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಐಎಂಡಿ ನೀಡಿದೆ. 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಸಾಮಾನ್ಯವಾಗಿದ್ದು, ಸೆ. 26ರಂದು ಉತ್ತರ ಒಳನಾಡಿನ ಹಲವು ಕಡೆ ಭಾರಿ ಮಳೆಯಾಗುವ (Rain News) ಮುನ್ಸೂಚನೆ ಇದೆ. ಬೆಂಗಳೂರಲ್ಲಿ ಸಂಜೆ ವೇಳೆಗೆ ಸಾಧಾರಣ ಮಳೆ ಸುರಿಯಲಿದೆ. ಕೆಲವು ಕಡೆ ಗುಡುಗು ಸಹಿತ ಮಳೆಯಾಗುವ (weather report) ಸಾಧ್ಯತೆ ಇದೆ.
ಭಾರೀ ಮಳೆ ಮುನ್ನೆಚ್ಚರಿಕೆ
ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದ್ದು ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ.
ಬೆಂಗಳೂರಲ್ಲಿ ಸಾಧಾರಣ ಮಳೆ
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯದಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಚಾಮರಾಜನಗರದಲ್ಲಿ ಅತಿ ಕಡಿಮೆ ಮಳೆಯಾಗಲಿದೆ.
ಉತ್ತರ ಒಳನಾಡಿನ ರಾಯಚೂರು, ಬೀದರ್, ಬೆಳಗಾವಿ, ವಿಜಯಪುರ, ಯಾದಗಿರಿ, ಧಾರವಾಡದ ಹಲವೆಡೆ ಅಲ್ಲಲ್ಲಿ ಹಗುರ ಮಳೆಯಾಗಲಿದೆ. ಕೊಪ್ಪಳದಲ್ಲಿ ಅಲ್ಲಲ್ಲಿ ಅತಿ ಕಡಿಮೆ ಮಳೆ ಬೀಳಲಿದೆ. ಮಲೆನಾಡಿನ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರಲ್ಲಿ ಚದುರಿದಂತೆ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಟಿ ಜಿಟಿ ಮಳೆ ಸುರಿಯಲಿದೆ.
ಇದನ್ನೂ ಓದಿ:Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ
ರಾಜ್ಯದಲ್ಲಿ ಭಾನುವಾರದಂದು ನೈರುತ್ಯ ಮುಂಗಾರು ಸಾಮಾನ್ಯವಾಗಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ, ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಿದೆ. ಭಾರಿ ಮಳೆಯು ಶಹಪುರದಲ್ಲಿ 7 ಸೆಂ.ಮೀ ವರದಿ ಆಗಿದೆ. ಅಂಕೋಲಾ, ಹೆಬ್ಬೂರಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಕುಮಟಾ, ಗೇರ್ಸೊಪ್ಪ, ಗೋಕರ್ಣ, ಮಂಕಿಯಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ.
ಕುಂದಾಪುರ, ಕೋಟ, ಸಿದ್ದಾಪುರ, ಬೇಲಿಕೇರಿ, ಹೊನ್ನಾವರ, ಖಜೂರಿ, ಮೈಸೂರು, ರಾಯಲ್ಪಾಡದಲ್ಲಿ ತಲಾ 3 ಸೆಂ.ಮೀ, ಉಡುಪಿ, ಕಾರ್ಕಳ , ಮಂಗಳೂರು, ಉಪ್ಪಿನಂಗಡಿ, ಮೂಲ್ಕಿ, ಕದ್ರಾ, ಕೆಂಭಾವಿ, ಮುನಿರಾಬಾದ್ , ಗಬ್ಬೂರು ಹಾಗೂ ಆಳಂದ, ಸೇಡಂ, ಕಳಸ, ಗುಬ್ಬಿ, ತಿಪಟೂರು, ಚಿತ್ರದುರ್ಗ, ಕುಡತಿನಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.
ಕಾರವಾರ, ಮಂಗಳೂರು, ಧರ್ಮಸ್ಥಳ, ಬೆಳ್ತಂಗಡಿ, ಕಿರವತ್ತಿ, ಮುಂಡಗೋಡ ಯಲ್ಲಾಪುರ, ಮಂಚಿಕೆರೆ, ಜಾಲಹಳ್ಳಿ, ಮಹಾಗೋಣ, ಮುಧೋಳೆ, ಗುಂಡಗುರ್ತಿ, ಆಡಕಿ, ಕವಡಿಮಟ್ಟಿ ಅರ್ಗ, ಭಾಲ್ಕಿ , ಮಂಠಾಳ, ಹಾವೇರಿ, ಚಿಕ್ಕಬಳ್ಳಾಪುರ, ಕಡೂರು, ಕೋಲಾರ, ಲಿಂಗನಮಕ್ಕಿ ಎಚ್‌ಎಂಎಸ್, ತಾಳಗುಪ್ಪ, ತ್ಯಾಗರ್ತಿ, ಯಗಟಿ , ಹೊಸಕೋಟೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ
Kantara Effect : ಕಣ್ಮರೆಯಾಗಿದ್ದಯುವಕ 8 ದಿನಗಳ ಬಳಿಕ ನಾಯಿ ಜತೆ ಪ್ರತ್ಯಕ್ಷ; ಅವನ ಹಿಂದೆ ಇದೆ ಕಾಂತಾರ ಪವಾಡ ಕಥೆ!
Kantara Effect : ಕುಂದಾಪುರ ತೊಂಬಟ್ಟಿನ ಒಬ್ಬ ಯುವಕ ದಿಢೀರ್ ನಾಪತ್ತೆಯಾಗುತ್ತಾನೆ. ಎಲ್ಲಿ ಹುಡುಕಿದರೂ ಇಲ್ಲ. ಎಂಟು ದಿನದ ಬಳಿಕ ಒಂದು ನಾಯಿ ಜತೆ ಆತ ಪ್ರತ್ಯಕ್ಷನಾಗುತ್ತಾನೆ. ಇದರ ಹಿಂದೆ ಕಾಂತಾರದಂಥಹುದೇ ಕಥೆ ಇದೆ.. ಏನಿದು ಅಚ್ಚರಿ?
ಅಶ್ವತ್ಥ್ ಆಚಾರ್ಯ, ವಿಸ್ತಾರ ನ್ಯೂಸ್ ಉಡುಪಿ
ಕಾಂತಾರ (Kantara Movie) ಒಂದು ಸಿನಿಮಾ ಅಲ್ಲ, ಅದೊಂದು ಅನುಭವ ಎಂದು ಹಲವು ಹೇಳುತ್ತಾರೆ. ಹಲವರಿಗೆ ಇಂಥ ಅತೀಂದ್ರಿಯ ಅನುಭವ (Unnatural Experience) ಆಗಿರುವುದರಿಂದಲೇ ಅದು ನಮ್ಮೆಲ್ಲರ ಕಥೆ ಅನಿಸುವುದು. ಅಂಥಹುದೇ ಒಂದು ಅನುಭವ ಈಗ ಕುಂದಾಪುರ ತಾಲೂಕಿನ (Kundapura taluk) ಮಚ್ಚಟ್ಟು ಗ್ರಾಮದ ತೊಂಬಟ್ಟಿನ ಜನತೆಗೆ ಆಗಿದೆ. ಮನೆಯಿಂದ ದಿಢೀರ್ ಕಣ್ಮರೆಯಾಗಿದ್ದ ಒಬ್ಬ ಯುವಕ (Young man dissapears) ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಆದರೆ, ದೈವದ ನುಡಿಯಲ್ಲಿ ಕೇಳಿದಾಗ ಅವನು ಇಲ್ಲೇ ಇದ್ದಾನೆ ಎನ್ನುತ್ತದೆ. ಎಂಟು ದಿನಗಳ ಬಳಿಕ ಆತ ದಿಢೀರ್ ಪ್ರತ್ಯಕ್ಷನಾಗುತ್ತಾನೆ (Young man Reappears). ಅವನನ್ನು ಕರೆದುಕೊಂಡು ಬರುವುದು ಒಂದು ನಾಯಿ! ಎಲ್ಲಿ ಹೋಗಿದ್ದೆ ಎನ್ನುವುದು ಅವನಿಗೇ ಗೊತ್ತಿಲ್ಲ! ಹಾಗಿದ್ದರೆ ಮರಳಿ ಬಂದಿದ್ದು ಹೇಗೆ? ದೈವವೇ ಕರೆದುಕೊಂಡುಬಂದಿದೆ ಎನ್ನುತ್ತಾರೆ (Kantara Effect) ತೊಂಬಟ್ಟಿನ ಜನ.
ಹಾಗಿದ್ದರೆ ನಿಜಕ್ಕೂ ಆಗಿದ್ದೇನು? ಇಲ್ಲದೆ ಕಂಪ್ಲೀಟ್ ರಿಪೋರ್ಟ್
ಆ ಯುವಕನ ಹೆಸರು ವಿವೇಕಾನಂದ. ಕುಂದಾಪುರ ತಾಲೂಕು ಅಮವಾಸೆ ಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಮಚ್ಚಟ್ಟು ಗ್ರಾಮದ ತೊಂಬಟ್ಟುವಿನ ಇರ್ಕಿಗದ್ದೆ ನಿವಾಸಿ ಶೀನ ನಾಯ್ಕರ ಮಗ. ವಯಸ್ಸು 28. ಕಳೆದ ಸೆಪ್ಟೆಂಬರ್ 16ರಂದು ವಿವೇಕಾನಂದ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದ. ಜತೆಗೆ ಮನೆಯ ನಾಯಿಯೂ ಕಣ್ಮರೆಯಾಗಿತ್ತು.
ಈ ಭಾಗದಲ್ಲಿ ಚಿರತೆಗಳ ಕಾಟ ವಿಪರೀತ. ಹೀಗಾಗಿ ಮೊದಲ ಸಂಶಯ ಬಂದಿದ್ದು ಚಿರತೆಗಳೇನಾದರೂ…! ಅಂತ. ಇಲ್ಲಿ ಯಾವುದೇ ದನ, ನಾಯಿ ಕಣ್ಮರೆಯಾದರೂ ಜನ ಗುಂಪಾಗಿ ಹುಡುಕಾಟ ಮಾಡುವುದು ರೂಢಿ. ಹೀಗಾಗಿ ವಿವೇಕಾನಂದ ನಾಪತ್ತೆಯಾದಾಗಲೂ ಹುಡುಕಾಟ ನಡೆಸಿದರು. ಅರಣ್ಯ ಇಲಾಖೆಗೂ ದೂರು ನೀಡಿದರು. ಅವರೂ ಬಂದು ಬಂದು ಹುಡುಕಾಟ ನಡೆಸಿದರು. ಅದು ದಟ್ಟವಾದ ಕಾಡಿನ ಪ್ರದೇಶ. ಹೀಗಾಗಿ ಎಷ್ಟು ದಿನ ಹುಡುಕಿದರೂ ಸಿಗಲಿಲ್ಲ. ಕೊನೆಗೆ ಮೃತದೇಹವಾಗಲೀ, ಸಾವಿನ ಯಾವುದೇ ಕುರುಹುಗಳಾಗಲೀ ಸಿಗಲಿಲ್ಲ. ಹೀಗಾಗಿ ಜನ ಆತನನ್ನು ಚಿರತೆ ಹೊತ್ತುಕೊಂಡು ಹೋಗಿರಲಾರದು ಅಂದುಕೊಂಡರು.
ಶೀನ ನಾಯ್ಕ ಮತ್ತು ಮನೆಯವರು ಇದ್ದ ದೈವ ದೇವರಿಗೆಲ್ಲ ಹರಕೆ ಹೊತ್ತರು. ಕೊರಗಜ್ಜಾ ಹುಡುಕಿಕೊಡು ಎಂದರು. ಸಾಮಾನ್ಯವಾಗಿ ಈ ಭಾಗದಲ್ಲಿ ಮನುಷ್ಯರು, ಪ್ರಾಣಿಗಳು ನಾಪತ್ತೆಯಾದಾಗ ʻನಿಮಿತ್ತ ಕೇಳುವುದುʼ ರೂಢಿ. ಅಂದರೆ ದೈವದಲ್ಲಿ, ದೇವರಲ್ಲಿ, ಜೋಯಿಸರಲ್ಲಿ ಪ್ರಶ್ನೆ ಕೇಳುವುದು. ವೀಳ್ಯದೆಲೆ, ಕವಡೆ ಕಾಯಿಯ ಮೂಲಕ ಅವರು ಪ್ರಶ್ನೆ ಹೇಳುತ್ತಾರೆ.
ಹಾಗೆ ಶೀನ ನಾಯ್ಕರೂ ನಿಮಿತ್ತ ಕೇಳಿದರು. ಕೇಳಿಬಂದ ಸಂತಸದ ಸಂಗತಿ ಏನೆಂದರೆ: ವಿವೇಕಾನಂದ ಈಸ್ ಸೇಫ್!. ಯಾವುದೋ ಒಂದು ನಿರ್ದಿಷ್ಟ ದಿಕ್ಕು ಹೇಳಿದರು. ಎಷ್ಟೋ ದೂರ ಅಂದರು. ಮರಳಿ ಬರುತ್ತಾನೆ ಅಂದರು. ಇದನ್ನು ಕೇಳಿದ ಕುಟುಂಬ ಮತ್ತು ಊರಿನವರು ಅಲ್ಲೆಲ್ಲ ಹುಡುಕಿದರು.
ಇದಾದ ಬಳಿಕ ಸಂಭವಿಸಿದ್ದೇ ಅಚ್ಚರಿ. ಸರಿಯಾಗಿ 8 ದಿನಗಳ ಬಳಿಕ ವಿವೇಕಾನಂದ ನಿಧಾನವಾಗಿ ನಡೆದುಕೊಂಡು ಬರುತ್ತಿದ್ದ. ಆತನ ಮುಂದೆ ನಾಯಿ ದಾರಿ ತೋರಿಸುತ್ತಾ ಬರುತ್ತಿತ್ತು. ಹಾಗಂತ ವಿವೇಕಾನಂದ ಬಂದಿದ್ದು ತನ್ನ ಮನೆಗಲ್ಲ. ತೊಂಬಟ್ಟಿನಿಂದ ಸುಮಾರು ಏಳೆಂಟು ಕಿ.ಮೀ. ದೂರದ ಕಬ್ಬಿನಾಲೆಯ ಸಮೀಪದ ಮನೆಯೊಂದರ ಸಮೀಪ ಬಂದಿದ್ದಾನೆ. ವಿವೇಕಾನಂದ ಮತ್ತು ನಾಯಿ ಎರಡನ್ನೂ ಗಮನಿಸಿದ ಮನೆಯವರು ಶೀನ ನಾಯ್ಕರಿಗೆ ಸುದ್ದಿ ಮುಟ್ಟಿಸಿದರು. ಈಗ ವಿವೇಕಾನಂದನನ್ನು ಮನೆಗೆ ಕರೆತರಲಾಗಿದೆ. ಆಹಾರ ಸೇವಿಸದೆ ಬರಿ ನೀರಿನಲ್ಲೇ ಬದುಕಿದಂತಿರುವ ವಿವೇಕಾನಂದ ನಿತ್ರಾಣನಾಗಿದ್ದಾನೆ. ಆದರೆ, ಮರಳಿಬಂದನಲ್ಲ ಎಂದು ಜನರು ದೈವ ದೇವರ ಮಹಿಮೆಯನ್ನು ಕೊಂಡಾಡುತ್ತಿದ್ದಾರೆ. ಈಗ ವಿವೇಕಾನಂದ ನಾಯಿ, ಮನೆಯವರು ಎಲ್ಲರೂ ಖುಷಿಯಾಗಿದ್ದಾರೆ. ಎಂಬಲ್ಲಿಗೆ ಕಥೆ ಮುಗಿಯುವುದಿಲ್ಲ!
ನಿಜವಾದ ಕಥೆ ಶುರುವಾಗುವುದು ಇಲ್ಲಿಂದಲೇ!
ವಿವೇಕಾನಂದ ಎಂಬ ಸ್ವಲ್ಪ ಬುದ್ಧಿಮಾಂದ್ಯತೆ ಹೊಂದಿರುವ ಯುವಕ ನಾಪತ್ತೆಯಾಗಿ ಎಷ್ಟು ದಿನ ಹುಡುಕಿದರೂ ಸಿಗದೆ ಕೊನೆಗೆ ಎಂಟು ದಿನಗಳ ಬಳಿಕ ಮನೆಗೆ ಬರುವ ಈ ಕಥೆಗೆ ಸಂಬಂಧಿಸಿ ಮತ್ತೊಂದು ಮಗ್ಗುಲೂ ಇದೆ. ನೀವು ಕಾಂತಾರಕ್ಕೂ ಈ ಘಟನೆಗೂ ಏನು ಸಂಬಂಧ ಎಂದು ಯೋಜಿಸುತ್ತಿದ್ದೀರಲ್ಲಾ.. ಅದುವೇ ಈ ಕಥೆ. ಈ ಘಟನೆಗೆ ಸಂಬಂಧಿಸಿ ನಡೆದಿದೆ ಎನ್ನಲಾದ ವಿದ್ಯಮಾನವನ್ನು ರವೀಶ್ ಎಂಬವರು ಬರೆದಿದ್ದಾರೆ. ಅವರು ಹೇಳುವ ಕುತೂಹಲಕಾರಿ ವಿಚಾರವನ್ನು ಅವರ ಬರವಣಿಗೆಯಲ್ಲೇ ಓದಿ. ಮುಂದಿನದು ರವೀಶ್ ಅವರು ಹೇಳಿದ ಕಥೆ.
ಕಾಂತಾರದಲ್ಲಿ ದೈವ ನರ್ತಕ ಮಾಯವಾಗುವ ಕಥೆಗೂ ಇದಕ್ಕೂ ಸಂಬಂಧ
ಕಾಂತಾರ ಸಿನಿಮಾಮಾದಲ್ಲಿ ದೈವ ನರ್ತಕರು ಕಾಡಿನಲ್ಲಿ ಮಾಯವಾಗುವ ದೃಶ್ಯವಿದೆ. ಅದು ನಿಜವಾ ? ಕಲ್ಪನೆಯಾ? ಎನ್ನುವ ಒಂದು ಚರ್ಚೆ ಹುಟ್ಟು ಹಾಕಿತ್ತು. ಅದು ನಿಜವಾ? ಸುಳ್ಳಾ ಗೊತ್ತಿಲ್ಲ. ಅಂತಹದ್ದೆ ಒಂದು ಘಟನೆ ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ತೊಂಬಟ್ಟಿನಲ್ಲಿ ನಡೆದಿದೆ.
ಇಂದಿಗೆ ಸುಮಾರು ಹತ್ತು ದಿನ ಮೊದಲು ಊರಿನ ಯುವಕನೊಬ್ಬ ತನ್ನ ಮನೆಯ ಎರಡು ನಾಯಿಗಳೊಂದಿಗೆ ಕಾಣೆಯಾಗುತ್ತಾನೆ. ಮನೆಯವರು ಹುಡುಕಲು ಆರಂಭಿಸುತ್ತಾರೆ ಎಲ್ಲಿ ಹುಡುಕಿದರೂ ಸುಳಿವು ಸಿಗುವುದಿಲ್ಲ. ಮನೆಯವರು, ಊರವರು, ಪೊಲೀಸರು, ಸಿಕ್ಕ ಸಿಕ್ಕವರೆಲ್ಲ ದಟ್ಟ ಕಾಡಿನಲ್ಲಿ ಬಿಟ್ಟು ಬಿಡದೆ ಹುಡುಕುತ್ತಾರೆ ಒಂದೆರಡು ದಿನದಲ್ಲಿ ಒಂದು ನಾಯಿ ಮನೆಗೆ ವಾಪಸ್ ಬರುತ್ತದೆ. ಅಲ್ಲಿಗೆ ಊರವರು ಅನಾಹುತವನ್ನು ಗ್ರಹಿಸುತ್ತಾರೆ ಆದರೆ ಹುಡುಕುವುದು ನಿಲ್ಲುವುದಿಲ್ಲ.
ಸಿಗದೆ ಹೋದಾಗ ದೈವ, ದೇವರುಗಳ ಮೊರೆ ಹೋಗುತ್ತಾರೆ . ಕೊರಗಜ್ಜನ ಸನ್ನಿದಿಯಲ್ಲಿ ಕೇಳಿದಾಗ ಬದುಕಿದ್ದಾನೆ ಎಂಬ ಆಶ್ವಾಸನೆ ಸಿಗುತ್ತದೆ. ಅದಾಗಲೇ ಒಂದು ವಾರ ಕಳೆದುಹೋಗುತ್ತದೆ ಯುವಕನ ಸುಳಿವಿಲ್ಲ. ಮನೆಯವರು ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಅದರಲ್ಲಿ ಒಂದು ಆಡಿಯೋ ಮಾತ್ರ ದಿಗ್ಬ್ರಮೆಗೊಳಿಸುತ್ತದೆ.
ಅದೊಂದು ಫೋನ್ ಕಾಲ್ ಸಂಭಾಷಣೆ. ಒಂದು ಕಡೆ ಒಬ್ಬ ಹೆಂಗಸು: ಮಾಂತ್ರಿಕರೊ, ತಾಂತ್ರಿಕರೊ ಇರಬಹುದು ಇನ್ನೊಂದು ಕಡೆ ಈ ಯುವಕನ ಸಂಬಂಧಿಕರು ಇದ್ದಂತಿದೆ.
ಆ ಮಹಿಳೆ ಹೇಳುತ್ತಾರೆ: “ಹುಡುಗ ಬದುಕಿದ್ದಾನೆ. ಅವರ ಮನೆಯ ಗದ್ದೆಯಲ್ಲಿ ಒಂದು ಕಲ್ಲಿದೆ. ನೋಡಲು ಅದೊಂದು ಸಾಧಾರಣ ಕಲ್ಲು. ಆ ಕಲ್ಲಿನಲ್ಲಿ ದೇವಿ ಇದ್ದಾಳೆ. ಆ ಕಲ್ಲಿನ ಮೇಲೆ ಈತ ಆವಾಗಾವಾಗ ಕೂರುತಿದ್ದ. ಈಗ ಆ ಕಲ್ಲನ್ನು ಗದ್ದೆಯ ಪಕ್ಕದಲ್ಲಿ ಎಸೆದಿದ್ದಾರೆ. ನನಗೆ ಸ್ಪಷ್ಟವಾಗಿ ಕಾಣುತ್ತಿದೆ ಆ ದೇವಿಯ ಕೈಯಲ್ಲಿ ಕತ್ತಿ ಇದೆ. ಅವಳೇ ಅವನನ್ನು ಅಡಗಿಸಿ ಇಟ್ಟಿದ್ದಾಳೆ. ಈಗ ಮನೆಯವರು ಆ ಕಲ್ಲನ್ನು ಹುಡುಕಬೇಕು, ಸಂಜೆ ಆರು ಘಂಟೆಯ ನಂತರ ಕಲ್ಲಿಗೆ ಪೂಜೆ ಮಾಡಿ ಒಂದು ರೂಪಾಯಿ ನಾಣ್ಯವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಎಕ್ಕದ ಮರಕ್ಕೆ ಕಟ್ಟಿ ಪ್ರಾರ್ಥಿಸಿಕೊಳ್ಳಬೇಕು ಹುಡುಗ ಮನೆಗೆ ಬರುತ್ತಾನೆ ” ಎಂದು ಹೇಳುತ್ತಿರುವ ಆಡಿಯೋ ಅದು.
ದಿನ ಬೆಳಗಾದರೆ ಇಂತಹ ಅದೆಷ್ಟೊ ಜ್ಯೋತಿಷಿಗಳು ಹೊಟ್ಟೆ ಪಾಡಿಗೆ ಏನೇನೊ ಹೇಳುತ್ತಿರುತ್ತಾರೆ. ಎಂಟು ದಿನ ಊಟ ವಿಲ್ಲದೆ ಸುರಿವ ಮಳೆಯಲ್ಲಿ ಕ್ರೂರ ಪ್ರಾಣಿಗಳಿರುವ ಕಾಡಿನಲ್ಲಿ ಆ ಯುವಕ ಬದುಕವ ಸಾದ್ಯತೆ ತೀರಾ ಕಡಿಮೆ ಅನಿಸದಿರದು.
ಆದರೆ, ಮನೆಯವರು ಆ ಕಲ್ಲನ್ನು ಹುಡುಕಿದರು. ಆ ಕಲ್ಲಿಗೆ ಪೂಜೆ ಮಾಡಿ ದೀಪವಿಟ್ಟು ಬೇಡಿಕೊಂಡರು. ಆ ರಾತ್ರಿ ಹಾಗೆ ಮುಗಿಯಿತು. ಮರುದಿನ ಆ ಯುವಕ ತನಗೇನೂ ಆಗಿಲ್ಲ ಎಂಬಂತೆ ತನ್ನ ಇನ್ನೊಂದು ನಾಯಿ ಜೊತೆ ನಡೆದುಕೊಂಡು ಬರುತ್ತಿರುವುದನ್ನು ಊರವರು ನೋಡಿ ಅವರ ಮನೆಯಲ್ಲಿರಿಸಿ ಊಟಕ್ಕೆ ಹಾಕಿ ಮನೆಯವರಿಗೆ ಸುದ್ದಿ ಮುಟ್ಟಿಸುತ್ತಾರೆ.
ಈಗ ಸುತ್ತಮುತ್ತ ಎಲ್ಲ ಕಡೆ ಇದೇ ಸುದ್ದಿ. ಆ ಕಲ್ಲು, ಈ ಮಾಂತ್ರಿಕ ಮಹಿಳೆ, ಅವರು ಹೇಳಿದ ದೇವಿ. ಊಟವಿಲ್ಲದ ಎಂಟು ದಿನ ಬದುಕಿದ ಯುವಕ ಅವನನ್ನು ಬಿಟ್ಟು ಬಾರದ ನಾಯಿ. ಅದೇ ಕಾಂತಾರದ ಕಾಡು. ಅಲ್ಲಿ ಮಾಯವಾದವರು ಮತ್ತೆ ಬರಲಿಲ್ಲ. ಇಲ್ಲಿ ಈ ಯುವಕ ಬಂದಿದ್ದಾನೆ.
ಈ ವಿಜ್ಞಾನದ ಯುಗದಲ್ಲಿ ಹೀಗೂ ನಡೆಯುತ್ತದಾ ಎನ್ನುವ ಪ್ರಶ್ನೆಗಳಿಗೆ ಉತ್ತರ ಹೌದು ಮತ್ತು ಇಲ್ಲ. ನಂಬಿದವರಿಗೆ ಹೌದು. ನಾನು ಇದೆ ಊರಿನಲ್ಲಿ ಹುಟ್ಟಿ ಬೆಳೆದಿರುವುದರಿಂದ ನಾನದನ್ನು ಬಲವಾಗಿ ನಂಬುತ್ತೇನೆ. ನಂಬದವರಿಗೆ ಒಂದು ಅವಕಾಶವಿದೆ ಇದು ಕಥೆಯಲ್ಲ ನಿಜ ಘಟನೆ ಈಗಷ್ಟೆ ನಡೆದಿದೆ ನೀವು ಇದರ ಹಿಂದೆ ಬೀಳಬಹುದು.
-ಇದಿಷ್ಟು ರವೀಶ್ ಅವರು ಹೇಳುವ ಕಥೆ. ಈ ಜಗತ್ತಿನಲ್ಲಿ ಅತಿಮಾನುಷವಾದ ದೈವಿಕ ಶಕ್ತಿಯೊಂದಿದೆ. ಅದುವೇ ಜಗತ್ತನ್ನು ನಿಯಂತ್ರಿಸುತ್ತದೆ ಎನ್ನುವುದನ್ನು ಸಾರವಾಗಿ ಹೇಳುತ್ತದೆ ಕತೆ.
ಇದನ್ನೂ ಓದಿ ; Rishab Shetty : ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ ಕಾಂತಾರ 2! ಶೂಟಿಂಗ್ ಯಾವಾಗ?
ವಿವೇಕಾನಂದನ ಕರೆ ತಂದ ನಾಯಿಗಿದೆ ಸನ್ಮಾನ
ವಿವೇಕಾನಂದ ಬದುಕಿದ್ದಾನೆ ಎಂಬುದನ್ನು ಸಾರಿ ಸಾರಿ ಹೇಳಿದ್ದರು ಹೆಬ್ರಿ ಸಮೀಪದ ಗುಡಿಯೊಂದರ ಕೊರಗಜ್ಜ. ಹೀಗಾಗಿ ಮನೆಯವರೆಲ್ಲ ಸೋಮವಾರ ಸಂಜೆ ಆ ಗುಡಿಗೆ ಹೋಗಲಿದ್ದಾರೆ. ಇತ್ತ ವಿವೇಕಾನಂದನ ಪ್ರಾಣ ಉಳಿಸಿದ್ದು, ಮರಳಿ ಮನೆಗೆ ಕರೆತಂದಿದ್ದು ನಾಯಿ ಎಂಬುದು ನಂಬಿಕೆ. ಇಂಥ ವಿಶ್ವಾಸಾರ್ಹ ಪ್ರಾಣಿಯನ್ನು ಸನ್ಮಾನಿಸುವ ಕಾರ್ಯಕ್ರಮವೂ ಸೋಮವಾರ ಸಂಜೆ ನಡೆಯಲಿದೆ. ಅಂದ ಹಾಗೆ, ಈ ಎಲ್ಲ ವಿದ್ಯಮಾನಗಳನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿರುವವರು ಪೊಲೀಸರು. ವಿವೇಕಾನಂದ ಬದುಕಿದ್ದಾನೆ, ಮರಳಿ ಬಂದಿದ್ದಾನೆ ಎಂದು ಮನೆಯವರು ಹೇಳಿದಾಗ, ನಾವು ಅಷ್ಟು ಹುಡುಕಿದರೂ ಸಿಗದಿದ್ದವನು ಎಲ್ಲಿದ್ದ ಎಂಬ ಅಚ್ಚರಿಯೊಂದಿಗೆ, ಅವನನ್ನು ಒಮ್ಮೆ ಠಾಣೆಗೆ ಕರೆದುಕೊಂಡು ಬನ್ನಿ. ಅವನು ಬದುಕಿದ್ದಾನೆ ಎಂದು ರುಜುವಾತು ಮಾಡಿ ನಾಪತ್ತೆ ಕೇಸು ಕ್ಲೋಸ್ ಮಾಡಿಬಿಡುವ ಎಂದಿದ್ದಾರಂತೆ.
ಇದನ್ನೂ ಓದಿ: ಪತ್ನಿ, ಮಕ್ಕಳೊಂದಿಗೆ ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ; ದೇವರ ದರ್ಶನ, ಖಾವಂದರ ಆಶೀರ್ವಾದ ಪಡೆದ ಕಾಂತಾರ ಹೀರೋ
ಇದಿಷ್ಟು ಕಾಂತಾರ ಕಥೆ. ಜನಜೀವನದಲ್ಲಿ ನಡೆಯುವ ಹಲವು ಅಚ್ಚರಿಗಳಲ್ಲಿ ಇದೂ ಒಂದು. ನೀವು ದೈವ ದೇವರುಗಳನ್ನು ನಂಬುವವರೇ ಆದರೆ ದೈವವೇ ಆ ಯುವಕನನ್ನು ಮರಳಿ ತಂದು ಮನೆ ಸೇರಿಸಿದೆ ಎಂದು ನಂಬಬಹುದು. ಇಲ್ಲಾ ಈಗೆಲ್ಲ ಅದು ಸಾಧ್ಯವಾ ಎನ್ನುವ ಯೋಚನೆ ನಿಮ್ಮದಾಗಿದ್ದರೆ ನಾಯಿಯೇ ಅವನನ್ನು ಕೈಹಿಡಿದಿದೆ ಎಂದೂ ಒಪ್ಪಬಹುದು. ಅಂತೂ ಅಚ್ಚರಿಯ ವಿದ್ಯಮಾನವೊಂದು ಇಲ್ಲಿ ನಡೆದಿರುವುದು ಮಾತ್ರ ನಿಜ.
-
Live News22 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ12 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ5 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
South Cinema15 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕರ್ನಾಟಕ15 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್12 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ12 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್16 hours ago
ರಾಜ್ಕೋಟ್ನಲ್ಲಿ ಈಡೇರಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆ; ನಾಳೆ ಅಂತಿಮ ಏಕದಿನ