ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ 100 ದಿನಗಳು ತುಂಬಿದ್ದು, ಸರ್ಕಾರದ ವೈಫಲ್ಯಗಳ ಕುರಿತು ಚಾರ್ಜ್‌ಶೀಟ್ ಬಿಡುಗಡೆಗೆ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಸಿದ್ಧವಾಗಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿಗಳಿಗಾಗಿ (Karnataka Live News) ಇಲ್ಲಿ ನೋಡಿ.
ತಂದೆ ನೋಡಲು ಜೈಲಿಗೆ ಬಂದವನ ಬಳಿ ಲಂಚ ಕೇಳಿದ ಜೈಲರ್!
ಜೈಲಿನಲ್ಲಿರುವ ತಂದೆಯನ್ನು ನೋಡಲು ಬಂದಿದ್ದ ಮಗನ ಬಳಿ ಮಧುಗಿರಿ ಸಬ್ ಜೈಲ್ ಸೂಪರಿಟೆಂಡೆಂಟ್ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ (Lokayukta raid) ಬಿದ್ದಿದ್ದಾರೆ. ಜೈಲ್ ಸೂಪರಿಟೆಂಡೆಂಟ್ ದೇವೇಂದ್ರ.ಆರ್.ಕೋಣಿ ಲೋಕಾಯುಕ್ತ ಬಲೆಗೆ ಬಿದ್ದವರು.
Lokayukta raid : ತಂದೆ ನೋಡಲು ಜೈಲಿಗೆ ಬಂದವನ ಬಳಿ ಲಂಚ ಕೇಳಿದ ಜೈಲರ್!
ಬೆಂಗಳೂರಿನಲ್ಲಿ 12ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ 11ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜೆಸ್ಸಿಕಾ ಮೃತ ವಿದ್ಯಾರ್ಥಿನಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಏಳು ಸಾಹಿತಿಗಳಿಗೂ ಒಬ್ಬನಿಂದಲೇ ಕೊಲೆ ಬೆದರಿಕೆ! ಸಿಸಿಬಿ ತನಿಖೆಯಲ್ಲಿ ಬಹಿರಂಗ
ಖ್ಯಾತ ಸಾಹಿತಿ ಡಾ.ನಾ ಡಿಸೋಜ ಸೇರಿ ಏಳು ಸಾಹಿತಿಗಳಿಗೂ ಕೊಲೆ ಬೆದರಿಕೆ ಹಾಕಿದ್ದು ಒಬ್ಬನೇ ಎಂಬುದು ಸಿಸಿಬಿ ತನಿಖೆಯಲ್ಲಿ (Threatening letters) ಬಹಿರಂಗವಾಗಿದೆ. ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ ವಿಚಾರವಾಗಿ ಸಿಸಿಬಿ ತನಿಖೆಯಿಂದ ಮಹತ್ತರ ಮಾಹಿತಿ ಲಭ್ಯವಾಗಿದೆ.
Threatening letters : ಏಳು ಸಾಹಿತಿಗಳಿಗೂ ಒಬ್ಬನಿಂದಲೇ ಕೊಲೆ ಬೆದರಿಕೆ! ಸಿಸಿಬಿ ತನಿಖೆಯಲ್ಲಿ ಬಹಿರಂಗ