Mysore Dasara : ನಾದಬ್ರಹ್ಮ ಹಂಸಲೇಖ ಈ ಬಾರಿಯ ಮೈಸೂರು ದಸರಾ ಉದ್ಘಾಟಕ; ಸಿಎಂ ಸಿದ್ದರಾಮಯ್ಯ ಘೋಷಣೆ Vistara News

ಕರ್ನಾಟಕ

Mysore Dasara : ನಾದಬ್ರಹ್ಮ ಹಂಸಲೇಖ ಈ ಬಾರಿಯ ಮೈಸೂರು ದಸರಾ ಉದ್ಘಾಟಕ; ಸಿಎಂ ಸಿದ್ದರಾಮಯ್ಯ ಘೋಷಣೆ

Mysore Dasara : ಖ್ಯಾತ ಸಂಗೀತ ನಿರ್ದೇಶಕ, ಸಾಹಿತಿ ಹಂಸಲೇಖ ಅವರು ಈ ಬಾರಿಯ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದಾರೆ. ಅಕ್ಟೋಬರ್‌ 15ರಂದು ದಸರಾ ಉದ್ಘಾಟನೆ ನಡೆಯಲಿದೆ.

VISTARANEWS.COM


on

Hamsalekha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ಇಡೀ ವಿಶ್ವವೇ ಬೆರಗುಗಣ್ಣುಗಳಿಂದ ನೋಡುವ ಮೈಸೂರಿನ ಅದ್ಧೂರಿ ದಸರಾವನ್ನು (Mysore Dasara) ಈ ಬಾರಿ ಖ್ಯಾತ ಸಾಹಿತಿ, ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ (Hamsalekha) ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಘೋಷಿಸಿದ್ದಾರೆ. ಮೈಸೂರಿನಲ್ಲಿ ಈ ವಿಷಯವನ್ನು ಪ್ರಕಟಿಸಿದ ಅವರು ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

ಅಕ್ಟೋಬರ್​ 15ರ ಬೆಳಗ್ಗೆ 10.15ರಿಂದ 10.30ರ ನಡುವಿನ ಮುಹೂರ್ತದಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಲಿದೆ. ಕಳೆದ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಉದ್ಘಾಟನೆ ಮಾಡಿದ್ದರೆ ಈ ಬಾರಿ ಈ ಗೌರವ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಒಲಿದಿದೆ.

ವೈಭವದ ದಸರಾ ಆಚರಣೆಗೆ ತೀರ್ಮಾನ

ಎಂದಿನಂತೆ ಈ ಬಾರಿಯೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ಇರಲಿರುವುದು ವಿಶೇಷ.

ಮೈಸೂರಿನ 119 ವೃತ್ತಗಳು, 135 ಕಿ.ಮೀ ರಸ್ತೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಕೆ.ಆರ್.ವೃತ್ತ, ಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ಗನ್​ಹೌಸ್ ವೃತ್ತ, ಎಲ್​ಐಸಿ ವೃತ್ತ ಸೇರಿ ನಗರದ ಹಲವು ಕಡೆ ದೀಪಾಲಂಕಾರ ನಡೆಯಲಿದೆ. ವಿಜಯ ದಿನದಂದು ಅದ್ಧೂರಿ ಅಂಬಾರಿ ಮೆರವಣಿಗೆ, ಪಂಜಿನ ಕವಾಯತು ನಡೆಯಲಿದೆ.5

500ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ

ಗಂಗರಾಜು ಎಂಬ ಮೂಲ ಹೆಸರಿನ ಹಂಸಲೇಖ ಈಗ ನಾದ ಬ್ರಹ್ಮ ಎಂದೇ ಪ್ರಖ್ಯಾತರು. ಕನ್ನಡದಲ್ಲಿ ಎಂದೂ ಮರೆಯಲಾಗದ ಅಪರೂಪಾದ ಹಾಡುಗಳನ್ನು ನೀಡಿದ ಸಾಹಿತಿ ಮತ್ತು ಸಂಗೀತ ನಿರ್ದೇಶಕ ಅವರು. 1951ರ ಜೂನ್‌ 23ರಂದು ಹುಟ್ಟಿದ ಅವರು 1973ರಲ್ಲಿ ತ್ರಿವೇಣಿ ಚಿತ್ರದ “ನೀನಾ ಭಗವಂತ” ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗ ಪ್ರವೇ ಮಾಡಿದರು. ಇವರು ಇದುವರೆಗೆ ಸಂಗೀತ, ಸಾಹಿತ್ಯ ಒದಗಿಸಿರುವ ಚಿತ್ರಗಳು ಐನೂರಕ್ಕೂ ಹೆಚ್ಚು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ. ಕನ್ನಡ ಪದಗಳನ್ನು ಅದ್ಭುತವಾಗಿ ಬಳಸಿಕೊಂಡು ಸರಳ ಸಾಹಿತ್ಯದೊಂದಿಗೆ ಅದ್ಭುತವಾದ ಹಾಡುಗಳನ್ನು ಬರೆದು ಅಷ್ಟೇ ಸೊಗಸಾದ ಸಂಗೀತ ಅಳವಡಿಸುವುದು ಅವರ ಹೆಚ್ಚುಗಾರಿಕೆ.

ಇದನ್ನೂ ಓದಿ: Mahisha Dasara : ಮೈಸೂರಲ್ಲಿ ಮತ್ತೆ ಮಹಿಷ ದಸರಾ ಎಂದ ಸಚಿವ ಮಹದೇವಪ್ಪ! ಹೊತ್ತಲಿದೆಯೇ ಕಿಡಿ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

Shakti Scheme: ಹುಬ್ಬಳ್ಳಿಯಲ್ಲಿ ಬುರ್ಕಾ ಧರಿಸಿದ್ದ ಇಬ್ಬರು ಮಹಿಳೆಯರು ಒಂದೇ ಆಧಾರ್ ಕಾರ್ಡ್‌ ತೋರಿಸಿ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನಿರ್ವಾಹಕನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

VISTARANEWS.COM


on

Shakti Scheme
Koo

ಹುಬ್ಬಳ್ಳಿ: ಶಕ್ತಿ ಯೋಜನೆಯಲ್ಲಿ (Shakti Scheme) ಉಚಿತ ಪ್ರಯಾಣ ಸೌಲಭ್ಯವಿದ್ದರೂ ಮೋಸ ಮಾಡಲು ಹೋಗಿ ಇಬ್ಬರು ಮಹಿಳೆಯರು ಸಿಕ್ಕಿಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಬುರ್ಕಾ ಧರಿಸಿದ್ದ ಇಬ್ಬರು ಮಹಿಳೆಯರು ಒಂದೇ ಆಧಾರ್ ಕಾರ್ಡ್‌ ತೋರಿಸಿ ಸಾರಿಗೆ ಬಸ್‌ನಲ್ಲಿ ಓಡಾಟ ನಡೆಸುತ್ತಿದ್ದಾಗ ನಿರ್ವಾಹಕನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಹುಬ್ಬಳ್ಳಿಯ ನೇಕಾರ ನಗರದಿಂದ ಕಿಮ್ಸ್‌ಗೆ ಹೋಗುತ್ತಿದ್ದ ಬಸ್‌ನಲ್ಲಿ ಒಂದೇ ಆಧಾರ್ ಕಾರ್ಡ್‌ ತೋರಿಸಿ ಇಬ್ಬರು ಮಹಿಳೆಯರು ಓಡಾಟ ಮಾಡುತ್ತಿದ್ದರು. ಮೊದಲಿಗೆ ನಿರ್ವಾಹಕನಿಗೆ ಒಂದೇ ಆಧಾರ್‌ ಎಂದು ಗೊತ್ತಾಗಿಲ್ಲ. ನಂತರ ಪರಿಶೀಲಿಸಿದಾಗ ಒಂದೇ ಕಾರ್ಡ್‌ನ ಎರಡು ಪ್ರತಿಗಳು ಎಂಬುವುದಾಗಿ ತಿಳಿದುಬಂದಿದೆ. ಈ ವೇಳೆ ಪ್ರಯಾಣಿಕರು ದೇವರು ಏನು ಮಾಡಿದರೂ ನಡೆಯತ್ತೆ ಎಂದು ನಿರ್ವಾಹಕ ಅಳಲು ತೋಡಿಕೊಂಡಿರುವುದು ಕಂಡುಬಂದಿದೆ. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಮಹಿಳಾ ಸಬಲೀಕರಣ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿ ಮಾಡಿರುವ ಶಕ್ತಿಯೋಜನೆಯಿಂದ ಕೋಟ್ಯಂತರ ಮಹಿಳೆಯರಿಗೆ ಉಪಯೋಗವಾಗುತ್ತಿದೆ. ಆದರೆ, ಪ್ರಯಾಣ ಉಚಿತವಿದ್ದರೂ ಗುರುತಿನ ಚೀಟಿ ಇಲ್ಲದ ಕಾರಣ ಕೆಲವರು ಮೋಸ ಮಾಡುತ್ತಿರುವುದು ಕಂಡುಬಂದಿದೆ. ಹುಬ್ಬಳ್ಳಿ ಪ್ರಕರಣದ ಬಗ್ಗೆ ನಿರ್ವಾಹಕ, ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Moral Policing: ಉಪ್ಪಿನಂಗಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿ ಜೋಡಿಗೆ ತಡೆದು ಧಮಕಿ!

ಅನಿಮಲ್‌ ಸಿನಿಮಾ ನೋಡಿ ಪರ್ಸ್‌ ಬಿಟ್ಟು ಬಂದಳು; ವಾಪಸ್‌ ತರಲು ಹೋದಾಗ ಸೆಕ್ಯುರಿಟಿ ಗಾರ್ಡ್‌ಗೆ ಒದ್ದಳು!

ಬೆಂಗಳೂರು: ಅನಿಮಲ್‌ ಸಿನಿಮಾ ವೀಕ್ಷಣೆಗೆ ಮಾಲ್‌ಗೆ ಬಂದಿದ್ದ ಮಹಿಳೆಯೊಬ್ಬರು ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ (assault case) ನಡೆಸಿದ್ದಾರೆ. ಮರೆತು ಹೋಗಿದ್ದ ವ್ಯಾಲೆಟ್ ಹಿಂಪಡೆಯುವ ವಿಚಾರಕ್ಕೆ ಶುರುವಾದ ಕಿರಿಕ್ ಠಾಣೆ ಮೆಟ್ಟಿಲೇರಿದೆ. ಗರುಡಾ ಮಾಲ್​ನ (garuda mall) ಪಿವಿಆರ್ ಐನಾಕ್ಸ್ ಚಿತ್ರಮಂದಿರದ ಬಳಿ ನಡೆದಿದೆ.

ಅನಿಮಲ್ ಸಿನಿಮಾ ವೀಕ್ಷಿಸಲು ತಡರಾತ್ರಿ 10:30ರ ಸುಮಾರಿಗೆ ಪಿವಿಆರ್​ ಐನಾಕ್ಸ್ ಚಿತ್ರಮಂದಿರಕ್ಕೆ ಮಹಿಳೆ ಬಂದಿದ್ದರು. ಸಿನಿಮಾ ಮುಗಿಸಿ ಹೊರ ಬಂದಾಗ ಸಿನಿಮಾ ಹಾಲ್‌ನಲ್ಲೇ ವ್ಯಾಲೆಟ್‌ ಮರೆತು ಹೋಗಿದ್ದರು. ಹೌಸ್ ಕೀಪಿಂಗ್ ಸಿಬ್ಬಂದಿ ಸ್ವಚ್ಚತಾ ಕಾರ್ಯದ ಸಂದರ್ಭದಲ್ಲಿ ವ್ಯಾಲೆಟ್‌ ಗಮನಿಸಿದ್ದರು. ಬಳಿಕ ವ್ಯಾಲೆಟ್‌ ಅನ್ನು ಸೆಕ್ಯೂರಿಟಿಗೆ ಒಪ್ಪಿಸಿದ್ದರು.

ಮರೆತು ಹೋಗಿದ್ದ ವ್ಯಾಲೆಟ್‌ಗಾಗಿ ಮಹಿಳೆ ಪುನಃ ತಡರಾತ್ರಿ 3 ಗಂಟೆಯ ಸುಮಾರಿಗೆ ಮಾಲ್ ಬಳಿ ಬಂದಿದ್ದಾಳೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್ ನಿಯಮಾನುಸಾರ ಐಡೆಂಟಿಟಿ ಮಾಹಿತಿ ಕೇಳಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಮಹಿಳೆ ಅವಾಚ್ಯವಾಗಿ ನಿಂದಿಸಿ ವ್ಯಾಲೆಟ್ ಕಿತ್ತುಕೊಂಡು, ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾಳೆ. ಕುತ್ತಿಗೆ ಪಟ್ಟಿ ಹಿಡಿದುಕೊಂಡು ಹೊಡೆದಿದ್ದು, ಕಾಲಿನಲ್ಲಿ ಒದ್ದು, ಕಪಾಳಕ್ಕೆ ಬಾರಿಸಿದ್ದಾಳೆ.

ಇದನ್ನೂ ಓದಿ | Road Accident : ಸಾವಿನಲ್ಲೂ ಒಂದಾದ ಪ್ರೇಮಿಗಳು; ರಸ್ತೆ ಅಪಘಾತದಲ್ಲಿ ಮೃತ್ಯು

Woman assaults staff of Garuda Mall in Bengaluru

ಇತ್ತ ಮಾಲ್ ಸಿಬ್ಬಂದಿ ಸಮಾಧಾನಪಡಿಸಲು ಮುಂದಾದರೂ ಮಾತು ಕೇಳದೇ ಮಹಿಳೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೇ ತಪ್ಪಾಯ್ತು ಕ್ಷಮಿಸಿ ಎಂದು ಸಿಬ್ಬಂದಿ ಮಹಿಳೆಯ ಕಾಲಿಗೂ ಬಿದ್ದಿದ್ದಾಳೆ. ಆದರೂ ಬಿಡದೇ ಮಹಿಳೆ ಕುತ್ತಿಗೆ ಪಟ್ಟಿ ಹಿಡಿದುಕೊಂಡು ಹಲ್ಲೆ ಮಾಡಿದ್ದಾಳೆ. ಜತೆಗೆ ಇವರಿಬ್ಬರ ಗಲಾಟೆ ಬಿಡಿಸಲು ಬಂದಿದ್ದ ಸಿಬ್ಬಂದಿಗೂ ಅವಾಚ್ಯವಾಗಿ ನಿಂದಿಸಿದ್ದಾಳೆ.

ಇಷ್ಟಲ್ಲ ಘಟನೆ ಬಳಿಕ ಮಾಲ್‌ ಸಿಬ್ಬಂದಿ ಪೊಲೀಸರನ್ನು ಕರೆಸಿದ್ದಾರೆ. ಈ ವೇಳೆ ತನ್ನ ವ್ಯಾಲೆಟ್‌ನಲ್ಲಿ ಎಂಟು ಸಾವಿರ ರೂ. ಕಳ್ಳತನವಾಗಿದೆ ಎಂದು ದೂರು ನೀಡಿದ್ದಾಳೆ. ಆದರೆ ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ವ್ಯಾಲೆಟ್‌ನಲ್ಲಿ ಹಣ ಹಾಗೂ ಯಾವುದೇ ವಸ್ತು ಕಳ್ಳತನವಾಗಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಘಟನೆ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ಹಾಗೂ ಸಿಬ್ಬಂದಿ ಇಬ್ಬರ ಮೇಲೂ ದೂರು ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದಕ್ಷಿಣ ಕನ್ನಡ

ಹೈಪರ್ ಲೋಕಲ್ ಸುದ್ದಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧ: ನವೀನ್ ಅಮ್ಮೆಂಬಳ

ಈಗಿನ ಸಾಮಾಜಿಕ ಜಾಲತಾಣಗಳು‌ ಮಹತ್ವದ ತೀರಾ ಸ್ಥಳೀಯ ಅಥವಾ ಬೇರುಮಟ್ಟದ ಸುದ್ದಿ, ಬೆಳವಣಿಗೆಗಳನ್ನು ಜಗತ್ತಿಗೆ ತಲುಪಿಸುತ್ತಿವೆ. ಇಂತಹ ಕಾಲಘಟ್ಟದಲ್ಲಿ ಸ್ಥಳೀಯ ಹೈಪರ್ ಲೋಕಲ್ ಸುದ್ದಿಗಾರರಿಗೆ ವಿಪುಲ ಅವಕಾಶಗಳಿವೆ ಎಂದು ಮಾಮ್ ಸಂಘಟನೆ ಅಧ್ಯಕ್ಷ ನವೀನ್ ಅಮ್ಮೆಂಬಳ ತಿಳಿಸಿದ್ದಾರೆ.

VISTARANEWS.COM


on

Naveen Ammembala
Koo

ಬೆಳ್ತಂಗಡಿ: ಹೈಪರ್ ಲೋಕಲ್ ಸುದ್ದಿಗಳಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಮಂಗಳೂರಿನ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ (ಮಾಮ್) ಸಂಘಟನೆಯ ಅಧ್ಯಕ್ಷ ನವೀನ್ ಅಮ್ಮೆಂಬಳ ಅಭಿಪ್ರಾಯಪಟ್ಟರು.

ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮತ್ತು ಪದವಿ ಅಧ್ಯಯನ ವಿಭಾಗ ಮಾಮ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಹೈಪರ್ ಲೋಕಲ್ ಮಾಧ್ಯಮ: ಕಾರ್ಯನಿರ್ವಹಣೆ ಮತ್ತು ಸುಸ್ಥಿರತೆ’ ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಬೆಳ್ತಂಗಡಿಯ ದಿಡುಪೆ ಎಂಬ ಕುಗ್ರಾಮವನ್ನು ಅದರ ಸುದ್ದಿಗಳನ್ನು ದಶಕಗಳ‌ ಹಿಂದೆ ರಾಜ್ಯ ಮಟ್ಟಕ್ಕೆ ಉದಯವಾಣಿ ಪತ್ರಿಕೆಯ ಮೂಲಕ ಪರಿಚಯಿಸಿದವರು ಅಭ್ಯುದಯ ಪತ್ರಕರ್ತ ಈಶ್ವರ ದೈತೋಟ ಅವರು. ಆ ಮೂಲಕ ಅಭಿವೃದ್ಧಿ ಕಂಡ ದಿಡುಪೆ ಜಗತ್ತಿನ ಗಮನ ಸೆಳೆಯಿತು. ತೀರಾ ಸ್ಥಳೀಯ ಮಹತ್ವವನ್ನು ಪಸರಿಸಿದ ಕರ್ನಾಟಕದ‌‌‌ ಮೊದಲ ಪ್ರಯೋಗ ಅಭ್ಯುದಯ ಪತ್ರಿಕೋದ್ಯಮದ ಮಾದರಿ. ಹಾಗಾಗಿ ಅಭ್ಯುದಯ ಪತ್ರಿಕೋದ್ಯಮಕ್ಕೂ ಹೈಪರ್ ಲೋಕಲ್ ಸುದ್ದಿಗಳಿಗೂ ಅವಿನಾಭಾವತೆ ಇದೆ ಎಂದು ಅವರು ಹೇಳಿದರು.

ಹೈಪರ್ ಅಂದರೆ ಗತಿಶೀಲ, ಚಲನಶೀಲ, ಕ್ರಿಯಾತ್ಮಕ ಎಂದೆಲ್ಲಾ ಅರ್ಥೈಸಬಹುದು. ತೀರಾ‌ ಸ್ಥಳೀಯ ಸುದ್ದಿಗೆ ಹೆಚ್ಚಿನ ಮಹತ್ವ‌ ನೀಡಿ ಜಾಗತಿಕ ಅಥವಾ ಗ್ಲೋಬಲ್ ಮಟ್ಟಕ್ಕೆ ಒಯ್ಯುವ ಸಾಧ್ಯತೆ ಹೇರಳವಾಗಿದೆ. ‘ ಹೈಪರ್ ಲೋಕಲ್ ‘ ಸುದ್ದಿಗಳೇ ಹೈಪರ್ ಗ್ಲೋಬಲ್ ಸುದ್ದಿಗಳಾಗಿ ಪರಿವರ್ತನೆಯಾಗುವುದಕ್ಕೆ ನಿದರ್ಶನಗಳಿವೆ. ರಾಷ್ಟ್ರಮಟ್ಟದ ಮಾಧ್ಯಮಗಳೂ ಪುತ್ತೂರು ಅಥವಾ ರಾಯಚೂರಿನ ಹಳ್ಳಿಯ ಸುದ್ದಿಗೂ ಪ್ರಾಮುಖ್ಯತೆ ಕೊಡುತ್ತಿರುವುದನ್ನು ಗಮನಿಸಬಹುದು ಎಂದು ಅಮ್ಮೆಂಬಳ ಅಭಿಪ್ರಾಯಿಸಿದರು‌.

ಈಗಿನ ಸಾಮಾಜಿಕ ಜಾಲತಾಣಗಳು‌ ಮಹತ್ವದ ತೀರಾ ಸ್ಥಳೀಯ ಅಥವಾ ಬೇರುಮಟ್ಟದ ಸುದ್ದಿ, ಬೆಳವಣಿಗೆಗಳನ್ನು ಜಗತ್ತಿಗೆ ತಲುಪಿಸುತ್ತಿವೆ. ಇಂತಹ ಕಾಲಘಟ್ಟದಲ್ಲಿ ಸ್ಥಳೀಯ ಹೈಪರ್ ಲೋಕಲ್ ಸುದ್ದಿಗಾರರಿಗೆ ವಿಪುಲ ಅವಕಾಶಗಳಿವೆ ಎಂದರು.

ಜಾಗತಿಕ ಮಟ್ಟದ ಪತ್ರಿಕೆಗಳಿಗಿಂತ ಸ್ಥಳೀಯ ಪತ್ರಿಕೆಗಳಿಗೆ ಪ್ರಾಮುಖ್ಯತೆ ಹೆಚ್ಚು. ಏಕೆಂದರೆ ಇವು ಸ್ಥಳೀಯ ಆಸಕ್ತಿಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಜಾಗತಿಕ ನೆಲೆಗಟ್ಟಿನಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತವೆ. ಪ್ರಸ್ತುತ ಕ್ರಿಯಾಶೀಲ ಸ್ಥಳೀಯ ಪತ್ರಿಕೆಗಳಿಗೆ ಹೊಸ ಮಾಧ್ಯಮ ಲೋಕದಲ್ಲಿ ವ್ಯಾಪಕ ಅವಕಾಶಗಳು ಲಭ್ಯವಾಗುತ್ತಿವೆ ಎಂದರು.

ಇದನ್ನೂ ಓದಿ | ವಿಸ್ತಾರ ಅಂಕಣ: ಮನಮೋಹನ್‌ ಸಿಂಗ್‌ ಮಾದರಿ ಅಥವಾ ನರೇಂದ್ರ ಮೋದಿ ಮಾದರಿ: ಮುಸ್ಲಿಂ ಕಲ್ಯಾಣಕ್ಕೆ ಯಾವುದು ಸರಿ?

ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಡಾ. ಯು ಪಿ ಶಿವಾನಂದ, ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ, ಮಾಮ್ ಸಂಘಟನೆ ಗೌರವಾಧ್ಯಕ್ಷ ವೇಣು ಶರ್ಮ, ಕಾರ್ಯಾಗಾರದ ಸಂಚಾಲಕಿ, ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ಎ.ಜೆ. ಉಪಸ್ಥಿತರಿದ್ದರು.

Continue Reading

ಕರ್ನಾಟಕ

ಎಂ.ಬಿ. ಪಾಟೀಲ್‌ಗೆ ನೀರಾವರಿ ಖಾತೆ ಸಿಗಬೇಕಿತ್ತು; ಡಿಕೆಶಿಗೆ ಕೊಟ್ಟಿದ್ದಕ್ಕೆ ರಂಭಾಪುರಿ ಶ್ರೀ ಬೇಸರ!

Rambhapuri Seer: ಈ ಬಾರಿ ಸರ್ಕಾರದಲ್ಲಿ ಎಂ.ಬಿ ಪಾಟೀಲ್‌ಗೆ ಜಲಸಂಪನ್ಮೂಲ ಖಾತೆ ಕೊಟ್ಟಿದ್ದರೆ ಆ ಕಥೆಯೇ ಬೇರೆಯಾಗಿರುತ್ತಿತ್ತು ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ಧ ರಂಭಾಪುರಿ ಶ್ರೀಗಳು ಅಸಮಾಧಾನ ಹೊರಹಾಕಿದ್ದಾರೆ.

VISTARANEWS.COM


on

Rambhapuri seer and MB Patil
Koo

ವಿಜಯಪುರ: ಎಂ.ಬಿ. ಪಾಟೀಲ್‌ಗೆ ಜಲಸಂಪನ್ಮೂಲ ಖಾತೆ ಸಿಗದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಂಭಾಪುರಿ ಶ್ರೀಗಳು (Rambhapuri seer) ಅಸಮಾಧಾನ ವ್ಯಕ್ತಪಡಿಸಿರುವುದು ಕಂಡುಬಂದಿದೆ. ಈ ಬಾರಿ ಸರ್ಕಾರದಲ್ಲಿ ಎಂ.ಬಿ ಪಾಟೀಲ್‌ಗೆ ನೀರಾವರಿ ಖಾತೆ ಕೊಟ್ಟಿದ್ದರೆ ಆ ಕಥೆಯೇ ಬೇರೆಯಾಗಿರುತ್ತಿತ್ತು ಎಂದು ಹೇಳುವ ಮೂಲಕ ಡಿಕೆಶಿಗೆ ಜಲಸಂಪನ್ಮೂಲ ಖಾತೆ ಸಿಕ್ಕಿದ್ದಕ್ಕೆ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ಮಾತನಾಡಿರುವ ಬಾಳೆ ಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅವರು, ಕರ್ನಾಟಕ ಸರ್ಕಾರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿ ಎರಡನೇ ಸ್ಥಾನದಲ್ಲಿ ಎಂ.ಬಿ. ಪಾಟೀಲ್ ಮುನ್ನಡೆಯುತ್ತಿದ್ದಾರೆ. ಅವರಿಗೆ ನೀರಾವರಿ ಖಾತೆ ಕೊಟ್ಟಿದ್ದರೆ ಆ ಕಥೆಯೇ ಬೇರೆಯಾಗಿರುತ್ತಿತ್ತು. ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಿತ್ತು. ಆದರೆ ಸಿದ್ದರಾಮಯ್ಯರ ಅವರು ಅವಕಾಶ ಕೊಡಲಿಲ್ಲ. ಸಿಎಂಗೆ ಖಂಡಿತವಾಗಿಯೂ ಎಂ.ಬಿ. ಪಾಟೀಲ್ ಬೇಕಾದವರು. ಅವರು ಖಾತೆ ಸಿಗುತ್ತದೆ ಎಂದು ಬಹಳ ಆಸೆ ಇಟ್ಟುಕೊಂಡಿದ್ದೆವು. ಆದರೆ ಜಲಸಂಪನ್ಮೂಲ ಖಾತೆ ಬೇರೆಯವರ ಪಾಲಾಯಿತು ಎಂದು ತಿಳಿಸಿದ್ದಾರೆ.

ಕೈಗಾರಿಕೆಗಳಿಂದ ರಾಜ್ಯದಲ್ಲಿ ಏನೇನು ಮಾಡಬೇಕು ಎಂಬುವುದರ ಬಗ್ಗೆ ಎಂ.ಬಿ. ಪಾಟೀಲ್ ಭದ್ರ ಬುನಾದಿ ಹಾಕುತ್ತಿದ್ದು, ಹೆಚ್ಚಿನ ವಿದೇಶಿ ಹೂಡಿಕೆಯನ್ನು ತರುತ್ತಿದ್ದಾರೆ. ಈ ಹಿಂದೆ ಜಲಸಂಪನ್ಮೂಲ ಸಚಿವರಿದ್ದಾಗ ಎಂ.ಬಿ.ಪಾಟೀಲ್ ಬಹಳ ದೊಡ್ಡ ಕೆಲಸ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಎಲ್ಲಾ ಭಾಗದಲ್ಲಿ ಕೆರೆ ತುಂಬಿಸುವ ಕೆಲಸ ಮಾಡಿದರು. ಇವತ್ತು ಬಹಳ ಮಳೆ ಆಗದೇ ಇದ್ದರೂ ಇಲ್ಲಿನ ಹಸಿರು ನೋಡಿದರೆ ತಿಳಿಯುತ್ತದೆ. ಎಲ್ಲಾ ಕೆರೆ ತುಂಬಿದ ಪರಿಣಾಮದಿಂದಲೇ ಅಂತರ್ಜಲ ಹೆಚ್ಚಾಗಿ ಬೋರ್ವೆಲ್‌ನಲ್ಲಿ ನೀರಿದೆ. ಫಸಲು ಬೆಳೆಯಲು ಸಾಧ್ಯ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Congress Guarantee: ಸಿಎಂ ಸಿದ್ದರಾಮಯ್ಯ ತವರಲ್ಲೇ ಸಿಗದ ಗ್ಯಾರಂಟಿ ಯೋಜನೆಗಳು; ಸ್ಲಂ ನಿವಾಸಿಗಳ ಪರದಾಟ

ಉಚಿತ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆ

ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಸರ್ಕಾರದ ಯೋಜನೆಗಳಿಗೆ ಮುಕ್ಕಾಲು ಭಾಗ ಹಣ ಖರ್ಚಾಗುವುದರಿಂದ ಅಭಿವೃದ್ಧಿ ಸ್ಥಗಿತಗೊಂಡಿದೆ. ಯೋಜನೆಗಳ ಮೊರೆ ಹೋಗಿ ದುಡಿಯುವ ಜನರು ಕೂಡ ಸೋಮಾರಿಗಳಾಗಿದ್ದಾರೆ. ಧಾರ್ಮಿಕ ಕ್ಷೇತ್ರ ಅಲ್ಲದೇ ರಾಜ್ಯದ ಯಾವ ಅಭಿವೃದ್ಧಿ ಕೆಲಸಗಳಿಗೂ ಹಣ ಬಿಡುಗಡೆ ಆಗುತ್ತಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು. ಜಾತಿಯ ತುಷ್ಟೀಕರಣ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಅನುದಾನ ನೀಡದ್ದಕ್ಕೆ ಅಸಮಾಧಾನ

ರೇಣುಕಾಚಾರ್ಯ ಶಿಲಾ ಮಂಟಪಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಕೊಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಂಭಾಪುರಿ ಶ್ರೀಗಳು, ಬಾಳೆ ಹೊನ್ನೂರು ಧರ್ಮ ಪೀಠದಲ್ಲಿ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಶಿಲಾ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಮೂರು ಬೃಹತ್ ಶಿಲೆಗಳು ಬಂದಿದ್ದು, ಶಿಲ್ಪಿಗಳು ಕೆಲಸ ಮಾಡುತ್ತಿದ್ದಾರೆ. 36 ಅಡಿ ಎತ್ತರ, 22 ಅಗಲದ ಕಲ್ಲು ಆಂಧ್ರದಿಂದ ವರ್ಷಾಂತ್ಯಕ್ಕೆ ಬರಲಿದೆ. ಅದು 12 ಕೋಟಿ ರೂಪಾಯಿ ಯೋಜನೆಯಾಗಿದ್ದು, ಯಡಿಯೂರಪ್ಪ ಸಿಎಂ ಆಗಿದ್ದಾಗ 5 ಕೋಟಿ ಬಿಡುಗಡೆ ಮಾಡಿದ್ದರು. ನಂತರ ಬಂದ ಸಿಎಂಗಳು ಯಾವುದೇ ರೀತಿ ಸ್ಪಂದಿಸದೇ ತಟಸ್ಥವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉಡುಪಿ

Road Accident: ಕಾರ್ಕಳ ಬಳಿ ಖಾಸಗಿ ಬಸ್‌-ಜೀಪ್ ನಡುವೆ ಭೀಕರ ಅಪಘಾತ; 12 ಮಂದಿಗೆ ಗಂಭೀರ ಗಾಯ

Road Accident: ಉಡುಪಿ ಜಿಲ್ಲೆಯ ಕಾರ್ಕಳ ನಿಟ್ಟೆ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ನಡೆದಿದ್ದು, ಬಸ್‌ನಲ್ಲಿದ್ದ 12 ಪ್ರಯಾಣಿಕರಿಗೆ ಗಾಯಗಳಾಗಿವೆ.

VISTARANEWS.COM


on

Bus-jeep accident
Koo

ಉಡುಪಿ: ಖಾಸಗಿ ಬಸ್‌ ಮತ್ತು ಮಹೀಂದ್ರ ಜೀಪ್ ನಡುವೆ ಭೀಕರ ಅಪಘಾತ (Road Accident) ಸಂಭವಿಸಿ 12 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾರ್ಕಳ ನಿಟ್ಟೆ ಸಮೀಪದ ಮಂಜರಪಲ್ಕೆ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.

ಮುಂಬೈಗೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಕಾರ್ಕಳ ಕಡೆಗೆ ಬರುತ್ತಿದ್ದ ಮಹೀಂದ್ರ ಜೀಪ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಕಾರ್ಕಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ವಕೀಲನ ಹತ್ಯೆ ಮಾಡಿ ರಕ್ತದ ಕೈಯಲ್ಲೇ ದಂಪತಿಯಿಂದ ಹಣ ಪಡೆದಿದ್ದ ಸುಪಾರಿ ಕಿಲ್ಲರ್ಸ್‌!

ಸಾವಿನಲ್ಲೂ ಒಂದಾದ ಪ್ರೇಮಿಗಳು; ರಸ್ತೆ ಅಪಘಾತದಲ್ಲಿ ಮೃತ್ಯು

ramanagar road accident

ರಾಮನಗರ: ನೂರಾರು ಕನಸುಗಳನ್ನು ಹೊತ್ತಿದ್ದ ಆ ಜೋಡಿ ಸಾವಿನಲ್ಲೂ ಒಂದಾಗಿದೆ. ಶಾಲಾ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ (Road Accident) ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಪ್ರೇಮಿಗಳು (Lovers Death) ಮೃತಪಟ್ಟಿದ್ದಾರೆ. ಕೆಬ್ಬೆಹಳ್ಳಿ ಗ್ರಾಮದ ದೀಪು (25), ತಿಪ್ಪೂರು ಗ್ರಾಮದ ಶೈಲ (20) ಮೃತ ದುರ್ದೈವಿಗಳು.

ಶನಿವಾರ ರಾತ್ರಿ ಕನಕಪುರ ತಾಲೂಕಿನ ಕೋಡಿಹಳ್ಳಿ ಮುಖ್ಯ ರಸ್ತೆಯ ನಾರಾಯಣಪುರದ ನಂಜಪ್ಪನ ಕಟ್ಟೆ ಬಳಿ ಈ ದುರ್ಘಟನೆ ನಡೆದಿದೆ. ಶೈಲಾಳನ್ನು ಮನೆಗೆ ಡ್ರಾಪ್‌ ಮಾಡುವ ಸಲುವಾಗಿ ಕನಕಪುರದಿಂದ ದೀಪು ತನ್ನ ಕಾರಲ್ಲಿ ಹೊರಟ್ಟಿದ್ದರು. ಈ ವೇಳೆ ಎದುರಿಗೆ ಬಂದ ಶಾಲಾ ಬಸ್‌ವೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಛಿದ್ರ ಛಿದ್ರಗೊಂಡಿದ್ದು, ಒಳಗಿದ್ದ ದೀಪು, ಶೈಲು ಗಂಭೀರ ಗಾಯಗೊಂಡಿದ್ದರು.

ಇದನ್ನೂ ಓದಿ | Assam Police: ಅಸ್ಸಾಂ ಪೊಲೀಸರ ಭರ್ಜರಿ ಬೇಟೆ; 637 ಕೆ.ಜಿ. ಗಾಂಜಾ ವಶ

ಅಪಘಾತದಲ್ಲಿ ಶೈಲ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ದೀಪುನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಾಗ ಜೀವ ಬಿಟ್ಟಿದ್ದಾನೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Gautam Gambhir
ಕ್ರಿಕೆಟ್9 mins ago

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

Shakti Scheme
ಕರ್ನಾಟಕ21 mins ago

Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

Supreme Court verdict on Article 370 and Know about this article
ದೇಶ1 hour ago

ನಾಳೆ ಆರ್ಟಿಕಲ್ 370 ರದ್ದು ತೀರ್ಪು; ಅದಕ್ಕೂ ಮೊದಲು ಈ ಸಂಗತಿ ತಿಳಿದುಕೊಂಡಿರಿ

WPL 2024 Auction
ಕ್ರಿಕೆಟ್1 hour ago

ಬಿಡ್ಡಿಂಗ್​ ಹಣದಲ್ಲಿ ತಂದೆ-ತಾಯಿಗೆ ವಿಶೇಷ ಉಡುಗೊರೆ ನೀಡಲು ಮುಂದಾದ ಕರ್ನಾಟಕದ ​ ವೃಂದಾ ದಿನೇಶ್​

Naveen Ammembala
ದಕ್ಷಿಣ ಕನ್ನಡ1 hour ago

ಹೈಪರ್ ಲೋಕಲ್ ಸುದ್ದಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧ: ನವೀನ್ ಅಮ್ಮೆಂಬಳ

Chhattisgarh to be CM Vishnu has two deputies and Raman Singh Speaker
ದೇಶ2 hours ago

ಛತ್ತೀಸ್‍‌ಗಢ ಸಿಎಂ ವಿಷ್ಣುಗೆ ಇಬ್ಬರು ಡೆಪ್ಯುಟಿಗಳು; ರಮಣ್ ಸಿಂಗ್ ಸ್ಪೀಕರ್

Rambhapuri seer and MB Patil
ಕರ್ನಾಟಕ2 hours ago

ಎಂ.ಬಿ. ಪಾಟೀಲ್‌ಗೆ ನೀರಾವರಿ ಖಾತೆ ಸಿಗಬೇಕಿತ್ತು; ಡಿಕೆಶಿಗೆ ಕೊಟ್ಟಿದ್ದಕ್ಕೆ ರಂಭಾಪುರಿ ಶ್ರೀ ಬೇಸರ!

India U19 vs Pakistan U19
ಕ್ರಿಕೆಟ್2 hours ago

U19 Asia Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ 8 ವಿಕೆಟ್​ ಸೋಲು

Reliance Retail launches beauty retail store 'Tira' in Bengaluru
ದೇಶ2 hours ago

Reliance Retail: ಯಲಹಂಕದಲ್ಲಿ ರಿಲಯನ್ಸ್ ರೀಟೇಲ್‌ನ ‘ಟಿರಾ’ ಮಳಿಗೆ ಆರಂಭ

South Africa vs India 1
ಕ್ರಿಕೆಟ್3 hours ago

IND vs SA: ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಪಂದ್ಯ ವಿಳಂಬ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ6 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ9 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ17 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌