Site icon Vistara News

Karnataka live news: ಟಾಯ್ಲೆಟ್‌ ಚಿತ್ರೀಕರಣ ಕೇಸ್‌ ತನಿಖಾಧಿಕಾರಿ ಬದಲು; ಮಲ್ಪೆ PI ಎತ್ತಂಗಡಿ, ಕುಂದಾಪುರ DSYPಗೆ ಹೊಣೆ

karnataka live news

ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಕಾಲೇಜು ವಿಡಿಯೊ ಪ್ರಕರಣದ ತನಿಖಾಧಿಕಾರಿ ಬದಲಾವಣೆ. ಮಲ್ಪೆ ಇನ್ಸ್‌ ಪೆಕ್ಟರ್‌ ಮಂಜುನಾಥ ಗೌಡ ಬದಲಿಗೆ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ. ಇದೂ ಸೇರಿದಂತೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿ ಬೆಳವಣಿಗೆಗಳನ್ನು (Karnataka live news) ತಿಳಿಯಲು ಇಲ್ಲಿ ಗಮನಿಸಿ.

Deepa S

ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ರಾಜ್ಯಾದ್ಯಂತ ನೈರುತ್ಯ ಮುಂಗಾರು (Southwest monsoon) ಕರಾವಳಿಯಲ್ಲಿ ಸಾಮಾನ್ಯವಾಗಿದ್ದರೆ, ಒಳನಾಡಿನಲ್ಲಿ (weather report) ದುರ್ಬಲಗೊಂಡಿದೆ. ರಾಜ್ಯದಲ್ಲಿ ಇಂದು, ನಾಳೆ (ಜು.30, 31) ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ (Rain News) ಸಾಧ್ಯತೆಯಿದೆ. ಒಳನಾಡಿನಲ್ಲಿ ಜಿಟಿಜಿಟಿ ಮಳೆಯಾಗಲಿದೆ.

Weather Report : ಕರಾವಳಿಯಲ್ಲಿ ಬಿರುಗಾಳಿ; ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
Deepa S

ಭಾನುವಾರ ಬೆಂಗಳೂರು ಸೇರಿ ಕರಾವಳಿ ಮಲೆನಾಡಲ್ಲಿ ಚಿಟಪಟ ಮಳೆ

ರಾಜ್ಯಾದ್ಯಂತ ಮಳೆ (Rain News) ಅಬ್ಬರ ತಗ್ಗಿದೆ. ನೈರುತ್ಯ ಮುಂಗಾರು (Southwest monsoon) ಕರಾವಳಿಯಲ್ಲಿ ಸಾಮಾನ್ಯವಾಗಿದ್ದರೆ, ಒಳನಾಡಿನಲ್ಲಿ ದುರ್ಬಲಗೊಂಡಿದೆ. ಜು. 30ರಂದು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನಲ್ಲಿ ಜಿಟಿಜಿಟಿ (weather report) ಮಳೆಯಾಗಲಿದೆ.

Weather Report : ಬೆಂಗಳೂರು ಸೇರಿ ಕರಾವಳಿ, ಮಲೆನಾಡಲ್ಲಿ ನಾಳೆ ಚಿಟಪಟ ಮಳೆ
Deepa S

ಅಪಾಯಕಾರಿ ರೀಲ್ಸ್‌ ಮಾಡಿದವನ ಸ್ಥಿತಿ ಗಂಭೀರ

ಸೋಶಿಯಲ್ ಮೀಡಿಯಾ (Social media) ಹುಚ್ಚು ಸಾಕಷ್ಟು ಜನರ ಜೀವನಕ್ಕೆ ಮಾರಕವಾಗಿದೆ. ಈ ನಡುವೆ ರೀಲ್ಸ್ ಮಾಡಲು (bike Stunt) ಹೋಗಿ ರಿಯಲ್ ಆಗಿ ಜೀವಕ್ಕೆ ಕುತ್ತು ತಂದುಕೊಂಡಿರುವ (Reels Accident) ಘಟನೆಯೊಂದು ಧಾರವಾಡ ಜಿಲ್ಲೆಯ ಅಣ್ಣೀಗೆರಿ ರಸ್ತೆಯಲ್ಲಿ ನಡೆದಿದೆ.

Reels Accident : ಸಾಯೋ ಮುಂಚೆ ಸ್ಟ್ಯಾಚು ಆಗೋ ಆಸೆ; ಅಪಾಯಕಾರಿ ರೀಲ್ಸ್‌ ಮಾಡಿದವನ ಸ್ಥಿತಿ ಗಂಭೀರ
Deepa S

ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲು

ಬೆಂಗಳೂರಿನ ಸುಂಕದಕಟ್ಟೆಯ ಪಿಳ್ಳಪ್ಪನ ಕಟ್ಟೆ ಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ (Youth drowned) ಬಾಲಕನೊಬ್ಬ ನೀರು ಪಾಲಾಗಿದ್ದಾನೆ. ಭಾನುವಾರ ಮಧ್ಯಾಹ್ನ ಎಂಟು ಜನರಿಂದ ಗುಂಪು ಕೆರೆಯಲ್ಲಿ ಈಜಾಡಲು ತೆರಳಿದ್ದಾರೆ. ಈ ವೇಳೆ ಒರ್ವ ಬಾಲಕ ನೀರಿನಲ್ಲಿ ಮುಳುಗಿದ್ದಾನೆ.

Youth drowned : ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲು
Deepa S

ಖಾಸಗಿ ವಿಡಿಯೊ ವೈರಲ್‌ಗೆ ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ

ಸೋಶಿಯಲ್‌ ಮೀಡಿಯಾದಲ್ಲಿ (Social Media) ಖಾಸಗಿ ವಿಡಿಯೊ ಟ್ರೋಲ್ (Troll Video) ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ನಗರದ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರು ಮಹಡಿ ಮೇಲೆ ಏಕಾಂತದಲ್ಲಿ ಇದ್ದರು. ಯಾರೋ ಕಿಡಿಗೇಡಿಗಳು ಇದನ್ನೂ ಮೊಬೈಲ್‌ನಲ್ಲಿ ಸೆರೆಯಿಡಿದು ವೈರಲ್‌ ಮಾಡಿದ್ದರು.

Self Harming :ಖಾಸಗಿ ವಿಡಿಯೊ ವೈರಲ್‌; ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ
Exit mobile version