Site icon Vistara News

Karnataka Live News: ಇಂದು ಬಜೆಟ್‌ ಮಂಡನೆಗೆ ಮುನ್ನ ಸಿದ್ದರಾಮಯ್ಯ ನೋ ಟೆಂಪಲ್‌ ವಿಸಿಟ್‌

Karnataka Live News Updates

ಬೆಂಗಳೂರು: ನೂತನ ವಿಧಾನಸಭೆ ಕಲಾಪದ ಐದನೇ ದಿನವಾದ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಮಂಡನೆಗೆ ಸಜ್ಜಾಗಿದ್ದಾರೆ. ಉಡುಪಿ- ದಕ್ಷಿಣ ಕನ್ನಡ- ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ಗುರುವಾರ ನಾಲ್ವರ ಬಲಿಯಾಗಿದೆ. ಇದೂ ಸೇರಿದಂತೆ ಇನ್ನೂ ಹಲವಾರು ರಾಜಕೀಯ ಮತ್ತಿತರ ಬೆಳವಣಿಗೆಗಳ ಕ್ಷಣಕ್ಷಣದ ಸುದ್ದಿ ಅಪ್‌ಡೇಟ್‌ಗಳಿಗೆ (Karnataka Live News) ಇಲ್ಲಿ ಗಮನಿಸಿ.

Krishna Bhat

ಬಜೆಟ್‌ ಮಂಡನೆಗೆ ಮುನ್ನ ನೋ ಟೆಂಪಲ್‌ ವಿಸಿಟ್‌

ಬೆಂಗಳೂರು: ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಬಜೆಟ್‌ ಮಂಡನೆಗೆ ಮುನ್ನ ದೇವಸ್ಥಾನಗಳಿಗೆ ಭೇಟಿ ನೀಡುವ ವಾಡಿಕೆ ಇದೆ. ಆದರೆ, ಸಿದ್ದರಾಮಯ್ಯ ಅವರು ಮಾತ್ರ ದೇವಸ್ಥಾನಕ್ಕೆ ಹೋಗದೇ ನೇರವಾಗಿ ವಿಧಾನಸೌಧಕ್ಕೆ ಹೋಗಲಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಹಿಂದೆ ಬಜೆಟ್ ಮಂಡನೆಗೂ ಮುನ್ನ ಎರಡು ದೇವಸ್ಥಾನ ವಿಸಿಟ್ ಮಾಡಿದ್ದ‌ರು. ಆರ್ ಟಿ ನಗರ ನಂಜುಂಡೇಶ್ವರ ದೇವಸ್ಥಾನ,ಬಾಲಬ್ರೂಯಿಯ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬೊಮ್ಮಾಯಿ

ಸಾಮಾನ್ಯವಾಗಿ ಬಜೆಟ್ ಮಂಡನೆಗೂ ಮುನ್ನ ದೇವಸ್ಥಾನಕ್ಕೆ ಹೋಗುವ ಸಂಪ್ರದಾಯವಿತ್ತು. ಆದರೆ, ಸಿದ್ದರಾಮಯ್ಯ ಮಾತ್ರ ನೇರವಾಗಿ ಮನೆಯಿಂದ ಶಾಸಕಾಂಗ ಪಕ್ಷ ಸಭೆಗೆ ಹೋಗಲಿದ್ದಾರೆ.

Harish Kera

ಮಳೆ ಅವಾಂತರಕ್ಕೆ ರಾಜ್ಯದ ನಾನಾ ಕಡೆ ನಾಲ್ವರ ಬಲಿ

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ವ್ಯಾಪಿಸಿದ್ದರೆ. ಕರಾವಳಿ ಹಾಗೂ ಮಲೆನಾಡುಗಳಲ್ಲಿ ಭಾರಿ ಮಳೆಯಾಗುತ್ತಿದೆ. ಗುರುವಾರ ಮಳೆ ಸೃಷ್ಟಿಸಿದ ಅವಾಂತರಕ್ಕೆ ರಾಜ್ಯದ ನಾನಾ ಕಡೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ಉಡುಪಿಯಲ್ಲಿ ಒಬ್ಬ, ಸುಳ್ಯದಲ್ಲಿ ಒಬ್ಬ ಹಾಗೂ ಉತ್ತರ ಕನ್ನಡದಲ್ಲಿ ಇಬ್ಬರು ಬಲಿಯಾಗಿದ್ದಾರೆ.

Harish Kera

ಸಿದ್ದರಾಮಯ್ಯ ಇಂದು ದಾಖಲೆ 14ನೇ ಬಜೆಟ್‌

ಬೆಂಗಳೂರು: ನೂತನ ವಿಧಾನಸಭೆ ಕಲಾಪದ ಐದನೇ ದಿನವಾದ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಮಂಡನೆಗೆ ಸಜ್ಜಾಗಿದ್ದಾರೆ. ‌ಇದರೊಂದಿಗೆ ರಾಜ್ಯದ ಇತಿಹಾಸದಲ್ಲೆ ಅತಿ ಹೆಚ್ಚು ಬಾರಿ ಬಜೆಟ್‌ (Karnataka Budget 2023) ಮಂಡಿಸಿದ ಖ್ಯಾತಿಗೆ ಸಿಎಂ ಸಿದ್ದರಾಮಯ್ಯ ಪಾತ್ರವಾಗಲಿದ್ದಾರೆ. ಈಗಾಗಲೆ 13 ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ, ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. ಇದೀಗ 14ನೇ ಬಜೆಟ್‌ ಮಂಡಿಸಲಿದ್ದಾರೆ.

Exit mobile version