Site icon Vistara News

Karnataka Weather : ಕೊರೆಯುವ ಚಳಿಯೊಂದಿಗೆ ಇಲ್ಲೆಲ್ಲ ಮಳೆಯ ಸಿಂಚನ

Its raining here with the biting cold

ಬೆಂಗಳೂರು: ಕೊರೆಯುವ ಚಳಿಯೊಂದಿಗೆ ಹಲವೆಡೆ ಮಳೆಯ ಸಿಂಚನವಾಗಲಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ. ಆದರೆ ಉತ್ತರ ಒಳನಾಡಿನಲ್ಲಿ ಮಳೆಯು ಮಾಯವಾಗಿದ್ದು, ಒಣಹವೆ ಇರಲಿದೆ.

ರಾಜಧಾನಿ ಬೆಂಗಳೂರಲ್ಲಿ ಕಳೆದ ಎರಡ್ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಇಂದು- ನಾಳೆ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಡಿ.18ರ ಸೋಮವಾರವು ಸಾಮಾನ್ಯವಾಗಿ ಮೋಡ ಕವಿದ ವಾತಾವರಣವೇ ಇರಲಿದ್ದು, ಪ್ರತ್ಯೇಕ ಸ್ಥಳದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 19 ಡಿ.ಸೆ ದಾಖಲಾಗಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಕೋಲಾರ, ತುಮಕೂರು ಮತ್ತು ಮಂಡ್ಯ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ರಾಯಚೂರು ಮತ್ತು ಬಳ್ಳಾರಿಯಲ್ಲೂ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಅಲ್ಲಲ್ಲಿ ಮಳೆಯ ಸಿಂಚನವಾಗಲಿದೆ. ಇನ್ನು ಮಲೆನಾಡಿನ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಕರಾವಳಿಯ ದಕ್ಷಿಣ ಕನ್ನಡದಲ್ಲಿ ಚದುರಿದಂತೆ ಮಳೆಯಾದರೆ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮಧ್ಯಮ ಮಳೆಯಾಗಲಿದೆ.

ಇದನ್ನೂ ಓದಿ: Electric shock : ಅಂದು ತಪ್ಪಿದ್ದ ದುರಂತ; ಇಂದು ನಡೆಯಿತು ಅನಾಹುತ!

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 27 ಡಿ.ಸೆ -19 ಡಿ.ಸೆ
ಮಂಗಳೂರು: 33 ಡಿ.ಸೆ – 24 ಡಿ.ಸೆ
ಚಿತ್ರದುರ್ಗ: 29 ಡಿ.ಸೆ – 17 ಡಿ.ಸೆ
ಗದಗ: 29 ಡಿ.ಸೆ – 16 ಡಿ.ಸೆ
ಹೊನ್ನಾವರ: 35 ಡಿ.ಸೆ- 23 ಡಿ.ಸೆ
ಕಲಬುರಗಿ: 31 ಡಿ.ಸೆ – 20 ಡಿ.ಸೆ
ಬೆಳಗಾವಿ: 31 ಡಿ.ಸೆ – 18 ಡಿ.ಸೆ
ಕಾರವಾರ: 35 ಡಿ.ಸೆ – 23 ಡಿ.ಸೆ

ವೆಡ್ಡಿಂಗ್‌ ಟ್ರೆಡಿಷನಲ್‌ ಜ್ಯುವೆಲ್‌ ಫ್ಯಾಷನ್‌ಗೆ ಮರಳಿದ ಕಾಸಿನಸರ

ಅಜ್ಜಿ ಕಾಲದ ಜ್ಯುವೆಲರಿ ಲಿಸ್ಟ್‌ನಲ್ಲಿದ್ದ ಕಾಸಿನ ಸರ ಇದೀಗ ವೆಡ್ಡಿಂಗ್‌ ಆ್ಯಂಟಿಕ್‌ ಜ್ಯುವೆಲ್‌ ಫ್ಯಾಷನ್‌ಗೆ ಮರಳಿದೆ. ಈ ಜನರೇಷನ್‌ನ ಯುವತಿಯರನ್ನು ಸೆಳೆಯತೊಡಗಿದೆ. “ನಿಮ್ಮ ಮನೆಯಲ್ಲಿ ಅಜ್ಜಿಯ ಅಥವಾ ಅಮ್ಮನ ಕಾಸಿನ ಸರವಿದ್ದಲ್ಲಿಯಾವುದೇ ಕಾರಣಕ್ಕೂ ಮುರಿಸಿ, ಹೊಸ ಡಿಸೈನ್‌ ಮಾಡಿಸಿಕೊಳ್ಳಬೇಡಿ. ಯಾಕೆಂದರೆ, ಇಂದು ವೆಡ್ಡಿಂಗ್‌ ಜ್ಯುವೆಲರಿ ಫ್ಯಾಷನ್‌ಗೆ ಸೇರಿದೆ. ನಾನಾ ಬಗೆಯ ವಿನ್ಯಾಸದ ಕಾಸಿನ ಸರದ ಫ್ಯಾಷನ್‌ ಮರಳಿ ಬಂದಿದೆ. ಸದ್ಯಕ್ಕೆ ಸೆಲೆಬ್ರಿಟಿ ಮದುವೆ ಸಮಾರಂಭಗಳಲ್ಲಿಕಾಣಿಸಿಕೊಳ್ಳುತ್ತಿರುವ ಈ ಕಾಸಿನ ಸರಗಳು, ಇದೀಗ ಸಾಮಾನ್ಯರ ಮದುವೆಯ ಜ್ಯುವೆಲ್‌ (Wedding Jewel Fashion)ಲಿಸ್ಟ್‌ಗೂ ಸೇರಿದೆ” ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್ಸ್ ಛಾಯಾ.

ನೆಕ್ಲೇಸ್‌ ಶೈಲಿಯ ಕಾಸಿನ ಸರ

ನೆಕ್ಲೇಸ್‌ ಶೈಲಿಯ ಕಾಸಿನ ಸರವನ್ನು ಸೀರೆ ಹಾಗೂ ಸಲ್ವಾರ್‌ ಸೂಟ್‌ ಜತೆಗೂ ಧರಿಸಬಹುದು. ಉಡುಪಿನ ನೆಕ್‌ಲೈನ್‌ ಅಗಲವಾಗಿರಬೇಕಷ್ಟೇ! ಇದಕ್ಕೆ ಹೊಂದುವ ಶಾರ್ಟ್ ಕಾಸಿನ ಸರ ಧರಿಸಿದಾಗ ದೇಸಿ ಲುಕ್‌ ದೊರೆಯುತ್ತದೆ ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್.

ಹಾರದ ಶೈಲಿಯ ಕಾಸಿನ ಸರ

ಹಾರದ ಶೈಲಿಯ ಕಾಸಿನ ಸರಗಳು ರಾಣಿ-ಮಹಾರಾಣಿಯರ ಕಾಲದಿಂದಲೂ ರಾಯಲ್‌ ಜ್ಯುವೆಲರಿ ಕೆಟಗರಿಯಲ್ಲಿವೆ. ಶ್ರೀಮಂತರು ಹೆಚ್ಚಾಗಿ ಇವನ್ನು ಧರಿಸುತ್ತಿದ್ದರು. ಕಾಲಬದಲಾದಂತೆ ಸಾಮಾನ್ಯರು ಕೂಡ ಇದೀಗ ತಮ್ಮದಾಗಿಸಿಕೊಂಡಿದ್ದಾರೆ ಎನ್ನಬಹುದು.

ಕಾಸಿನ ಸರ ಸಂರಕ್ಷಣೆ

ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version