Site icon Vistara News

Karnataka Weather : ಇಂದು ಕೊಡಗಿನಲ್ಲಿ ತಂಪೆರೆದ ಮಳೆ; ನಾಳೆ ಮಂಡ್ಯ ಸೇರಿ ಈ ಜಿಲ್ಲೆಗಳಿಗೆ ವರುಣಾರ್ಭಟ

Rain in kodagu on sunday

ಕೊಡಗು/ಬೆಂಗಳೂರು: ಭಾನುವಾರ (ಅ.8) ಕೊಡಗು ಜಿಲ್ಲೆಯ ಹಲವೆಡೆ ಗುಡುಗು ಸಹಿತ (Karnataka Weather) ಮಳೆಯಾಗಿದೆ. ಮಳೆಗಾಲ ಕೈಕೊಟ್ಟು ಕಂಗಾಲಾಗಿದ್ದ ಕೊಡಗು ಜನತೆಗೆ ದಿಢೀರ್ ಮಳೆಯು ಖುಷಿಕೊಟ್ಟಿತ್ತು. ಶನಿವಾರವೂ ಕುಶಾಲನಗರ, ಸೋಮವಾರಪೇಟೆ ತಾಲೂಕಲ್ಲಿ ಮಳೆ (Rain News) ಆಗಿತ್ತು, ಭಾನುವಾರ ಮಡಿಕೇರಿ ಮತ್ತು ಬ್ರಹ್ಮಗಿರಿ ತಪ್ಪಲು ವ್ಯಾಪ್ತಿಯಲ್ಲಿ ಮಳೆಯಾಗಿದೆ.

ಇನ್ನೆರಡು ದಿನಗಳು ಕರಾವಳಿಯ ಕೆಲವು ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡಿನಲ್ಲಿ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಲಿದೆ.

ಈ ಜಿಲ್ಲೆಗಳಲ್ಲಿ ಭಾರಿ ಮಳೆ

ಮುಂದಿನ 48 ಗಂಟೆಯೊಳಗೆ ದಕ್ಷಿಣ ಒಳನಾಡಿನ ಕೊಡಗು, ಮಂಡ್ಯ, ಚಾಮರಾಜನಗರದ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಮಳೆಯಾಗಲಿದೆ.

ತಾಪಮಾನ ಏರಿಕೆ ಸಾಧ್ಯತೆ

ಮಳೆ ನಡುವೆಯೂ ಕೆಲವು ಜಿಲ್ಲೆಗಳಿಗೆ ತಾಪಮಾನ ಏರಿಕೆ ಆಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಉತ್ತರ ಒಳನಾಡಿನ ವಿಜಯಪುರ, ಗದಗ, ರಾಯಚೂರಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ಚಿತ್ರದುರ್ಗದಲ್ಲೂ ತಾಪಮಾನ ಏರಿಕೆ ಆಗಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡದಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Road Accident : ಒನ್‌ ವೇನಲ್ಲಿ ಬಂದ ಬೈಕ್‌ಗೆ ಕಾರು ಡಿಕ್ಕಿ; ಎಗರಿ ಬಿದ್ದ ಸವಾರ ಸಾವು

ಬೆಂಗಳೂರಲ್ಲಿ ಥಂಡಿ ವಾತಾವರಣ

ಬೆಂಗಳೂರಲ್ಲಿ ಸಾಮಾನ್ಯವಾಗಿ ಚಳಿ ಹೆಚ್ಚಾಲಿ ಇರಲಿದೆ. ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಕೆಲವು ಕಡೆ ಮಳೆಯಾಗಬಹುದು. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಗೂ ಕರಾವಳಿಯ ದಕ್ಷಿಣ ಕನ್ನಡದ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-2 ಡಿಗ್ರಿಗಳಷ್ಟು ಹೆಚ್ಚಾಗಿರುತ್ತದೆ. ಉತ್ತರ ಒಳನಾಡಿನ ಬೀದರ್‌, ವಿಜಯಪುರ, ಬಾಗಲಕೋಟೆ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-4 ಡಿಗ್ರಿ ಕಡಿಮೆ ಇರಲಿದೆ.

ಇನ್ನು ನೈರುತ್ಯ ಮುಂಗಾರು ರಾಜ್ಯದಲ್ಲಿ ಶನಿವಾರ ದುರ್ಬಲವಾಗಿತ್ತು. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಇತ್ತು. ಹಾರಂಗಿ, ನಾಪೋಕ್ಲು 4, ಸರಗೂರು 3, ಧರ್ಮಸ್ಥಳ , ಮಾಗಡಿ, ಸುತ್ತೂರಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ರಾಯಚೂರಲ್ಲಿ ಗರಿಷ್ಠ ಉಷ್ಣಾಂಶ 34.8 ಡಿ.ಸೆ ದಾಖಲಾಗಿದೆ. ಬಾಗಲಕೋಟೆಯಲ್ಲಿ ಕಡಿಮೆ ಉಷ್ಣಾಂಶ 14.0 ಡಿ.ಸೆ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version